fbpx
god

ಕುಂಜಿರಾಯ ಧೈವದ ಕಥೆ

ಅದು ತುಳುನಾಡಿನ ತುಂಬಾ ಕಾಡುಗಳೇ ತುಂಬಿಕೊಂಡಿದ್ದ ಕಾಲ. ಅಂತಹ ಕಾಡುಗಳಲ್ಲಿ ಕಾವೂರಿನ ಪಕ್ಕದಲ್ಲಿದ್ದ ಕುಂಜೂರಿನಲ್ಲಿ ಕಲೆಂಜಿಮಲೆ ಅನ್ನುವ ಕಾಡು ಒಂದಾಗಿತ್ತು. ಬಾನೆತ್ತರಕ್ಕೆ ಬೆಳೆದು ನಿಂತ ಮರಗಳಲ್ಲಿ ಅನೇಕ ಹಕ್ಕಿಗಳು ವಾಸವಾಗಿದ್ದವು.ಅಂತಹ ಹಕ್ಕಿಗಳಲ್ಲಿ ಕುಂಜಾಲ ಜಾತಿಗೆ ಸೇರಿದ ಎರಡು ಜೋಡಿ ಹಕ್ಕಿಗಳು ತುಂಬಾ ಅನ್ಯೋನ್ಯವಾಗಿ ಬದುಕುತ್ತಿದ್ದವು. ಅದೊಂದು ದಿನ ದಾಂಪತ್ಯ ಫಲ ನೀಡುತ್ತದೆ . ಹೆಣ್ಣು ಹಕ್ಕಿ ಗರ್ಭವತಿಯಾಗುತ್ತದೆ. ಗಂಡು ಹಕ್ಕಿ ಸಂತಸದಿಂದ ಹೆಮ್ಮರದ ಮರದ ಪೊಟಾರೆಯಲ್ಲಿ ಸುಂದರವಾದ ಗೂಡು ಕಟ್ಟುತ್ತದೆ. ಅದೊಂದು ದಿನ ಹೆಣ್ಣು ಕುಂಜಾಲ ಹಕ್ಕಿ ಸುಂದರವಾದ ಎರಡು ಮೊಟ್ಟೆಯಿಡುತ್ತದೆ. ಸಂಸಾರದಲ್ಲಿ ಸಂತಸ ಅರಳುತ್ತದೆ .

11

ಮುದ್ದಾದ ಮರಿಗಳ ನಿರೀಕ್ಷೆಯಲ್ಲಿದ್ದ ಕುಂಜಾಲ ಹಕ್ಕಿಯ ಜೋಡಿ ನಾರಾಯಣ ದೇವರ ಪರಮ ಭಕ್ತರಾಗಿದ್ದವು. ಗೂಡಿಂದ ಪ್ರತಿ ಬಾರಿ ಹೊರಟಾಗಲೂ ಮೊಟ್ಟೆಗಳನ್ನು ಕಣ್ಣಿಟ್ಟು ಕಾಯುವಂತೆ ನಾರಾಯಣ ದೇವರನ್ನು ಬೇಡುತ್ತಿದ್ದವು. ಆದರೆ ಅದೊಂದು ದಿನ ಮರದ ಬುಡದಲ್ಲಿದ ಕರಿನಾಗ ಮತ್ತು ಬಿಳಿನಾಗ ಅನ್ನುವ ಎರಡು ಹಾವುಗಳು ಹಕ್ಕಿಗಳು ಗೂಡನ್ನು ಆಕ್ರಮಿಸಿ, ಮೊಟ್ಟೆಗಳನ್ನು ತಿಂದು ಹಾಕುತ್ತವೆ. ಹಕ್ಕಿಗಳಿಗೆ ದಿಕ್ಕು ಕಾಣದಾಗುತ್ತದೆ. ಪ್ರತಿ ಬಾರಿ ಮೊಟ್ಟೆ ಇಟ್ಟಾಗಲೂ ತತ್ತಿ ಯನ್ನು ತಿನ್ನುವ ಹಾವುಗಳಿಂದ ತಮ್ಮನ್ನು ಪೊರೆದು ಕಾಪಾಡುವಂತೆ ಅತ್ತುಕೊಂಡು ಅಳವತ್ತಿ ಬೇಡುತ್ತವೆ.ಹಕ್ಕಿಗಳ ಕಷ್ಟ ಕಂಡ ಜಗವನ್ನು ಪೊರೆಯುವ ದೇವರಿಗೆ ಕನಿಕರ ಮೂಡುತ್ತದೆ. ಧರ್ಮದ ರಕ್ಷಣೆಗಾಗಿ ಕುಂಜಾಲ ಹಕ್ಕಿಗಳ ಕಷ್ಟ ಪರಿಹಾರಕ್ಕಾಗಿ ಕುಂಜಿರಾಯ ಅನ್ನುವ ಸತ್ಯ ದೈವವನ್ನು ತುಳುನಾಡಿಗೆ ಕಳುಹಿಸಿಕೊಡುತ್ತಾನೆ.

