fbpx
god

ಶನಿದೇವನ ಬಗ್ಗೆ ನಿಮಗೆಷ್ಟು ಗೊತ್ತು…?

ಪ್ರಾಮಾಣಿಕರಾಗಿರಿ :

ಶನಿದೇವನ ಕೃಪೆಗೆ ಪಾತ್ರರಾಗಲು ನೀವು ಪ್ರಾಮಾಣಿಕವಾಗಿದ್ದರೆ ಸಾಕು, ಪ್ರಾಮಾಣಿಕರಾಗಿರಿ ನಿಮ್ಮ ಜೀವನದಲ್ಲಿ ಪ್ರಾಮಾಣಿಕರಾಗಿರುವುದು, ಲಂಚ ನೀಡದಿರುವುದು, ಯಾರಿಗೂ ತೊಂದರೆ ಅಥವಾ ನೋವು ನೀಡದಿರುವುದು ಸಾಡೆಸಾತಿಯ ಅವಧಿಯಲ್ಲಿ ಅವಶ್ಯವಾಗಿದೆ.

ಕಪ್ಪು ಬಟ್ಟೆಯನ್ನು ಧರಿಸಿ :

ಶನಿದೇವನ ಇಷ್ಟದ ಬಣ್ಣವೆಂದರೆ ಕಪ್ಪು. ಜೊತೆಗೇ, ಶನಿವಾರದಂದು ಚರ್ಮದ ಅಥವಾ ಕಪ್ಪು ಬಣ್ಣದ ಯಾವುದೇ ವಸ್ತುಗಳನ್ನು ಖರೀದಿಸದಿರುವುದು ಉತ್ತಮ. ಆದ್ದರಿಂದ ಶನಿವಾರದಂದು ಕಪ್ಪುಬಟ್ಟೆಯನ್ನು ತೊಡುವ ಮೂಲಕ ಶನಿದೇವನನ್ನು ಒಲಿಸಿಕೊಳ್ಳಲು ಸುಲಭವಾಗುವುದು ಎಂದು ಪುರಾಣಗಳಲ್ಲಿ ತಿಳಿಸಲಾಗಿದೆ.

ಮದ್ಯಪಾನದಿಂದ ದೂರವಿರಿ :

ಶನಿದೇವನನ್ನು ಒಲಿಸಿಕೊಳ್ಳಲು ಮದ್ಯಪಾನದ ವರ್ಜನೆ ಅಗತ್ಯ. ಏಕೆಂದರೆ ಶನಿ ಓರ್ವ ನ್ಯಾಯದೇವತೆಯೂ ಆಗಿದ್ದಾನೆ. ಕೆಟ್ಟ ಅಭ್ಯಾಸಗಳಾದ ಧೂಮಪಾನ, ಮದ್ಯಪಾನ, ಮಾಂಸಸೇವನೆ ಮೊದಲಾದವು ಶನಿದೇವನಿಗೆ ಕೋಪ ತರಿಸುತ್ತದೆ. ಆದ್ದರಿಂದ ಈ ಎಲ್ಲಾ ದುರಭ್ಯಾಸಗಳನ್ನು ತ್ಯಜಿಸುವುದರಿಂದ, ಅದರಲ್ಲೂ ವಿಶೇಷವಾಗಿ ಸಾಡೆಸಾತಿಯ ಅವಧಿಯಲ್ಲಿ ಅನುಸರಿಸುವ ಮೂಲಕ ಶೀಘ್ರವಾಗಿ ತೊಂದರೆಯಿಂದ ಪಾರಾಗಬಹುದು.

