fbpx
Astrology

ಶಕ್ತಿ ದೇವಾ ಹನುಮಂತನಿಗೆ ಪೂಜಿಸುವ ವಿಧಾನ

ವಾನರ ಮೂರ್ತಿಯ ಹನುಮಂತ ದೇವರನ್ನು ಹೇಗೆ ಪೂಜಿಸಬೇಕು ಎಂದು ಕೆಲವರು ಪ್ರಶ್ನಿಸಬಹುದು. ಹನುಮಂತ ದೇವರಿಗೆ ಕೋಟ್ಯಾಂತರ ಭಕ್ತರಿದ್ದಾರೆ. ಪುರುಷರು ಹನುಮಂತ ದೇವರನ್ನು ಪೂಜಿಸಬಹುದು. ಆದರೆ ಬ್ರಹ್ಮಚಾರಿಯಾಗಿರುವ ಹನುಮಂತ ದೇವರನ್ನು ಮಹಿಳೆಯರು ಪೂಜಿಸಬಾರದು ಎನ್ನುವ ನಂಬಿಕೆ ಇದೆ. ಪುರುಷರು ಹನುಮಂತನನ್ನು ಪೂಜಿಸಿ ತಮ್ಮ ಇಷ್ಟಾರ್ಥಗಳನ್ನು ಸಿದ್ಧಿಸಿಕೊಳ್ಳಬಹುದು. ಹನುಮಂತ ದೇವರನ್ನು ಒಲಿಸಿಕೊಳ್ಳುವ ಕೆಲವೊಂದು ಸೂತ್ರಗಳನ್ನು ಇಲ್ಲಿ ನೀಡಲಾಗಿದೆ. ಇದನ್ನು ಪಾಲಿಸಿಕೊಂಡು ದೇವರನ್ನು ಒಲಿಸಿಕೊಳ್ಳಿ. ಆಂಜನೇಯ ದೇವರ ಮೂರ್ತಿಯನ್ನು ಅಮೆರಿಕಾದ ಅಧ್ಯಕ್ಷ ಬರಾಕ್ ಒಬಾಮಾ ಕೂಡ ತನ್ನೊಂದಿಗೆ ಇಟ್ಟುಕೊಂಡಿದ್ದಾರೆಂದು ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗಿತ್ತು…. ಹನುಮಂತ ದೇವರ ಪ್ರಭಾವ ಎಷ್ಟಿದೆ ಎಂದು ಇದರಿಂದ ತಿಳಿದುಕೊಳ್ಳಬಹುದು.

ಕಿತ್ತಳೆ ಬಣ್ಣದ ಸಿಂಧೂರವನ್ನು ಹನುಮಂತ ದೇವರ ಮೂರ್ತಿಗೆ ಹಚ್ಚಲಾಗುತ್ತದೆ. ಹೆಚ್ಚಿನ ಮಂದಿರಗಳಲ್ಲಿ ಹನುಮಂತ ದೇವರ ಮೂರ್ತಿಗಳಿಗೆ ಕಿತ್ತಳೆ ಬಣ್ಣದ ಸಿಂಧೂರವನ್ನು ಹಚ್ಚಿರುತ್ತಾರೆ. ಕಿತ್ತಳೆ ಬಣ್ಣದ ಸಿಂಧೂರವನ್ನು ಹನುಮಂತನ ಮೂರ್ತಿಗೆ ಹಚ್ಚುವ ಮೂಲಕ ಆತನನ್ನು ಪೂಜಿಸಬಹುದು.

ಮನೋಜವಂ ಮಾರುತತುಲ್ಯವೆಗಂ ಜಿತೇಂದ್ರಿಯಂ ಬುದ್ಧಿಮಾತಂ ವರಿಸ್ತಂ, ವಾತಾತಮಜಂ ವಾನರಾಯುಕ್ತಮುಖ್ಯಂ ಶ್ರೀರಾಮ ದೂತಂ ಸರನಾಮ ಪ್ರಪಾದಯೆ. ಪುರುಷರು ಈ ಮಂತ್ರವನ್ನು ಪಠಿಸಿ ಹನುಮಂತ ದೇವರನ್ನು ಪೂಜಿಸಬಹುದಾಗಿದೆ. ಸ್ನಾನ ಮಾಡಿದ ಬಳಿಕ ಅಥವಾ ರಾತ್ರಿ ವೇಳೆ ಈ ಮಂತ್ರವನ್ನು ಪಠಿಸಬಹುದು. ಮಧ್ಯರಾತ್ರಿ ವೇಳೆ ಹನುಮಂತನ ಪೂಜಿಸಿದರೆ ತುಂಬಾ ಒಳ್ಳೆಯದು.

ಹನುಮಂತ ದೇವರ ಶ್ರೀರಾಮಚಂದ್ರ ದೇವರ ದೂತನಾಗಿದ್ದಾರೆ. ಯಾವಾಗಲೂ ಅವರನ್ನು ಭಕ್ತಿಯಿಂದ ಪೂಜಿಸುತ್ತಾರೆ. ಹನುಮಂತ ದೇವರ ಕೃಪೆಗೆ ಪಾತ್ರರಾಗಬೇಕಾದರೆ ರಾಮ ದೇವರನ್ನು ಪೂಜಿಸಬೇಕು. ಜೈ ಶ್ರೀರಾಮ್ ಮಂತ್ರವನ್ನು ಪಠಿಸುತ್ತ ಇರಬೇಕು.

ಮಂಗಳವಾರದಂದು ಉಪವಾಸ ಮಾಡಿಕೊಂಡು ಹನುಮಂತ ದೇವರನ್ನು ಪ್ರಾರ್ಥಿಸಬಹುದು. ದಿನದಲ್ಲಿ ಒಂದು ಊಟವನ್ನು ಮಾಡಿ ಹನುಮಂತ ದೇವರ ಮಂತ್ರ ಅಥವಾ ಹನುಮಾನ್ ಚಾಲೀಸವನ್ನು ಪಠಿಸಬೇಕು.

ಹನುಮಂತ ದೇವರಿಗೆ ಸಿಹಿ ಇಷ್ಟವಾಗಿರುವ ಕಾರಣದಿಂದ ಕಡಲೆಹಿಟ್ಟಿನ ಲಾಡನ್ನು ಅರ್ಪಿಸಿ. ವಾನರಗಳಿಗೆ ಬಾಳೆಹಣ್ಣನ್ನು ಅರ್ಪಿಸಬಹುದು. ವಾನರಗಳು ಪತ್ತೆಯಾಗದೆ ಇದ್ದರೆ ಹನುಮಂತನ ಮೂರ್ತಿಗೆ ಬಾಳೆಹಣ್ಣನ್ನು ಅರ್ಪಿಸಿ. ಈ ಮೂಲಕ ಹನುಮಂತನನ್ನು ಪೂಜಿಸಬಹುದಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top