fbpx
News

ಕನ್ನಡನೆಲದಲ್ಲೇ ಅಸ್ತಿತ್ವ ಕಳೆದುಕೊಳ್ಳುತ್ತಿರುವನೇ ಕನ್ನಡದ ಸಾರ್ವಭೌಮ?!

ಕನ್ನಡಿಗರ ಬಗ್ಗೆ ಕನ್ನಡ ಚಿತ್ರನಟರ ಬಗ್ಗೆ ಕಳೆದರಡು ದಿನಗಳ ಹಿಂದಿ ತಮಿಳು ವಿಧ್ಯಾರ್ಥಿಯೊಬ್ಬ ಅವಹೇಳನಕಾರಿಯಾಗಿ ಫ಼ೇಸ್ ಬುಕ್ ನಲ್ಲಿ ಬರೆದು ಒದೆ ತಿಂದಿದ್ದಾನೆ, ಕಳೆದ ತಿಂಗಳು ನಾಗರಾಜ್ ಎಂಬುವರು ಬೆಂಗಳೂರಿನ ಜಯನಗರ ಶಾಖೆಯ ಐಸಿ‌ಐಸಿ‌ಐ ಬ್ಯಾಂಕಿಗೆ ಠೇವಣಿ ಇಡಲು ಹೋದಾಗ ಅಲ್ಲಿನ ಸಿಬ್ಬಂದಿ ಇಲ್ಲಿ ಕನ್ನಡ ಮಾತನಾಡಕೂಡದೆಂದು ಹಿಂದಿ ಅಥವಾ ಇಂಗ್ಲೀಷ್ ನಲ್ಲಿ ವ್ಯವಹರಿಸಬೇಕೆಂದು ಒರಟಾಗಿ ಹೇಳಿದ್ದಾರೆ, ಇದರಿಂದ ಮನನೋಂದ ನಾಗರಾಜ್ ರವರು ಜಯನಗರ ಠಾಣೆಯ ಮೇಟ್ಟಿಲೇರಿದ್ದಾರೆ, ಕನ್ನಡ ನೆಲದಲ್ಲೇ ನಿಂತು ಮಾತೃ ಭಾಷೆಯಲ್ಲಿ ಮಾತನಾಡಿದ ವ್ಯಕ್ತಿಯನ್ನು ಅವಮಾನಿಸಿ ಕಡ್ಡಾಯವಾಗಿ ಇಂಗ್ಲೀಷ್ ಅಥವಾ ಹಿಂದಿಯಲ್ಲಿ ಸಂಭಾಷಣೆ ನೆಡೆಸಲು ಹೇಳಿರುವುದು ಖಂಡನೀಯ.ಪರಭಾಷೆ ಹಾವಳಿಯಿಂದ ಕನ್ನಡ ಭಾಷೇಯನ್ನು ರಕ್ಷಿಸಿಕೊಳ್ಳಬೇಕೆಂಬ ಕಹಳೆ ಕಳಕಳಿ ಪ್ರತಿವರ್ಷ ಕನ್ನಡ ರಾಜ್ಯೋತ್ಸವ ಸಂಧರ್ಭದಲ್ಲಿ ಮಾತ್ರ ಕನ್ನಡಪರ ಸಂಘಟನೆಗಳು ಜೋರಾಗಿ ದ್ವನಿ‌ಎತ್ತುತ್ತದೆ, ಅದರೆ ಬಹುಭಾಷಿಕರು ಜಾಸ್ತಿಯಾಗುತ್ತಿರುವ ಬೆಂಗಳೂರಿನಲ್ಲಿ ಈ ನೆಲದ ಮಾತೃಭಾಷೇಯನ್ನು ನಿಧಾನವಾಗಿ ದೂರತಳ್ಳುವ ಚಟುವಟಿಕೆ ಸದ್ದಿಲ್ಲದೆ ನಿಧಾನವಾಗಿ ನೆಡೆಯುತ್ತಿದೆ, ಇದಕ್ಕೆ ಮೇಲಿನ ಐಸಿ‌ಐಸಿ‌ಐ ಘಟನೆ ಸಣ್ಣ ಉದಾಹರಣೆಯಷ್ಟೇ?

