fbpx
Karnataka

`ಕಾವೇರಿಯನು ಹರಿಯಲು ಬಿಟ್ಟು ಕನ್ನಂಬಾಡಿ ಕಟ್ಟದಿದ್ದರೆ..?

ಕಾವೇರಿಯನು ಹರಿಯಲು ಬಿಟ್ಟು ವಿಶ್ವೇಶ್ವರಯ್ಯ ಶ್ರಮಪಡದಿದ್ದರೆ. . .ಕನ್ನಂಬಾಡಿಯ ಕಟ್ಟದಿದ್ದರೆ.

ನಾಲ್ವಡಿ ಕೃಷ್ಣರಾಜ ಒಡೆಯರು ಮತ್ತು ಸರ್. ಎಂ.ವಿಶ್ವೇಶ್ವರಯ್ಯವನರ ಸಾಮಾಜಿಕ ಕಾಳಜಿ, ನಿಸ್ವಾರ್ಥ ಸೇವೆಗಳು ನಮ್ಮ ಅಂತಃಕರಣವನ್ನು ಕಲಕುತ್ತದೆ. ಅವರು ಎರಡೂವರೆ ಕೋಟಿ ರೂ.ಗಳಲ್ಲಿ ಕಟ್ಟೆ ಕಟ್ಟಿ ನೀರು ನಿಲ್ಲಿಸಿದರು. ಇವರು 25 ಕೋಟಿ ರೂ. ಸುರಿದೂ ಆ ನೀರು ಉಳಿಸಿಕೊಳ್ಳಲಾಗಲಿಲ್ಲ! 1909ರ ಜೂನ್. ಮುಖ್ಯ ಎಂಜಿನಿಯರ್ ಆಗಿದ್ದ ಮೆಕ್ ಹಚಿನ್ ಸೇವೆಯಿಂದ ನಿವೃತ್ತರಾಗಲಿದ್ದರು. ಅವರ ಸ್ಥಾನಕ್ಕೆ ಒಬ್ಬ ದಕ್ಷ ವ್ಯಕ್ತಿಗಾಗಿ ಹುಡುಕಾಟ ನಡೆದಿತ್ತು. ಅದೇ ವೇಳೆ ಮೈಸೂರು ಸಂಸ್ಥಾನದ ದಿವಾನರಾಗಿದ್ದ ವಿ.ಪಿ ಮಾಧವರಾಯರೂ ನಿವೃತ್ತರಾಗಿ ಟಿ. ಆನಂದರಾಯರು ಬಂದಿದ್ದರು.

ಸದಾ ಪ್ರಜಕ್ಷೇಮದ ಇರುತ್ತಿದ್ದ ನಾಲ್ವಡಿ ಕೃಷ್ಣರಾಜ ಒಡೆಯರಿಗೆ ಒಂದೇ ಬಾರಿಗೆ ಸಾಮ್ರಾಜ್ಯದ ಎರಡು ಹೊಸ ಕಂಬಗಳನ್ನು ನಿಲ್ಲಿಸುವ ಹೊರೆ ಬಿತ್ತು. ಮಾಧವರಾಯರ ನೆರವಿನಿಂದ ಆಗ ಮುಂಬೈ ಪ್ರಾಂತ್ಯದಲ್ಲಿ ಇಂಜಿನಿಯರ್ ಆಗಿ ಹೆಸರು ಮಾಡಿದ್ದ ತರುಣ ವಿಶ್ವೇಶ್ವರಯ್ಯನವರನ್ನು ಕರೆಸಿದರು. ಕನ್ನಡಿಗರ ಅದೃಷ್ಟ. ಮ್ಯೆಸೂರಿನ ಮುಖ್ಯ ಇಂಜಿನಿಯರ್ ಆಗಲು ವಿಶ್ವೇಶ್ವರಯ್ಯ ಒಪ್ಪಿದರು. ಅಂದಿನ ಅವರ ಆ ಒಪ್ಪಿಗೆ ಮುಂದೆ ಕರ್ನಾಟಕದ ದಿಕ್ಕನ್ನೇ ಬದಲಿಸಿಬಿಟ್ಟಿತು. 1909ರ ನವೆಂಬರ್ನಲ್ಲಿ ವಿಶ್ವೇಶ್ವರಯ್ಯನವರು ಮ್ಯೆಸೂರು ಸಂಸ್ಥಾನದ ಮುಖ್ಯ ಎಂಜಿನಿಯರಾಗಿ ಸೇವೆಗೆ ಸೇರಿದರು. ಅದಾಗಲೇ ಮ್ಯೆಸೂರು ಸಂಸ್ಥಾನ ದೇಶದ ಅಭಿವೃದ್ಧಿ ಹೊಂದಿದ ಸಂಸ್ಥಾನ ಎಂದು ಖ್ಯಾತವಾಗಿದ್ದರೂ ಆಗಬೇಕಾದ ಸುಧಾರಣೆಗಳು ಇನ್ನೂ ಬೇಕಾದಷ್ಟಿದ್ದವು.

