fbpx
Achivers

ಐಸಿಸ್ ಉಗ್ರರ ಹಿಡಿತದಲ್ಲಿ ನರಳಿದ ಈಕೆ ಈಗ ವಿಶ್ವ ಸಂಸ್ಥೆಯ ರಾಯಭಾರಿ

ಆಗ ಅವಳಿಗಿನ್ನೂ ೧೯ ವರ್ಷ. ಆಗ ಅವಳನ್ನು ಸೇರಿ ದಂತೆ ಇಡೀ ಕುಟುಂಬದವರನ್ನು ಐಎಸ್ ಐಎಸ್ ಉಗ್ರರು ಅಪಹರಿಸಿದರು. ತಂದೆ ಹಾಗೂ ಸೋದರನನ್ನು ಕಣ್ಣ ಮುಂದೆಯೇ ಗುಂಡಿಕ್ಕಿ ಹತ್ಯೆಗೈಯಲಾಯಿತು. ಹಲವು ತಿಂಗಳ ಕಾಲ ಉಗ್ರರಿಂದ ಸತತ ಹಿಂಸೆ ಜೊತೆಗೆ ಅತ್ಯಾಚಾರ. ಕೆಲವು ಬಾರಿಯಂತೂ ಮೂರ್ಚೆ ಹೋಗು ವವರೆಗೂ ೬ ಜನರು ತಪ್ಪಿಸಿಕೊಳ್ಳುವ ಯತ್ನದಲ್ಲಿ ಸಿಕ್ಕಿಬಿದ್ದಾಗ  ಗ್ಯಾಂಗ್ ರೇಪ್.

ಇಂತಹ ಹೀನಾಯ ಬದುಕಿನಿಂದ ಪಾರಾಗಿ ಬಂದ ಇರಾಕ್ ನ ನಾಡಿಯಾ ಮುರದ್ ಈಗ ವಿಶ್ವ ಸಂಸ್ಥೆಯಲ್ಲಿ ಮಹಿಳೆಯರ ಕಳ್ಳಸಾಗಾಟ ಜಾಗೃತಿ ಅಭಿಯಾನಕ್ಕೆ ರಾಯಭಾರಿಯಾಗಿ ಆಯ್ಕೆಯಾಗಿದ್ದಾರೆ. ಜಾಗತಿಕ ಮಟ್ಟದಲ್ಲಿ ಮಹಿಳೆಯರ ಮೇಲೆ ಆಗುತ್ತಿರುವ ದೌರ್ಜನ್ಯ ಹಾಗೂ ಅದರಿಂದಾಗುವ ನೋವಿನ ಅಗಾಧತೆಯ ಅರಿವು ಮೂಡಿಸಲುವ ಪ್ರಯತ್ನವನ್ನು ನಾಡಿಯಾ ಮುರದ್ ಮಾಡಲಿದ್ದಾರೆ. ಉತ್ತರ ಇರಾಕ್ ನ ಐಎಸ್ ಎಸ್ ಉಗ್ರರ ವಶದಲ್ಲಿದ್ದ ಈಕೆ ವಿಶ್ವ ಸಂಸ್ಥೆ ಬಿಡಿಸಿದಾಗ ತಾನು ಅನುಭವಿಸಿದ ನರಕಯಾತನೆಯನ್ನು ಬಿಚ್ಚಿಟ್ಟಿದ್ದು ಎಂತಹವರ ಮನಸ್ಸನ್ನೂ ಕಲಕುವಂತಿತ್ತು.

ಸುಮಾರು ಮೂರು ತಿಂಗಳ ಕಾಲ ಉಗ್ರರ ವಶಸಲ್ಲಿದ್ದ ನಾಡಿಯಾ ಅವರನ್ನು ಸೇವಕಿ ಅಥವಾ ಜೀತದಾಳು ತರಹ ನೋಡಿಕೊಳ್ಳಲಾಗುತ್ತಿತ್ತು
ಅತ್ಯಾಚಾರ ಮಾಡುವ ಮುನ್ನ ಪ್ರಾರ್ಥನೆ ಸಲ್ಲಿಸುವಂತೆ ಸೂಚಿಸಲಾಗುತಿತ್ತು. ನಂತರ ಮನ ಬಂದಂತೆ ಥಳಿಸುತ್ತಿದ್ದರು ಎಂದು ನಾಡಿಯಾ ವಿವರಿಸಿದ್ದಾರೆ.
ಕೊನೆಗೂ ಉಗ್ರರ ಕಪಿ ಮುಷ್ಟಿ ಯಿಂದ ಪಾರಾಗುವಲ್ಲಿ ಯಶಸ್ವಿಯಾದ ನಾಡಿಯಾ ಜರ್ಮನಿಯ ಸೇನಾ ಶಿಬಿರ ದಲ್ಲಿ ಚಿಕಿತ್ಸೆ ಪಡೆದರು. ನಂತರ ತನ್ನಂತೆಯೇ ಇನ್ನೂ ಹಲವಾರು ಮಹಿಳೆಯರು ಸಂಕಷ್ಟದಲ್ಲಿ ಇರುವುದನ್ನು ತಿಳಿಸಿದಳು.

ಇದೀಗ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ವಿಚಾ ರಣೆ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ನಾಡಿಯಾ, ಮಹಿಳೆಯರು ಮತ್ತು ಮಕ್ಕಳ ಕಲ್ಯಾಣಕ್ಕಾಗಿ ಜೀವನ ಮುಡಿಪಾಗಿಡುವುದಾಗಿ ತಮ್ಮ ವೆಬ್ ಸೈಟ್ ನಲ್ಲಿ ಹೇಳಿಕೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top