fbpx
Get Inspired

ಕನ್ನಡತಿಯ ಸಾಧನೆ…

ದುಬೈನಲ್ಲಿ ಹುಟ್ಟಿ, ಮುಂಬೈನಲ್ಲಿ ಬಾಲ್ಯ ಕಳೆದಿರುವ ಕನ್ನಡತಿ ವೆಲೆಂಟೈನ್ ಫೆರ್ನಾಂಡಿಸ್ ಅಕ್ಟೋಬರ್ನಲ್ಲಿ ಕೊರಿಯಾದಲ್ಲಿ ನಡೆಯಲಿರುವ ‘ಮಿಸ್ ಗ್ಲೋಬಲ್ ಬ್ಯೂಟಿ ಕ್ವೀನ್’ ಪ್ರದರ್ಶನದಲ್ಲಿ ನ್ಯೂಝಿಲೆಂಡ್ನ್ನು ಪ್ರತಿನಿಧಿಸಲಿದ್ದಾರೆ. ನ್ಯೂಝಿಲೆಂಡ್ಗೆ ವಲಸೆ ಹೋಗಿ ದೊಡ್ಡ ವೇದಿಕೆಯಲ್ಲಿ ತನ್ನ ಪ್ರತಿಭೆಯನ್ನು ಪ್ರದರ್ಶಿಸಿರುವ ವೆಲೆಂಟೈನ್ ಹಲವು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದ್ದಾರೆ.

13256139_1251058694933642_1147797331109738831_n

 21ರ ಪ್ರಾಯದ ವೆಲೆಂಟೈನ್ 2016ರಲ್ಲಿ ಮಿಸ್ ಟರನಕಿ ಪ್ರಶಸ್ತಿ ಪಡೆದಿದ್ದರು. 2016ರ ಮಿಸ್ ವರ್ಲ್ಡ್ ನ್ಯೂಝಿಲೆಂಡ್ ಸ್ಪರ್ಧೆಯಲ್ಲಿ ಪ್ರತಿನಿಧಿಸಿದ ಭಾರತದ ಮೂಲದ ಏಕೈಕ ಸ್ಪರ್ಧಿಯಾಗಿದ್ದರು. ಗೋವಾ ಹಾಗೂ ಕರ್ನಾಟಕದ ಕಾರವಾರ ಮೂಲದ ನಟಾಲಿ ಹಾಗೂ ಒಸ್ವಾಲ್ಡ್ ಫೆರ್ನಾಂಡಿಸ್ ದಂಪತಿಯ ಏಕೈಕ ಪುತ್ರಿಯಾಗಿರುವ ವೆಲೆಂಟೈನ್ಗೆ ಆಗಸ್ಟ್ನಲ್ಲಿ ನ್ಯಾಶನಲ್ ಡೈರೆಕ್ಟರ್ಗಳು ಕೊರಿಯಾದಲ್ಲಿ ನ್ಯೂಝಿಲೆಂಡ್ನ್ನು ಪ್ರತಿನಿಧಿಸುವ ಅವಕಾಶ ನೀಡಿದಾಗ ತುಂಬಾ ಸಂತೋಷಪಟ್ಟಿದ್ದರು.

1454217625802

ಮಿಸ್ ವರ್ಲ್ಡ್ ನ್ಯೂಝಿಲೆಂಡ್ 2016ರ 13 ಫೈನಲಿಸ್ಟ್ನಲ್ಲಿ ಫೇವರಿಟ್ ಆಗಿದ್ದ ವೆಲೆಂಟೈನ್ ಈ ಸ್ಪರ್ಧೆಯಲ್ಲಿ ವಿಜೇತರಾಗಲಿಲ್ಲ.

ಆದರೆ, ಮಿಸ್ ವಿಶ್ವ ಬ್ಯೂಟಿ ಅವಾರ್ಡ್ ಹಾಗೂ ಇತರ ಎರಡು ಪ್ರಶಸ್ತಿಗಳಿಗೆ ಭಾಜನರಾದರು. ಈ ವರ್ಷ ಮೂರನೆ ಬಾರಿ ಸೌಂದರ್ಯ ಸ್ಪರ್ಧೆಗೆ ಪ್ರವೇಶ ಪಡೆದಿರುವ ವೆಲೆಂಟೈನ್ 2016ರ ಮಿಸ್ ಗ್ಲೋಬಲ್ ಬ್ಯೂಟಿ ಕ್ವೀನ್ ಸ್ಪರ್ಧೆಯಲ್ಲಿ ನ್ಯೂಝಿಲೆಂಡ್ನ್ನು ಪ್ರತಿನಿಧಿಸಲಿದ್ದಾರೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top