ಕಳೆದ ತಿಂಗಳು ಬ್ರಿಟನ್‌ನಲ್ಲಿ ಬ್ರಿಟನ್ ಐರೋಪ್ಯ ಒಕ್ಕೂಟದಿಂದ ಹೊರಬರಬೇಕೋ ಬೇಡವೋ ಎಂಬ ಬಗ್ಗೆ ಅಲ್ಲಿ ಜನಮತಗಣನೆ ನೆಡೆದು ಜನಸಾಮಾನ್ಯರು ಒಕ್ಕೂಟದ ವಿರುದ್ದ ಮತ ಹಾಕಿ ಒಕ್ಕೂಟದಿಂದ ಹೊರನೆಡೆದದ್ದು ಈಗ ಇತಿಹಾಸ, ಅಲ್ಲಿನ ಉದ್ಯಮಿಗಳು ಒಕ್ಕೂಟದ ಪರವಾದ ಒಲವು ತೊರಿದ್ದರು ಕಾರಣ ಸರಕುಗಳನ್ನು ಒಕ್ಕೂಟದ ಇತರ ದೇಶಗಳಿಗೆ ಸುಲಭವಾಗಿ ಸಾಗಿಸಬಹುದು, ಅದರೆ ಅಲ್ಲಿನ ಜನ ಒಕ್ಕೂಟದ ವಿರುದ್ದ ಮತ ಹಾಕಲು ಕಾರಣವಿದೆ,ಬ್ರಿಟನ್ ಒಕ್ಕೂಟದ ಭಾಗವಾಗಿದ್ದರೆ ಒಕ್ಕೂಟದ ಬೇರೆ ಯಾವ ದೇಶದವರು ಬ್ರಿಟನ್‌ಗೆ ವೀಸಾ ಇಲ್ಲದೇ ಪ್ರವೇಶ ಮಾಡಬಹುದು, ಹೀಗಾಗಿ ಅಲ್ಲಿ ವಲಸಿಗರ ಸಂಖ್ಯೆ ಹೆಚ್ಚಾಗಿತ್ತು, ಇದರಿಂದಾಗಿ ಅಲ್ಲಿನ ಯುವಕರು ಉದ್ಯೋಗ ಕಳೆದುಕೊಳ್ಳುತ್ತಿದ್ದರು, ವಲಸೆ ಹೆಚ್ಚಾದಷ್ಟೂ ಸ್ಥಳೀಯರಿಗೆ ಉದ್ಯೋಗದಲ್ಲಿ ನಷ್ಟವಾಗುತ್ತದೆ, ಇದು ಏಲ್ಲಾಕಾಲಕ್ಕೂ ಏಲ್ಲಾ ಪ್ರದೇಶಕ್ಕೂ ಅನ್ವಯಿಸುತ್ತದೆ,ಅಲ್ಲಿನ ಪ್ರಜೆಗಳು ತಮ್ಮ ಊಟದ ಉದ್ಯೋಗದ ಪ್ರಶ್ನೆ ಎದುರಾದಾಗ ಹೇಗೆ ಖಡಕ್ ತಿರ್ಮಾನ ತೆಗೆದುಕೊಂಡರು ನೋಡಿ?

ಅದರೆ ನಮ್ಮ ಕರ್ನಾಟಕದಲ್ಲಿ ಇದಕ್ಕೆ ತದ್ವಿರುದ್ದ, ಎಲ್ಲರನ್ನೂ ಅಪ್ಪಿಕೊಳ್ಳುವ ಮೃದುಸ್ವಭಾವದ ಗುಣದಿಂದಾಗಿ ಇಂದು ಕನ್ನಡಿಗ, ಕನ್ನಡ ಅಪಾಯದ ಅಂಚಿನಲ್ಲಿದೆ,ಇನ್ನು ನಮ್ಮ ಕರ್ನಾಟಕಕ್ಕೆ ಬನ್ನಿ, ಇದು ಕೂಡ ವಲಸಿಗರ ಸ್ವರ್ಗವಾಗಿದೆ, ಅದರಲ್ಲೂ ಬೆಂಗಳೂರು ಎಂದರೆ ವಲಸಿಗರಿಗೆ ಅಚ್ಚುಮೆಚ್ಚು, ಕನ್ನಡನಾಡಲ್ಲಿ ಕನ್ನಡಿಗನೇ ಸಾರ್ವಭೌಮ ಎಂಬ ಮಾತು ಈ ಕಾಲಕ್ಕೆ ಅನ್ವಯವಾಗುವುದಿಲ್ಲಾ ಎಂದರೆ ತಪ್ಪಾಗಲಾರದು, ಕಳೆದ ಕೆಲ ತಿಂಗಳ ಹಿಂದೆ ವಿಶ್ವವಾಣಿ ಕೂಡ ರಾಜಧಾನಿಯಲ್ಲಿ ಕನ್ನಡ ಉಳಿಸಿ ಎಂಬ ಅಭಿಯಾನ ಅರಂಭಿಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು, ಅದರೆ ರಾಜಧಾನಿಯಲ್ಲಿ ಬರಿ ಕನ್ನಡವನ್ನಲ್ಲಾ ಕನ್ನಡಿಗರನ್ನು ಉಳಿಸಿ ಎಂಬ ಕಾಲವೂ ಬರುವ ದಿನ ದೂರವಿಲ್ಲಾ!.