‘ಭಾರತದ ಭವಿಷ್ಯ ಇರುವುದು ಹಳ್ಳಿಗಳಲ್ಲಿ’ ಎಂದು ಗಾಂಧೀಜಿ ಪದೇ ಪದೇ ಹೇಳುತ್ತಿದ್ದರು. ಅದೇ ರೀತಿ ಗ್ರಾಮೀಣ ಭಾರತ ದೇಶದ ಬೆನ್ನೆಲುಬಾಗಿದೆ ಎಂದು ನಂಬಿದ್ದರು. ಈ ವಿಚಾರವನ್ನು ನಿಜ ಎಂದು “ಐಎಎಸ್ ಅಧಿಕಾರಿಗಳ ವಿಲೇಜ್” ನಿರೂಪಿಸಿದೆ.
ಈ ಒಂದು ಪುಟ್ಟ ಗ್ರಾಮ ಮಧೋಪಟ್ಟಿ ಉತ್ತರ ಪ್ರದೇಶದ ಜಾನ್ಪುರ ಜಿಲ್ಲೆಯ ಒಂದು ಸಣ್ಣ ಹಳ್ಳಿ ಇರಬಹುದು ಆದರೆ ನಮ್ಮ ದೇಶದ ಭವಿಷ್ಯದ ಮಹತ್ವದ ಕೊಡುಗೆ ನೀಡುತ್ತಿದೆ. ಸುಮಾರು 75 ಕುಟುಂಬಗಳು ಹೊಂದಿರುವ ಈ ಗ್ರಾಮ ಭಾರತದಕ್ಕೆ 47 ಐಎಎಸ್ ಅಧಿಕಾರಿಗಳನ್ನು ನೀಡಿದೆ.
ಈ ಅದ್ಭುತ ಸಾಧನೆ ಹೇಗೆ? ಎಂದು ಇಲ್ಲಿದೆ ನೋಡಿ ವಿವರ:
ಸುದ್ದಿ ವರದಿಗಳ ಪ್ರಕಾರ, ಅದು ಉತ್ತರಪ್ರದೇಶದ ಜಾನ್ಪೂರ್ ಜಿಲ್ಲೆಯ ಮಧೋಪಟ್ಟಿ ಎಂಬ ಕುಗ್ರಾಮ. ಆ ಗ್ರಾಮದಲ್ಲಿ ಕೇವಲ 75 ಮನೆಗಳಿವೆ. ಆದರೆ ಆ ಊರಿನ ವಿಶೇಷತೆ ಏನೆಂದರೆ ಇಲ್ಲಿಯವರೆಗೆ ಆ ಗ್ರಾಮದಲ್ಲಿ 47 ಜನ IAS ಅಧಿಕಾರಿಗಳಾಗಿದ್ದಾರೆ. ಮುಸ್ತಫಾ ಹುಸೇನ್ ಎಂಬ ವ್ಯಕ್ತಿ ಆ ಗ್ರಾಮದ ಮೊದಲ ಐಎಎಸ್ ಅಧಿಕಾರಿ. ಆತ 1914 ರಲ್ಲಿ ಯುನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ ಪರೀಕ್ಷೆಯಲ್ಲಿ ಪಾಸಾದರು. ನಂತರ ಇಂದೂ ಪ್ರಕಾಶ್ ಸಿವಿಲ್ ಸರ್ವೀಸಸ್ ಪರೀಕ್ಷೆಯಲ್ಲಿ ಎರಡನೇ ರ್ಯಾಂಕ್ ಪಡೆದರು. ಅಲ್ಲಿಂದ ಊರಿನ ವಿದ್ಯಾವಂತರೆಲ್ಲ ಅವರ ದಾರಿಯಲ್ಲಿ ಸಾಗುತ್ತಿದ್ದಾರೆ.
ಹಾಗೆ ಪ್ರಾರಂಭವಾಗಿ ಇಂದು ಆ ಗ್ರಾಮ 47 ಜನ ಐಎಎಸ್ ಅಧಿಕಾರಿಗಳನ್ನು ದೇಶಕ್ಕೆ ನೀಡಿದೆ. ಅಷ್ಟೇ ಅಲ್ಲ ಆ ಗ್ರಾಮದವರು ಉನ್ನತ ಶಿಕ್ಷಣ ಪಡೆದು ಇಸ್ರೋ, ಬಾಬಾ ಆಟಮಿಕ್ ರಿಸರ್ಚ್, ಅಂತರರಾಷ್ಟ್ರೀಯ ಬ್ಯಾಂಕುಗಳಲ್ಲಿ ಉನ್ನತ ಪದವಿಯಲ್ಲಿದ್ದಾರೆ. ಇತ್ತೀಚಿನ ಮತ್ತೊಂದು ದಾಖಲೆಗೆ ಆ ಊರು ಕಾರಣವಾಗಿದೆ. ಅದೇನೆಂದರೆ ನಾಲ್ಕು ಜನ ಸಹೋದರರಾದ ವಿನಯ್ ಕುಮಾರ್ ಸಿಂಗ್, ಛತ್ರಪಾಲ್ ಸಿಂಗ್, ಅಜಯ್ ಕುಮಾರ್ ಸಿಂಗ್, ಶಶಿಕಾಂತ್ ಸಿಂಗ್ ಕೂಡ ಐಎಎಸ್ ಅಧಿಕಾರಿಗಳಾಗಿದ್ದಾರೆ.
ಆ ಊರಿನ ವಿದ್ಯಾರ್ಥಿಗಳೆಲ್ಲ ಹತ್ತನೆಯ ತರಗತಿಯಿಂದಲ್ಲೇ ಐಎಎಸ್ ಗುರಿಯಾಗಿಸಿಕೊಂಡು ಪುಸ್ತಕಗಳು, ಗೈಡ್’ಗಳನ್ನು ಓದುತ್ತಾರೆ ಎಂದು ಆ ಊರಿನ ಶಿಕ್ಷಕರಾದ ಅರವಿಂದ್ ಕುಮಾರ್’ರವರು ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ. ವಿದ್ಯಾರ್ಥಿಗಳು ಹಿಂದಿ ಮಾಧ್ಯಮದಲ್ಲಿ ಓದುತ್ತಿದ್ದರೂ ಐಎಎಸ್’ಗಾಗಿ ಇಂಗ್ಲಿಷ್ ಕಡೆಗೂ ಹೆಚ್ಚಿನ ಗಮನವಹಿತ್ತಾರೆ ಎಂದು ಅವರು ಹೇಳಿದರು. ಉತ್ತರಪ್ರದೇಶದ ಘಜಿಪುರಕ್ಕೆ “ಆರ್ಮಿ ವಿಲೇಜ್” ಎಂಬ ಹೆಸರು ಬಂದಂತೆ ಮಧೋಪಟ್ಟಿ ಗ್ರಾಮಕ್ಕೆ “ಐಎಎಸ್ ಅಧಿಕಾರಿಗಳ ವಿಲೇಜ್” ಎಂಬ ಹೆಸರು ಬಂದಿದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
