fbpx
politics

ಜಯಮ್ಮನಿಗೆ “ಜ್ವರ”…

ನೆನ್ನೆಯವರೆಗೂ ಕನ್ನಡಿಗರ ರಕ್ತ ಹಿಂಡಿದ ಅಮ್ಮನಿಗೆ ದೇಹ ನೀರು ಹಿಂಡುತ್ತಿದೆ, ಹೌದು ಕನ್ನಡಿಗರೇ ಅಮ್ಮ ಅತಿಸಾರ/ಭೇದಿ ಮತ್ತು ಜ್ವರದಿಂದ ಬಳಲುತ್ತಾ ಇದ್ದಾರೆ. ಸದ್ಯ ಚೆನ್ನೈನ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದಾರೆ. ಶುಕ್ರವಾರ ಮುಂಜಾನೆಯೇ ಜಯಲಲಿತಾ ಅವರನ್ನು ಪೋಸ್ ಗಾರ್ಡನ್ ನಲ್ಲಿರುವ ಮನೆಗೆ ಕರೆದುಕೊಂಡು ಹೋಗುತ್ತಾರೆ ಎಂಬ ಮಾಹಿತಿ ಹರಿದಾಡುತ್ತಿದ್ದು, ಈ ಬಗ್ಗೆ ಆಸ್ಪತ್ರೆ ಮೂಲಗಳು ತಿಳಿಸಿಲ್ಲ. 68 ವರ್ಷದ ಜಯಲಲಿತಾ ಅವರಿಗೆ ಮಧುಮೇಹ, ಹೈಪರ್ ಟೆನ್ಷನ್ ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳಿವೆ. ಆದರೆ ದುಃಖದ ಸಂಗತಿಯೆಂದರೆ ಅವರ ಸ್ಥಿತಿ ಸ್ಥಿರವಾಗಿದೆ, ಯಾವುದೇ ಚಿಂತೆ ಅಗತ್ಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.

ಅಚ್ಚರಿಯ ಬೆಳವಣಿಗೆ ಎಂದರೆ ಕಳೆದ ಬಾರಿ ‘ಅಮ್ಮ’ನ ಅನಾರೋಗ್ಯದ ಬಗ್ಗೆ ವರದಿ ಮಾಡಿದ್ದ ಮಾಧ್ಯಮಗಳ ವಿರುದ್ಧ ಪ್ರಕರಣವನ್ನೇ ದಾಖಲಿಸಲಾಗಿತ್ತು. ಆದರೆ, ಈ ಸಲ ಮುಖ್ಯಮಂತ್ರಿ ಅನಾರೋಗ್ಯದ ಕಾರಣಕ್ಕೆ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದಾರೆ ಮತ್ತು ಅದಕ್ಕೆ ಕಾರಣ ಇಂಥದ್ದು ಎಂದು ಪತ್ರಿಕಾ ಹೇಳಿಕೆಯನ್ನೇ ಬಿಡುಗಡೆ ಮಾಡಲಾಗಿದೆ.

whatsapp-image-2016-09-23-at-10-22-35-am

ಇದೆಲ್ಲವೂ ಪೊಲಿಟಿಕಲ್ ಗಿಮಿಕ್ಸ್ ಅಷ್ಟೇ, ಜಯಲಲಿತಾ ಲೆಕ್ಕಾಚಾರಗಳೇ ಬೇರೆ… ಕಾವೇರಿ ವಿಚಾರವನ್ನು ಜಯಲಲಿತಾ ಅವರು ತುಂಬ ಸಮಾಧಾನದಿಂದ ನಿರ್ವಹಿಸಿದ್ದಾರೆ ಎಂದು ಕೇಂದ್ರ ಸಚಿವ ಪೊಣ್ ರಾಧಾಕೃಷ್ಣನ್ ಇತ್ತೀಚೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು, ಅದೂ ಅಲ್ಲದೆ ಕರ್ನಾಟಕದಲ್ಲಿ ಕಾವೇರಿ ನೀರು ಬಿಡುಗಡೆ ವಿಚಾರವಾಗಿ ಅಧಿವೇಶನ ನಡೆಯುತ್ತಿದೆ. ತಮಿಳುನಾಡಿಗೆ ಕಾವೇರಿ ನೀರು ಹರಿಸಬಾರದು ಎಂಬ ತೀರ್ಮಾನಕ್ಕೆ ಬರುವ ಸಾಧ್ಯತೆ ಹೆಚ್ಚಿದೆ. ಅದ್ದರಿಂದ ತಮಿಳರ ಭಾವನೆಗಳನ್ನು ಅನುಕಂಪಕ್ಕೆ ತಿರುಗಿಸಿಕೊಳ್ಳಲು ಹೀಗೆ ಮಾಡಿರಬಹುದು ಎಂಬುದು ಕೂಡ ಸದ್ಯಕ್ಕೆ ಚರ್ಚೆಯಲ್ಲಿರುವ ವಿಷಯ.

ಅದೇನೇ ಇರಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿಗೆ ಹೋದ ಜಯಮ್ಮ ಇನ್ನಾದರೂ ಒಳ್ಳೆ ಬುದ್ದಿ ಕಲಿಯಲಿ ಎಂಬ ಕನ್ನಡಿಗರ ಆಶೋತ್ತರಗಳಿಗೆ ಬೆಂಕಿ ಇಟ್ಟು ತನ್ನ ಹಳೆ ಚಾಳಿಯನ್ನು ಮುಂದುವರೆಸಿದ್ದರು, ಈಗ ಕಾವೇರಿ ವಿವಾದದಿಂದ ಜ್ವರ, ಬೇದಿ ಉಂಟಾಗಿದೆ ಇನ್ನಾದರೂ ಒಳ್ಳೆತನ ಮೈಗೂಡಿಸಿಕೊಳ್ಳಲಿ ಎಂದು ಹೇಳುವುದು ತಪ್ಪಾಗುತ್ತದೆ ಅಲ್ಲವೇ…?

-ಗಿರೀಶ್ ಗೌಡ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top