fbpx
News

ಮಹಾಲಯ ಅಮಾವಾಸ್ಯೆಯ ಮಹತ್ವ ಏನೆಂದು ಗೊತ್ತಾ ..??

ಭಾದ್ರಪದ ಕೃಷ್ಣ ಅಮಾವಾಸ್ಯೆ-ಭಾದ್ರಪದ ಬಹುಳ ಅಮಾವಾಸ್ಯೆಗೆ ಮಹಾಲಯ ಅಮಾವಾಸ್ಯೆ ಎಂದು ಹೆಸರು. ಇದು ಪಿತೃ ಪಕ್ಷದ ಕೊನೆಯಲ್ಲಿ ಬರುವುದರಿಂದ ಸರ್ವಪಿತೃ ಅಮಾವಾಸ್ಯೆ ಎಂತಲೂ ಕರೆಯುತ್ತಾರೆ.

ಹಿಂದೂ ಪುರಾಣದ ಪ್ರಕಾರ, ಒಬ್ಬರ ಪೂರ್ವಜ ಮೂರು ಹಿಂದಿನ ಪೀಳಿಗೆಯ ಆತ್ಮಗಳು ಪಿತೃ-ಲೋಕ, ಭೂಮಿ ಮತ್ತು ಸ್ವರ್ಗದ ನಡುವೆ ಕ್ಷೇತ್ರದಲ್ಲಿ ವಾಸಿಸುತ್ತಾರೆ. ಈ ಕ್ಷೇತ್ರದಲ್ಲಿ ಭೂಮಿಯಿಂದ ಪಿತೃ-ಲೋಕ ಒಂದು ಸಾಯುವ ವ್ಯಕ್ತಿಯ ಆತ್ಮ ತೆಗೆದುಕೊಳ್ಳುತ್ತದೆ. ಇದನ್ನು ಯಮ, ಮರಣದ ದೇವರು, ನಿರ್ವಹಿಸುತ್ತದೆ. ಮುಂದಿನ ಪೀಳಿಗೆಯ ವ್ಯಕ್ತಿಯು ಮರಣಿಸಿದಾಗ, ಮೊದಲ ತಲೆಮಾರಿನ ಸ್ವರ್ಗಕ್ಕೆ ಬದಲಿಸುತ್ತದೆ ಮತ್ತು ದೇವರ ಜೊತೆ ಒಂದುಗೂಡಿಸುವ, ಆದ್ದರಿಂದ ಶ್ರದ್ಧಾ ಕಾಣಿಕೆಗಳನ್ನು ನೀಡಲಾಗುತ್ತದೆ ಎಂಬ ನಂಬಿಕೆ ಇದೆ

ವಿಶೇಷ

ನಮ್ಮನ್ನಗಲಿದ ತಂದೆ-ತಾಯಿಯರನ್ನು ಪ್ರತ್ಯಕ್ಷವಾಗಿ ಹಾಗು ಪರೋಕ್ಷವಾಗಿ ಸಹಕರಿಸಿ ನಮ್ಮನ್ನಗಲಿದ ಎಲ್ಲ ಆಪ್ತರನ್ನು ನಮ್ಮ ಜೀವನದಜಂಜಾಟದಲ್ಲಿ ನಿತ್ಯವೂ ಸ್ಮರಿಸಲು ಸಾಧ್ಯವಾಗುವುದಿಲ್ಲ. ಕೊನೆಯ ಪಕ್ಷ ವರ್ಷಕ್ಕೊಮ್ಮೆ ಪಿತೃ ಪಕ್ಷದಲ್ಲಿ ಅಥವಾ ಮಹಾಲಯ ಅಮಾವಾಸ್ಯೆಯಂದು ಅವರನ್ನು ಸ್ಮರಿಸಿ ತಿಲ ತರ್ಪಣವನ್ನು, ಜಲ ತರ್ಪಣವನ್ನು ಹಾಗೂ ಬಲಿಯನ್ನೋ, ಪಿಂಡದಾನವನ್ನೋ, ನೀಡಿ ಸ್ಮರಿಸಬೇಕು. ಇದು ಈ ಮಹಾಲಯ ಅಮಾವಾಸ್ಯೆಯ ವಿಶೇಷವಾಗಿದೆ.