ಕನ್ನಂಬಾಡಿಗೆ ನಾಂದಿ:

ನಾಲ್ವಡಿ ಕೃಷ್ಣರಾಜ ಒಡೆಯರು

ನಾಲ್ವಡಿ ಕೃಷ್ಣರಾಜ ಒಡೆಯರು

ಒಂದು ದಿನ ಮಹಾರಾಜರ ಮುಂದೆ ಕುಳಿತ ವಿಶ್ವೇಶ್ವರಯ್ಯನವರು ಭವಿಷ್ಯದ ಯೋಜನೆಗಳ ಬಗ್ಗೆ ವಿವರಿಸುತ್ತಿದ್ದರೆ ಒಡೆಯರಿಗೆ ರೋಮಾಂಚನವಾಗುತ್ತಿತ್ತು. ನಂತರ ಮಹಾರಾಜರು ನಿಮ್ಮ ಯೋಜನೆಗಳಲ್ಲಿ ಯಾವ ನ್ಯೂನತೆಗಳೂ ಬರದಂತೆ ನೋಡಿಕೊಳ್ಳುತ್ತೇವೆ. ಮುಂದುವರಿಯಿರಿ ಎಂದು ಆದೇಶಿಸಿಯೇ ಬಿಟ್ಟರು. ಆ ಕ್ಷಣವೇ ಕಾರ್ಯಪ್ರವೃತ್ತರಾದ ವಿಶ್ವೇಶ್ವರಯ್ಯ ಶಿವನಸಮುದ್ರಕ್ಕೆ ತೆರಳಿ ವಿದ್ಯುತ್ ಉತ್ಪಾದನೆಯನ್ನು ಗಮನಿಸಿದರು. ಅಲ್ಲಿ 13,000 ಹೆಚಪಿ ವಿದ್ಯುತ್ ಮಾತ್ರ ಉತ್ಪಾದನೆಯಾಗುತ್ತಿತ್ತು. ಅದರಲ್ಲಿ 11,000 ಹೆಚ್‍ಪಿಯನ್ನು ಅಲ್ಲಿಂದ ನೂರೈವತ್ತಕ್ಕೂ ಹೆಚ್ಚು ಕಿ.ಮೀ ದೂರದ ಕೆ.ಜಿ.ಎಫ್ಗೆ ರವಾನಿಸಲಾಗುತ್ತಿತ್ತು. ಶಿವನಸಮುದ್ರದ ನೀರಿನ ಹರಿವಿಗೂ, ಅಲ್ಲಿನ ಉತ್ಪಾದನೆಗೂ, ವೆಚ್ಚಕ್ಕೂ ಅಜಗಜ0ತರ ವ್ಯತ್ಯಾಸ ಕಾಣುತ್ತಿತ್ತು. ಅವನ್ನೆ ನೋಡುತ್ತಾ ಅದೇ ಸ್ಥಳದಲ್ಲಿ ವಿಶ್ವೇಶ್ವರಯ್ಯನವರ ಕನಸುಗಳು ಅರಳತೊಡಗಿದವು.

ಅಷ್ಟರ ವಿಶ್ವೇಶ್ವರಯ್ಯ ಅಮೆರಿಕದ ಪ್ರತಿಷ್ಠಿತ ವಿವಿಧೋದ್ದೇಶ ನೀರಾವರಿ ಯೋಜನೆ ಟಿಎಮ್‍ಸಿ ಬಗ್ಗೆ ಅಧ್ಯಯನ ಮಾಡಿದ್ದರು. ಹೀಗೆ ನಕಾಶೆ ಬರೆಯುತ್ತಾ ಬರೆಯುತ್ತಾ ಅವರಿಗೆ ಶ್ರೀರಂಗಪಟ್ಟಣ ಸಮೀಪದ ಕನ್ನಂಬಾಡಿ ಟೆನಿಸಿಯಂತೆ ಕಾಣಲಾರಂಭಿಸಿತು. ಸಂಸ್ಥಾನದ ಹಿರಿಯ ಅಧಿಕಾರಿಗಳೊಡನೆ ಚರ್ಚಿಸಿದರು. ಆರಂಭದಲ್ಲಿ ಕೃಷಿ ಮತ್ತು ಕೈಗಾರಿಕಾಭಿವೃದ್ಧಿಯ ಯೋಜನೆಗಾಗಿ ನಿರ್ಮಾಣವಾಗುವ ಅಣೆಕಟ್ಟೆಯನ್ನು 124 ಅಡಿ ಎತ್ತರಕ್ಕೆ 48 ಟಿಎಂಸಿ ಅಡಿ ಸಾಮಥ್ರ್ಯದ ಯೋಜನೆ ರೂಪಿಸಲಾಯಿತು. ನಂತರ ಹೆಚ್ಚಿನ ಕೃಷಿ ಭೂಮಿ ಮತ್ತು ಕೆಜಿಎಫ್ ಅಲ್ಲದೆ ಬೆಂಗಳೂರು ಮತ್ತು ಮೈಸೂರು ಮಹಾನಗರಗಳಿಗೂ ವಿದ್ಯುತ್ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಎತ್ತರವನ್ನು 130 ಅಡಿಗಳಿಗೆ ಮತ್ತು ಉದ್ದವನ್ನು 8600 ಅಡಿಗಳಿಗೆ ವಿಸ್ತರಿಸಲಾಯಿತು.

