fbpx
death

ತಾಯಿಯ ಮೃತ ದೇಹ ಮಂಚದ ಮೇಲಿಟ್ಟು ಸಾಗಿಸಿದ ಪೃತ್ರಿಯರು…

ಪತ್ನಿಯ ಮೃತದೇಹವನ್ನು ಹೊತ್ತು ಕಿಲೋಮೀಟರ್‍ ಗಳಷ್ಟು ದೂರ ಸಾಗಿದ ದಾನಾ ಮಾಂಜಿಯ ಸುದ್ದಿಯ ಬೆನ್ನಲ್ಲೇ ಇದೀಗ ಒಡಿಶಾದಲ್ಲಿ ಅಂಥದ್ದೇ ಹೃದಯ ವಿದ್ರಾವಕ ಘಟನೆಯೊಂದು ವರದಿಯಾಗಿದೆ. ಇಂಥಾ ಪರಿಸ್ಥಿತಿಯಲ್ಲಿ ಈಕೆಯ ಮಧ್ಯವಯಸ್ಕರಾದ ನಾಲ್ವರು ಪುತ್ರಿಯರು ಅಮ್ಮನ ಮೃತದೇಹವನ್ನು ಮಂಚದಲ್ಲಿ ಮಲಗಿಸಿ ಸ್ಮಶಾನಕ್ಕೆ ಕೊಂಡೊಯ್ದಿದ್ದಾರೆ.ಅಂತ್ಯಸಂಸ್ಕಾರ ನಡೆಸಲು ಹಣವಿಲ್ಲದ ಕಾರಣ, ಮನೆಯ ಚಾವಣಿಯಲ್ಲಿದ್ದ ಮರದ ತುಂಡುಗಳನ್ನೇ ಬಳಸಿ ಅಮ್ಮನ ಅಂತ್ಯಕ್ರಿಯೆಯನ್ನು ಮಾಡಿದ್ದಾರೆ.

ಪಂಕಜಿನಿ ದಾಶ್ (50), ರಾಧಾ ಠಾಕೂರ್ (45), ಪ್ರತಿಮಾ ದಾಶ್ (39) ಮತ್ತು ಸಂಕುಜ್ ಮುಂದ್ (40) ಎಂಬವರು ಕನಕ್ ಅವರ ಪುತ್ರಿಯರಾಗಿದ್ದಾರೆ.ಶನಿವಾರ ಬೆಳಗ್ಗೆ ಅಮ್ಮನ ಮೃತದೇಹವನ್ನು ಮಂಚದಲ್ಲಿ ಹೊತ್ತು ಸಾಗಿಸುತ್ತಿದ್ದ ದೃಶ್ಯವನ್ನು ಆ ಊರಿನ ಬಾಲಕನೊಬ್ಬ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾನೆ.

ಇಲ್ಲಿನ ಕಲಹಾಂಡಿ ಎಂಬಲ್ಲಿ 80ರ ಹರೆಯದ ಕನಕ್ ಸತ್ಪತಿ ಎಂಬ ವಿಧವೆಯೊಬ್ಬರು ಶುಕ್ರವಾರ ಮೃತಪಟ್ಟಿದ್ದರು. ಭಿಕ್ಷಾಟಣೆಯಿಂದಲೇ ಬದುಕು ಸಾಗಿಸುತ್ತಿದ್ದ ಈ ವಿಧವೆಯ ಮೃತದೇಹವನ್ನು ಸ್ಮಶಾನಕ್ಕೆ ಸಾಗಿಸಲು, ಆಕೆಯ ಮಕ್ಕಳು ಸಹಾಯ ಕೇಳಿದಾಗ ಯಾರೊಬ್ಬರೂ ಮುಂದೆ ಬರಲಿಲ್ಲ. ಅಂಬುಲೆನ್ಸ್‌ಗಾಗಿ ಅನೇಕ ದೂರವಾಣಿ ಕರೆಗಳನ್ನು ಮಾಡಿದೆ. ಆದರೆ ಅಂಬುಲೆನ್ಸ್‌ಸಿಗಲಿಲ್ಲ ಎಂದು ಸೂರಜ್‌ಹೇಳಿದ್ದಾರೆ.
‘ಮೃತಪಟ್ಟವನ ಕುಟುಂಬದವರು ಯಾರೂ ನನ್ನನ್ನು ಭೇಟಿಮಾಡಿ ಅಂಬುಲೆನ್ಸ್‌ಗಾಗಿ ಮನವಿ ಮಾಡಿಲ್ಲ’ ಎಂದು ಜಿಲ್ಲಾ ಆಸ್ಪತ್ರೆಯ ಸೂಪರಿಟೆಂಡೆಂಟ್‌ಹೇಳಿದ್ದಾರೆ.

‘ಈ ವಿಷಯಕ್ಕೆ ಸಂಬಂಧಿಸಿದಂತೆ ದೂರು ಬಂದರೆ ತನಿಖೆಗೆ ಆದೇಶಿಸುತ್ತೇನೆ’ ಎಂದು ಜಿಲ್ಲಾಧಿಕಾರಿ ಮಸೂಮ್‌ಅಲಿ ಸರ್ವಾರ್‌ಹೇಳಿದ್ದಾರೆ.

ಸದನ ಸಮಿತಿಗೆ ಆಗ್ರಹ
ಭುವನೇಶ್ವರದಲ್ಲಿ ಈಚೆಗೆ ನಡೆದಿದ್ದ ಪತ್ನಿಯ ಶವವನ್ನು ಹೆಗಲ ಮೇಲೆ ಹೊತ್ತು ಸುಮಾರು 10 ಕಿಲೋ ಮೀಟರ್‌ ದೂರದ ಗ್ರಾಮಕ್ಕೆ ಸಾಗಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ಸದನ ಸಮಿತಿ ರಚಿಸಬೇಕು ಎಂದು ಬಿಜೆಪಿ ಮತ್ತು ಕಾಂಗ್ರೆಸ್‌ಪಕ್ಷಗಳು ಆಗ್ರಹಿಸಿವೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಒಡಿಶಾ ವಿಧಾನಸಭೆಯಲ್ಲಿ ಶನಿವಾರ ಕಾವೇರಿದ ಚರ್ಚೆ ನಡೆಯಿತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top