fbpx
Tamil Nadu

ಜಯಲಲಿತಾಗೆ ಶನಿಕಾಟ…!

ನಿನ್ನೆ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ತಮಿಳುನಾಡಿನ ಅಮ್ಮ ಜಯಲಲಿತಾ ಆರೋಗ್ಯದಲ್ಲಿ ಮತ್ತೆ ಏರುಪೇರಾಗಿದೆ. ನಿನ್ನೆ ದೇಹದಲ್ಲಿ ನೀರು ಕಡಿಮೆಯಾದ ಕಾರಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.‘ತಲೈವಿ’ಗೆ ಚೆನ್ನೈನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿತ್ತು.

ನಿನ್ನೆ ಆರೋಗ್ಯದಲ್ಲಿ ತುಸು ಚೇತರಿಕೆ ಕಂಡು ಬಂದಿತ್ತು. ಆದ್ರೆ ಇಂದು ಅತಿಯಾದ ಮಧುಮೇಹ ಹಾಗೂ ಕಿಡ್ನಿ ಸಮಸ್ಯೆ ಕಂಡುಬಂದ ಕಾರಣ ಚಿಕಿತ್ಸೆಗಾಗಿ ಸಿಂಗಾಪುರಕ್ಕೆ ಕಳುಹಿಸಲು ವೈದ್ಯರು ನಿರ್ಧರಿಸಿದ್ದಾರೆ. ವೈದ್ಯರ ಸಲಹೆ ಮೇರೆಗೆ ಜಯಲಲಿತಾ ಸಿಂಗಾಪುರಕ್ಕೆ ತೆರಳಲಿದ್ದಾರೆ. ನಿನ್ನೆ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ತಮಿಳುನಾಡಿನ ಅಮ್ಮ ಜಯಲಲಿತಾ ಆರೋಗ್ಯದಲ್ಲಿ ಮತ್ತೆ ಏರುಪೇರಾಗಿದೆ. ನಿನ್ನೆ ದೇಹದಲ್ಲಿ ನೀರು ಕಡಿಮೆಯಾದ ಕಾರಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

‘ತಲೈವಿ’ಗೆ ಚೆನ್ನೈನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿತ್ತು. ನಿನ್ನೆ ಆರೋಗ್ಯದಲ್ಲಿ ತುಸು ಚೇತರಿಕೆ ಕಂಡು ಬಂದಿತ್ತು. ಆದ್ರೆ ಇಂದು ಅತಿಯಾದ ಮಧುಮೇಹ ಹಾಗೂ ಕಿಡ್ನಿ ಸಮಸ್ಯೆ ಕಂಡುಬಂದ ಕಾರಣ ಚಿಕಿತ್ಸೆಗಾಗಿ ಸಿಂಗಾಪುರಕ್ಕೆ ಕಳುಹಿಸಲು ವೈದ್ಯರು ನಿರ್ಧರಿಸಿದ್ದಾರೆ. ವೈದ್ಯರ ಸಲಹೆ ಮೇರೆಗೆ ಜಯಲಲಿತಾ ಸಿಂಗಾಪುರಕ್ಕೆ ತೆರಳಲಿದ್ದಾರೆ.

2014ರಿಂದಲೂ ಜಯಲಲಿತಾ ವಿವಿಧ ಕಾಯಿಲೆಗಳಿಂದ ಬಳಲುತ್ತಿದ್ದಾರೆ ಎನ್ನಲಾಗಿದೆ. ಆಕೆಗಿರುವ ಪವರ್ ನಿಂದಾಗಿಯೇ ಎಲ್ಲವನ್ನೂ ಮುಚ್ಚಿಟ್ಟುಕೊಳ್ಳಲಾಗಿದೆಯಂತೆ. ಅವರ ಕಾಲು ಗ್ಯಾಂಗ್ರಿನ್ ಗೂ ತುತ್ತಾಗಿದೆ ಎನ್ನಲಾಗ್ತಿದೆ. ಹೀಗಾಗಿ ಅವರು ವಿಧಾನಸಭೆಗೂ ಬರದೆ, ಮನೆಯನ್ನೇ ಕಚೇರಿಯನ್ನಾಗಿಸಿಕೊಂಡಿದ್ದಾರೆ.

ಅಮ್ಮನಿಗೆ ಶನಿಕಾಟ…!

ಹೌದು, ಅಮ್ಮ ಜನ್ಮಕುಂಡಲಿ ಪ್ರಕಾರ, ಈಗ ಬದುಕಿನಲ್ಲಿಯೇ ಕಠಿಣ ದಿನಗಳನ್ನು ಎದುರಿಸುತ್ತಿದ್ದಾರೆ. ಸಧ್ಯ ಅವರಿಗೆ ಗುರು ಮಹಾದೆಶೆಯಲ್ಲಿ ಶನಿ ಅಂತರ್ ದೆಶೆ ನಡೆಯುತ್ತಿದೆ. ಶನಿ ಅಂತರ್ ದೆಶೆ ಆರಂಭವಾಗುತ್ತಿದ್ದಂತೆಯೇ, ಜಯಲಲಿತಾ ಜೈಲುಪಾಲಾಗಿದ್ದರು. ಅದಾದ ಬಳಿಕ ಅವರಿಗೆ ಅನಾರೋಗ್ಯ ಕಾಡುತ್ತಿದೆ. 2014ರ ಸೆಪ್ಟಂಬರ್ ನಲ್ಲೇ ಶನಿ ಅಂತರ್ ದೆಶೆ ಆರಂಭವಾಗಿದ್ದು, ಅಲ್ಲಿಂದೀಚೆ ಅಮ್ಮಾ ಹೆಚ್ಚು ಕಾಣಿಸಿಕೊಂಡಿಲ್ಲ. ಈಗಂತೂ ಶನಿಕಾಟ ತೀವ್ರಗೊಂಡಿದ್ದು, ಅವರ ಅನಾರೋಗ್ಯ ಚಿಂತಾಜನಕ ಪರಿಸ್ಥಿತಿಯಲ್ಲಿದೆ. 24 ಅಕ್ಟೋಬರ್ 2016ರವರೆಗೂ ಇದೇ ಪರಿಸ್ಥಿತಿ ಇರಲಿದೆ ಎನ್ನುತ್ತಾರೆ ಜ್ಯೋತಿಷಿಗಳು. ಹೀಗಾಗಿ ಅಲ್ಲಿಯವರೆಗೆ ಅಮ್ಮಾ ತಮ್ಮ ಆರೋಗ್ಯದ ಬಗ್ಗೆ ಮತ್ತು ಚಿಕಿತ್ಸೆ ಬಗ್ಗೆ ತೀವ್ರ ಕಾಳಜಿ ವಹಿಸಲೇಬೇಕಾಗಿದೆ. ತಮಿಳುನಾಡು ಸಿಎಂ ಶೀಘ್ರ ಗುಣಮುಖರಾಗಲಿ ಎಂದು ಹಾರೈಸೋಣ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top