fbpx
Karnataka

ಕಾವೇರಿ ವಿಷಯದಲ್ಲಿ ನಮ್ಮ ದೊಡ್ಡಬಳ್ಳಾಪುರವನ್ನು ನಿಮಗೆ ಸ್ವಲ್ಪ ಪರಿಚಯ ಮಾಡಿಕೊಡ್ತಿನಿ ನೋಡಿ.

ಕಾವೇರಿ ಗಲಾಟೆಯಾದಾಗೆಲ್ಲಾ ಕರ್ನಾಟಕವನ್ನು ಒಂದು ಎರಡು ದಿನ ಬಂದ್ ಮಾಡಿ ಮತ್ತೆ ಮರುದಿನದಿಂದ ಆ ವಿಷಯವನ್ನು ಮರೆತು ಬಿಡುತ್ತಾರೆ.

ಚಿತ್ರಮಂದಿರಗಳು, ಮಾಲ್, ಮಲ್ಟಿಫ್ಲೆಕ್ಸ್ ಗಳೆಲ್ಲ ಆಗ ಇದ್ದಕ್ಕಿದ್ದಂತೆ ಒಂದು ದಿನದ ಡೋಂಗಿ ಕನ್ನಡ ಪ್ರೇಮ ಪ್ರದರ್ಶಿಸಿ ಮತ್ತೆ ಯಥಾವತ್ತಾಗಿ ತಮ್ಮ ಪರಭಾಷಾ ಪ್ರೇಮವನ್ನು ಮುಂದುವರಿಸುತ್ತವೆ.

ಇದಕ್ಕೆಲ್ಲಾ ತದ್ವಿರುದ್ದ ನಮ್ಮ ದೊಡ್ಡಬಳ್ಳಾಪುರ ತಾಲ್ಲೂಕು ಬೆಂಗಳೂರಿನಿಂದ ಕೇವಲ 36ಕಿಲೋ ಮೀಟರ್ ದೂರದಲ್ಲಿದೆ, ರಾಜ್ಯದಲ್ಲೆ ಸಿದ್ದ ರೇಶ್ಮೆ ಉತ್ಪನ್ನಗಳನ್ನು ತಯಾರಿಸುವಲ್ಲಿ ಮುಂಚೂಣಿಯಲ್ಲಿರುವ ಊರು, ಇಲ್ಲಿನ ಬಹುತೇಕ ಜನರ ಕುಲಕಸುಬು ‘ನೇಯ್ಗೆ’ ವಿಸ್ತೀರ್ಣ, ಜನಸಂಖ್ಯೆ ಪ್ರವಾಸೋಧ್ಯಮ, ಹಾಗೂ ಆರ್ಥಿಕತೆಯ ಆಧಾರದ ಮೇಲೆ ಇದನ್ನು ಜಿಲ್ಲಾ ಕೇಂದ್ರವಾಗಿಸುವ ಎಲ್ಲಾ ಪ್ರಯತ್ನಗಳು ನಡೆಯುತ್ತಿವೆ.

ಬೆಂಗಳೂರಿಗೆ ಇಷ್ಟು ಸಮೀಪವಿದ್ದು ಇಡೀ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲೆ ಅತೀ ವೇಗವಾಗಿ ಬೆಳೆಯುತ್ತಿರುವ ನಗರ ದೊಡ್ಡಬಳ್ಳಾಪುರ ನಿಮಗೊಂದು ಆಶ್ಚರ್ಯದ ವಿಷಯ ಏನೆಂದರೆ ಈ ಊರಿಗೆ “ಕಾವೇರಿ” ನೀರು ಸರಬರಾಜಾಗುವುದಿಲ್ಲ ಆದರೂ ಪರೋಕ್ಷವಾಗಿ ತಮಿಳುನಾಡಿನ ಮತ್ತು ತಮಿಳು ಭಾಷೆಯ ವಿರುದ್ದ ಮೂರು ದಶಕಗಳಿಂದ ತಿರುಗಿಬಿದ್ದಿದೆ.

