fbpx
god

ಬಯಕೆ ಈಡೇರಿಸುವ ಬನಶಂಕರಿ

ಗರದ ಕೆಲವೇ ಕೆಲವು ಪ್ರಸಿದ್ಧಿ ದೇವಸ್ಥಾನಗಳಲ್ಲಿ ಬನಶಂಕರಿ ಅಮ್ಮನ ದೇವಾಲಯ ಕೂಡ ಒಂದಾಗಿದೆ. ಬೇಡಿದವರ ಕಷ್ಟಗಳನ್ನು ಪರಿಹರಿಸಿ ಇಷ್ಟಾರ್ಥಗಳನ್ನು ಪೂರೈಸುತ್ತಾಳೆ.

ದೇವಾಲಯದಲ್ಲಿ ಕಾಲಿಟ್ಟ ಕೂಡಲೇ ಒಂದು ಸುಂದರ ಅನುಭವ ಉಂಟಾಗಿ ಭಕ್ತಿಯ ಪರವಶ ಉಕ್ಕುವಂತೆ ಮಾಡುತ್ತದೆ. ಉತ್ತರ ಕರ್ನಾಟಕದಲ್ಲಿರುವ ಮೂಲ ದೇವಸ್ಥಾನ ಬನಶಂಕರಿ ಹಾಗೂ ಈ ದೇವಸ್ಥಾನದಲ್ಲಿ ಯಾವುದೇ ವ್ಯತ್ಯಾಸವಿಲ್ಲ ಎನ್ನುತ್ತಾರೆ ಭಕ್ತರು. ಇಲ್ಲಿ ನೆಲೆಸಿರುವವರು ಅಷ್ಟು ದೂರ ಆ ದೇವಿಯ ದರ್ಶನ ಮಾಡುವ ಸೌಭಾಗ್ಯ ಇಲ್ಲದವರಿಗೆ ನಗರದಲ್ಲಿಯೇ ಬನಶಂಕರಿ ಅಮ್ಮನ ದರ್ಶನ ಮಾಡಿಸಲು 1915ರಲ್ಲಿ ನಿರ್ಮಾಣ ಮಾಡಿದ್ದು ದೇವಿಯ ಪರಮಭಕ್ತ ಸೋಮಣ್ಣ ಶೆಟ್ಟಿ.

ದೂರದೂರುಗಳಿಂದ ಭಕ್ತಾದಿಗಳು ಅಮ್ಮನವರ ದರ್ಶನಕ್ಕೆ ಆಗಮಿಸುತ್ತಾರೆ, ಪ್ರತಿ ಮಂಗಳವಾರ, ಶುಕ್ರವಾರ, ಭಾನುವಾರ ಹಾಗೂ ಹುಣ್ಣಿಮೆ ದಿನ ಹೆಚ್ಚು ಭಕ್ತಾದಿಗಳು ಇವಳ ಸನ್ನಿದಿಯಲ್ಲಿ ಆಶೀರ್ವಾದ ಪಡೆದುಕೊಳ್ಳಲು ಆಗಮಿಸುತ್ತಾರೆ. ಈ ದೇವಸ್ಥಾನದಲ್ಲಿ ರಾಹುಕಾಲದಲ್ಲಿ ಎಂದಿಗೂ ದೇವಿಗೆ ಪೂಜೆ ಅಥವಾ ಭಕ್ತರು ಆ ದೇವಿಯ ದರ್ಶನ ಮಾಡಲ್ಲ ಆದರೆ ಈ ದೇವಸ್ಥಾನದಲ್ಲಿ ರಾಹುಕಾಲದಲ್ಲಿಪೂಜೆ ಮಾಡುವುದು ಶುಭ ಎಂಬ ನಂಬಿಕೆ ಇದೆ. ಒಳ್ಳೆಯ ಗಳಿಗೆಯಲ್ಲಿಯೇ ಆ ಮಾತೆಯ ದರ್ಶನ ಪಡೆದುಕೊಳ್ಳುವುದು ನಂಬಿಕೆ ಆದರೆ ಈ ದೇವಿಗೆ ಪ್ರತಿ ಕ್ಷಣವು ಅಮೃತಕ್ಷಣವಾಗಿದೆ.

ಶ್ರಾವಣ ಮಾಸದಲ್ಲಿ ವಿಶೇಷ ಪೂಜೆಗಳು ಹಾಗೂ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಮುತ್ತೈದೆಯರು ಹಾಗೂ ಮದುವೆಯಾಗದವರು ತಮ್ಮ ಬೇಡಿಕೆ ಪೂರೈಸುವಂತೆ ದೇವಿಯನ್ನು ಪೂಜಿಸಿ, ನಿಂಬೆ ಹಣ್ಣಿನ ಸಿಪ್ಪೆಯಲ್ಲಿ ದೀಪವನ್ನು ಹಚ್ಚಿ ಇಡುತ್ತಾರೆ. ಇದರಿಂದ ಬೇಡಿದ ಎಲ್ಲ ಸುಖ ಸಂತೋಷಗಳು ಈಡೇರುತ್ತವೆ. ಪ್ರತಿ ವರ್ಷ ಸೆ.13 ರಂದು ದೇವಿಯ ವಾರ್ಷಿಕೋತ್ಸವ ಸಮಾರಂಭ ಆಚರಿಸಲಾಗುತ್ತಿದ್ದು ಹಲವಾರಿ ವಿಶೇಷ ಪೂಜಾಕೈಂಕರ್ಯಗಳು ಈ ಸಂದರ್ಭದಲ್ಲಿ ಭಕ್ತರ ಕಣ್ಮನ ಸೆಳೆಯುತ್ತವೆ. ಯಾವುದೇ ಜಾತಿ ಧರ್ಮದ ಹಂಗಿಲ್ಲದೇ ಎಲ್ಲ ವರ್ಗದವರು ಬನಶಂಕರಿಯ ದರ್ಶನ ಮಾಡಿ ತಮ್ಮ ಜೀವನ ಪಾವನ ಮಾಡಿಕೊಳ್ಳುತ್ತಾರೆ. ಸಾಂಪ್ರದಾಯಗಳನ್ನು ಅಚ್ಚುಕಟ್ಟಾಗಿ ಪಾಲಿಸುವ ಈ ದೇವಾಲಯದಲ್ಲಿ ಕೆಲವೊಂದು ನೀತಿ ನಿಮಯಗಳನ್ನು ಕಠಿಣವಾಗಿ ಪಾಲಿಸುವುದರಿಂದ ಆ ದೇವಿಯನ್ನು ಒಲಿಸಿಕೊಳ್ಳಬಹುದು ಎಂಬ ನಂಬಿಕೆ ಉಂಟು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top