fbpx
Karnataka

ಗೃಹಭಂಗದ “ನಂಜಮ್ಮ” facebook ಪುರಾಣ…!

 

ಮಾಳವಿಕಾ ಅವಿನಾಶ್ ಅವರು ಜನಿಸಿದ್ದು ತಮಿಳುನಾಡಿನಲೇ ಇರಬಹುದು, ಅನ್ನ ಕೊಟ್ಟಿದ್ದು ಕರ್ನಾಟಕ, ಪ್ರಸಿದ್ದಿ ತಂದುಕೊಟ್ಟಿದ್ದು ಕರ್ನಾಟಕ… ಕಿರುತರೆಯ ಮೂಲಕ ಮಾಳವಿಕ ಅವರು ಕನ್ನಡ ಚಿತ್ರ ರಂಗದಲ್ಲಿ ಗುರುತಿಸಿಕೊಳ್ಳುತ್ತಾರೆ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಬದುಕು ಜಟಕಾ ಬಂಡಿ ಎಂಬ ಕಾರ್ಯಕ್ರಮದ ಮೂಲಕ ಮಾಳವಿಕ ಅವಿನಾಶ್ ಅವರು ಎಲ್ಲರ ಮನೆಮಾತಾಗಿ ಹೊರ ಹೊಮ್ಮಿದವರು. ಮಾಳವಿಕ ಅವಿನಾಶ್ ಅವರು ಕನ್ನಡ ಚಿತ್ರ ರಂಗದ ನಟ ಅವಿನಾಶ್ ಅವರನ್ನು ವಿವಾಹವಾಗುತ್ತಾರೆ. ಇವರು ಅನೇಕ ಚಿತ್ರ ಗಳಲ್ಲಿ ಅಭಿನಹಿಸಿದ್ದಾರೆ, ಇದಲ್ಲದೆ ಇವರು ಭಾರತೀಯ ಜನತಾ ಪಾರ್ಟಿ ಮೂಲಕ ರಾಜಕೀಯದಲ್ಲೂ ಒಳ್ಳೆಯ ಹೆಸರನ್ನು ಪಡೆದು ಕರ್ನಾಟಕದ ಮನೆ ಮಾತಗಿದ್ದಾರೆ ಮಾಳವಿಕ ಅವಿನಾಶ್.

ಇಂತಹ ಮಾಳವಿಕಾ, ಕೊಟ್ಟಿರೋ ಕ್ಷಮಾಪಣೆ ಬೇಕಾ ಬಿಟ್ಟಿ ಇದೆ. “ನನ್ನ ಪೋಸ್ಟ್ ಗೂ, ಕಾವೇರಿ ಸಮಸ್ಯೆಗೂ ಏನು ಸಂಬಂಧ” ಅಂತ ಹೇಳುತ್ತಾ ಇರುವ ಇವರು, ರೈತರ ಜೀವನಾಡಿ, ದಕ್ಷಿಣ ಗಂಗೆ, ಕಾವೇರಿಯ ಬಗ್ಗೆ ಇಡೀ ರಾಜ್ಯದಲ್ಲಿ ಪ್ರತಿಭಟನೆ ನಡೆಯುತ್ತಿದ್ದರೆ, ರಾಷ್ಟ್ರೀಯ ಪಕ್ಷ ಒಂದರಲ್ಲಿ ಪ್ರಮುಖ ‘ಮಹಿಳಾಮಣಿ’ ಎಂದು ಗುರುತಿಸಿಕೊಂಡಿರುವ ಮಾಳವಿಕಾ ಈ ರೀತಿಯಾಗಿ ತಮ್ಮ ಫೇಸ್ಬುಕ್ ಗೋಡೆಯಲ್ಲಿ ತಮಿಳು ಧಾರಾವಾಹಿ ಒಂದರಲ್ಲಿ ಆಕೆಯ ನಟನೆಯ ಬಗ್ಗೆ ಬರೆದುಕೊಂಡಿರುವುದಲ್ಲದೆ; ಆಕೆಯ ಪಾತ್ರವನ್ನು; ಧಾರಾವಾಹಿಯ ಜನಪ್ರಿಯತೆ ತಮಿಳು ನಾಡಿನ ಕುಮಾರಿ. ಜಯಲಲಿತಾ ಮೆಚ್ಚುಕೊಂಡಿದ್ದರು ಎಂದು ಬರೆದುಕೊಂಡಿರುವುದು ಕನ್ನಡಾಭಿಮಾನಿಗಳನ್ನು ಕೆರಳಿಸಿದೆ.