ಮೂವತ್ತು ವರ್ಷಗಳಿಂದ ಇಲ್ಲಿಯವರೆಗೂ ಯಾವುದೇ ತಮಿಳು ಭಾಷೆಯ ಚಿತ್ರಗಳು ದೊಡ್ಡಬಳ್ಳಾಪುರದಲ್ಲಿ ಬಿಡುಗಡೆಯಾಗಿಲ್ಲ ಇನ್ನೊಂದು ಆಶ್ಚರ್ಯ ಏನು ಗೊತ್ತ, ದೊಡ್ಡಬಳ್ಳಾಪುರದಲ್ಲಿ ಶೇಕಡ ಮೂವತ್ತರಷ್ಟು ಜನ ತಮಿಳು ಭಾಷಿಗರೇ ಇರುವುದು ಇಡೀ ನಗರದ ಮಾರುಕಟ್ಟೆಗಳ ವಹಿವಾಟು ಶೇಕಡ ತೊಂಭತ್ತರಷ್ಟು ಭಾಗ ಅವರೇ ವ್ಯವಹಾರ ನಡೆಸುವುದು ಆದರೂ ಮೂಲ ಜನಾಂಗಕ್ಕೂ ಅವರಿಗೂ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ತಮಿಳು ಚಿತ್ರಗಳು ಪ್ರದರ್ಶನವಾಗುವುದಿಲ್ಲ, ಇಡೀ ನವಂಬರ್ ಕನ್ನಡ ಮಯ, ಆ ಒಂದು ತಿಂಗಳು ಕನ್ನಡ ಭಾಷೆಯನ್ನು ಬಿಟ್ಟು ಬೇರಾವ ಭಾಷೆಯ ಚಿತ್ರಗಳು ಪ್ರದರ್ಶನವಾಗುವುದಿಲ್ಲ.

ಇವಾಗ ಹೇಳಿ ತಮಿಳುನಾಡಿನ ವಿರುದ್ದ ಡೋಂಗಿ ಪ್ರತಿಭಟನೆ ಮಾಡುವರೆಲ್ಲಿ ಕಾವೇರಿಗೂ ತನಗೂ ಸಂಬಧವೇ ಇರದೇ ಹೋದರು ಮೂರು ದಶಕದಿಂದ ತಮಿಳು ಬಹಿಷ್ಕರಿಸಿರುವ ನಮ್ಮ ದೊಡ್ಡಬಳ್ಳಾಪುರ ಎಲ್ಲಿ.

ನನ್ನೂರು ಸಾರ್ವಕಾಲಿಕ ಸ್ವಾಭಿಮಾನಿ ನಗರ ಕನ್ನಡ ದೇಗುಲದ ಕಳಶದಂತೆ ಇಂತಹ ಮರೆಯಲಾಗದ ಅದೆಷ್ಟೊ ನೆನಪುಗಳು ಈ ಮಣ್ಣಲ್ಲಿದೆ.

ಇಷ್ಟು ಸ್ವಾಭಿಮಾನಿ ಊರಿಗೆ ಬೇಸಿಗೆಯಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗುತ್ತದೆ ಬೆಂಗಳೂರಿಗೆ ಸಮೀಪವಿದ್ದರೂ ಸರಕಾರ ಇಲ್ಲಿಗೆ ಕಾವೇರಿ ನೀರಿನ ವ್ಯವಸ್ಥೆ ಮಾಡಿಲ್ಲ. ಬಯಲು ಸೀಮೆಗೆ ಶಾಶ್ವತ ನೀರಾವರಿ ಸಮರ್ಪಕವಾಗಿ ಜಾರಿಯಾದರೆ ಅಷ್ಟೇ ಸಾಕು ಕಾವೇರಿ ಇಲ್ಲಿಗೆ ಬರುವುದೂ ಬೇಡ ಎನ್ನುತ್ತಾರೆ ಅಲ್ಲಿನ ಜನ.

ಕಾವೇರಿಯ ಬಯಸದೇ ನಿಸ್ವಾರ್ಥವಾಗಿ ಮೂರು ದಶಕಗಳಿಂದ ಹೋರಾಡುತ್ತ ತಮಿಳುನಾಡಿನ ನೀತಿ ಖಂಡಿಸುತ್ತ ತನ್ನ ಪಾಡಿಗೆ ತಾನಿರುವ ಸ್ವಾಭಿಮಾನಿಗಳ ನಗರ ದೊಡ್ಡಬಳ್ಳಾಪುರದ ನಿವಾಸಿ ನಾನೆಂಬ ಹೆಮ್ಮೆ ಇದೆ.

ಕೃಪೆ: ಸರ್ವಂ ಪ್ರಿಯಂ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top