fbpx
Editor's Pick

ಪ್ರತ್ಯೇಕತೆಯ ಕೂಗು ಏಳುವುದು ನಿರಂತರ ಶೋಷಣೆಯಿಂದಲೇ….

ಕನ್ನಡಿಗರಿಗೆ ಕಾವೇರಿ ಹಾಗೂ ಮಹದಾಯಿ ವಿಚಾ­ರವಾಗಿ ನಿರಂತರವಾಗಿ ಅನ್ಯಾಯವಾಗುತ್ತಿರುವ ಪರಿಣಾ­ಮ ಪ್ರತ್ಯೇಕ ರಾಷ್ಟ್ರದ ಕೂಗು ಎಲ್ಲೆಡೆ ಬಹುವಾಗಿ ಕೇಳಿ ಬರುತ್ತಿದೆ. 2007ರಲ್ಲಿ ಪ್ರಕಟವಾದ ಕಾವೇರಿ ಅಂತಿಮ­ ತೀರ್ಪಿಗೆ ಮೊದಲು 1991ರಲ್ಲಿ ಪ್ರಕಟವಾದ ಕಾವೇರಿ ನ್ಯಾಯಾಧಿಕರಣ ನೀಡಿದ ಮಧ್ಯಂತರ ತೀರ್ಪು ಜಗತ್ತಿನ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ನದಿ ನೀರಿನ ಹಂಚಿಕೆಯಲ್ಲಿ ಪ್ರಕಟವಾದ ಮಧ್ಯಂತರ ಆದೇಶವಾಗಿ­ದೆ, ವಿಪರ್ಯಾಸವೆಂದರೆ ಯಾವ ಒಕ್ಕೂಟ ವ್ಯವಸ್ಥೆಯ ­ಸಾಂವಿಧಾನಿಕ ಸಂಸ್ಥೆಗಳು ಕಾವೇರಿ ವಿಚಾರದಲ್ಲಿ ಮ­ಧ್ಯಂತರ ತೀರ್ಪನ್ನು ನೀಡಲು ಉತ್ಸುಕವಾಗಿದ್ದವೋ ಅ­ದೇ ಸಂಸ್ಥೆಗಳು ಮಹದಾಯಿ ನದಿ ನೀರು ಹಂಚಿಕೆಯಲ್ಲಿ­ Distance Formula ದ ಪ್ರಕಾರ ಕರ್ನಾಟಕಕ್ಕೆ ದೊರೆಕಬೇಕಾದ 45 TMC ನೀರಿನಲ್ಲಿ ಸಮುದ್ರ ಪಾಲಾಗು­ವ 7-8 TMC ನೀರನ್ನೂ ಕುಡಿಯಲ್ಲಿಕೆ ನೀಡದೆ ಆದೇಶ­ ನೀಡುತ್ತವೆ.

