fbpx
Achivers

ಕರ್ನಾಟಕದ ವಿದ್ಯಾರ್ಥಿಗಳಿಂದ ಧ್ರುವದ ಕಕ್ಷೆಗೆ ಉಡಾವಣೆಯಾದ PiSat

ಪಿಇಎಸ್ ವಿಶ್ವವಿದ್ಯಾಲಯದಿಂದ ಯಶಸ್ವಿ ಉಪಗ್ರಹ ಉಡಾವಣಾ:

ನಮ್ಮ ಪಿಇಎಸ್ ವಿಶ್ವವಿದ್ಯಾಲಯ (PESU) ವಿದ್ಯಾರ್ಥಿಗಳು, ತಮ್ಮ ನ್ಯಾನೋ ಉಪಗ್ರಹವನ್ನು ಯಶಸ್ವಿಯಾಗಿ ಶ್ರೀಹರಿಕೋಟದಿಂದ ಧ್ರುವದ ಕಕ್ಷೆಗೆ ಉಡಾವಣೆ ಮಾಡಿ ಕನ್ನಡಿಗರಿಗೆ ಹೆಮ್ಮೆ ತಂದಿದ್ದಾರೆ.

ಪಿಇಎಸ್ ಇಮೇಜಿಂಗ್ ಸ್ಯಾಟಲೈಟ್ (PiSat) ಒಂದು ನ್ಯಾನೋ-ಉಪಗ್ರಹ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸಹಯೋಗದಲ್ಲಿ ಪಿಇಎಸ್ ವಿಶ್ವವಿದ್ಯಾಲಯ ಇದನ್ನು ಅಭಿವೃದ್ಧಿಪಡಿಸಿದ್ದಾರೆ . ಉಪಗ್ರಹ ಇಸ್ರೊದ ಮುಖ್ಯ ಉಪಗ್ರಹ ಪಿಎಸ್ಎಲ್ವಿ C35 ಜೊತೆಗೆ, ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರ, ಶ್ರೀಹರಿಕೋಟದಿಂದ ಉಡಾವಣೆ ಮಾಡಲಾಗಿದೆ.

ಇಸ್ರೋ ಸಾಧನೆಯಲ್ಲಿ ಬೆಂಗಳೂರಿನ ಪಿಇಎಸ್ ಇಂಜಿನಿಯರ್ ವಿದ್ಯಾರ್ಥಿಗಳ ಪಾಲೂ ಸೇರಿದೆ. 8 ಉಪಗ್ರಹಗಳ ಪಟ್ಟಿಯಲ್ಲಿ ಬೆಂಗಳೂರಿನ ಪಿಇಎಸ್ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಿಂದ ರೂಪಿತವಾದ ಪೈಸ್ಯಾಟ್ ಹೆಸರಿನ ಉಪಗ್ರಹವೂ ಒಂದಾಗಿದೆ. ನಮ್ಮ ಕನ್ನಡದ ವಿದ್ಯಾರ್ಥಿಗಳು ಸೇರಿ ನಿರ್ಮಿಸಿದ ಈ ಉಪಗ್ರಹವನ್ನು ಸಾಂಬಶಿವ ರಾವ್ ಹಾಗೂ ಅಗರ್ವಾಲ್ ಮಾರ್ಗದರ್ಶನದಲ್ಲಿ ನಿರ್ಮಿಸಲಾಗಿತ್ತು.

ಇದನ್ನು ನಿರ್ಮಿಸಲು ಐದು ವರ್ಷಗಳ ತಗುಲಿದ್ದು, ಇದರ ಕಂಟ್ರೋಲಿಂಗ್ ವ್ಯವಸ್ಥೆ ಪಿಇಎಸ್ ಕಾಲೇಜಿನಲ್ಲೇ ಇದೆ ಹಾಗೂ ಇದರ ನಿರ್ಬಹಣೆಯನ್ನು ವಿದ್ಯಾರ್ಥಿಗಳೇ ನಿರ್ವಹಿಸಲಿದ್ದಾರೆ.

ವಿದ್ಯಾರ್ಥಿಗಳ ಈ ಕೆಲಸ ಮತ್ತು ಶ್ರೇಷ್ಠತೆಯನ್ನು ಪ್ರಧಾನಿ ನರೇಂದ್ರ ಮೋದಿ ಗುರುತಿಸಿ ಟ್ವಿಟರ್ ನಲ್ಲಿ ಬರೆದದ್ದು ಈಗೆ : “PiSat ರಚಿಸಿದ ಪಿಇಎಸ್ ವಿಶ್ವವಿದ್ಯಾಲಯ ಬೆಂಗಳೂರಿನ ವಿದ್ಯಾಥಿಗಳಿಗೆ ನನ್ನ ಹೃತ್ಪೂರ್ವಕ ವಂದನೆಗಳು”

 

 

aralikatte.com ತಂಡ PiSat ಪ್ರಾಜೆಕ್ಟ್ನಲ್ಲಿ ಒಳಗೊಂಡಿರುವ ಎಲ್ಲ ವಿದ್ಯಾರ್ಥಿಗಳು ಅಭಿನಂದನೆ ಸಲ್ಲಿಸುತ್ತದೆ ಮತ್ತು ಕನ್ನಡದ ಯುವ ಜನಾಂಗ ಮತ್ತಷ್ಟು ನಾವೀನ್ಯತೆಯನ್ನು  ಬಳಸಲ್ಪಡುತ್ತದೆ ಎಂಬ ಭರವಸೆ ನಮಗೆ ಇದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top