ವಿಳಂಬ:

ಆದರೆ, ಕೆಲಸ ಆರಂಭವಾಗಲೇ ಇಲ್ಲ. ಏಕೆಂದರೆ ಇಂಥ ಬೃಹತ್ ಅಣೆಕಟ್ಟೆಯನ್ನು ಭಾರತದಲ್ಲಿ ಮೊದಲೆಂದೂ ಕಟ್ಟಿರಲಿಲ್ಲ. ಮೊದಲ ಅಂದಾಜುಪಟ್ಟಿ ಪ್ರಕಾರ ಯೋಜನೆಯ ಒಟ್ಟು ವೆಚ್ಚ 2.53 ಕೋಟಿ ರೂ.ಗಳಾಗಿತ್ತು. ಮಹಾರಾಜರಿಗೆ ಉತ್ಸಾಹವಿತ್ತಾದರೂ ಅವರ ಕೈಕಟ್ಟಿತ್ತು (ಹಣದ ಮುಗ್ಗಟ್ಟು). ಮಹಾರಾಜರೂ ಮಂಕಾದರು. ಜತೆಗೆ ಕೆಲವು ಭಟ್ಟಂಗಿಗಳು ಅದಾಗಲೇ ವಿಶ್ವೇಶ್ವರಯ್ಯನವರ ಬಗ್ಗೆ ಮಹಾರಾಜರಲ್ಲಿ ಸಂಶಯ ವ್ಯಕ್ತಪಡಿಸಿದ್ದರು. ಇದೊಂದು ದುಂದುವೆಚ್ಚ ಎಂದು ತಲೆಕೆಡಿಸಲು ನೋಡಿದರು. ಇವೆಲ್ಲವೂ ವಿಶ್ವೇಶ್ವರಯ್ಯನವರಿಗೆ ತಿಳಿದು ಉತ್ಸಾಹದ ಬುಗ್ಗೆ ಒಡೆದುಹೋಯಿತು. ಮಹಾರಾಜರಂತೆ ವಿಶ್ವೇಶ್ವರಯ್ಯನವರೂ ಮಂಕಾದರು. ಯೋಜನೆ ನನೆಗುದಿಗೆ ಬಿತ್ತು.

ಹೀಗೆ ತಿಂಗಳುಗಳು ಕಳೆದವು. ಒಂದು ದಿನ ಮಹಾರಾಜರಿಗೆ ನೆನೆಗುದಿಗೆ ಬಿದ್ದ ಕಾರಣ ಮತ್ತು ನಾಡಿನ ನಾಳೆಯ ಬಗ್ಗೆ ಚಿಂತೆಯನ್ನು ಮನವರಿಕೆ ಮಾಡಿಕೊಟ್ಟರು. ಮಹಾರಾಜರಿಗೆ ಪರಿಸ್ಥಿತಿ ಅರ್ಥವಾಗಿದ್ದಲ್ಲದೆ ತಕ್ಷಣವೇ ಯೋಜನೆಯನ್ನು ಮುಂದುವರಿಸಬೇಕೆಂದೂ ವ್ಯವಸ್ಥೆಗಳನ್ನೂ ಮಾಡುವುದೆಂದೂ ಮಾತು ಕೊಟ್ಟರು. ಈ ಮಾತು ನಾಡಿನ ನಕಾಶೆಯನ್ನು ಬದಲಿಸಿದ ಎರಡನೆಯ ಪ್ರಸಂಗ. ನಾಲ್ವಡಿ ಕೃಷ್ಣರಾಜ ಒಡೆಯರದ್ದು ಸ್ವತಂತ್ರ ಸಂಸ್ಥಾನವಲ್ಲ. ಬ್ರಿಟಿಷ್ ದೊರೆಗಳ ಅನುಮತಿ ಇಲ್ಲದೆ ಸರಕಾರಿ ಖಜನೆಯನ್ನು ಬಳಸುವಂತಿಲ್ಲ. ಬ್ರಿಟಿಷರಿಗೆ ನಾಡಿಗೆ ನೀರು ಹರಿಯಲಿ ಬಿಡಲಿ, ಆಗಬೇಕಾದುದೇನೂ ಇಲ್ಲ. ಆದರೂ ನಾಲ್ವಡಿಯವರು ಅಳುಕಲಿಲ್ಲ. ತಮ್ಮ ಮತ್ತು ಮಹಾರಾಣಿ ಪ್ರತಾಪಕುಮಾರಿಯ ಆಭರಣಗಳನ್ನು ಬಾಂಬೆಗೆ ಕೊಂಡೊಯ್ಯು ಅಡವಿಟ್ಟರು. ರಾಜಪೆÇೀಷಾಕಿನ ಹಲವು ರತ್ನಹಾರಗಳು ಗಿರಿವಿಯಾದವು. ನಾಡಿಗಿಂತ ದೊಡ್ಡದೇ ರಾಜಪೆಪೆÇೀಷಾಕು ಎಂದು ಮಹಾರಾಜರು ಆಡಿದವರ ಬಾಯಿ ಮುಚ್ಚಿಸಿದರು.

