fbpx
Awareness

ಸಾವಯವ ಕೃಷಿ

ಸಾವಯವ ಕೃಷಿ ಇತ್ತೀಚಿನ ದಿನಗಳಲ್ಲಿ ಅತ್ಯಧಿಕ ಜನಪ್ರಿಯವಾಗುತ್ತಿರುವ ಕೃಷಿ ಪದ್ಧತಿ. ಜಗತ್ತಿನಾದ್ಯಂತ ರಾಸಾಯನಿಕ ಹೊರತಾದ ಆಹಾರ ಸೇವನೆ ಮತ್ತು ಆಹಾರ ಕಾಳಜಿಯತ್ತ ಹೆಚ್ಚಿನ ಒಲವು ತೋರಿರುವ ಹಿನ್ನೆಲೆಯಲ್ಲಿ ಸಾವಯುವ ಕೃಷಿಗೆ ಹೆಚ್ಚೆಚ್ಚು ಒತ್ತು ನೀಡಲಾಗುತ್ತಿದೆ.ಸಾವಯುವ ಕೃಷಿ ಭಾರತದ್ದೆ ಎಂಬ ವಾದವಿದ್ದರೂ, ಸರ್ ಆಲ್ಬರ್ಟ್ ಹೊವಾರ್ಡ್, ಜೆ.ಐ.ರೊಡೇಲ್ ಲೇಡಿ ಈವ್ ಬಾಲ್ ಫೆÇೀಲ್ ಅವರನ್ನು ಸಾವಯುವ ಪಿತಾಮಹ ಮತ್ತು ಈ ಬಗ್ಗೆ ಜಾಗೃತಿ ಮೂಡಿಸಲು ಕಾರಣೀಕರ್ತರೆಂದು ಪರಿಗಣಿಸಲಾಗಿದೆ.

ಸಾವಯುವ ಕೃಷಿ ಇಂದು ನಿನ್ನೆಯದೇನೂ ಅಲ್ಲ. ಹಾಗೇ ನೋಡಿದಲ್ಲಿ ಕೃಷಿ ಪದ್ಧತಿಯ ಹುಟ್ಟು ಸಾವಯುವ ಆಧಾರವಾಗಿತ್ತು. ಆದರೆ, 1930-40ರ ದಶಕದಲ್ಲಿ ಬೇಸಾಯ ಕ್ಷೇತ್ರ ಪ್ರವೇಶಿಸಿ ಕೃತಕ ಗೊಬ್ಬರಗಳು ಸಾವಯುವ ಪದ್ಧತಿಗೆ ಹೆಚ್ಚಿನ ಪೆಟ್ಟು ನೀಡಿದವು. ಇದರಿಂದಾಗಿ ಸಾವಯುವ ಪದ್ಧತಿ ಹಿಂದಕ್ಕೆ ಸರಿದು, ಹೆಚ್ಚು ಅವಲಂಬಿಸುವುದನ್ನು ಹಿಮ್ಮೆಟ್ಟಿಸುವ ಸಲುವಾಗಿ ಪ್ರಾರಂಭವಾಯಿತು.

ಕೃತಕ ಗೊಬ್ಬರಗಳನ್ನು ಮೊದಲು ಸೂಪರ್ ಫಾಸ್ಪೇಟ್, ಆನಂತರ ಅಮೋನಿಯದ ಉತ್ಪನ್ನಗಳಿಂದ ಭಾರಿ ಪ್ರಮಾಣ ದಲ್ಲಿ 18 ನೆಯ ಶತಮಾನದಲ್ಲಿ ಉತ್ಪನ್ನ ಮಾಡಲಾಯಿತು. ಮೊದಲನೆಯ ವಿಶ್ವ-ಮಹಾಯುದ್ಧದ ಸಮಯದಲ್ಲಿ ಹೇಬರ್-ಬಾಷ್ ವಿಧಾನವನ್ನು ಅನುಸರಿಸಿ ಇದನ್ನು ತಯಾ ರಿಸಲಾಯಿತು. ಪ್ರಾರಂಭದಲ್ಲಿ ತಯಾರಾದ ಈ ಗೊಬ್ಬರಗಳು ಅಗ್ಗವಾಗಿ ದೊರೆಯುತ್ತಿದ್ದು ಶಕ್ತಿಯುತವಾಗಿಯೂ ಇದ್ದುದಲ್ಲದೆ ಸುಲಭವಾಗಿ ಸಾಗಾಣಿಕೆ ಮಾಡಲಾಗುತ್ತಿತ್ತು.