ಗೃಹಭಂಗದಲ್ಲಿ ಅತ್ಯಂತ ಸೂಕ್ಷ್ಮ ‘ನಂಜಮ್ಮ’ ಳ ಪಾತ್ರ ಮಾಡಿದ್ದ ಮಾಳವಿಕಾ ಇಂತ ಪ್ರಕ್ಷುಬ್ದ ಪರಿಸ್ಥಿತಿಯಲ್ಲಿ ತನ್ನ ತಮಿಳು ಜನಪ್ರಿಯತೆ ಬಗ್ಗೆ ಬರೆದುಕೊಂಡಿರುವ timing ತಪ್ಪಾಗಿದೆ ಎನ್ನುವುದನ್ನು ಆಕೆ ಒಪ್ಪಿಕೊಳ್ಳಬೇಕು. ತನ್ನ ಕಪಟ ನಾಟಕದಿಂದ; ತನ್ನ ಸಾಂಬ ಬೆಳೆಗೆ ಮೆಟ್ಟೂರು ಜಲಾಶಯದಲ್ಲಿ ನೀರಿದ್ದರೂ; ಕಾವೇರಿಯ ಮೇಲೆ ಕಣ್ಣಿಟ್ಟು; ರಾಜಕೀಯ ಒತ್ತಡ ಬಳಸಿ ತನಗೆ ಬೇಕಾದ ನ್ಯಾಯವಾದಿಗಳನ್ನು ಬಳಸಿಕೊಂಡು ತೀರ್ಪನ್ನು ಪ್ರಭಾವ ಬೀರುವ ಕಾರ್ಯದಲ್ಲಿ ತೊಡಗಿರುವಾಗ, ಅದನ್ನು ಹೇಗೆ ನಿಷ್ಕ್ರಿಯಗೊಳಿಸಿ ಕರ್ನಾಟಕ್ಕೆ ನ್ಯಾಯ ಕೊಡಿಸಬೇಕು ಎಂದು ಸಲಹೆ ನೀಡುವ ಬದಲು, ವಯುಕ್ತಿಕ ವರ್ಚಸ್ಸನ್ನು ಪೋಸ್ಟ್ ಮಾಡುವ ಗೋಜಿಗೆ ಹೋಗಬಾರದಿತ್ತು ಎನ್ನುವುದು ನಮ್ಮೆಲರ ಅನಿಸಿಕೆಯಾಗಿದೆ.

ತನ್ನ ತಾರಾ ವರ್ಚಸ್ಸಿನಿಂದ ಬಿಜೆಪಿಯಲ್ಲಿ ಗುರುತಿಸಿಕೊಂಡರೇ ಹೊರೆತು ಹೋರಾಟಗಳಿಂದ ರಾಜಕೀಯದಲ್ಲಿ ಮೇಲೆ ಬಂದವರಲ್ಲ ಎನ್ನುವುದು ಎಲ್ಲರಿಗೂ ತಿಳಿದ ಸತ್ಯವೇ… ಇನ್ನಾದರೂ ತಮ್ಮ ರಾಜಕೀಯ ಬೆಳೆ ಬೇಯಿಸಿಕೊಳ್ಳಲು ಇಂತಹ ಸಣ್ಣತನ ತೋರುವ ಬದಲು ಜನರ ಸಂಕಷ್ಟಗಳ ಕಡೆ ಕಣ್ಣು ಆಹಿಸಲಿ ಎನ್ನುವುದೇ ಕನ್ನಡಿಗರ ಒತ್ತಾಯವಾಗಿದೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top