ಕ್ಯಾತೆ ಶುರು:

ಆಗಲೇ ಮಡ್ರಾಸ್ ಸರಕಾರದಿಂದ ಕ್ಯಾತೆ ಆರಂಭವಾಯಿತು. ತಮಿಳುನಾಡು ತಕರಾರಿಗೆ ಅದೇ ನಾಂದಿ. ಕನ್ನಂಬಾಡಿಗಿಂತ ಎರಡುಪಟ್ಟು ದೊಡ್ಡ ಕಟ್ಟೆಯನ್ನು ಮೆಟ್ಟೂರು ಎಂಬಲ್ಲಿ ಸ್ಥಾಪಿಸಲು ಅದು ಉದ್ದೇಶಿಸಿತ್ತು. ಕೆಲಸವನ್ನೂ ಆರಂಭಿಸಿಬಿಟ್ಟಿತ್ತು. ಕನ್ನಂಬಾಡಿಗಿಂತ ತೀರಾ ಕೆಳಗೆ ಅಂದರೆ 60 ಮ್ಯೆಲಿಗಳ ಮೆಟ್ಟೂರು ನಿರ್ಮಾಣ ಆಗಕೂಡದು. ಇದು ಸಮಸ್ಯೆಯನ್ನು ಶಾಸ್ವತವಾಗಿಟ್ಟಂತೆ ಎಂದು ವಿಶ್ವೇಶ್ವರಯ್ಯನವರು ಪಟ್ಟು ಹಿಡಿದರು. ವೈಸರಾಯಿಗಳಿಗೆ ದೂರು ಒಯ್ದರು.

ಚಾಣಾಕ್ಷ ಸರ್‍ಎಂವಿ:

