fbpx
Karnataka

ಈ ವರ್ಷ ಕನ್ನಡಿಗರನ್ನು ಕೈ ಬಿಟ್ಟ “ಯುವ ದಸರಾ”

ಪಾರಂಪರಿಕ, ವಿಶ್ವ ಪ್ರಸಿದ್ದ ಎಂದೆಲ್ಲಾ ಅನೇಕ ಬಿರುದುಗಳನ್ನು ಹೊತ್ತ ನಮ್ಮ ಮೈಸೂರು ದಸರಾದ ತಯಾರಿಗಳು ಇನ್ನ ಕೆಲವು ದಿನಗಳಲ್ಲಿ ಶುರುವಾಗಲಿದೆ. ಕರ್ನಾಟಕದ ಶ್ರೀಮಂತ ಹಾಗು ಸಮೃದ್ದ ಸಂಸ್ಕೃತಿಯ ಅನಾವರಣ ನಮ್ಮ ದಸರಾದಲ್ಲಿ ನಡೆಯಬೇಕಿದೆ. ಈ ವರ್ಷದ ದಸರಾ ಕೆಲಸ ಹಾಗು ಕಾರ್ಯಕ್ರಮಗಳು ಎಲ್ಲ ಸಾಂಗವಗಿಯೇ ನಡೆಯುತ್ತಿದೆ ಆದರೆ ಅದರಲ್ಲಿ ಕೆಲವು ದೋಷಗಳು ಎದ್ದು ಕಾಣುತ್ತಿದೆ! ಅವೇನೆಂದರೆ, ದಸರಾದ ಮುಖ್ಯ ಕಾರ್ಯಕ್ರಮಗಳಲ್ಲಿ ಕನ್ನಡ ಹಾಗು ಕನ್ನಡಿಗ ಪ್ರತಿಭೆಗಳ ಕಡೆಗಣನೆ.

ಈ ಪೋಸ್ಟಿನಲ್ಲಿ ಲಗತ್ತಿಸಿರಿವ ಚಿತ್ರವನ್ನು ನೋಡಿ

© kannada.oneindia

© kannada.oneindia

ದಸರಾ ಸಂದರ್ಭದಲ್ಲಿ ನಡೆಯುವ ‘ಯುವ ದಸರಾ’ದಲ್ಲಿ ಕೇವಲ ಒಂದು ದಿನ ಕಾಟಾಚಾರಕ್ಕೆ ಎಂಬಂತೆ ಮಾತ್ರ ಕನ್ನಡಿಗರಿಂದ ಸಂಗೀತ ರಸಸಂಜೆ ಏರ್ಪಡಿಸಿ, ಉಳಿದ ದಿನಗಳು ಪರಭಾಷಿಕರಿಗೆ ಮೀಸಲಿಡಲಾಗಿದೆ! ಕಳೆದ ಬಾರಿಯಂತೆ ಈ ಬಾರಿಯೂ ಪರಭಾಷಾ ಮತ್ತು ಪರಭಾಷಿಕರ ವೈಭವ ನಡೆಸಲಾಗುತ್ತಿದೆ. ಹಿಂದಿ/ಇಂಗ್ಲಿಷ್ ಹಾಡುಗಳನ್ನು ಕೇಳಲು ಯಾರಾದರೂ ಕರ್ನಾಟಕದ ಮೈಸೂರು ದಸರಾಕ್ಕೆ ಬರುವರೇ? ಕನ್ನಡಿಗರು ಕಟ್ಟುವ ತೆರಿಗೆಯಿಂದ ನಡೆಸುವ ಹಬ್ಬದಲ್ಲಿ ಪರಭಾಷಿಕರನ್ನು ಕರೆದು, ಅವರು ಕೇಳಿದಷ್ಟು ಹಣವನ್ನು ಕೊಟ್ಟು ಇಲ್ಲಿ ಕಾರ್ಯಕ್ರಮ ನಡೆಸುವ ಅವಶ್ಯಕತೆಯಾದರು ಏನಿದೆ ಸ್ವಾಮಿ…?
ಇದನ್ನು ಗಮನಿಸಿದಾಗ ದಸರಾ ಹೊರಗಿನವರಿಗೆ ಹಬ್ಬವಾಗಿ ಕಂಡರೂ ಕನ್ನಡಿಗರಾಗಿ ನಮಗೆ ಕನ್ನಡಿಗರ ಹಬ್ಬ ಅನ್ನಿಸುತ್ತಿಲ್ಲ. ಹಬ್ಬದಿಂದ ಕನ್ನಡ/ಕನ್ನಡ ಕಲಾವಿದರೇ ಮರೆಯಾದರೆ ನಾಡ ಹಬ್ಬವಾಗಲು ಹೇಗೆ ಸಾಧ್ಯ? ನಮ್ಮ ಭಾಷೆಯೂ ಕೂಡ ನಮ್ಮ ಸಂಸ್ಕೃತಿಯ ಒಂದು ಭಾಗವಲ್ಲವೆ ? ಜಗತ್ತಿನ ವಿವಿಧ ಕಡೆಯಿಂದ ಬರುವ ಜನರಿಗೆ ನಮ್ಮ ಭಾಷೆಯ ಪರಿಚಯ ಮಾಡಿಕೊಡುವ ಅವಶ್ಯಕತೆ ಇಲ್ಲವೇ? ಈ ಮೂಲಕ ಕನ್ನಡವನ್ನು ವಿಶ್ವ ಮಟ್ಟಕ್ಕೆ ಕೊಂಡೊಯ್ಯಬಹುದಲ್ಲವೇ?
ಹಾಗಾಗಿ ದಯವಿಟ್ಟು ನಾಡ ಹಬ್ಬದಲ್ಲಿ ಕನ್ನಡಿಗರ ಪ್ರತಿಭೆ, ಸಂಸ್ಕೃತಿಯ ಅನಾವರಣವಾಗಲಿ, ಅನ್ಯರದ್ದಲ್ಲ. ಚಿಕ್ಕ ಚಿಕ್ಕ ಬದಲಾವಣೆಗಳು ದಸರಾ ಹಬ್ಬವನ್ನು ನಮ್ಮದಾಗಿಸುತ್ತವೆ. ಹಬ್ಬವನ್ನು ಬರಿ ವ್ಯವಹಾರಿಕವಾಗಿ ನೋಡದೆ, ನಮ್ಮ ಸಂಸ್ಕೃತಿಯ, ನಮ್ಮ ಪ್ರತಿನಿಧಿಯಾಗಿ ದೇಶ-ವಿದೇಶಗಳಿಗೆ ಪರಿಚಯ ಮಾಡುವುದು ಒಳಿತು. ಹಾಗೆಯೇ “ಆಹಾರ ಮೇಳ”ದಲ್ಲಿ ಸಹ ಹೆಚ್ಚು-ಹೆಚ್ಚು ಕರ್ನಾಟಕದ ಖಾದ್ಯಗಳ ಪರಿಚಯ ಮಾಡಿಕೊಡುವುದರ ಮೂಲಕ ಈ ಬಾರಿಯ “ನಾಡ ಹಬ್ಬವನ್ನಾದರೂ” ಸಂಪೂರ್ಣವಾಗಿ ಕನ್ನಡಮಯವಾಗಿಸಿ,ಕನ್ನಡಿಗರಾದಗಿಸಿ ಎಂದು ನಿಮ್ಮಲ್ಲಿ ನಾವು ವಿನಂತಿಸುತ್ತೇವೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top