ರಾಜಧಾನಿಯಲ್ಲಿ ಕೇವಲ ಶೇಕಡಾ ೪೦ ಕನ್ನಡಿಗರು ಉಳಿದವರೆಲ್ಲಾ ಅನ್ಯಭಾಷಿಕರು, ವಲಸಿಗರು, ಕೆಲ ದಶಕದ ಹಿಂದೆ ಇಲ್ಲಿ ಬಂದು ಮನೆ ಬಾಡಿಗೆ ಕೆಳುತ್ತಿದ್ದ ವಲಸಿಗರ ಬಳಿ ಕನ್ನಡಿಗರು ಈಗ ಮನೆಬಾಡಿಗೆ ಕೇಳುವ ಪರಿಸ್ಥಿತಿ ಬಂದಿದೆ.

ನಾವೇಲ್ಲಾ ಭಾರತೀಯರು ಭಾರತದಲ್ಲಿ ಎಲ್ಲಿ ಬೇಕಾದರೂ ಜೀವಿಸಬಹುದು ಎಂಬುದರಲ್ಲಿ ಎರಡುಮಾತಿಲ್ಲಾ!ಅದರೆ ನಮಗೆ ಬದುಕು ಕಟ್ಟಿಕೊಟ್ಟ ನೆಲ, ಜಲ ಜನದ ಬಗ್ಗೆ ಅಭಿಮಾನ ಇರಬೇಕಲ್ಲವೇ?ಬೆಂಗಳೂರಿನಲ್ಲಿರುವ ಹಲವಾರು ಐಟಿ-ಬಿಟಿ ಹಾಗೂ ಔಷದ ತಯಾರಿಕ ಕಂಪೆನಿಗಳಲ್ಲಿ ಕನ್ನಡಿಗರಿಗಿಂತ ಅನ್ಯಭಾಷಿಕರೆ ಹೆಚ್ಚಾಗಿದ್ದಾರೆಂದರೆ ತಪ್ಪೆನಿಲ್ಲಾ? ಒಬ್ಬ ಅನ್ಯಭಾಷಿಕ ಯಾವುದೇ ಕಂಪನಿಯ ಉನ್ನತ ಹುದ್ದೆಯನ್ನು ಅಲಂಕರಿಸಿದರೆ ಸಾಕು! ಕೆಲದಿನಗಳಲ್ಲೇ ಅತನ ಕೆಳಗಿನ ಹುದ್ದೆಗಳಿಗೆಲ್ಲಾ ಅವನ ಕಡೆಯವರೆ ತುಂಬಿರುತ್ತಾರೆ,ಇತ್ತಿಚೆಗೆ ನನ್ನ ಗೆಳೆಯರಿಬ್ಬರು ಬೆಂಗಳೂರಿನಲ್ಲಿರುವ ಪ್ರತಿಷ್ಟಿತ ಔಷದ ಕಂಪೆನಿಯಿಂದ ಕೆಲಸ ಬದಲಾಯಿಸಿದರು, ಕಾರಣ ಕೆಳಿದ್ದಕ್ಕೆ ಆ ಕಂಪೆನಿಯ ತುಂಬಾ ತೆಲುಗು ಭಾಷೀಗರು, ಮೂರ್ನಾಲ್ಕು ಜನ ಮಾತ್ರ ಕನ್ನಡಿಗರು ಉಳಿದುಕೊಂಡಿದ್ದೆವು, ನಮ್ಮನ್ನು ತೆಗೆಯಲು ಇನ್ನಿಲ್ಲದ ತೊಂದರೆ ಕೊಟ್ಟರು ಹಾಗಾಗಿ ಕೆಲಸ ಬಿಟ್ಟೆವು ಎಂದರು, ಬೆಂಗಳೂರಿನ ಹಲವಾರು ಕಂಪೆನಿಗಳಲ್ಲಿ ಇದು ನೆಡೆಯುತ್ತಿದೆ, ಮಹಿಷಿ ವರದಿ ಇನ್ನೂ ಜಾರಿಯಾಗಿಲ್ಲಾ! ಇನ್ನೂ ನವೆಂಬರ್ ಕನ್ನಡಪರ ಸಂಘಟನೆಗಳಿಗೆ ಇದರ ಅರಿವಿಲ್ಲಾ!