sir-m-v

ಮೆಟ್ಟೂರು ಕಟ್ಟೆ ಎದ್ದರೆ ಅದು ನಿರಂತರ ಕನ್ನಂಬಾಡಿಯನ್ನೇ ಅವಲಂಬಿಸಬೇಕಾಗುತ್ತದೆ. ಕನ್ನಂಬಾಡಿ ನಿರ್ಮಾಣ ಯೋಜನೆ ಮೊದಲು ತಯಾರಾದದ್ದು. ಹಾಗಾಗಿ ಮೆಟ್ಟೂರು ಅವೈಜ್ಞಾನಿಕ ಎಂದು ಸಾಬೀತುಪಡಿಸಿದರು. ಆದರೆ ಮಡ್ರಾಸ್ ಸರಕಾರ ಕೂಡ ಪಟ್ಟು ಬಿಡಲಿಲ್ಲ. ಆದರೆ ಬ್ರಿಟಿಷರ ನೇರ ಆಡಳಿತಕ್ಕೊಳಪಟ್ಟ ಮಡ್ರಾಸ್ ಸಂಸ್ಥಾನವನ್ನು ವೈಸರಾಯಿ ಬರಿಗೈಯಲ್ಲಿ ಕಳುಹಿಸಲಿಲ್ಲ. ಕನ್ನಂಬಾಡಿಯ ಎತ್ತರ ಕೇವಲ 80 ಅಡಿ ಇರಲಿ ಎಂದು ಸಂಧಾನ ಮಾಡಿ ಕಳುಹಿಸಿದರು. ಅಂದರೆ ಬ್ರಿಟಿಷರು ಕನ್ನಂಬಾಡಿಯ ನೀರಿನ ಶೇಖರಣಾ ಸಾಮಥ್ರ್ಯವನ್ನು ಕಡಿತಗೊಳಿಸಿಬಿಟ್ಟಿದ್ದರು. ಆದರೆ ಕನ್ನಂಬಾಡಿಯ ತಳಪಾಯ 130 ಅಡಿಗೆ ಎಂದು ಕಲ್ಲಿಟ್ಟಾಗಿತ್ತಲ್ಲ. ವಿಶ್ವೇಶ್ವರಯ್ಯನವರ ಚಾಣಾಕ್ಷತೆ ಮತ್ತು ತಾಂತ್ರಿಕ ನೈಪುಣ್ಯತೆಯಿಂದಾಗಿ ವಿನ್ಯಾಸಗೊಳಿಸಿದ ವಿಶಾಲ ತಳಹದಿಯ ಕಟ್ಟೆ ಕೆಲಸ ಆರಂಭವಾಯಿತು. ಮಡ್ರಾಸ್ ಮತ್ತೆ ತಗಾದೆ ತೆಗೆಯಿತು. ವಿಶ್ವೇಶ್ವರಯ್ಯನವರು ತಳಪಾಯದ ಬಗ್ಗೆ ಮಡ್ರಾಸ್ ತಲೆಕೆಡಿಸಿಕೊಳ್ಳಬಾರದು ಎಂದು ವಾದ ಹೂಡಿ ಕಟ್ಟೆ ಎಬ್ಬಿಸಿಯೇ ಬಿಟ್ಟರು! ಅಂದಿನ ಅವರ ಆ ಚಾಕಚಕ್ಯತೆಯೇ ಇಂದು ನಾವು ತಿನ್ನುತ್ತಿರುವ ಅನ್ನವಾಗಿದೆ!

ಮಣ್ಣು ಅನ್ನವಾಯಿತು:

ಲಕ್ಷಗಟ್ಟಲೆ ಏಕರೆ ನೀರಾವರಿಗೆ ಒಳಪಟ್ಟಿತು. ವಿದ್ಯುತ್ ಉತ್ಪಾದನೆ ನಿರೀಕ್ಷೆಗಿಂತ ಮೀರಿ ನಡೆಯಿತು. ಕನ್ನಂಬಾಡಿ ಕೃಷ್ಣರಾಜಸಾಗರವಾಗಿತ್ತು. ಪ್ರತಿಬಾರಿ ಕಾವೇರಿಯ ಸಿಹಿನೀರು ಕುಡಿಯುವಾಗಲೂ, ಒಂದು ತುತ್ತು ಅನ್ನ ತಿನ್ನುವಾಗಲೂ ಹಳೇ ಮ್ಯೆಸೂರು ಭಾಗದ ಜನರಿಗೆ ಈ ಕಥೆ ನೆನಪಾಗುತ್ತವೆ. ಆಗಬೇಕು. ಇಲ್ಲದಿದ್ದರೆ ಅವನು ಮನುಷ್ಯನಾಗುವುದಾದರೂ ಹೇಗೆ?ಬೇಸರದ ಸಂಗತಿಯೆಂದರೆ, ಅವರು ಎರಡೂವರೆ ಕೋಟಿಯಲ್ಲಿ ಕಟ್ಟೆ ಕಟ್ಟಿದರು, ಇವರು 25 ಕೋಟಿ ಖರ್ಚು ಮಾಡಿದರೂ ನೀರು ಉಳಿಸಿಕೊಳ್ಳಲಾಗಲಿಲ್ಲವ ಎಂಬುದು. ವಕೀಲ ಮಹಾಶಯರಿಗೆ ನಮ್ಮ ರಾಜ್ಯ ಸರಕಾರ ಬೊಕ್ಕಸದಿಂದ ಬರೋಬ್ಬರಿ 25 ಕೋಟಿ ವರ್ಷಕ್ಕೆ ಖರ್ಚು ಮಾಡುತ್ತಿದೆ! ಅನಿಲ್ ದಿವಾವ್ ಒಬ್ಬರಿಗೇ 9.66 ಕೋಟಿ ರೂ ವ್ಯಯಿಸಿದರೆ,2.08 ಕೋಟಿಯನ್ನು ನಾರಿಮನ್‍ಗೆ ನೀಡಿದೆ! ದಿವಾನ್ ಬೆಂಗಳೂರು-ದೆಹಲಿ ನಡುವೆ 49 ಸಲ, ನಾರಿಮನ್ 19, ಮೋಹನ್ ಕಾತರಕಿ 193 ಬಾರಿ ತಿರುಗಾಡಿದ ವೆಚ್ಚವೇ 2.75 ಕೋಟಿ ರೂ! ಎಸ್.ಎಸ್ ಜವಳಿ ದೆಹಲಿಯಿಂದ ಬೆಂಗಳೂರಿಗೆ 158 ಬಾರಿ ಪ್ರಯಾಣ ಮಾಡಿದ್ದಾರೆ , ಶಂಭುಪ್ರಸಾದ್ ಶರ್ಮಾ 138 ಬಾರಿ ದಂಡಯಾತ್ರೆ ಮಾಡಿದ್ದಾರೆ. ಇವರ ಖರ್ಚು 6 ಕೋಟಿಗೂ ಹೆಚ್ಚು.

