fbpx
Food

ಸ್ವಾದಿಷ್ಟ ಹಸಿರು ಬಟಾಣಿ ಚಟ್ನಿ

ಬೇಕಾಗುವ ಸಾಮಗ್ರಿಗಳು

ಹಸಿರು ಬಟಾಣಿ-1 ಕಪ್,

ತುರಿದ ತೆಂಗಿನ ತುರಿ-1 ಕಪ್,

ಕತ್ತರಿಸಿದ ಈರುಳ್ಳಿ- 1ಮಧ್ಯಮ ಗಾತ್ರದ್ದು,

ಸೀಳಿದ ಹಸಿ ಮೆಣಸು-2ಸಣ್ಣದು,

ಕತ್ತರಿಸಿದ ಶುಂಠಿ-1 ಚಮಚ,

ಕತ್ತರಿಸಿದ ಬೆಳ್ಳುಳ್ಳಿ-1ಚಮಚ,

ಉಪ್ಪು ರುಚಿಗೆ ತಕ್ಕಷ್ಟು,

ನೀರು ಬೇಕಾದಷ್ಟು,

ಮತ್ತು ಎಣ್ಣೆ-2ಚಮಚ.

ಮಾಡುವ ವಿಧಾನ:

ಮೊದಲಿಗೆ ಬಟಾಣಿಯಿಂದ ನೀರನ್ನು ತೆಗೆದು ಬಸಿದು ಪಕ್ಕದಲ್ಲಿಡಿ. ಪಾತ್ರೆಯಲ್ಲಿ  ಎರಡು ಚಮಚ ಎಣ್ಣೆಯನ್ನು ಬಿಸಿ ಮಾಡಿ, ಕತ್ತರಿಸಿದ ಈರುಳ್ಳಿಯನ್ನು ಎಣ್ಣೆಗೆ ಹಾಕಿ ಚಿನ್ನದ ಬಣ್ಣ ಬರುವವರೆಗೆ ಹುರಿಯಿರಿ. ಹಸಿಮೆಣಸು, ತುರಿದ ತೆಂಗಿನ ಕಾಯಿ, ಶುಂಠಿ, ಬೆಳ್ಳುಳ್ಳಿ ಮತ್ತು ಉಳಿದೆಲ್ಲಾ ಸಾಮಾಗ್ರಿಗಳನ್ನು ಮೂರು ನಿಮಿಷಗಳ ಕಾಲ ಮಂದ ಉರಿಯಲ್ಲಿ ಬೇಯಿಸಬೇಕು. ಇದು ಬೆಂದಾಗ ಹಸಿ ಬಟಾಣಿಯನ್ನು ಸೇರಿಸಿ ಬಳಿಕ ಸ್ವಲ್ಪ ಉಪ್ಪನ್ನು ಸೇರಿಸಿ ಚಮಚದ ಸಹಾಯದಿಂದ ಚೆನ್ನಾಗಿ ಮಿಶ್ರಣ ಮಾಡಬೇಕು. ಮಿಶ್ರಣವನ್ನು ಚೆನ್ನಾಗಿ ಕಲಸಿ ಬಳಿಕ ಪಾತ್ರೆಯನ್ನು ಮುಚ್ಚಿ ಹಾಗೂ ಬಟಾಣಿಯನ್ನು ಬೆಯಲು ಬಿಡಬೇಕು. ಬಟಾಣಿ ಬೆಂದ ಬಳಿಕ ತಣ್ಣಗಾಗಲು ಬಿಡಬೇಕು. ನಂತರ ಮಿಕ್ಸಿಯಲ್ಲಿ ಇದನ್ನು ನುಣ್ಣಗೆ ರುಬ್ಬಿಕೊಳ್ಳಿ, ಅಗತ್ಯವಿದ್ದರೆ ಸ್ವಲ್ಪ ನೀರು ಸೇರಿಸಿಕೊಳ್ಳಿ. ಈಗ ಬಟಾಣಿ ಚಟ್ನಿಗೆ ಒಗ್ಗರಣೆ ಕೊಡಬೇಕು.

ದೋಸೆ ಅಥವಾ ಇಡ್ಲಿಯ ಜೊತೆ ಹಸಿರು ಬಟಾಣಿ ಚಟ್ನಿ ಸಿದ್ದ….ಮತ್ತೇಕೆ ತಡ? ಸ್ವಾದಿಷ್ಟ  ಹಸಿರು  ಬಟಾಣಿ ಚಟ್ನಿಯನ್ನು ತಯಾರಿಸಿ, ಅದರ ಸವಿವನ್ನು ಸವಿರಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top