ಐಡಿಯಲ್ ಹೋಮ್ಸ್ ಲೇಔಟ್ ನಲ್ಲಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ ರವರ ನಿವಾಸ ಈಗ ‘ಒತ್ತುವರಿ’ ಯಾಗಲಿದೆ. ಜುಲೈ 28ರಂದು ನಗರದಲ್ಲಿ ಆದಂತಹ ಅನಾಹುತದ ಬಳಿಕ ಭೂದಾಖಲೆಗಳ ಇಲಾಖೆಯಿಂದ ಕಂದಾಯ ಇಲಾಖೆಯ ನಕ್ಷ್ಯೆಗಳನ್ನು superimpose (ಸರ್ವೇ) ಮಾಡಿಸಲಾಗಿತ್ತು. ದರ್ಶನ್ ಅವರ ಮನೆ, ಎಸ್.ಎಸ್. ಆಸ್ಪತ್ರೆ ಸೇರಿದಂತೆ ವಿವಿಧ ಕಟ್ಟಡಗಳು 7 ಎಕರೆ 31 ಗುಂಟೆಗಳಷ್ಟು ವಿಸ್ತೀರ್ಣದ ರಾಜಕಾಲುವೆ ಒತ್ತುವರಿ ಮಾಡಿಕೊಂಡಿವೆ ಎಂದು ಪರಿಶೀಲನೆಯಿಂದ ತಿಳಿದು ಬಂದಿದೆ.
ರಾಜರಾಜೇಶ್ವರಿನಗರದ ಐಡಿಯಲ್ ಹೋಮ್ಸ್ ಬಡಾವಣೆಯಲ್ಲಿ ನಟ ದರ್ಶನ್ ಅವರ ಮನೆ ಹಾಗೂ ಶಾಮನೂರು ಶಿವಶಂಕರಪ್ಪ ಆಸ್ಪತ್ರೆ ಸೇರಿದಂತೆ 7 ಎಕರೆ, 31 ಗುಂಟೆ ಒತ್ತುವರಿ ಪ್ರದೇಶದಲ್ಲಿರುವ ಎಲ್ಲ ಕಟ್ಟಡಗಳನ್ನು ವಶಕ್ಕೆ ಪಡೆಯಲು ತೀರ್ಮಾನಿಸಲಾಗಿದೆ. ಈ ಜಾಗವನ್ನು ಸರ್ವೇ, ಕಂದಾಯ ಮತ್ತು ಪಾಲಿಕೆಯ SWD ಅಧಿಕಾರಿಗಳು ಜಂಟಿಯಾಗಿ ಸರ್ವೇ ಮಡಿದ ನಂತರ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ..
ಐಡಿಯಲ್ ಹೋಮ್ಸ್ ಬಡಾವಣೆಯಲ್ಲಿ ಒಟ್ಟಾರೆ 194 ಕಟ್ಟಡ, ಮನೆಗಳಿವೆ. ಐಡಿಯಲ್ ಹೋಮ್ಸ್ ಬಡಾವಣೆಯು ‘ಬಿ’ ಖರಾಬು ಜಾಗದಲ್ಲಿ ಒತ್ತುವರಿ ಯಾಗಿರುವುದು ಕಂಡುಬಂದಿದೆ ಹಾಗಾಗಿ ಯಾವುದೇ ಮುಲಾಜಿಲ್ಲದೆ, ಹಸ್ತಕ್ಷೇಪ ಮಾಡದೆ; ಒತ್ತಡಕ್ಕೆ ಮಣಿಯದೆ, ಒತ್ತುವರಿಯಾಗಿರುವ ಜಾಗವನ್ನು ತೆರವು ಮಾಡಿಕೊಂಡ ಎಲ್ಲ ಕಟ್ಟಡಗಳನ್ನೂ ಶೀಘ್ರವೇ ವಶಕ್ಕೆ ಪಡೆಯಲು ಜಿಲ್ಲಾಳಿತ ನಿರ್ಧರಿಸಿದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