22

ಅದೊಂದು ದಿನ ತುಳುನಾಡಿನ ಮೂಡಣ ದಿಕ್ಕಿನಲ್ಲಿ ಧರ್ಮದ ಬೆಳಕು ಪಡಿಮೂಡಿಕೊಂಡಿತ್ತು. ಕಲೆಂಜಿಮಲೆಯ ಕುಂಜಾಲ ಹಕ್ಕಿಗಳ ಗೂಡಿನಲ್ಲಿ ಸತ್ಯದ ನೆರಳಲ್ಲಿ ಖುಷಿಯ ಕಲರವ ತೇಲಿ ಬರುತ್ತಿತ್ತು. ಹೆಣ್ಣು ಹಕ್ಕಿ ಮತ್ತೆ ಸುಂದರವಾದ ಎರಡು ಮೊಟ್ಟೆಗಳನ್ನು ಇಟ್ಟಿತ್ತು. ತನ್ನ ಸಂತಾನವನ್ನು ಉಳಿಸುವ ಆಸೆಯಿಂದ ಮೊಟ್ಟೆಗಳನ್ನು ತನ್ನ ಅಡಿಯಲ್ಲಿ ಹುದುಗಿಟ್ಟು ಸಾಯುವುದೇ ಆಗಿದ್ದರೆ ತಾನು ತನ್ನ ಮೊಟ್ಟೆಗಳೊಂದಿಗೆ  ಸಾಯುತ್ತೇನೆ ಅನ್ನುವ ನಿರ್ಧಾರದಿಂದ ಗೂಡು ಬಿಟ್ಟೇಳುವುದಿಲ್ಲ, ಹಕ್ಕಿಗಳು ಚಿಲಿಪಿಲಿ ಕಲರವ ಕಂಡು ಬಿಳಿಯ ನಾಗರ ಮತ್ತು ಕರಿಯ ನಾಗರ ಹಾವುಗಳು ಮೊಟ್ಟೆ ತಿನ್ನುವುದಕ್ಕೆ ಓಡೋಡಿ ಬರುತ್ತವೆ. ಭಕ್ತರ ರಕ್ಷಣೆಗೆ ಪಣ ತೊಟ್ಟು ನಿಂತಿದ್ದ ಅರಸು ಕುಂಜಿರಾಯ ಧೈವ ಹಾವುಗಳನ್ನು ಕೊಂದು ಹಕ್ಕಿಗಳನ್ನು ರಕ್ಷಿಸುತ್ತದೆ. ಮುಂದೆ ಧರ್ಮ ರಕ್ಷಣೆಗಾಗಿ ತುಳುನಾಡಿನಲ್ಲಿ ನೆಲೆಯಾಗುತ್ತದೆ.

ಕೃಪೆ:Beauty of Tulunad

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top