ಇದರ ಮಧ್ಯೆ ನಮ್ಮ ಬಿಬಿ‌ಎಂಪಿ ಬೆಂಗಳೂರಿನಲ್ಲಿರುವ ಪರಭಾಷಿಕರ ಅನುಕೂಲಕ್ಕೆ ಐದುಭಾಷೆಯಲ್ಲಿ ಕಾರ್ಯ ನಿರ್ವಹಿಸುವ ಸಹಾಯವಾಣಿಯನ್ನು ಅರಂಭಿಸಲು ತೀರ್ಮಾನಿಸಿದ್ದು ಹಾಸ್ಯಸ್ಪದ ವಿಚಾರ! ಬೆಂಗಳೂರಿನಲ್ಲಿ ಈಗಾಗಲೇ ಕನ್ನಡದ ಪರಿಸ್ಥಿತಿ ಶೋಚನಿಯ ಪರಿಸ್ಥಿತಿ ತಲುಪಿದೆ. ಐಟಿ ಬಿಟಿ ಕಂಪೆನಿಗಳು ಹಾಗೂ ಬೃಹತ್ ಮಾಲ್‌ಗಳು ಕನ್ನಡವನ್ನು ಕಡೆಗಣಿಸುತ್ತಿದೆ, ಆಡಳಿತದಲ್ಲಿ ಕನ್ನಡಭಾಷೆಯನ್ನು ಉತ್ತೇಜಿಸಬೇಕಾದ ಜವಾಭ್ದಾರಿ ಜಾಗದಲ್ಲಿ ಕುಳಿತಿರುವ ಬಿಬಿ‌ಎಂಪಿ ಪರಭಾಷೆಯ ಸಹಾಯವಾಣಿ ತೆಗೆದು ಕನ್ನಡವನ್ನು ಕಡೆಗಣಿಸ ಹೊರಟ್ಟದ್ದು ಕನ್ನಡಿಗರ ಶೋಚನೀಯ ಪರಿಸ್ಥಿತಿಯನ್ನು ಬಿಂಬಿಸುತ್ತದೆ. ಕನ್ನಡಪರ ಸಂಘಟನೆಗಳ ಪ್ರತಿಭಟನೆಗೆ ಮಣಿದು ಇದರಿಂದ ಹಿಂದೆ ಸರಿದದ್ದು ಸ್ವಾಗತಾರ್ಹ, ಪಕ್ಕದ ರಾಜ್ಯಗಳಲ್ಲೂ ಕೂಡ ಕನ್ನಡ ಭಾಷೆಯಲ್ಲಿ ಈ ರೀತಿಯ ಸೇವೆಯನ್ನು ಕೊಡುತ್ತಾರೆಯೇ? ತಮಿಳುನಾಡಿನಲ್ಲಿ ಕನ್ನಡ ಮಾತನಾಡಿದರು ಎಂಬ ಕಾರಣಕ್ಕೆ ಕಳೆದ ತಿಂಗಳು ತಮಿಳುನಾಡಿನ ಸೇಲಂನಲ್ಲಿ ಸಾವಿರ ರೂಪಾಯಿ ದಂಡಹಾಕಿದ್ದನ್ನು ನೀವು ಪತ್ರಿಕೆಗಳಲ್ಲಿ ಓದಿರಬಹುದು, ಪಕ್ಕದ ರಾಜ್ಯಗಳಲ್ಲಿರುವ ಭಾಷಾಭಿಮಾನ ಕನ್ನಡಿಗರಿಗೇಕೆ ಇಲ್ಲಾ!ಪರಭಾಷೆಯವರನ್ನು ಅವರ ಭಾಷೇಯಲ್ಲೇ ಮಾತನಾಡಿಸುವಷ್ಟು ವಿಶಾಲ ಮನೋಭಾವದವರು ನಾವು!! ಭೇರೆ ಭಾಷೆಯಲ್ಲಿ ಸೇವೆ ಕೊಡುವ ಬಾಬತ್ತು ಎನಿತ್ತು?, ಬೇರೆ ರಾಜ್ಯಗಳಲ್ಲಿ ಅಲ್ಲಿನ ಸ್ಥಳೀಯ ಭಾಷೆಗೆ ಮೊದಲ ಅಧ್ಯತೆ ನಂತರ ಇಂಗ್ಲೀಷ್, ಭೇರೆ ಭಾಷೆಗಳಲ್ಲಿ ಸೇವೆಕೊಡಲು ಹೊರಟಿರುವ ಬೆಂಗಳೂರಿನ ತೆಲುಗು ಮೇಯರ್ ಗೆ ಇನ್ನೋಂದು ಭಾರಿಗೆ ಸೀಟು ಭದ್ರ ಮಾಡಿಕೊಳ್ಳುವ ದೂರಾಲೋಚನೆ ಇರಬಹುದು,