17-22-cauvery-row-new

ಕಾವೇರಿ ಕೆಲವರ ಪಾಲಿಗೆ ನಿಜಕ್ಕೂ ಕಾಮಧೇನುವಾಗಿಹೋದಳು. ಇನ್ನು ಕೆಲವು ಮಹಾನುಭಾವರು ಕಾವೇರಿ ಹೆಸರಲ್ಲಿ ಕೊಬ್ಬಿದವರಿದ್ದಾರೆ. ರಾಜ್ಯಕ್ಕೆ ನ್ಯಾಯ ಒದಗಿಸಲಾಗದೆ ಇಂದು ಭಾರೀ ನೋವು ಅನುಭವಿಸಿದವರಂತೆ ಪೆÇೀ ಸು ಕೊಡುತ್ತಿದ್ದಾರೆ. ಕೊಡಗಿನಲ್ಲಿ ಮಳೆಯಾದರೆ ಸರಕಾರಕ್ಕೂ ಖುಷಿ, ಕಟ್ಟೆ ತುಂಬುವ ಹೊತ್ತೆಂದು ಹಳೆ ಮ್ಯೆಸೂರು-ತಮಿಳುನಾಡಿಗೂ ಖುಷಿ. ಆದರೆ ಕೊಡಗು ಅಕ್ಷgಶಃ ಆ ಹೊತ್ತಲ್ಲಿ ನರಳಾಡುತ್ತದೆ. ಇಲ್ಲಿ ಕಟ್ಟೆ ತುಂಬುವ ಹೊತ್ತಲ್ಲಿ ಅಲ್ಲಿ ಕತ್ತಲಿರುತ್ತದೆ.ಇದು ನಮ್ಮ ಕರ್ಮ. ಅಂದಹಾಗೆ, ಸೆಪ್ಟೆಂಬರ್ 15, ವಿಶ್ವೇಶ್ವರಯ್ಯನವರ ಜನ್ಮದಿನ, ಮಣ್ಣಿಗೆ ನೀರುಣಿಸಿದವನ ಮರೆಯದೆ ನೆನೆಯೋಣ.

ನಾವು ಕೊಡುವುದೆಷ್ಟು ? ನಾವು ಪಡೆವುದೆಷ್ಟು?

ಕಾವೇರಿ ನದಿಯ ಒಟ್ಟು ಉದ್ದ 802 ಕಿಮೀ
ಕರ್ನಾಟಕದಲ್ಲಿ ಹರಿಯುವ ಉದ್ದ 381 ಕಿಮೀ
ತಮಿಳುನಾಡುಡಿನಲ್ಲಿ 357 ಕಿಮೀ
ಎರಡೂ ರಾಜ್ಯಗಳ ಗಡಿಯಲ್ಲಿ 64 ಕಿಮೀ
ಒಟ್ಟು ಜಲಾನಯನ ಪ್ರದೇಶ
ಕರ್ನಾಟಕ 34,273 ಚದರ ಕಿಮೀ (42%)
ತಮಿಳು ನಾಡು 40,016 ಚದರ ಕಿಮೀ(54%)
ಕೇರಳ 2866ಚದರ ಕಿಮೀ (3.5%)

ಹಾಗಾಗಿ ಒಟ್ಟು ಜಲಾನಯನ ಪ್ರದೇಶ ತಮಿಳುನಾಡಿನದ್ದೇ ಹೆಚ್ಚು ಇರುವುದರಿಂದ, ಅವರು ಹೆಚ್ಚು ನೀರಿಗೆ ಅರ್ಹ ಹಕ್ಕುದಾರರು ಎನ್ನಿಸುತ್ತದೆ. ಟ್ರಿಬ್ಯೂನಲ್ ಕೂಡಾ ಇದೇ ಅಭಿಪ್ರಾಯವನ್ನು ಅವಲಂಬಿಸಿ ನಡೆದ ಹಳೆಯ ಒಡಂಬಡಿಕೆಗಳನ್ನು ಪರಾಂಬರಿಸಿಯೇ 2007ರ ಫೆಬ್ರುವರಿ ಏಳರಂದು ತನ್ನ ಅಂತಿಮ ತೀರ್ಪನ್ನು ಪ್ರಕಟಿಸಿತು. ಅದರ ಪ್ರಕಾರ ಕಾವೇರಿಯ ಒಟ್ಟು ಹರಿವು 790 ಟಿಎಮ್‍ಸಿ.

