fbpx
Get Inspired

ಭಜರಂಗಿ sticker ಹಿಂದೆ ಇದೆ ಈ ಹುಡುಗನ ಕೈಚಳಕ…

ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲ ನಗರಗಳಲ್ಲಿ ಮಾತ್ರವಲ್ಲದೇ ವಿವಿಧ ರಾಜ್ಯಗಳಲ್ಲೂ ಈ ಹನುಮಾನ್ ಸ್ಟಿಕ್ಕರ್ ರಾರಾಜಿಸುತ್ತಿದೆ. ದೇಶದೆಲ್ಲೆಡೆ ಅದ್ದೂರಿಯಾಗಿ ಗಣೇಶೋತ್ಸವವನ್ನು ಆಚರಿಸಲಾಗುತ್ತಿದೆ. ಬೀದಿ ಬೀದಿಗಳಲ್ಲಿ ಹಿಂದೂ ಕಾರ್ಯಕರ್ತರು ಪೆಂಡಾಲ್ ಹಾಕಿ ಗಣೇಶನನ್ನು ಪ್ರತಿಷ್ಟಾಪಿಸಿ ಸಂಭ್ರಮಿಸಲಾಗುತ್ತಿದೆ. ಇಂತಹಸಂದರ್ಭದಲ್ಲಿ ಹಿಂದುತ್ವವನ್ನು ನರನಾಡಿಗಳನ್ನು ಪ್ರವಹಿಸುವಂತೆ ಪ್ರೇರೇಪಿಸುತ್ತಿದೆ ಒಂದು ಚಿತ್ರ. ಅದು ಕೇಸರಿ ಬಣ್ಣದಲ್ಲಿ ಕಂಗೊಳಿಸುತ್ತಿರುವ ಹನುಮಾನ್ ಸ್ಟಿಕ್ಕರ್.

img-20160910-wa0005-1-1024x889

ನನಗೆ ಇದರ ಬಗ್ಗೆ ಇತ್ತೀಚೆಗೆ ತಿಳಿಯಿತು, ಕಳೆದ ನಾಲ್ಕು ದಿನಗಳ ಹಿಂದೆ ಹೀಗೆ ಸುಮ್ಮನೆ ನಡೆದುಕೊಂಡು ಹೋಗುತ್ತಿರುವಾಗ ಎದುರಿನಿಂದ ಕಾರೊಂದು ಭರ್ರನೆ ಪಾಸಾಯಿತು. ಆ ಕಾರಿನ ಹಿಂದುಗಡೆ ಇದ್ದ ಸ್ಟಿಕ್ಕರೊಂದರ ಮೇಲೆ ನನ್ನ ಕಣ್ಣು ಹರಿದಾಡಿತು. ಅಷ್ಟೇ ಅಲ್ಲ ವಾವ್ಹ್ ಅನ್ನುವ ಉದ್ಘಾರವೊಂದು ನನಗರಿವಿಲ್ಲದೇ ಹೊರಳಿತ್ತು. ಇದಕ್ಕೆಲ್ಲ ಕಾರಣ ಎಲ್ಲರೂ ಇಷ್ಟಪಡುವ ಅರ್ಧ ಮುಖದ ಭಜರಂಗಿ ಸ್ಟಿಕ್ಕರ್.

ಅದು ಅಂತಿಂಥ ಸ್ಟಿಕ್ಕರ್ ಅಲ್ಲ ರಾಷ್ಟ್ರಮಟ್ಟದಲ್ಲಿ ಐಕಾನ್ ಆಗ ಹೊರಟಂತಿದೆ. ಕಾರು, ಬಸ್, ಬೈಕ್, ಲಾರಿ, ಅಂಗಡಿ-ಮುಂಗಟ್ಟುಗಳು ಯಾವುದನ್ನೂ ಈ ಸ್ಟಿಕ್ಕರ್ ಬಿಟ್ಟಿಲ್ಲ. ಅದಕ್ಕಿಂತಲೂ ಕೆಲವರ ವಾಟ್ಸಾಪ್ ಡಿಪಿಯಲ್ಲಿಯೂ ಈ ಭಜರಂಗಿ ಕಾಣಿಸಿಕೊಳ್ಳತೊಡಗಿದ್ದಾನೆ ಅಂದರೆ ಅದು ಯಾವ ರೀತಿ ಯುವ ಜನತೆಯಲ್ಲಿ ಕ್ರೇಜ್ ಹುಟ್ಟಿಸಿದೆ ಎನ್ನುವುದನ್ನು ತಿಳಿಯುವುದು ಕಷ್ಟವೇನಲ್ಲ.