ಇನ್ನು ಕರ್ನಾಟಕದಲ್ಲಿರುವ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಜಾಸ್ತಿ ಹಿಂದಿ ಬಳಕೆಯಾಗುತ್ತದೆ, ಹಿಂದಿ ಸಾಪ್ತಾಹದ ಹೆಸರಿನಲ್ಲಿ ಹಿಂದಿ ಮಾತನಾಡುವವರಿಗೆ ಬೋನಸ್ ಅದು ಇದು ಎಂದು ಅನಗತ್ಯವಾಗಿ ರಾಷ್ಟ್ರಭಾಷೆಯ ( ಅಧಿಕೃತವಾಗಿ ರಾಷ್ಟ್ರಭಾಷೆಯಲ್ಲದಿದ್ದರೂ) ಹಿಂದಿ ಹೇರಿಕೆ ಅವ್ಯಾಹತವಾಗಿ ಸಾಗಿದೆ, ಇನ್ನು ಎಟಿ‌ಎಂ ಗಳಲ್ಲಿ ನಿಮಗೆ ಕನ್ನಡಬಿಟ್ಟು ಬೇರೆ ಎಲ್ಲಾ ಭಾಷೇಯ ಆಯ್ಕೆಗಳು ಕಾಣುತ್ತದೆ, ಕನ್ನಡ ನೆಲದಲ್ಲೇ ಕನ್ನಡಕ್ಕೆ ಈ ಸ್ಥಿತಿಯೇ?ಬ್ಯಾಂಕ್ ಗಳಲ್ಲಿ ಕನ್ನಡ ಬಳಕೆಗೆ ಹಿಂದೇಟುಹಾಕುವುದನ್ನು ಗಂಭೀರವಾಗಿ ಪರಿಗಣೀಸಿರುವ ಸರ್ಕಾರ ರಾಷ್ಟ್ರಿಕೃತ ಬ್ಯಾಂಕ್ ಗಳಲ್ಲಿ ಕನ್ನಡ ಅನುಷ್ಠಾನ ಕಡ್ಡಾಯಗೊಳಿಸುವಂತೆ ಪತ್ರಬರೆದಿರುವುದು ಸ್ವಾಗತಾರ್ಹವಿಚಾರ.ನಾಮಪಲಕ ಅಳವದಿಸುವುದೂ ಸೇರಿದಂತೆ ಬ್ಯಾಂಕ್ ಗಳ ನಿತ್ಯದ ವ್ಯವಹಾರದಲ್ಲಿ ತ್ರಿಭಾಷಾಸೂತ್ರ ಅನುಸರಿಸುವಂತೆ ಆರ್ ಬಿ‌ಐ ನಿರ್ದೇಶಿಸಿದ್ದರು ಚಲನಗಳಲ್ಲಿ ಕನ್ನಡವನ್ನು ಬಳಸುತ್ತಿಲ್ಲಾ, ಬ್ಯಾಂಕ್ ಸಿಬ್ಬಂದಿಗಳು ಗ್ರಾಹಕರೊಂದಿಗೆ ಕನ್ನಡ ಭಾಷೆಯಲ್ಲಿ ವ್ಯವಹರಿಸದೇ ಬ್ಯಾಂಕ್ ನವರು ಹಿಂದಿ ಮತ್ತು ಇಂಗ್ಲೀಷ್ ನಲ್ಲಿ ಮಾತನಾಡಿ ಕನ್ನಡಿಗರನ್ನು ಅಪಮಾನಿಸಿದ ಘಟನೆಗಳೂ ನೆಡೆದಿವೆ

