fbpx
Awareness

ಅಭುತಪೂರ್ವ ಘಟನೆಯನ್ನು ಫೋಟೋಗ್ರಾಫರ್ ಸೆರೆ : ಪ್ರತಿಭಟನೆಯ ವಿರುದ್ಧ ಪ್ರತಿಭಟನೆ

ಭೋರ್ಗರೆದು ಹರಿಯುವ ನದಿಯ ವಿರುದ್ಧ ಈಜಲು ಸಾಧ್ಯವೇ? ಪ್ರವಾಹವನ್ನು ಸಣ್ಣ ಕಡ್ಡಿಯಿಂದ ನಿಲ್ಲಿಸಲು ಆಗುವುದೇ? ಅಂತಹ ಪ್ರಯತ್ನ ಊಹೆ ಮಾಡಿಕೊಳ್ಳೋದು ಕೂಡಾ ಸಾಧ್ಯವಿಲ್ಲ. ಹಾಗೆನಾದರೂ ಪ್ರಯತ್ನಿಸಿದರೆ ಅವನನ್ನು ಹುಚ್ಚ ಅಂತಲೂ ಸಣ್ಣ ಹುಡುಗನಾದರೆ ಮುಗ್ಧ ಅಂತಲೋ ಅನ್ಮುತ್ತಾರೆ. ಅದರಲ್ಲೂ ಮನಸ್ಸಿಗೆ ಇಷ್ಟವಾಗದೇ ಇದ್ದರೆ ಅಥವಾ ತಪ್ಪು ಅನ್ನಿಸಿದರೆ ಅಥವಾ ರಕ್ತ ಕುದಿಯುವ ಸಿಟ್ಟಿದ್ದರೆ ಸೋಲು ಖಚಿತ ಅಂತ ಗೊತ್ತಿದ್ದರೂ ಅದರ ವಿರುದ್ಧ ಸೆಟೆದು ನಿಲ್ಲುವವನಿಗೆ ವೀರ ಅನ್ನುತ್ತಾರೆ.

iconic-moment-12-year-old-mexican-boy-attempts-to-block-11000-anti-gay-protesters-800x445

ಮೆಕ್ಸಿಕೊದ ಸೆಲಯ್ಯಾ ಗುವಾನೊಜುಟಾವೊ ಎಂಬಲ್ಲಿ ಸುಮಾರು ೧೧ ಸಾವಿರ ಸಲಿಂಗಕಾಮಿಗಳು ವಿವಾಹ ಮಾನ್ಯತೆ ಕೋರಿ ಪ್ರತಿಭಟನೆ ನಡೆಸುತ್ತಿದ್ಸರು. ಪ್ರತಿಭಟನಕಾರರು ಎಲ್ಲಿ ದಾಂಧಲೆ ನಡೆಸಿ ಬಿಡುತ್ತಾರೋ ಎಂದು ಪೊಲೀಸರು ಭಾರೀ ಬಂದೋಬಸ್ತ್ ಮಾಡಿದ್ದರು. ರಸ್ತೆಗಳೆಲ್ಲಾ ಬಿಕೋ ಎನ್ನುತ್ತಿದ್ದವು. ದಿಢೀರನೆ ರಸ್ತೆ ಮಧ್ಯೆ ಬಂದ ೧೨ ವರ್ಷದ ಬಾಲಕ, ಏಕಾಂಗಿಯಾಗಿ ಕೈ ಅಡ್ಡ ಹಿಡಿದು ಪ್ರತಿಭಟನೆ ನಿಲ್ಲಿಸುವಂತೆ ಮನವಿ ಮಾಡಿದ.

14341379_1654151004896135_306424781_n-750x500

ಯಾರೂ ಊಹಿಸದ ಅಭುತಪೂರ್ವ ಘಟನೆಯನ್ನು ಪತ್ರಿಕೆಯ ಫೋಟೋಗ್ರಾಫರ್ ಸೆರೆ ಹಿಡಿದ. ಯಾಕೆಂದರೆ ಬಹುತೇಕ ಮಂದಿ ಪ್ರತಿಭಟನೆಯ ವಿರುದ್ಧ ಪ್ರತಿಭಟನೆ ನಡೆಯಿತು ಎಂದು ಊಹಿಸಲೂ ಇಲ್ಲ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಪೊಲೀಸರು, ಆರಂಭದಲ್ಲಿ ಬಾಲಕ ರಸ್ತೆ ದಾಟುತ್ತಿದ್ದಾನೆ ಎಂದು ಭಾವಿಸಿದೆವು. ಆದರೆ ಅಷ್ಟು ಜನ ಸಮುಹದ ವಿರುದ್ಧ ನಿಲ್ಲುತ್ತಾನೆ ಊಹಿಸಲಿಲ್ಲ. ಈ ಘಟನೆಯ ನಂತರ ಆತನನ್ನು ಟ್ಯಾಂಕ್ ಮ್ಯಾನ್ ಅಂತ ಕರೀತಿದ್ದಾರೆ ಎಂದು ವಿವರಿಸಿದ. ಫೋಟೋ ತೆಗೆದ ನಂತರ ಅನುಮಾನದಿಂದ ವಿಚಾರಿಸಿದಾಗ ಇಂತಹ ಅಪರೂಪದ ಘಟನೆ ಬೆಳಕಿಗೆ ಬಂದಿತು. ಇದೇ ರೀತಿ ೧೯೮೯ರ ಬೀಜಿಂಗ್ ಟೈನಾಮೆನ್ ವೃತ್ತದ ಬಳಿ ಘಟನೆ ನಡೆದ ಉದಾಹರಣೆ ಇದೆ.

ಬಾಲಕನನ್ನು ವಿಚಾರಿಸಿದಾಗ, ನನ್ನ ಅಂಕಲ್ ಕೂಡ ಸಲಿಂಗಕಾಮಿ. ಅವರ ವಿರುದ್ಧದ ಸಿಟ್ಟಿನಿಂದ ಹೀಗೆ ಮಾಡಿದೆ ಎಂದು ಹೇಳಿದ. ಅಷ್ಟಕ್ಕೂ ಈ ಬಾಲಕನ ಮೇಲೆ ಆಗಿರುವ ಪರಿಣಾಮದ ಬಗ್ಗೆ ಯಾರೂ ಯೋಚಿಸಲಿಲ್ಲ. ಪ್ರತಿಭಟನೆ ನಡೆದೂ ಅಧ್ಯಕ್ಷರು ಸಲಿಂಗಕಾಮಿ ವಿವಾಹದ ಮಾನ್ಯತೆ ಕಾಯ್ಸೆ ಜಾರುವ ಭರವಸೆ ನೀಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top