14264843_1258229414208185_7443884445843112395_n

ಮೈಸೂರು ಮಾತ್ರವಲ್ಲದೇ ಬೆಂಗಳೂರು ಸೇರಿದಂತೆ ರಾಜ್ಯದ ನಗರಗಳಲ್ಲಿ ಅಷ್ಟೇ ಅಲ್ಲ ಬೇರೆ, ಬೇರೆ ರಾಜ್ಯಗಳಿಗೂ ಇದು ಹರಡಿದೆ. ಅವರಾರೆಂದು ತಿಳಿಯುವ ಕುತೂಹಲಕ್ಕೆ ಕೊನೆಗೂ ತೆರೆ ಬಿದ್ದಿದೆ. ಕಾಸರಗೋಡು ಮೂಲದ ಕರಣ್ ಆಚಾರ್ಯ ಈ ಸ್ಟಿಕ್ಕರ್ ನಿರ್ಮಾಣದ ರೂವಾರಿ. ಬಾಲ್ಯದಲ್ಲಿಯೇ ಕಲಾಭಿರುಚಿಯನ್ನು ಹೊಂದಿದ ಇವರು ಕಲೆಯಲ್ಲಿಯೇ ಏನನ್ನಾದರೂ ಸಾಧಿಸಬೇಕೆಂದು ಹೊರಟವರು. ಆದರೆ ಅವರ ಈ ಅರ್ಧ ಮುಖದ ಹನುಮಂತ ಚಿತ್ರ ಜನರಲ್ಲಿ ಇಷ್ಟೊಂದು ಕ್ರೇಜ್ ಹುಟ್ಟಿಸಬಹುದೆಂಬುದನ್ನು ಅವರು ಕನಸು ಮನಸಿನಲ್ಲಿಯೂ ಊಹಿಸಿರಲಿಕ್ಕಿಲ್ಲ.

ಯಾರು ಕರಣ್ ಆಚಾರ್ಯ?

14237597_1665113550472021_1348179019186784736_n

ಪಿ.ಯು ವಿದ್ಯಾಭ್ಯಾದ ನಂತರ ಫೈನ್ ಆರ್ಟ್ಸ ಕೋರ್ಸನ್ನು ಕೇರಳದಲ್ಲಿಪೂರೈಸಿದ ಕರಣ್, ಕೇರಳದ ಕಾಸರಗೋಡು ಮೂಲದ ಕರಣ್ ಆಚಾರ್ಯ ಮೂಲತಃವಾಗಿ ಅಪಾರ ಪ್ರತಿಭೆ ಹೊಂದಿರುವ ಚಿತ್ರ ಕಲಾವಿದ. 2ಡಿ ಹಾಗೂ 3ಡಿ ಅನಿಮೇಶನ್ ನಲ್ಲಿ ಪ್ರಾವೀಣ್ಯತೆಯನ್ನು ಪಡೆದರು. ಚಿಕ್ಕಂದಿನಿಂದಲೇ ಚಿತ್ರಕಲೆ ಹಾಗೂ ಡಿಸೈನಿಂಗ್ ನಲ್ಲಿ ಆಸಕ್ತಿ ಹೊಂದಿದ್ದ ಕರಣ್ಗೆ ಪ್ರೋತ್ಸಾಹ ನೀಡಿನೀರೆರೆದು ಪೋಷಿಸಿದ್ದು ಅವರ ತಾಯಿ ಹಾಗೂ ಕುಟುಂಬಸ್ತರು.

ಭಜರಂಗಿ ಚಿತ್ರ ಸ್ಫೂರ್ತಿ ಹೇಗೆ…?