ನೀವು ಫ಼್ರಾನ್ಸನಲ್ಲಿ ವಾಸಿಸಬೇಕೆಂದರೆ ಫ಼್ರೆಂಚ್ ಕಲಿಯಬೇಕು, ಡೆನ್ಮಾರ್ಕ್‌ನಲ್ಲಿ ವಾಸಿಸಬೇಕೆಂದರೆ ಖಡ್ದಾಯವಾಗಿ ಡ್ಯಾನೀಷ್ ಕಲಿಯಬೇಕು, ಹಾಗೇಯೇ ಕನ್ನಡನಾಡಿಗೆ ಬಂದ ವಲಸಿಗರಿಗೆ ಕನ್ನಡ ಕಲಿಯುವಂತೆ ಮಾಡಬೇಕೆ ಹೊರತೂ ಅವರ ಭಾಷೇಯಲ್ಲೆ ಸಹಾಯವಾಣಿ ತೆರೆದು ಕನ್ನಡವನ್ನು ನಿರ್ಲಕ್ಷಿಸುವಂತೆ ಮಾಡುತ್ತಿರುವುದು ನಿಜಕ್ಕೂ ವಿಪರ್ಯಾಸ, ಇನ್ನು ಇದಕ್ಕೆ ಪೂರಕವೆಂಬಂತೆ ನಮ್ಮ ಕನ್ನಡ ಚಾನೆಲ್‌ಗಳು ಕುಣಿಯುತ್ತದೆ, ಕಳೆದವಾರ ಬಿಡುಗಡೆಯಾದ ಕಭಾಲಿ ಚಿತ್ರ ಹಿಟ್ ಆಗಲು ಈ ಚಾನೆಲ್‌ಗಳ ಕೊಡುಗೆಯೂ ಅಪಾರ, ಇನ್ನಿಲ್ಲದಂತೆ ಇದರ ಬಗ್ಗೆ ದಿನಬೆಳಗೂ ಪ್ರಚಾರ ನೀಡಿದವು, ರಂಗಿತರಂಗ, ತಿಥಿ,ಲಾಸ್ಟ್ ಬಸ್ ಅಲ್ಲದೇ , ಸಾಧಾರಣ ಮ್ಯೆಕಟ್ಟು ಗೋದಿ ಮ್ಯೆಬಣ್ಣ ಮುಂತಾದ ಕನ್ನಡ ಚಿತ್ರಗಳಿಗೆ ಏಷ್ಟು ಪ್ರಚಾರ ಕೊಟ್ಟವು ಈ ಚಾನೆಲ್ಗಳು? ಶಿವಣ್ಣ ಪುನೀತ್ ಅಭಿನಯದ ಚಿತ್ರಗಳು ಬಿಡುಗಡೆಯಾಗುವಾಗ ಈ ರೀತಿಯ ಅಬ್ಬರದ ಪ್ರಚಾರ ಏಕಿಲ್ಲಾ? ನಮ್ಮ ಕನ್ನಡ ಚಿತ್ರಗಳಿಗೂ ಪಕ್ಕದ ರಾಜ್ಯದ ಚಾನೆಲ್‌ಗಳು ಪ್ರಚಾರ ಕೊಡುತ್ತವೆಯೇ? ಇನ್ನು ಕನ್ನಡ ಮ್ಯೂಸಿಕ್ ಚಾನೆಲ್‌ಗಳಲ್ಲಿ ಪ್ರಸಾರವಾಗುವ ಹಲವಾರು ಕಾರ್ಯಕ್ರಮಗಳ ಶೀರ್ಷಿಕೆ ಇಂಗ್ಲೀಷ್, ಸುದ್ದಿವಾಚಕರು ಬಳಸುವ ಭಾಷೆಯೂ ಕಂಗ್ಲೀಷ್‌ಮಯ, ಇನ್ನೂ ಕನ್ನಡ ಶಾಲೆಗಳ ಗತಿ ಅದೋಗತಿ, ಹೀಗಾದರೆ ಕನ್ನಡ ನೆಲದಲ್ಲಿ ಕನ್ನಡದ ಕನ್ನಡಿಗರ ಅಳಿವು ಉಳಿವು ಸಾಧ್ಯವೇ?

