fbpx
Karnataka

ಏನೇ ಆಗಲಿ ಕಾವೇರಿ ಹರಿಸುವುದಿಲ್ಲ : ಸಿದ್ದರಾಮಯ್ಯ

ಮತ್ತೆ ಮೂರು ದಿನ ಕಾವೇರಿ ನೀರನ್ನು ತಮಿಳುನಾಡಿಗೆ ಬಿಡುವಂತೆ ಮಂಗಳವಾರ ಸುಪ್ರೀಂ ಕೋರ್ಟ್ ಆದೇಶಿಸಿದ್ದು, ‘ತಮಿಳುನಾಡಿಗೆ ನೀರು ಬಿಡುವ ಬಗ್ಗೆ ಈಗಾಗಲೇ ಸದನದಲ್ಲಿ ನಿರ್ಧರಿಸಿದ್ದು, ಮತ್ತೆ ನೀರು ಬಿಡುವ ಪ್ರಶ್ನೆಯೇ ಇಲ್ಲ,’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

ಕಲಬುರಗಿ, ಹಾವೇರಿ ಜಿಲ್ಲೆಗಳಲ್ಲಿ ಮಳೆ ಹಾನಿಯ ವೈಮಾನಿಕ ಸಮೀಕ್ಷೆ ನಡೆಸಿದ ಸಿದ್ದರಾಮಯ್ಯ ಸುದ್ದಿಗಾರರೊಂದಿಗೆ ಮಾತನಾಡಿದರು. ನಾಳೆ ಸುಪ್ರೀಂ ಕೋರ್ಟ್ ತೀರ್ಪು ಹಿನ್ನೆಲೆಯಲ್ಲಿ ತುರ್ತು ಸಂಪುಟ ಸಭೆಯನ್ನೂ ಕರೆಯಲಾಗಿದೆ.

”ಕರ್ನಾಟಕದಲ್ಲಿಯೂ ಕುಡಿಯುವ ನೀರಿನ ಸಮಸ್ಯೆಯಿದ್ದು, ಜಲಾಶಯಗಳಲ್ಲಿ ಬಾಕಿ ಇರುವ ನೀರನ್ನು ಕುಡಿಯಲು ಮಾತ್ರ ಬಳಸಲಾಗುವುದು. ಇನ್ನು ಮುಂದೆ ತಮಿಳುನಾಡಿಗೆ ನೀರು ಬಿಡುವ ಪ್ರಶ್ನೆಯೇ ಇಲ್ಲ,’ ರಾಜ್ಯ ವಿಧಾನಮಂಡಳ ಸರ್ವಾನುಮತದ ನಿರ್ಣಯವನ್ನು ಅಂಗೀಕರಿಸಿರುವುದನ್ನು ಸುಪ್ರೀಂ ಕೋರ್ಟ್ ಮಾನ್ಯ ಮಾಡಬೇಕಿತ್ತು,” ಎಂದು ಕಾಂಗ್ರೆಸ್ ಹಿರಿಯ ಮುಖಂಡ ದಿಗ್ವಿಜಯ್ ಸಿಂಗ್ ಹೇಳಿದ್ದಾರೆ.

‘ರಾಜ್ಯ ವಿಧಾನಮಂಡಳ ನಿರ್ಣಯವೇನೇ ಇದ್ದರೂ, ಮೊದಲು ತಮಿಳುನಾಡಿಗೆ ಕಾವೇರಿ ನೀರು ಬಿಡಿ,’ ಎಂದು ಸುಪ್ರೀಂ ಕೋರ್ಟ್ ಹೇಳಿರುವ ಹಿನ್ನೆಲೆಯಲ್ಲಿ, ಸಿಂಗ್ ಕೆಪಿಸಿಸಿ ಕಾರ್ಯಕಾರಿಣಿ ಬಳಿಕ ಮಾತನಾಡಿ, ‘ಸದನದ ಸರ್ವಾನುಮತದ ನಿರ್ಣಯವೆಂದರೆ ಇಡೀ ರಾಜ್ಯದ ಜನತೆಯ ನಿರ್ಣಯವಾಗಿರುತ್ತದೆ. ಇದನ್ನು ಸುಪ್ರೀಂ ಕೋರ್ಟ್ ಮನಗಾಣಬೇಕಿತ್ತು. ಕಾಂಗ್ರೆಸ್ ರಾಜ್ಯ ಸರಕಾರ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧವಾಗಿರಲಿದೆ,’ ಎಂದರು.

‘ಸುಪ್ರೀಂ ಕೋರ್ಟ್ ಕಾವೇರಿ ವಿಷಯದಲ್ಲಿ ದ್ವಂದ ತೀರ್ಪುಗಳನ್ನು ನೀಡಿದ್ದು, ಒಂದೆಡೆ ಕುಡಿಯುವ ನೀರಿಗೆ ಆದ್ಯತೆ ನೀಡಬೇಕು ಎಂದಿದೆ. ಅದೇ ಕರ್ನಾಟಕ ಸರಕಾರ ಇರುವ ಸ್ವಲ್ಪವೇ ನೀರನ್ನು ಕುಡಿಯಲು ಮಾತ್ರ ಬಳಸುವುದಾಗಿ ಹೇಳಿ ತೆಗೆದುಕೊಂಡ ವಿಧಾನಮಂಡಳದ ನಿರ್ಣಯವನ್ನು ನಿರಾಕರಿಸಿದೆ,’ ಎಂದು ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top