ಶನಿದೇವ ಸಾಸಿವೆ ಎಣ್ಣೆ ಪ್ರಿಯ :

ಧರ್ಮಗ್ರಂಥಗಳ ಪ್ರಕಾರ ಶನಿದೇವನಿಗೆ ಅರ್ಪಿಸಲು ಸಾಸಿವೆ ಎಣ್ಣೆ ಸೂಕ್ತವಾಗಿದೆ. ಇದನ್ನು ಅರ್ಪಿಸಲು ಶನಿದೇವನ ದಿನವಾದ ಶನಿವಾರವೇ ಅತ್ಯಂತ ಸೂಕ್ತವಾದ ದಿನವಾಗಿದ್ದು ಅಂದು ಸೂರ್ಯ ಹುಟ್ಟುವ ಮೊದಲೇ ಅರಳಿ ಮರದ ಬಳಿ ಧಾವಿಸಿ ಯಾವುದಾದರೊಂದು ರೆಂಬೆಯ ಮೇಲೆ ಎಣ್ಣೆಯನ್ನು ಸುರಿದು ಅರ್ಪಿಸಬೇಕು. ಸಾಸಿವೆ ಎಣ್ಣೆ ಲಭ್ಯವಿಲ್ಲದಿದ್ದರೆ ಕರಿಎಳ್ಳಿನ ಎಣ್ಣೆಯನ್ನೂ ಅರ್ಪಿಸಬಹುದು.

ಹನುಮಂತನನ್ನು ಆರಾಧಿಸಿ :

ರಾಮಾಯಣದ ಪ್ರಕಾರ ರಾವಣದ ಬಿಗಿಮುಷ್ಠಿಯಲ್ಲಿ ಸಿಲುಕಿದ್ದ ಶನಿದೇವನನ್ನು ಹನುಮಂತ ರಕ್ಷಿಸಿದ್ದ. ಈ ಉಪಕಾರವನ್ನು ತೀರಿಸಲು ಹನುಮಂತನ ಭಕ್ತರಿಗೆ ತೊಂದರೆ ನೀಡದಿರುವ ಶನಿದೇವ ಒಪ್ಪಿಕೊಂಡ. ಶನಿದೇವನ ಪ್ರಭಾವದಿಂದ ಹೊರಬರಲು ಹನುಮಂತನನ್ನು ಆರಾಧಿಸುವುದು ಇನ್ನೊಂದು ವಿಧಾನವಾಗಿದೆ. ಆದ್ದರಿಂದ ಶನಿಯ ಪ್ರಭಾವವಿರುವವರು ಹನುಮಂತನನ್ನು ಪ್ರಾರ್ಥಿಸುವ ಮೂಲಕ ತೊಂದರೆಯಿಂದ ಹೊರಬರಲು ಸಾಧ್ಯವಿದೆ ಎಂದು ಪುರಾಣಗಳಲ್ಲಿ ತಿಳಿಸಲಾಗಿದೆ.

ಶನಿದೇವರಿಗೆ ಬಡವರೇ ಪ್ರಿಯರು :

ಶನಿದೇವನಿಗೆ ಬಡವರು ಮತ್ತು ಬಲ್ಲಿದರು ಇಷ್ಟವಾಗಿದ್ದು ಅವರಿಗೆ ಹೆಚ್ಚಿನ ಸಹಾಯ ಮಾಡುತ್ತಾನೆಂದು ನಂಬಲಾಗಿದೆ. ಬಡವರಿಗೆ ನೆರವಾಗುವ ಮೂಲಕ ಶನಿದೇವನನ್ನು ಒಲಿಸಿಕೊಳ್ಳಬಹುದೆಂದು ಭಾವಿಸುವ ಭಕ್ತರು ಬಡಬಗ್ಗರಿಗೆ ಅಗತ್ಯವಿವಸ್ತುಗಳನ್ನು ದಾನರೂಪದಲ್ಲಿ ನೀಡುವ ಮೂಲಕ ಶನಿಯ ಪ್ರಭಾವದಿಂದ ಹೊರಬರಲು ಯತ್ನಿಸುತ್ತಾರೆ. ಬಡವರಿಗೆ ಬಟ್ಟೆ ಅಥವಾ ಹಣವನ್ನು ಶನಿವಾರದಂದು ನೀಡಲಾಗುತ್ತದೆ. ಪರ್ಯಾಯವಾಗಿ ಬಡವರಿಗೆ ಕಪ್ಪು ಬಟ್ಟೆಯ ಚಿಕ್ಕ ತುಂಡನ್ನೂ ದಾನರೂಪದಲ್ಲಿ ಬಡಬಗ್ಗರಿಗೆ ನೀಡಬಹುದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top