ಕೀಟನಾಶಕ ಯುಗ

05-calisulfan1

ತದನಂತರದ ಕಾಲ ರಾಸಾಯನಿಕ ಕೀಟ ನಾಶಕಗಳದ್ದು, ಇದನ್ನೂ ಸಹ ಕೀಟನಾಶಕ ಯುಗ ಎಂದೇ ಕರೆಯಲಾಯಿತು. ಇಂತಹುದೇ ಪ್ರಗತಿಯು 1940ರ ಸುಮಾರಿನಲ್ಲಿ ರಾಸಾಯನಿಕ ಕೀಟನಾಶಕಗಳಲ್ಲಿಯೂ ಕಂಡುಬಂದಿತು. ಅದರ ಫಲವಾಗಿ ಈ ದಶಕವನ್ನು ‘ಕೀಟನಾಶಕ ಯುಗ’ವೆಂದು ಕರೆಯಲಾಯಿತು. ಸಾವಯವ ಬೇಸಾಯ ಒಟ್ಟು ಕೃಷಿ ಉತ್ಪನ್ನ ಶೇಕಡಾ ಪ್ರಮಾಣವನ್ನು ಪರಿಗಣಿಸಿದಾಗ ಪ್ರಾರಂಭದಿಂದಲೂ ತೀರಾ ಕಡಿಮೆಯಾಗಿಯೇ ಉಳಿದುಕೊಂಡು ಬಂದಿದೆ.

`ಸಾವಯವ’ಕ್ಕೆ ಒಲವು

ಜನಸಾಮಾನ್ಯರಲ್ಲಿ ಪರಿಸರದ ಪರಿಜ್ಞಾನ ಮತ್ತು ಶ್ರದ್ಧೆ ಹೆಚ್ಚಾದಂತೆಲ್ಲಾ ಮೂಲಭೂತವಾಗಿ ಸರಬರಾಜು ವ್ಯವಸ್ಥೆಯ ಚಳುವಳಿ ಒಂದು ಬೇಡಿಕೆಯ ಕೆಲಸವಾಗಿ ಪರಿಣಮಿಸಿತು. ಬಳಕೆದಾರರಿಂದ ಹಾಗೂ ಕೆಲವು ಸಂದರ್ಭಗಳಲ್ಲಿ ಸರಕಾರದ ಸಹಾಯ ಧನದಿಂದ ಬೇಡಿಕೆಗಳು ಅಧಿಕಗೊಂಡವು. ಪ್ರಗತಿಪರ ರಾಷ್ಟ್ರಗಳಲ್ಲಿನ ಬಹುಮಂದಿ ಬೇಸಾಯಗಾರರು ಅನೂಚಾನವಾಗಿ ಬಂದ ವಿಧಾನದಲ್ಲಿ ಬೇಸಾಯಮಾಡುತ್ತಿದ್ದವರು.