ಕೇರಳದ ಕಾಸರಗೋಡಿನ ನಿವಾಸಿಯಾಗಿರುವ ಕರಣ್ ಗೆ ಅಲ್ಲಿ ಅಪಾರ ಸ್ನೇಹಿತರ ಬಳಗವಿದೆ, “ಈ ಸ್ಟಿಕರ್ ಮಾಡಿ ಈಗ ಸರಿಯಾಗಿ ಒಂದು ವರ್ಷವಾಯಿತು. ಕಾಸರಗೋಡಿನ ಕುಂಬ್ಳೆ ಪ್ರದೇಶದ ಹಿಂದೂ ಯುವಕರು ಕಳೆದ ವರ್ಷ ಗಣೇಶೋತ್ಸವ ಆಚರಣೆ ವೇಳೆ ನನಗೆ ಏನಾದರೂ ವಿಭಿನ್ನ ಲಾಂಛನ ಸಿದ್ಧಪಡಿಸಿಕೊಡಿ, ಶಿವನನ್ನು ಸಿದ್ಧಪಡಿಸಿಕೊಟ್ಟರೂ ಆಗಬಹುದು ಎಂದರು. ಆಗ ನನ್ನ ತಲೆಗೆ ಹೊಳೆದದ್ದು ಭಜರಂಗಿ. ಮೊದಲು ಮುಖದ ಸ್ಟಿಕರ್ ಮಾತ್ರ ಮಾಡಿದ್ದೆ, ನಂತರ ಪೂರ್ಣರೂಪ. ಅದು ಇಷ್ಟೊಂದು ಕ್ರೇಜ್ ಹುಟ್ಟಿಸುತ್ತದೆ ಎಂದುಕೊಂಡಿರಲಿಲ್ಲ. ಅದೀಗ ಎಲ್ಲೆಡೆಯೂ ಕಾಣಿಸಿಕೊಳ್ಳುತ್ತಿದೆ. ತುಂಬಾ ಖುಷಿ ಆಗ್ತಾ ಇದೆ” ಎನ್ನುತ್ತಾರೆ.

next ?

11074298_672738522853288_1329910207468422956_o

ಸದ್ಯಕ್ಕೆ ಅವರ ಭಜರಂಗಿ, ಐಕಾನ್ ಆಗಿ ಸುದ್ದಿ ಮಾಡುತ್ತಿದೆ ಎಂದರೆ ತಪ್ಪಾಗಲಾರದು. ಅವರ ಕಲೆಗೆ ಚಿಕ್ಕಂದಿನಿಂದಲೇ ನೀರೆರೆಯುತ್ತಿರುವುದು ಅವರ ತಾಯಿ.ಹಿಂದುತ್ವವನ್ನು ನರನಾಡಿಗಳಲ್ಲಿ ಪ್ರವಹಿಸುವಂತೆ ಪ್ರೇರೇಪಿಸುತ್ತಿರುವ ಕೇಸರಿ ಬಣ್ಣದಲ್ಲಿ ಕಂಗೊಳಿಸುತ್ತಿರುವ ಹನುಮಾನ್ ಸ್ಟಿಕ್ಕರ್ ಎಲ್ಲೆಡೆ ಸಂಚಲನ ಮೂಡಿಸಿದೆ. ಅವರು ಅವರ ಕಲೆಗಳು ನಿಜಕ್ಕೂ ಅಭೂತಪೂರ್ವ. ಈಗಷ್ಟೇ ಎಲ್ಲರ ಮನಗೆಲ್ಲುತ್ತಿರುವ ಅವರ ಕಲೆ ಪ್ರಪಂಚದಾದ್ಯಂತ ಹರಡಿ ಎಲ್ಲ ರೀತಿಯಿಂದಲೂ ಪ್ರೋತ್ಸಾಹ ಸಿಗಲಿ. ಮರೆಯಿಂದ ಸರಿದು ತೆರೆಯ ಮೇಲೆ ಬರಲಿ. ಕರಣ್ ಆಚಾರ್ಯ ಹೆಸರು ಜನಜನಿತವಾಗಲಿ ಎಂಬುದೇ ನಮ್ಮ ಆಶಯ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top