ಹಂಚಿಕೆಗೆ ಲಭ್ಯವಾಗುವ 726 ಟಿಎಮ್‍ಸಿಯಲ್ಲಿ-ತಮಿಳು ನಾಡಿಗೆ 419 ಟಿಎಮ್‍ಸಿ

ಕರ್ನಾಟಕಕ್ಕೆ 270 ಟಿಎಮ್‍ಸಿ
ಕೇರಳಕ್ಕೆ 30 ಟಿಎಮ್‍ಸಿ
ಪುದುಚೇರಿಗೆ 7 ಟಿಎಮ್‍ಸಿ

ಹಾಗೆ ನೋಡಿದರೆ ತಮಿಳುನಾಡಿನ ಜಲಾನಯನ ಪ್ರದೇಶ ಹೆಚ್ಚಿರುವುದರಿಂದ ಅವರಿಗೆ ಹೆಚ್ಚು ಹಂಚಿಕೆಯಾದದ್ದು ಸರಿಯೇನೋ ಎಂಬ ಸಂಶಯ ನಮಗೂ ಬಂದೀತು. ಆದರೆ ಇಲ್ಲಿ ಉಲ್ಲೇಖಿಸಲ್ಪಡದ ದ ಒಂದು ಪ್ರಮುಖ ವಿಚಾರವೆಂದರೆ ಕಾವೇರಿಯ ಒಟ್ಟು ಹರಿವಿಗೆ ಯಾವ ಯಾವ ರಾಜ್ಯದ ಕೊಡುಗೆ ಎಷ್ಟು ಎಂಬುದು.ಕಾವೇರಿಯ ಒಟ್ಟು ಹರಿವಿಗೆ ಕರ್ನಾಟಕದ ಕೊಡುಗೆ 425 ಟಿಎಮ್‍ಸಿತಮಿಳುನಾಡಿನ ಕೊಡುಗೆ 252 ಟಿಎಮ್‍ಸಿ
ಕೇರಳದ ಕೊಡುಗೆ 113 ಟಿಎಮ್‍ಸಿಪುದುಚೇರಿ ಏನೂ

ಇಲ್ಲಎಲ್ಲಿದೆ ನ್ಯಾಯ !?

1910ರಲ್ಲಿ ಕನ್ನಂಬಾಡಿಯನ್ನು ಕಟ್ಟುವ ಪ್ರಸ್ತಾಪ ಮಂಡಿಸಿದಾಗ ಅಂದು ಆಂಗ್ಲ ಪ್ರಾಂತ್ಯವಾಗಿದ್ದ ಮದ್ರಾಸು ತಕರಾರು ಎತ್ತಿದ್ದು, ವಿಶ್ವೇಶ್ವರಯ್ಯ ನ್ಯಾಯ ಮಂಡಳಿಯ ಎದುರು ಪ್ರಖ್ಯಾತ ನ್ಯಾಯವಾದಿಗಳಾಗಿದ್ದ ಸರ್. ಸಿ. ಪಿ. ರಾಮಸ್ವಾಮಿ ಅಯ್ಯರ್ ಮುಂದೆ ಸಮರ್ಥ ವಾದ ಮಂಡಿಸಿ ಗೆದ್ದಿದ್ದು, ಈ ನಡುವೆ ಕೇವಲ 80 ಅಡಿ ಆಣೆಕಟ್ಟೆ ನಿರ್ಮಿಸಲು ಮಂಜೂರಾತಿ ದೊರಕಿದ್ದರೂ 130 ಅಡಿಗೆ ಸೂಕ್ತವಾಗುವಂತೆ ಅಡಿಪಾಯ ನಿರ್ಮಿಸಲು ತೊಡಗಿದ್ದು, ಬಹಳಷ್ಟು ಜನ ಟೀಕಿಸಿದರೂ ನಾಲ್ವಡಿಯವರು ಸರೆಮ್‍ವಿ ಯವರನ್ನು ಬೆಂಬಲಿಸಿದ್ದು, 1916ರ ಹೊತ್ತಿಗೆ ಆಣೆಕಟ್ಟೆಯ ಮೊದಲ ಹಂತ ಮುಕ್ತಾಯವಾದದ್ದು, ನಂತರದಲ್ಲಿ ನಡೆದ ದುರದೃಷ್ಟಕರ ಬೆಳವಣಿಗೆಯಲ್ಲಿ ಸರೆಮವಿ ರಾಜಿನಾಮೆಕೊಟ್ಟುಹೋದದ್ದು, 1924ರ ಒಪ್ಪಂದ ಬೇಡವೆಂದು ಮಹಾರಾಜರಿಗೆ ಸರೆಮïವಿ ಸಲಹೆ ನೀಡಿದ್ದು?. ಎಲ್ಲವೂ ಈಗ ಇತಿಹಾಸ.