organic

ಆರ್ಥಿಕ ಕಾರಣಗಳಿಗಾಗಿ ತಮ್ಮ ವಿಧಾನ ಬದಲಾಯಿಸಿಕೊಂಡಿದ್ದರು. ಆದರೂ, ವಿಶ್ವದ ಒಟ್ಟು ಕೃಷಿ ಉತ್ಪನ್ನದ ಪ್ರಮಾಣವನ್ನು ಪರಿಗಣಿಸಿದಾಗ ಸಾವಯವ ಉತ್ಪನ್ನ ಸಣ್ಣ ಪ್ರಮಾಣವೆನಿಸುತ್ತದೆಯಾದರೂ ಅದು ಅನೇಕ ರಾಷ್ಟ್ರಗಳಲ್ಲಿ ವೇಗವಾಗಿ ಬೆಳೆಯುತ್ತಿದೆ, ವಿಶೇಷವಾಗಿ ಯುರೋಪ್ ದೇಶಗಳಲ್ಲಿ ಅತಿ ವೇಗವಾಗಿ ಬೆಳೆಯತೊಡಗಿದೆ.

ಉತ್ಪಾದನೆಯಲ್ಲಿ ಹಿಂದೆ

2006 ರಲ್ಲಿ ನಡೆಸಿದ ಅಧ್ಯಯನದ ಪ್ರಕಾರ ಸಾವಯವ ಕೃಷಿ ಕ್ಷೇತ್ರಗಳು ಬದಲಾವಣೆಯಾದ ನಂತರ ರೂಢಿಯಲ್ಲಿರುವ ಕೃಷಿ ಕ್ಷೇತ್ರಗಳಿಗಿಂತಲೂ ಕೊಯ್ಲು ಪೂರ್ವದ ಉತ್ಪನ್ನಗಳಿಗಿಂತಲೂ ಕಡಿಮೆ ಪ್ರಮಾಣದಲ್ಲಿದೆಯೆಂದು ಹೇಳುತ್ತದೆ. ಇದು ಅಭಿವೃದ್ಧಿಪಡೆದ ರಾಷ್ಟ್ರಗಳಿಗೆ ಮಾತ್ರ ಅನ್ವಯಿಸುತ್ತದೆ (92%), ಸಾವಯವ ಕೃಷಿ ಕ್ಷೇತ್ರಗಳು ಕೊಯ್ಲು-ಪೂರ್ವ ಉತ್ಪನ್ನವನ್ನು ಕಡಿಮೆ ಉಗ್ರತೆಯಲ್ಲಿ ಅಭಿವೃದ್ಧಿನಿರತ ರಾಷ್ಟ್ರಗಳಿಗಿಂತ ಹೆಚ್ಚಿನ ಪ್ರಮಾಣವನ್ನು ತೋರಿಸುತ್ತದೆ (132%).

ಇದಕ್ಕೆಲ್ಲಾ ಕಾರಣ ಅಭಿವೃದ್ಧಿನಿರತ ರಾಷ್ಟ್ರಗಳಲ್ಲಿ ದುಬಾರಿ ಗೊಬ್ಬರಗಳ ಹಾಗೂ ಕೀಟನಾಶಕಗಳ ಅಭಾವದ ಪರಿಣಾಮವೆಂದು ಹೇಳಲಾಗುತ್ತದೆ. ಅಭಿವೃದ್ಧಿಪಡೆದ ರಾಷ್ಟ್ರಗಳಲ್ಲಿ ದೊರೆಯುವ ಸಹಾಯಧನ ಹಾಗೂ ವಿಶೇಷ ಸೌಲಭ್ಯಗಳು ಸಹ ಅದಕ್ಕೆ ಕಾರಣವೆಂದು ಸಂಶೋಧಕರು ಕಾರಣವನ್ನು ನೀಡುತ್ತಾರೆ. ಅದೇನೇ ಆದರೂ ಸಂಶೋಧಕರು ಉದ್ದೇಶಪೂರ್ವಕವಾಗಿಯೇ ಸಾವಯವ ವಿಧಾನ ಹಸಿರು ಕ್ರಾಂತಿಯನ್ನು (ರೂಢಿಯಲ್ಲಿರುವ) ಮೀರಿ ನಿಲ್ಲುತ್ತದೆಂದು ಹೇಳುವುದನ್ನು ತಡೆಹಿಡಿದಿದ್ದಾರೆ.

