fbpx
Exclusive

ಸುಪ್ರೀಂ ತೀರ್ಪು: ಜನಪ್ರತಿನಿಧಿಗಳ ರಾಜಿನಾಮೆ ಪರ್ವ ಶುರು

ತಮಿಳುನಾಡಿಗೆ ಮತ್ತೆ ೭ ದಿನ ತಲಾ ೬ ಸಾವಿರ ಕ್ಯೂಸೆಕ್ಸ್ ನೀರು ಹರಿಸಲು ಸುಪ್ರೀಮಕೋರ್ಟ್ ತೀರ್ಪು ಖಂಡಿ ಮಂಡ್ಯದ ಸಂಸದ ಸಿ.ಎಸ್. ಪುಟ್ಟರಾಜು ಹಾಗೂ ಕಾವೇರಿ ಕಣಿವೆ ಭಾಗದ ಕೆಲವು ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಇದರೊಂದಿಗೆ ಕಾವೇರಿ ವಿವಾದ ಹೊಸ ತಿರುವು ಪಡೆದಿದ್ದು, ರಾಜೀನಾಮೆ ಪರ್ವ ಆರಂಭಗೊಂಡಿದೆ.

ಜೆಡಿಎಸ್ ನಿಂದ ಸಂಸತ್ ಗೆ ಆಯ್ಕೆಯಾಗಿದ್ದ ಪುಟ್ಟರಾಜು ಮಂಗಳವಾರ ಸಂಜೆ ಜಿಲ್ಲಾಧಿಕಾರಿ ಜಿಯಾವುಲ್ಲಾ ಅವರ ಕಚೇರಿಗೆ ತೆರಳಿ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ.

14441217_1745737349014419_8707436688673049477_n

ನಾನು ಒಬ್ಬ ರೈತನ ಮಗ. ಸುಪ್ರೀಂಕೋರ್ಟ್ ತೀರ್ಪಿನಿಂದ ರಾಜ್ಯಕ್ಕೆ ಅನ್ಯಾಯವಾಗಿದೆ. ಇಂತಹ ಸಂಕಷ್ಟ ಸಮಯದಲ್ಲಿ ರೈತಪರ ಹೋರಾಟಕ್ಕೆ ಬೆಂಬಲವಾಗಿ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಇದು ಕ್ರಮಬದ್ದ ಅಲ್ಲ ಎಂದಾದರೆ ಬುಧವಾರ ದೆಹಲಿಗೆ ತೆರಳಿ ಲೋಕಸಭಾ ಸ್ಪೀಲರ್ ಗೆ ರಾಜೀನಾಮೆ ಪತ್ರ ಸಲ್ಲಿಸುವುದಾಗಿ ಪುಟ್ಟರಾಜು ತಿಳಿಸಿದರು.

ಇದೇ ವೇಳೆ ಶಾಸಕರಾದ ರೈತ ಮುಖಂಡ ಪುಟ್ಟಣ್ಣಯ್ಯ. ಅಪ್ಪಾಜಿಗೌಡ, ರಮೇಶ್ ಬಂಡಿಸಿದ್ದೇಗೌಡ ಮುಂತಾದವರು ರಾಜೀನಾಮೆ ಸಲ್ಲಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top