ಇನ್ನು ಇಲ್ಲಿ ಬರುವ ವಲಸಿಗರು ಸುಮ್ಮನ್ನಿದ್ದಾರೆಯೆ ಎಂದರೆ ಇಲ್ಲಾ, ಕನ್ನಡ ನೆಲ, ಜಲ, ಭಾಷೆಯ ಬಗ್ಗೆ ಹಾಗು ಕೆಲವೊಮ್ಮೆ ಇಲ್ಲಿನ ಹೆಣ್ಣುಮಕ್ಕಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿಯಾಗಿ ಬರೆಯುವುದು ಇದೆ, ಇದರ ಬಗ್ಗೆ ಸಾಮಾನ್ಯ ಕನ್ನಡಿಗ ತಂಡ ಪೋಲಿಸ್ ಇಲಾಖೆಯಲ್ಲಿ ದೂರು ಸಲ್ಲಿಸಿದ್ದರೂ ಅವರು ಯಾವುದೇ ಕ್ರಮ ಕ್ಯೆಗೊಂಡಿಲ್ಲಾ ಎಂದು ನೊಂದು ನುಡಿಯುತ್ತಾರೆ ಸಂಘದ ಅಧ್ಯಕ್ಷ ಸಂದೀಪ್ ಪಾರ್ಶ್ವನಾಥ್!
ಕಳೆದ ಕೆಲ ತಿಂಗಳ ಹಿಂದೆ ಅಡ್ಡ ದಿಡ್ದಿ ಕಾರು ಚಲಾಯಿಸಿ ವೃದ್ದರೋಬ್ಬರ ಸಾವಿಗೆ ಕಾರಣರಾಗಿದ್ದ ನ್ಯೆಜಿರಿಯಾ ಪ್ರಜೆಗಳ ಪುಂಡಾಟವನ್ನು ಮರೆಯುವ ಮುನ್ನವೇ ಉಗಾಂಡದ ಯುವತಿಯೊಬ್ಬಳು ಕೆಲದಿನಗಳ ಹಿಂದೆ ರಂಪಾಟ ಮಾಡಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ವೀಸಾ ಅವಧಿ ಮುಗಿದರೂ ಇಲ್ಲೀಯೆ ನೆಲೆಯೂರಿರುವ ಸಾವಿರಾರು ವಿದೇಶಿ ವಲಸಿಗರೂ ಇದ್ದಾರೆ, ಓಟ್ಟಿನಲ್ಲಿ ಕರ್ನಾಟಕ ಅದರಲ್ಲೂ ಬೆಂಗಳೂರು ವಲಸಿಗರ ಸ್ವರ್ಗವಾಗುತ್ತಿದ್ದು ಕನ್ನಡಿಗ ತನ್ನ ನೆಲದಲ್ಲೆ ಅಸ್ತಿತ್ವವನ್ನು ಕಳೆದುಕೊಳ್ಳೂತ್ತಿದ್ದಾನೇನೋ ಎಂಬ ಸಂಶಯ ಕಾಡದೆ ಇರದು. ಇದೆಲ್ಲದರ ಮಧ್ಯೆ ಅನಗತ್ಯವಾಗಿ ರಾಷ್ಟ್ರಭಾಷೆಯ ನೆಪದಲ್ಲಿ ಹಿಂದಿಹೇರಿಕೆ ನೆಡೆಯುತ್ತಿದೆ, ದಕ್ಷಿಣಭಾರತದ ಬೇರೆ ರಾಜ್ಯಗಳಿಗೆ ಹೋಲಿಸಿದರೆ ಈ ಹಿಂದಿ ಹೇರಿಕೆ ಕರ್ನಾಟಕದಲ್ಲಿ ಜಾಸ್ತಿ ಎಂದರೆ ಅತಿಶಯೋಕ್ತಿಯಾಗಲಾರದು. ಇನ್ನು ಬೆಂಗಳೂರಿನ ಮಾಲಗಳಲ್ಲಿ ಹೋದರೆ ನಿಮ್ಮ ಕಿವಿಗೆ ಬಿಳುವುದು ಬರಿ ಹಿಂದಿಹಾಡುಗಳು, ರೆಸ್ಟೂರಾಂಟ್‌ಗಳಲ್ಲೂ ಸಹ ಇದೆ ಕಥೆ, ಕೇಳಿದರೆ ಇಲ್ಲಿ ಹೆಚ್ಚಾಗಿ ಬರುವವರು ಉತ್ತರಭಾರತೀಯರು,ಹಾಗಾಗಿ ಹಿಂದಿ ಹಾಡು ಎಂಬ ಸಮಜಾಯಿಷಿ!