ಸಮೀಕ್ಷೆಗಳ ಫಲಾಫಲ

ಈ ಅಧ್ಯಯನವು 1990 ರಲ್ಲಿ ನಡೆಸಿದ 205 ಬೆಳೆ ಹೋಲಿಕೆಗಳನ್ನು ಇದರಲ್ಲಿ ಅಳವಡಿಸಿಕೊಂಡಿದ್ದಾರೆ. ಸಾವಯವ ಬೆಳೆಗಳು ರೂಢಿ ಬೇಸಾಯಕ್ಕಿಂತ 91% ರಷ್ಟು ಪ್ರಮಾಣದಲ್ಲಿದೆ. 2001 ರಲ್ಲಿ ಪ್ರಕಟವಾದ ಒಂದು ಪ್ರಮುಖ ಸಮೀಕ್ಷೆ 150 ಬೆಳೆ ಅವಧಿಯಲ್ಲಿ ವಿವಿಧ ಬೆಳೆಗಳನ್ನು ಕುರಿತು ನಡೆಸಿರುವುದು ಇದರಲ್ಲಿ ಸಾವಯವ ಉತ್ಪನ್ನಗಳು 95-100% ರೂಢಿಯಲ್ಲಿರುವ ಉತ್ಪನ್ನಗಳನ್ನು ಹೇಳಲಾಗಿದೆ.

ಲಾಟರ್ ವರದಿಯಲ್ಲಿ ಆಗಾಗ್ಗೆ ನಡೆಸಿದ ಅಧ್ಯಯನಗಳ ಪ್ರಕಾರ ಸಾವಯವ ಕೃಷಿ ಕ್ಷೇತ್ರಗಳು ಕಠಿಣ ಹವಾಮಾನವನ್ನು ತಡೆದುಕೊಳ್ಳಲು ಶಕ್ತಿಯುತವಾಗಿವೆಯೆಂದು ಹೇಳಲಾಗಿದೆ. ಅದು ರೂಢಿಯಲ್ಲಿರುವ ಕೃಷಿಕ್ಷೇತ್ರಗಳಿಗಿಂತಲೂ ಹೆಚ್ಚು ಪರಿಣಾಮಕಾರಿಯಾಗಿರುತ್ತದೆಂದು ಹೇಳಲಾಗುತ್ತದೆ. ಕೆಲವು ಸಂದರ್ಭಗಳಲ್ಲಿ 70-90% ಹೆಚ್ಚು ಫಲವನ್ನು ನೀಡುತ್ತದೆ. ವಿಶೇಷವಾಗಿ ರೂಢಿಯಲ್ಲಿರುವ ಕೃಷಿ ಕ್ಷೇತ್ರಗಳಿಗಿಂತಲೂ ಬರಗಾಲದಲ್ಲಿ ಎದುರಿಸುವಂತಹ ಶಕ್ತಿಯನ್ನು ಪಡೆದಿರುತ್ತದೆಂದು ಹೇಳಲಾಗಿದೆ.

ಕಾರ್ನೆಲ್ ಯೂನಿವರ್ಸಿಟಿ 22 ವರ್ಷದ ಕ್ಷೇತ್ರ ಅಧ್ಯಯನವನ್ನು ನಡೆಸಿದ್ದು, ಈ ಕುರಿತು 2005ರಲ್ಲಿ ಪ್ರಕಟವಾದ ವರದಿಯಲ್ಲಿ ಸಾವಯವ ಕೃಷಿ ಕಾರನ್ ಮತ್ತು ಸೋಯಾಬೀನ್ ಉತ್ಪನ್ನಗಳನ್ನು ರೂಢಿಯಲ್ಲಿರುವ ಕೃಷಿ ಭೂಮಿಯಲ್ಲಿ ಬೆಳೆದ ಪ್ರಮಾಣದಷ್ಟೇ ದೀರ್ಘಾವಧಿಯ ಸರಾಸರಿ ಲೆಕ್ಕಾಹಾಕಿದಾಗ ಇಳುವರಿಯನ್ನು ಸೂಚಿಸುತ್ತದೆ. ಇದರಲ್ಲಿ ಕಡಿಮೆ ಪ್ರಮಾಣದ ಶಕ್ತಿಯನ್ನು ಬಳಸಲಾಗಿದೆಯಲ್ಲದೆ ಕೀಟನಾಶಕಗಳನ್ನು ತೀರಾ ಬಳಸಿಯೇ ಇಲ್ಲವೆಂಬುದು ಗಮನಿಸಬೇಕಾದ ವಿಚಾರ.

