fbpx
Astrology

ಮಹಾಲಯ ಅಮಾವಾಸ್ಯೆ ಆಚರಿಸದಿದ್ದರೆ, ಏನಾಗುತ್ತೆ ಗೊತ್ತಾ …!!

ಇಂದು ಮಹಾಲಯ ಅಮಾವಾಸ್ಯೆಯಿರುವುದರಿಂದ ಅತೃಪ್ತ ಪೂರ್ವಜರ ತೊಂದರೆಗಳಿಂದ ರಕ್ಷಿಸುವ ದೇವತೆಯಾದ ದತ್ತನ ನಾಮಜಪವನ್ನು ದಿನವಿಡೀ ಮಾಡಿ ದತ್ತನ ನಾಮಜಪದಿಂದ ಅತೃಪ್ತ ಪೂರ್ವಜರ ತೊಂದರೆಗಳಿಂದ ರಕ್ಷಣೆಯಾಗುತ್ತದೆ.

ಕೆಲವು ಜನರು ಮೃತವ್ಯಕ್ತಿಯ ಸ್ಮರಣೆಗೆಂದು ಮನೆಯ ಎದುರು ಅಥವಾ ಬದಿಯಲ್ಲಿ ಅವರ ಹೆಸರಿನ ಸಮಾಧಿಯನ್ನು ಕಟ್ಟುತ್ತಾರೆ. ಈ ಸಮಾಧಿಗೆ ನಿಯಮಿತವಾಗಿ ಹೂವುಗಳನ್ನು ಅರ್ಪಿಸಿ ಪೂಜೆಯನ್ನೂ ಮಾಡುತ್ತಾರೆ. ಮೃತವ್ಯಕ್ತಿಯ ಮೇಲಿನ ಪ್ರೇಮ ಮತ್ತು ಅವರ ನೆನಪಿಗಾಗಿ ಮನೆಯಲ್ಲಿ ಅವರ ಛಾಯಾಚಿತ್ರಗಳನ್ನು ಇಡುವುದು, ದೇವರ ಕೋಣೆಯಲ್ಲಿ ನಾಣ್ಯವನ್ನಿರಿಸುವುದು ಅಥವಾ ಮನೆಯ ಮುಂದೆ ಸಮಾಧಿಯನ್ನು ಕಟ್ಟುವುದು ಮುಂತಾದ ಕೃತಿಗಳಿಂದ ಆ ವ್ಯಕ್ತಿಯ ಲಿಂಗದೇಹವು ಅಲ್ಲಿ ಸಿಲುಕಿಕೊಳ್ಳುತ್ತದೆ. ಇದರಿಂದ ಅವರಿಗೆ ಮುಂದಿನ ಗತಿ ಸಿಗುವುದಿಲ್ಲ, ಹಾಗೆಯೇ ಅವರಿಗೆ ಯಾತನೆಯನ್ನೂ ಸಹಿಸಬೇಕಾಗುತ್ತದೆ. ಭಗೀರಥನು ಪೂರ್ವಜರ ಮುಕ್ತಿಗಾಗಿ ತಪಸ್ಸನ್ನು ಮಾಡಿ ಗಂಗೆಯನ್ನು ಪೃಥ್ವಿಯಲ್ಲಿ ಅವತರಿಸುವಂತೆ ಮಾಡಿದ ಉದಾಹರಣೆಯು ಪಿತೃಋಣ ತೀರಿಸಿದುದರ ಉತ್ತಮ ಆದರ್ಶವಾಗಿದೆ. ನಾವು ಪೂರ್ವಜರನ್ನು ಮೇಲೆ ಹೇಳಿದ ಸ್ಥೂಲ ವಿಷಯಗಳಲ್ಲಿ ಸಿಲುಕಿಸಿದರೆ ಮತ್ತು ಅವರಿಗೆ ಗತಿ ಸಿಗಲು ನಾಮಜಪ ಮುಂತಾದ ಸಾಧನೆಯನ್ನು ಮಾಡದೇ ಇದ್ದಲ್ಲಿ ನಮ್ಮಿಂದ ಪಿತೃ ಋಣ ತೀರುವುದಿಲ್ಲ. ಹಾಗೆಯೇ ಪೂರ್ವಜರಿಗೆ ತೊಂದರೆಯಾಗಿ ಅವರು ನಮ್ಮ ಸಾಧನೆಯಲ್ಲಿ ಅಡಚಣೆಗಳನ್ನು ತರುತ್ತಾರೆ. ಪಿತೃ ಋಣವನ್ನು ತೀರಿಸಲು ಮತ್ತು ಪೂರ್ವಜರ ಮುಕ್ತಿಯನ್ನು ತಡೆಗಟ್ಟದೇ ಅವರಿಗೆ ಗತಿ ಸಿಗಬೇಕೆಂದು ‘ಶ್ರೀ ಗುರುದೇವ ದತ್ತ |’ ನಾಮಜಪ ಮತ್ತು ಶ್ರಾದ್ಧವಿಧಿಗಳನ್ನೂ ಮಾಡಬೇಕು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top