ತಲಕಾವೇರಿಯಲ್ಲಿ ಉದಯವಾಗಿ ಕೊಡಗಿನ ಮಂಜಿನ  ಸುಂದ­ರಿ ಸರಿದು ನಾಡ ಅಧಿದೇವತೆ ತಾಯಿ ಭುವನೇಶ್ವರಿ ಪದ­ದಗಲ ಸೋಕಿ ಹರಿಯುವ ತೀರ್ಥ ಸ್ವರೂಪಿ ಕಾವೇರಿ  ತಮಿಳುನಾಡು ಮೂಲಕ ಬಂಗಾಳ ಕೊಲ್ಲಿ ಸೇರುವ ಮುನ್ನ 80­0 ಕಿಲೋಮೀಟರ್ಗಳಷ್ಟು ಪ್ರಯಾಣ ಬೆಳೆಸುತ್ತಾಳೆ. ಈ­ ಪೈಕಿ ಕರ್ನಾಟಕದಲ್ಲಿ ಸುಮಾರು 320 ಕಿಲೋಮೀಟರ್ಗ­ಳಷ್ಟು ಹಾದು ಹೋಗುತ್ತದೆ. ಕರ್ನಾಟಕದ 40% ಭೂಭಾಗವನ್ನು ಹಂಚಿಕೊಂಡ ಕಾವೇರಿ ­ಕೊಳ್ಳದಲ್ಲಿ ಕರ್ನಾಟಕದ ಅಣೆಕಟ್ಟೆಗಳಲ್ಲಿ ಸಂಗ್ರ­ಹವಾಗುವ ಕಾವೇರಿ ನೀರಿನ ಪ್ರಮಾಣ ಸುಮಾರು 462 TMC, ಆದರೆ­ 52% ಭಾಗವನ್ನು ಹಂಚಿಕೊಳ್ಳುವ ತಮಿಳುನಾಡಿನಲ್ಲಿ­ರುವ ಸಂಗ್ರಹಣಾ ಸಾಮರ್ಥ್ಯ ಕೇವಲ 230 TMC. ಹೀಗಿ­ರುವಾಗ ಕಟ್ಟೆ ಪಂಚಾಯ್ತಿ ಮಾದರಿಯಲ್ಲಿ  ಒಟ್ಟು ಸಂಗ್ರಹವಾಗುವ ಸುಮಾರು 700 TMC ನೀರನ್ನು ಕೇವಲ D­istance Formula ದ ಆಧಾರದ ಮೇಲೆ ಲೆಕ್ಕಹಾಕಿ ತ­ಮಿಳುನಾಡಿಗೆ ಒಟ್ಟು 419 TMC ನಿಗದಿಪಡಿಸಿ, ಕರ್ನಾಟಕ ಈ ಒಕ್ಕೂಟ ವ್ಯವಸ್ಥೆಯಲ್ಲಿದೆ ಎಂಬ ಒಂದೇ ಒಂದು ಕಾರಣಕ್ಕೆ ಕರ್ನಾಟಕದಲ್ಲಿ ಕನ್ನಡಿಗರ ಹಣದಲ್ಲಿ ನಿರ್ಮಿಸಿದ ಅಣೆಕಟ್ಟುಗಳಲ್ಲಿ ಸಂಗ್ರಹವಾಗುವ ­460 TMC ನೀರಿನಲ್ಲಿ 192 TMC ನೀರನ್ನು ತಮಿಳುನಾಡಿಗೆ ಬೇಕು ಬೇಕಾದಾಗ ತಿಂಗಳು, ವಾರಗಳಿಗೆ ಇಂತಿ­ಷ್ಟು ಎಂಬ ಲೆಕ್ಕದಲ್ಲಿ ಹರಿಸಲು ಕರ್ನಾಟಕವೇನು ತೋಟದಪ್ಪನ ಛತ್ರವಲ್ಲ. ಇದರ ಬದಲು ತಮಿಳುನಾಡಿಗೆ ಅ­ಣೆಕಟ್ಟುಗಳನ್ನು ಕಟ್ಟಿ ಪ್ರತಿ ವರ್ಷ ಸಮುದ್ರ ಸೇ­ರುತ್ತಿರುವ ಸುಮಾರು 1200 TMC ನೀರನ್ನು ಸಂಗ್ರಹಿಸಲು ಆದೇಶವನ್ನೇಕೆ ನೀಡಬಾರದು?  ಇದರ ಪರಿಣಾಮ ಕಾವೇರಿ ಕೊಳ್ಳದಿಂದ ಕೂಗಳತೆ ದೂರದಲ್ಲಿರುವ ಕರ್ನಾಟಕದ­ ಬರಗಾಲ ಪೀಡಿತ ಪ್ರದೇಶಗಳಾದ ಕೋಲಾರ, ಚಿಕ್ಕಬಳ್ಳಾಪುರಕ್ಕೆ ಕುಡಿಯುವ ನೀರನ್ನು ಪೂರೈಸಲು ನಮ್ಮಿಂದ­ ಸಾಧ್ಯವಾಗುತ್ತಿಲ್ಲ. ನಮ್ಮ ನಾಡಿನ ಅಣೆಕಟ್ಟುಗಳ­ಲ್ಲಿ ಸಂಗ್ರಹವಾಗುವ ನೀರಿನ ಮೇಲೆ ನಮಗೆ ತಾನೇ ಹೆ­ಚ್ಚಿನ ಅಧಿಕಾರವಿರುವುದು? ಒಂದು ವೇಳೆ ಮೈಸೂರು ದೇಶ KRS ಅಣೆಕಟ್ಟು ಕಟ್ಟದಿದ್ದರೆ ತಮಿಳರು ಕರ್ನಾ­ಟಕದ ಅಣೆಕಟ್ಟುಗಳಲ್ಲಿ ಸಂಗ್ರಹವಾಗುವ 460 TMC ನೀರಿನ ಮೇಲೆ ತಮ್ಮ ಹಕ್ಕನ್ನು ಹೇಗೆ ಪ್ರತಿಪಾದಿಸು­ತ್ತಿದ್ದರು?ಕರ್ನಾಟಕದಲ್ಲಿ ಬಾವಿ ತೊಡಿಸಿ ಪಂಪ್‌­ಸೆಟ್ ಹಾಕಿ ವಾರ ವಾರ, ದಿನೇ ದಿನೇ ಇಷ್ಟು ನೀರನ್ನು ಬಿಡಬೇಕೆಂದು ಸಂಸ್ಥೆಗಳು ಆದೇಶ ನೀಡುತ್ತಿತ್ತೋ?