ಬಿರುಗಾಳಿಯಿಂದಲೂ ಸಮೃದ್ಧಿ!

ಕಡಿಮೆ ಪ್ರಮಾಣದ ಇಳುವರಿ ಸಾಮಾನ್ಯ ಅವಧಿಗಳಲ್ಲಿಯೂ ಹೆಚ್ಚಿನ ಇಳುವರಿ ಬರಗಾಲದ ಅವಧಿಗಳಲ್ಲಿಯೂ, ಸೆಂಟ್ರಲ್ ಅಮೇರಿಕದಲ್ಲಿ ನಡೆಸಿದ 1,804 ಸಾವಯವ ಕೃಷಿ ಕ್ಷೇತ್ರಗಳ ಅಧ್ಯಯನ ತಿಳಿಸುವ ಪ್ರಕಾರ 1998 ರಲ್ಲಿ ಅಲ್ಲಿ ಹುರಿಕೇನ್ ಮಿಚ್ (ಬಿರುಗಾಳಿ) ಬಡಿದಾಗ ಸಾವಯವ ಕೃಷಿ ಕ್ಷೇತ್ರಗಳು ಅಪಾಯವನ್ನು ಬೇರೆ ಕ್ಷೇತ್ರಗಳಿಗಿಂತಲೂ ಹೆಚ್ಚು ಬಲವಾಗಿ ತಡೆಯಿತೆಂದು ಹೇಳುತ್ತದೆ. 20 ರಿಂದ 40% ಮೇಲ್ಮಣ್ಣನ್ನು ಹೆಚ್ಚಾಗಿ ಉಳಿಸಿಕೊಂಡಿತಲ್ಲದೆ ಸಣ್ಣಪುಟ್ಟ ಪ್ರಮಾಣದ ಆರ್ಥಿಕ ನಷ್ಟವನ್ನೂ ಸಹ ಆಗದಂತೆ ತಡೆಯಿತೆಂದು ಹೇಳಿದೆ. ಇದು ಅಕ್ಕಪಕ್ಕದ ಕ್ಷೇತ್ರಗಳಿಗೆ ಹೋಲಿಸಿದಾಗ ಪ್ರಮಾಣದ ದೃಷ್ಟಿಯಲ್ಲಿ ಮಹತ್ವದ ವಿಷಯವೆಂದು ಹೇಳಲಾಗುತ್ತದೆ.

ಇದಲ್ಲದೆ, ಸ್ವಿಸ್ ದೇಶದ ಅಧ್ಯಯನ ಹೇಳುವ ಪ್ರಕಾರ ಸಾವಯವ ಕೃಷಿ ಇಳುವರಿ ರೂಢಿಯಲ್ಲಿರುವ ಕೃಷಿಗಿಂತ 20% ಕಡಿಮೆ, ಅದೇ ಸಮಯದಲ್ಲಿ 50% ಕಡಿಮೆ ವೆಚ್ಚ (ಗೊಬ್ಬರ ಮತ್ತು ಶಕ್ತಿಗಾಗಿ), 97% ಕಡಿಮೆ ಕೀಟನಾಶಕಗಳನ್ನು ಹೊಂದಿದೆ ಎಂದು ಉಲ್ಲೇಖಿಸಿದೆ. ಅಮೇರಿಕದ ಕೃಷಿ ಇಲಾಖೆಯ ಅಗ್ರಿಕಲ್ಚರ್ ರಿಸರ್ಚ್ ಸರ್ವೀಸ್ (ಎಆರ್‍ಎಸ್) ನಡೆಸಿದ ದೀರ್ಘಕಾಲದ ಅಧ್ಯಯನದ ಪ್ರಕಾರ ವಿಜ್ಞಾನಿಗಳ ತೀರ್ಮಾನ ಇದಾಗಿದೆ.