1910ರಲ್ಲಿಯೇ ಮೆಟ್ಟೂರಿನಲ್ಲಿ ಜಲಾಶಯ ನಿರ್ಮಿಸುತ್ತೇವೆ ಎಂದ ಮದ್ರಾಸು ಕೊನೆಗೆ 1925ರ ಹೊತ್ತಿಗೆ ಮೆಟ್ಟೂರು ಆಣೆ ನಿರ್ಮಿಸಲು ಸಜ ಯಿತು. ಕನ್ನಂಬಾಡಿ ಕಟ್ಟುವಾಗ ಎಲ್ಲವೂ ಮಾನವ ಬಲದಿಂದಲೇ ನಡೆದಿದ್ದರೆ, 1926ರ ಹೊತ್ತಿಗೆ ಕೆಲವು ಕಾರ್ಯಗಳಿಗೆ ಯಂತ್ರೋಪಕರಣಗಳ ಬಳಕೆ ಆರಂಭವಾಗಿತ್ತು. ಆದರೆ ಮದ್ರಾಸಿನವರ ಬಳಿ ಯಂತ್ರೋಪಕರಣಗಳ ಚಾಲನೆಗೆ ಅಗತ್ಯ ವಿದ್ಯುತ್ತೇ ಇರಲಿಲ್ಲ. ಆಗ ಅವರು ಮೊರೆ ಹೊಕ್ಕದ್ದು ಮೈಸೂರು ಮಹಾರಾಜರನ್ನೇ! ಅದಕ್ಕೆ ಮೈಸೂರು ದರ್ಬಾರಿನ ಆಂಗ್ಲ ಅಧಿಕಾರಿ ರೆಸಿಡೆಂಟರ ಪ್ರಭಾವ ಬೇರೆ! ಆದರೆ ಕನ್ನಡಗೀರರೊಂದು ವಿಶಾಲ ಹೃದಯ. ಇನ್ನು ನಾಲ್ವಡಿಯವರದ್ದಂತೂ ಅತ್ಯಂತ ಜನಪರ ವ್ಯಕ್ತಿತ್ವ. ಅವರು ಮೆಟ್ಟೂರು ಜಲಾಶಯ ನಿರ್ಮಾಣಕ್ಕೆ ಕನ್ನಡದ ಕರೆಂಟು ನೀಡಲು ಒಪ್ಪಿಗೆ ನೀಡಿಯೇಬಿಟ್ಟರು. ಸ್ವತಃ ಆಂಗ್ಲರೇ ಇದನ್ನು ನಿರೀಕ್ಷಿಸಿರಲಿಲ್ಲ! ನಮಗೆ ಯಾವ ಜಲಾಶಯದ ಹೆಸರಿನಲ್ಲಿ ಉಪದ್ರವ ನೀಡಿದ್ದರೋ ಅದೇ ಜಲಾಶಯದ ನಿರ್ಮಾಣಕ್ಕೆ ಕರೆಂಟು ಕೊಡಲು ಒಪ್ಪಿ ದೊಡ್ಡವರಾದರು ಒಡೆಯರು! ಆದರೆ ಮದ್ರಾಸಿನವರು ತಮ್ಮ ಹೀನ ಪ್ರವೃತ್ತಿಗೆ ನಾಚದೆ ಅದನ್ನು ಸ್ವೀಕರಿಸಿದರು!ಆಣೆಕಟ್ಟೆಯ ನಿರ್ಮಾಣಕ್ಕೆ ಅಗತ್ಯವಾದ ಡ್ರಿಲ್ಲಿಂಗ್ ಮುಂತಾದ ಕಾಮಗಾರಿಗಳು ನಡೆದದ್ದೇ ಕನ್ನಡದ ಕರೆಂಟಿನಿಂದ. ಆದರೆ ಇವತ್ತು ಅದೇ ಜಲಾಶಯಕ್ಕೆ ನೀರು ಹರಿಸಲು ಕರ್ನಾಟಕ ಕಣ್ಣೀರು ಸುರಿಸುತ್ತಿದೆ !

11bg_mandya_krs_le_1453747f-1

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top