fbpx
News

ಅಸಮಾಧಾನ ಇದ್ದರೆ ಮೇಲ್ಮನವಿ ಸಲ್ಲಿಸಿ, ಕಾವೇರಿಗಾಗಿ ಕಾನೂನು ಕೈಗೆತ್ತಿಕೊಳ್ಳಬೇಡಿ:ಸುಪ್ರೀಂ

ನವದೆಹಲಿ: ಕಾವೇರಿ ತೀರ್ಪಿನಿಂದ ಅಸಮಾಧಾನ ಆಗಿ ದ್ದರೆ ಸಂಬಂಧಪಟ್ಟವರನ್ನು ಸಂಪರ್ಕಿಸಿ ಅಥವಾ ಮೇಲ್ಮ ನವಿ ಸಲ್ಲಿಸಿ ಅದು ಬಿಟ್ಟು ಜನರು ಕಾನೂನು ಕೈಗೆತ್ತಿಕೊಳ್ಳ ದಂತೆ ನೋಡಿಕೊಳ್ಳಿ ಎಂದು ಕರ್ನಾಟಕ ಮತ್ತು ತಮಿಳು ನಾಡಿಗೆ ಸುಪ್ರೀಂಕೋರ್ಟ್ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ನ್ಯಾಯಮೂರ್ತಿ ದೀಪಕ್ ಅವರನ್ನೊಳಗೊಂಡ ದ್ವಿಸದಸ್ಯ ಪೀಠ, ಕಾವೇರಿ ನದಿ ನೀರು ಹಂಚಿಕೆ ಸಂಬಂಧ ನೀಡಲಾದ ತೀರ್ಪು ಖಂಡಿಸಿ ಉಭಯ ರಾಜ್ಯಗಳಲ್ಲಿ ಸಂಭವಿಸಿದ ಹಿಂಸಾಚಾರಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿತು.
ಜನರು ಕಾನೂನು ಕೈಗೆತ್ತಿಕೊಳ್ಳಬಾರದು. ಸಾರ್ವಜನಿಕ ಆಸ್ತಿಪಾಸ್ತಿಗೆ ನಷ್ಟವಾಗದಂತೆ ನೋಡಿಕೊಳ್ಳುವ ಜವಾ ಬ್ದಾರಿ ರಾಜ್ಯ ಸರಕಾರಗಳ ಮೇಲಿದೆ. ನ್ಯಾಯಾಲಯದ ತೀರ್ಪು ಜಾರಿಗೆ ತರಬೇಕಾದ್ದು ಎಲ್ಲರ ಕರ್ತವ್ಯ ಎಂದು ನ್ಯಾಯಾಲಯ ಸ್ಪಷ್ಟಪಡಿಸಿತು.
ಕಾವೇರಿ ನದಿ ನೀರು ಹಂಚಿಕೆ ವಿವಾದ ಕುರಿತು ಉಭಯ ರಾಜ್ಯಗಳ ನಡುವೆ ಶಾಶ್ವತವಾಗಿ ಶಾಂತಿ- ಸುವ್ಯವಸ್ಥೆ ಉತ್ತಮವಾಗಿಟ್ಟುಕೊಳ್ಳಲು ದೂರದೃಷ್ಟಿಯೊಂದಿಗೆ ಕಾರ್ಯತಂತ್ರ ರೂಪಿಸಲು ಇದು ಸಕಾಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top