ಧೀರ್ಘಕಾಲದ ಪ್ರಯೋಜನ

ನಂಬಿಕೆಗೆ ವಿರುದ್ಧವಾಗಿ ಸಾವಯವ ಕೃಷಿಯ ಉಳಿದಿರುವ ಕೃಷಿ ಭೂಮಿಗಿಂತಲೂ ಹೆಚ್ಚು ಪರಿಣಾಮಕಾರಿಯಾಗಿ ಬೆಳೆಸುತ್ತದೆ. ದೀರ್ಘಕಾಲದ ಇಳುವರಿ ಲಾಭವನ್ನು ಸಾವಯವ ಕೃಷಿ ನೀಡುತ್ತದೆ. ಈ ಬಗ್ಗೆ 18 ವರ್ಷಗಳ ಕಾಲ ಅಧ್ಯಯನ ನಡೆಸಲಾಗಿದೆ. ಸಾವಯವ ಕೃಷಿಯ ವಿಧಾನಗಳು ಸತ್ವಹೀನ ಮಣ್ಣಿನ ವಿಚಾರದತ್ತ ಗಮನಹರಿಸಿದೆ. ರೂಢಿಯಲ್ಲಿರುವ ಕೃಷಿ ಪದ್ಧತಿ ಶೀತಲ ವಾತಾವರಣದಲ್ಲಿ ಪರಿಣಾಮಕಾರಿಯಾಗಿ ಫಲಿಸುತ್ತದೆ. ಮಣ್ಣಿನ ಸತ್ವವನ್ನು ಹೆಚ್ಚಿಸುತ್ತದೆ ಮತ್ತು ಹೆಚ್ಚು ಇಳುವರಿಯನ್ನು ಸಹ ಕೊಡುತ್ತದೆ ಎಂದು ಹೇಳಲಾಗುತ್ತದೆ.

photo1

ಸಾವಯವ ಕೃಷಿಯು ಕಡಿಮೆ ಇಳುವರಿಯನ್ನು ಕೊಡುವುದಾದರೂ ಈ ವಿಧಾನದಲ್ಲಿ ಕೃತಕ ಗೊಬ್ಬರ ಅಥವಾ ಕೀಟನಾಶಕಗಳ ಅಗತ್ಯವಿರುವುದಿಲ್ಲ. ಬೆಳೆ ನಾಶಪಡಿಸುವುದನ್ನು ತಡೆಯಲು ಬೇಕಾಗುವ ವೆಚ್ಚದ ಬದಲಾಗಿ ಅದನ್ನೂ ಬಳಸಿಕೊಂಡು ಸಾವಯವ ಕೃಷಿಗೆ ಬೇಕಾಗುವ ವೆಚ್ಚವನ್ನೂ ಸೇರಿಸಿಕೊಂಡರೆ ಸಾವಯವ ರೈತರು ಹೆಚ್ಚಿನ ಲಾಭಾಂಶವನ್ನು ಪಡೆಯಲು ಸಾಧ್ಯ. ಸಾವಯವ ಕೃಷಿಯು ರೂಢಿಯಲ್ಲಿರುವ ಕೃಷಿಗಿಂತಲೂ ಹೆಚ್ಚು ಲಾಭದಾಯಕವೆಂಬುದು ಅದರ ವೆಚ್ಚಗಳನ್ನು ಪರಿಗಣಿಸಿದಾಗ ಮನಗಾಣಬಹುದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top