whatsapp-image-2016-09-24-at-2-11-16-pm

ಎಲ್ಲಕ್ಕಿಂತ ಆಘಾತಕಾರಿ ವಿಚಾರವೆಂದರೆ ಕಾವೇರಿ ನಿರ್ವಹಣಾ ಮಂಡಳಿಯನ್ನು ರಚಿಸಿ ಕಾವೇರಿ ಕೊಳ್ಳದ ಅ­ಣೆಕಟ್ಟೆಗಳನ್ನು ಕೇಂದ್ರಾಡಳಿತ ಮಂಡಳಿಯ ಸುಪರ್ದಿ­ಗೆ ವಹಿಸುವಂತೆ ನೀಡಿರುವ ಕನ್ನಡಿಗರ ಪಾಲಿನ ಮರಣ ­ಶಾಸನದಂತಿರುವ ತೀರ್ಪು, 1911ರಲ್ಲಿ ಪ್ರಾರಂಭವಾಗಿ 1938ರಲ್ಲಿ ಲೋಕಾರ್ಪಣೆಗೊಂಡ ಮೈಸೂರು ಮಹಾರಾಜರು ಕನ್ನಡಿಗರ ಹಣದಲ್ಲಿ ಕಟ್ಟಿಸಿದ ಕೃಷ್ಣರಾಜ ಸಾಗರ ಅಣೆಕಟ್ಟೆಗೆ ಅಂದಿನ ಮದ್ರಾಸ್ ಸಂಸ್ಥಾನವೇನು ಪಾಲುದಾರವಾಗಿರಲಿಲ್ಲ ಇವತ್ತಿನ ಒಕ್ಕೂಟ ವ್ಯವಸ್ಥೆಯೇ ಹುಟ್ಟಿ­ರಲಿಲ್ಲ ಹಾಗೂ ತದನಂತರ ಕಾವೇರಿ ಉಪನದಿಗಳಾದ ಕಬಿನಿ, ಹೇಮಾವತಿ, ಹಾರಂಗಿ ನದಿಗಳಿಗೆ ಅಡ್ಡಲಾಗಿ ಆಣೆಕಟ್ಟನ್ನು ಕಟ್ಟಲು ತಮಿಳುನಾಡು ಸರ್ಕಾರ ಹಾಗೂ ಒಕ್ಕೂಟ ಸರ್ಕಾರವೇನು ಪಾಲುದಾರವಲ್ಲ ಹಾಗಾಗಿ ಈ ಎಲ್ಲಾ ಅಣೆಕಟ್ಟಿನ ಸಂಪೂರ್ಣ ಹಕ್ಕು ಕನ್ನಡಿಗರದ್ದೇ. ಅದನ್ನು ಬಲವಂತವಾಗಿ ವಶಪಡಿಸಿಕೊಳ್ಳಲು ಕರ್ನಾಟಕವನ್ನೇನು 70 ವರ್ಷಗಳ ಹಿಂದೆ ­ನಮ್ಮ ಪೂರ್ವಿಕರು ಈ ಒಕ್ಕೂಟಕ್ಕೆ ಅಡವಿಟ್ಟಿಲ್ಲ­. ಒಕ್ಕೂಟ ಸರ್ಕಾರವೇನಾದರು ತಮಿಳುನಾಡಿನ ಲಾಬಿಗೆ­ ಮಣಿದು ಸಮಿತಿ ರಚಿಸಲು ಮುಂದಾದರೆ ಅದು ಸಾಮ್ರಾಜ್ಯಶಾಹಿ ಧೋರಣೆಯಾಗುತ್ತದೆ.  ಇನ್ನು ಜೀವನದಿಗಾಗಿ­ ಮೊನ್ನೆ ನಡೆದ ಸರ್ವಪಕ್ಷ ಸಭೆಯನ್ನು ಧಿಕ್ಕರಿಸಿ­ ನಾಡು-ನುಡಿ ಬಗೆಗಿನ ತಮ್ಮ ನಿಲುವನ್ನು ಬಾಟಾ ಬಯ­ಲು ಮಾಡಿದ 17 ಜನ MP ಗಳನ್ನು ಕನ್ನಡಿಗರು ಆರಿಸಿರುವ BJPಯವರು ಈ ನಿಟ್ಟಿನಲ್ಲಿ ಏನು ಮಾಡುತ್ತಾರೋ ಕಾದು ನೋ­ಡಬೇಕಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top