ಇನ್ನು ಕರ್ನಾಟಕದಲ್ಲಿ ವಿರೋಧಪಕ್ಷದ ಮಾಡಬೇಕಾದ ಕೆಲಸವನ್ನು ಸಾಮಾಜಿಕ ಜಾಲತಾಣಗಳಲ್ಲಿ ಕೆಲ ಕನ್ನಡಪರ ಸಂಘಟನೆಗಳು, ಕೆಲವರು ಮಾಡುತ್ತಿದ್ದಾರೆ, ಕರ್ನಾಟಕದಲ್ಲಿ ವಿರೋಧ ಪಕ್ಷವೊಂದು ಇದೆಯಾ ಎಂದು ಅನುಮಾನವಾಗುತ್ತಿದೆ, ಇನ್ನೂ ಕನ್ನಡಿಗರ ಕನ್ನಡದ ಹಿತಕಾಯಬೇಕಾದ ಸರ್ಕಾರ ಘಾಡ ನಿದ್ರೆಯಲ್ಲಿದೆ. ವಲಸೆ ಹೆಚ್ಚಾದಷ್ಟೂ ಸ್ಥಳೀಯರು ವಲಸಿಗರೊಂದಿಗೆ ಉದ್ಯೋಗದಲ್ಲಿ ಪ್ಯೆಪೋಟಿ ಎದುರಿಸಬೇಕಾಗುತ್ತದೆ, ಹಾಗಾಗಿ ಸರ್ಕಾರ ವಲಸಿಗರಿಗೆ ಕಡಿವಾಣ ಹಾಕಬೇಕಾಗಿದೆ,ಇಲ್ಲದ್ದಿದ್ದರೆ ಇದರಿಂದ ಕನ್ನಡಿಗರಿಗೆ ಕನ್ನಡಕ್ಕೆ ಅಪಾಯವಿದೆ. ರಾಜ್ಯದ ನೆಲಜಲ ಭಾಷೆಯ ವಿಚಾರ ಬಂದಾಗ ಬೇರೆ ರಾಜ್ಯಗಳ ಜನ-ಜನಪ್ರತಿನಿಧಿಗಳು ತೋರಿಸುವ ಓಗ್ಗಟ್ಟು ನಮ್ಮಲ್ಲಿಲ್ಲ ಎಂಬುದೆ ಬೇಸರ. ಗಡಿ, ಭಾಷೆ, ನೆಲ ಜಲದ ವಿಚಾರ ಬಂದಾಗ ಕನ್ನಡಿಗರಿಗೆ ಯಾವಾಗಲೂ ಅನ್ಯಾಯ,ಇದರ ಬಗ್ಗೆ ಗಂಭೀರವಾಗಿ ಚಿಂತಿಸಬೇಕಾದ ಅವಶ್ಯಕತೆ ಇದೆ.

ಬೆಂಗಳೂರಿಗೆ ಹೀಗೆ ವಲಸೆ ಮುಂದುವರೆದರೆ ಮುದೊಂದು ದಿನ ಕರ್ನಾಟಕ ತಮಿಳಾಂದ್ರವಾದರೆ ಅಶ್ಚರ್ಯಪಡಬೇಕಾಗಿಲ್ಲಾ! ಕನ್ನಡ ಅಭಿವೃದ್ದಿ ಪ್ರಾದಿಕಾರ, ಕನ್ನಡ ಸಾಹಿತ್ಯ ಪರಿಷತ್ತು ಎಲ್ಲಿದೆ? ಎನು ಮಾಡುತ್ತಿವೆ? ಕನ್ನಡಿಗರ ಹಿತ ಕಾಯುವಲ್ಲಿ “ವಿಶ್ವವಾಣಿ” ದ್ವನಿಯಾಗಲಿ ಎಂದು ಕನ್ನಡಿಗರ ಪರವಾಗಿ ಆಶಿಸುತ್ತೆನೆ.

ಪ್ರಕಾಶ್ ಕೆ ನಾಡಿಗ್
ಶಿವಮೊಗ್ಗ
ಪ್ರಕಾಶ್.ಕೆ.ನಾಡಿಗ್
Manager-Regulatory Affairs
No-18, Wexford Laboratories Pvt Ltd
I phase, KIADB Industrial Area
Anthrasanahalli,
Tumkur-572106
Mobile-9845529789

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top