ಪೌರಾಣಿಕ ಹಿನ್ನೆಲೆ

ಮಹಾಭಾರತದ ಬಹು ದೊಡ್ಡ ನಾಯಕರಲ್ಲಿ ಒಬ್ಬನಾದ ಕರ್ಣನು, ಯುದ್ಧದಲ್ಲಿ ಅರ್ಜುನನಿಂದ ಹತನಾದ ಮೇಲೆ ದೇವದೂತರು ಅವನನ್ನು ಸ್ವರ್ಗಕ್ಕೆ ಕರೆದು ಕೊಂಡು ಹೋಗುತ್ತಾರೆ. ಮಾರ್ಗಮಧ್ಯದಲ್ಲಿ ಕರ್ಣನಿಗೆ ತಿನ್ನಲು ಏನೂ ಸಿಗುವುದಿಲ್ಲ. ಅವನಿಗೆ ಎಲ್ಲೆಲ್ಲೂ ಬಂಗಾರ, ಬೆಳ್ಳಿ ಮುಂತಾದ ಒಡವೆಗಳು ಕಾಣುತ್ತವೆ. ಇದರಿಂದ ಅವನು ತೀವ್ರವಾಗಿ ಮನನೊಂದು, ಸಾವಿನ ದೇವತೆಯಾದ ಯಮನನ್ನು ಕುರಿತು ಭಕ್ತಿಯಿಂದ ಪ್ರಾರ್ಥಿಸುತ್ತಾನೆ. ಕರ್ಣನ ಪ್ರಾರ್ಥನೆಗೆ ಯಮನು ಪ್ರತ್ಯಕ್ಷನಾಗಿ ಭಾದ್ರಪದಮಾಸದ ಮಹಾಲಯ ಪಕ್ಷದ ದಿನಗಳಂದು ದಾನವನ್ನು ಮಾಡುವಂತೆ ಹೇಳುತ್ತಾನೆ.

ಯಮನ ಆದೇಶದಂತೆ ಕರ್ಣನು ಮತ್ತೆ ಭೂಮಿಗೆ ಹಿಂತಿರುಗಿ ಭಾದ್ರಪದ ಮಾಸದ ಮಹಾಲಯ ಪಕ್ಷದ ದಿನಗಳಂದು ಯಥೇಚ್ಚವಾಗಿ ತನ್ನ ಹಿರಿಯರಿಗೆ, ಹಾಗು ಬಡವರಿಗೆ ಅನ್ನ ಹಾಗು ವಸ್ತ್ರದಾನವನ್ನು ಮಾಡುತ್ತಾನೆ. ಇದರಿಂದ ಸಂತುಷ್ಟರಾದ ಪಿತೃಗಳು ಅವನನ್ನು ಹರಸುತ್ತಾರೆ.

ಅವರ ಆಶೀರ್ವಾದದಿಂದ ಕರ್ಣನು ಯಾವುದೇ ತೊಂದರೆಯಿಲ್ಲದೇ ಸ್ವರ್ಗಕ್ಕೆ ಹೋಗುತ್ತಾನೆ ಎಂದು ಪುರಾಣಗಳಲ್ಲಿ ಹೇಳಿದೆ.

ಈ ಪಿತೃಪಕ್ಷದ ದಿನಗಳಂದು ಅಥವಾ ಮಹಾಲಯ ಅಮಾವಾಸ್ಯೆಯಂದು ನಮ್ಮಲ್ಲಿರುವುದರಲ್ಲಿ ಸ್ವಲ್ಪವನ್ನಾದರೂ ದಾನ ಮಾಡಿದರೆ ಪಿತೃಗಳು ಸಂತುಷ್ಟರಾಗಿ ನಮಗೆ ಇನ್ನೂ ಹೆಚ್ಚಿನ ಸುಖ ಸಂತೋಷಗಳನ್ನು ನೀಡುತ್ತಾರೆ ಎಂಬ ನಂಬಿಕೆಯಿದೆ.

ಧರ್ಮಶಿಕ್ಷಣದ ಅಭಾವ, ಅಧ್ಯಾತ್ಮವನ್ನು ಅರ್ಥಮಾಡಿಕೊಳ್ಳುವಲ್ಲಿನ ಅನಾಸಕ್ತಿ, ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವ, ಧರ್ಮದ್ರೋಹಿ ಸಂಘಟನೆಗಳಿಂದ ಹಿಂದೂ ಧರ್ಮದ ರೂಢಿ-ಪರಂಪರೆಗಳ ಮೇಲೆ ಸತತವಾಗಿ ಆಗುತ್ತಿರುವ ದ್ವೇಷಪೂರ್ವಕ ಟೀಕೆ ಇತ್ಯಾದಿಗಳಿಂದ ಈ ಪರಿಣಾಮದಿಂದಾಗಿ ಇಂದಿನ ವಿಜ್ಞಾನಯುಗದ ಯುವಪೀಳಿಗೆಯ ಮನಸ್ಸಿನಲ್ಲಿ ‘ಅಶಾಸ್ತ್ರೀಯ ಮತ್ತು ಅವಾಸ್ತವದ ಆಡಂಬರ’ ಎಂಬ ತಪ್ಪುಕಲ್ಪನೆಯು ಮೂಡುತ್ತಿದೆ.

ಶ್ರಾದ್ಧ ಸಂಸ್ಕಾರವೂ ಇತರ ಸಂಸ್ಕಾರಗಳಷ್ಟೇ ಆವಶ್ಯಕವಾಗಿದೆ ಎಂಬುದನ್ನು ಇಂದಿನ ಯುಗದ ಯುವಪೀಳಿಗೆ ಹೇಳುವುದು ಅತಿ ಆವಶ್ಯಕವಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top