fbpx
Breaking News

ಕರ್ನಾಟಕದ ಐತಿಹಾಸಿಕ ನಿರ್ಣಾಯದ ವಿರುದ್ದ ಕ್ಯಾತೆ ತೆಗೆದ ಮಾಜಿ “ಘನತೆ”ವೆತ್ತ ನ್ಯಾಯಮೂರ್ತಿ!!

ಕರ್ನಾಟಕ ಶಾಸನಸಭೆಯ ನಿರ್ಣಯ ಸಂವಿಧಾನದ 144 ನೇ ಪರಿಚ್ಚೇದದ ಉಲ್ಲಂಘನೆ: ನಿವೃತ್ತ ನ್ಯಾ.ಎ.ಕೆ.ಗಂಗೂಲಿ !

2G ಪ್ರಕರಣದಲ್ಲಿ ತೀರ್ಪು ನೀಡಿದ ‘ಖ್ಯಾತಿಗೆ’ ಮತ್ತು ಲಾ ಇಂಟರ್ನ್ ಒಬ್ಬಳ ಮೇಲೆ ದೌರ್ಜನ್ಯವಾಗಿದೆ ಎಂಬ ‘ಅಪಖ್ಯಾತಿಗೆ’ ಸಿಲುಕಿದ್ದ ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಾಧೀಶರಾದ ಎ.ಕೆ.ಗಂಗೂಲಿ ಮತ್ತೆ ಸುದ್ದಿಯಲ್ಲಿದ್ದಾರೆ.

ವಿಶೇಷಾಧಿವೇಶನದಲ್ಲಿ ಕಾವೇರಿ ನೀರನ್ನು ಕುಡಿಯುವುದಕ್ಕಷ್ಟೇ ಬಳಸಬೇಕೆಂಬ ಐತಿಹಾಸಿಕ ನಿರ್ಣಯ ಕೈಗೊಂಡ ಬೆನ್ನಲ್ಲೇ, ಈಗ ಕರ್ನಾಟಕ ಶಾಸನ ಸಭೆ ತೆಗೆದುಕೊಂಡಿರುವ ನಿರ್ಣಯ ‘ಅಸಂವಿಧಾನಿಕ’ ಎಂಬುದಾಗಿ ಹೇಳಿದ್ದಾರೆ.

” ಕರ್ನಾಟಕ ಸರ್ಕಾರ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿಗೆ ಪ್ರತಿವಾದಿಯಾಗಿರುವುದರಿಂದ, ಸುಪ್ರೀಂ ಕೋರ್ಟ್ ನ ತೀರ್ಪಿಗೆ ತಲೆಬಾಗಬೇಕಾಗುತ್ತದೆ. ಮತ್ತು ಸಂವಿಧಾನದ ಆರ್ಟಿಕಲ್ 144 ನ ಅನ್ವಯ ಭಾರತದಲ್ಲಿರುವ ಎಲ್ಲ ಪ್ರಾಧಿಕಾರಗಳೂ; ನ್ಯಾಯಾಂಗ ಮತ್ತು ಸಿವಿಲ್, ಸುಪ್ರೀಂ ಕೋರ್ಟ್ ನ ತೀರ್ಪಿಗೆ ತಲೆಬಾಗಬೇಕಾಗುತ್ತದೆ ಎಂದು ನಿವೃತ್ತ. ನ್ಯಾ.ಎ.ಕೆ.ಗಂಗೂಲಿ ಹೇಳಿದ್ದಾರೆ.”

“ನ್ಯಾಯಾಂಗದ ತೀರ್ಮಾನಕ್ಕೆ ಪಾಲಿಸದಿರುವುದು ಒಳ್ಳೆ ನಡವಳಿಕೆಯಾಗುವುದಿಲ್ಲ; ಕಾವೇರಿ ನೀರು ಕುಡಿಯುವ ನೀರಿಗೆ ಮಾತ್ರ ಉಪಯೋಗಿಸಬೇಕೆಂಬ ಕೈಗೊಂಡಿರುವ ಶಾಸನ ಸಭೆಯ ನಿರ್ಣಯ ಸಂವಿಧಾನ ಬಾಹಿರವಾಗಿದೆಯೆಂದು ಹೇಳಿದ್ದಾರೆ”.

ಸುಪ್ರೀಂ ಕೋರ್ಟಿನ ತೀರ್ಪನ್ನು ಶಾಸನ ಸಭೆಯಲ್ಲಿ review ಮಾಡಲಾಗುವುದಿಲ್ಲ. ತನ್ಮೂಲಕ; ಶಾಸಕಾಂಗವು, ನ್ಯಾಯಾಂಗ ನೀಡಿದ ತೀರ್ಪಿಗೆ ತಲೆಬಾಗದಿರುವುದು ಒಂದು ಕೆಟ್ಟ ನಡವಳಿಕೆಯಾಗುತ್ತದೆ ಎಂದು ಹೇಳಿದ್ದಾರೆ.

ನೆನ್ನೆಯಷ್ಟೇ ನಡೆದ ಐತಿಹಾಸಿಕ ವಿಶೇಷ ಅಧಿವೇಶನದಲ್ಲಿ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ರವರು ಕುಡಿಯುವ ನೀರಿಗೆ ಮಾತ್ರ ಕಾವೇರಿ ನೀರನ್ನು ಬಳಸಬೇಕೆಂಬ ಮಹತ್ತರವಾದ ನಿರ್ಣಯವನ್ನು ಸದನದಲ್ಲಿ ಮಂಡಿಸಿದರು. ಇದನ್ನು, ಜಾತ್ಯಾತೀತ ಜನತಾ ದಳದ ವೈ.ಎಸ.ವಿ. ದತ್ತ ಅನುಮೋದಿಸಿದರು. ಈ ನಿರ್ಣಯವನ್ನು ಉಭಯ ಸದನಗಳು ಸರ್ವಾನುಮತದಿಂದ ಅಂಗೀಕರಿಸಿವೆ.

ಈಗಾಗಲೇ ಕಾವೇರಿ ಜಲಾಶಯಗಳಯಾದ ಕೃಷ್ಣ ರಾಜ ಸಾಗರ, ಹೇಮಾವತಿ, ಹಾರಂಗಿ ಮತ್ತು ಕಬಿನಿಯಲ್ಲಿ ನೀರು ಖಾಲಿಯಾಗಿದ್ದು ಡೆಡ್ ಸ್ಟೋರೇಜ್ ಗೆ ಸಮೀಪಿಸುತ್ತಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top