ಅಪೋಲೋ ಆಸ್ಪತ್ರೆಯಲ್ಲಿ ಅನಾರೋಗ್ಯ ಕಾರಣದಿಂದ ಚಿಕಿತ್ಸೆ ಪಡೆಯುತ್ತಿರುವ ತಮಿಳುನಾಡು ಮುಖ್ಯಮಂತ್ರಿ ಜಯಲಲಿತ ಕುರಿತ ಸಾವಿನ ವದಂತಿಗಳು ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿವೆ. ಇದರ ನಡುವೆ ವಿಕಿಪೀಡಿಯಾದಲ್ಲಿ ಜಯಲಲಿತ ಬದುಕಿದ್ದಂತೆಯೇ ಸಾವಿನ ಕುರಿತ ‘ಎಡಿಟ್ ಸಮರ’ ನಡೆಯುತ್ತಿದೆ.
ಅಪರಿಚಿತ ವ್ಯಕ್ತಿಗಳು ಜಯಲಲಿತಾ ನಿಧಾನ ದಿನಾಂಕ 30 ಸೆಪ್ಟೆಂಬರ್ 2016 ಎಂದು ಎಡಿಟ್ ಮಾಡುವ ಮೂಲಕ ಶುಕ್ರವಾರ ಬೆಳಗ್ಗೆ 6 ಗಂಟೆಯಿಂದ ಈ ಸಮರ ಶುರುವಾಗಿದೆ. ಒಂದು ವರ್ಗ ಆಕೆ ನಿಧನ ಹೊಂದಿದ್ದಾರೆ ಎಂದು ಬದಲಾಯಿಸಿದರೆ, ಮತ್ತೊಂದು ಗುಂಪು ಮಾಹಿತಿ ಧೃಡಪಟ್ಟಿಲ್ಲವೆಂಬ ಕಾರಣಕ್ಕೆ ಮತ್ತೆ ಎಡಿಟ್ ಮಾಡಿ ಸಾವಿನ ದಿನಾಂಕವನ್ನು ಅಳಿಸಿದ್ದಾರೆ.
ಮೂಲಗಳ ಪ್ರಕಾರ ತಮಿಳುನಾಡು ಮುಖ್ಯಮಂತ್ರಿ ಜಯಲಲಿತ ಅವರ ಅರೋಗ್ಯ ಸ್ಥಿರವಾಗಿದ್ದು ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎನ್ನಲಾಗುತ್ತಿದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
