fbpx
News

ಬೆಂದಮನೆಯಲ್ಲಿ ಹಿರಿದಷ್ಟೇ ಲಾಭ

ಬೆಂದಮನೆಯಲ್ಲಿ ಹಿರಿದಷ್ಟೇ ಲಾಭ. ಸೆಲೆಬ್ರಿಟಿ ಗಳನ್ನು ಇಕ್ಕಟ್ಟಿಗೆ ಸಿಕ್ಕಿಸಿ , ಆ ಕ್ಷಣದಲ್ಲಿ ಅವರು ಕಕ್ಕಿದ ಮಾತನ್ನು ಹಿಡಿದುಕೊಂಡು ತಮ್ಮ TRP ಬೇಯಿಸಿಕೊಳ್ಳುವ ಪ್ರಸಂಗ ಇಲ್ಲಿದೆ.

ಹೆಣದ ಬಾಯಲ್ಲಿ ಬೆಣ್ಣೆ ತಿನ್ನುವ ಟೀವಿಯವರ ಹುನ್ನಾರಗಳಿಗೆ ಸರ್ಜಿಕಲ್ ಅಟ್ಯಾಕ್ ಮಾಡಿದ್ದಾರೆ :

ಅಲ್ರೀ Janasri Kannada News Janasri News Head Office Janasri news Janasri News, ಜನ ಹೀಗೆ ಬಾಯ್ತುಂಬಾ ಉಗೀತಿದಾರೆ, ಸಾಕಾಗಲಿಲ್ವಾ?
ಸಂದರ್ಶನದಲ್ಲಿ ಉಗಿಸಿಕೊಂಡಿದ್ದಲ್ಲದೇ ಇಲ್ಲೂ ಉಗಿಸಿಕೊಳ್ತಿದೀರಲ್ರೀ. ಕಾವೇರಿ ವಿಷಯದಲ್ಲಿ ಪ್ರಕಾಶ ರಾಜ್ ನಂಥ ಒಬ್ಬ ನಟ ಹೇಳಿಕೆ ಕೊಟ್ಟುಬಿಟ್ಟರೆ ಸಮಸ್ಯೆ ಪರಿಹಾರವಾಗುತ್ತಾ?

ಒಬ್ಬ ನಟನ ಇಬ್ಬಂದಿ ಪರಿಸ್ಥಿತಿಯನ್ನ ಉಪಯೋಗಿಸಿಕೊಂಡು ನಿಮ್ಮ ಟೀಆರ್ಪಿ ಹೆಚ್ಚಿಸಿಕೊಳ್ಳಲು ಹೋದಿರಿ, ಸರಿಯಾಗೇ ಬಿತ್ತು ಮುಸುಡಿಗೆ… ಹೀಗೆ ಇನ್ನೂ ಹತ್ತು ಜನ ಬಾರಿಸಬೇಕು ಇಂಥಾ ಚಾನೆಲ್ಲುಗಳಿಗೆ, ಆಗ ಬುದ್ಧಿ ಬರುತ್ತೆ. ಅಥವಾ ಬರೊಲ್ವೋ…

ಅಷ್ಟು ಉಗಿಸಿಕೊಂಡಮೇಲೂ ಅದನ್ನೇ ನಾಚಿಕೆಗೆಟ್ಟು ಇಲ್ಲೂ ಹಂಚಿಕೊಂಡಿರೋದು ನೋಡಿದರೆ ನನಗೇನೋ ಅನುಮಾನವೇ!

“Shouldn’t we Kannadigas refrain from watching his movies for his indifference” ಅಂತೆ!… should we really watch your rotten channel?

ಹೇಗಾದರೂ ಮಾಡಿ ಈ ನಟನನ್ನ ಇಂಥದ್ದೊಂದು ಇಕ್ಕಟ್ಟಿನ ಪ್ರಶ್ನೆ ಕೇಳಬೇಕು, ಆತ ಕನ್ನಡದ ಪರವಾಗಿ ಮಾತಾಡಿದರೆ ಅದನ್ನ ಬ್ರೇಕಿಂಗ್ ನ್ಯೂಸ್ ಮಾದರಿಯಲ್ಲಿ ದಿನಪೂರ್ತಿ ತೋರಿಸಬೇಕು, ಟಿಆರ್ಪಿ ಹೆಚ್ಚಿಸಿಕೊಳ್ಳಬೇಕು. ಅತ್ತ ತಮಿಳುನಾಡಿನಲ್ಲಿ ಆ ನಟನ ಬಾಯಿಗೆ ಮಣ್ಣು ಬೀಳಬೇಕು. ಅಥವಾ

ಉಪ್ಪು ತಿಂದ ಮನೆಗೆ ಕಟ್ಟುಬಿದ್ದು ಆತ ತಮಿಳುನಾಡಿನ ಪರವಾಗಿ ನುಡಿದರೆ, ಈ ದರಿದ್ರ ಚಾನಲಿಗೆ ಇಡೀ ದಿನದ ಟಿಆರ್ಪಿ. ಹೇಗಾದರೂ ಒಟ್ಟಿನಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳಬೇಕು, ಯಾರಿಗೆ ಏನಾದರೂ ಸರಿಯೇ.

ಈ ಇಕ್ಕಟ್ಟಿಗೆ ಸಿಲುಕಬಾರದೆಂದೇ ಪ್ರಕಾಶ ಉತ್ತರಿಸಲು ನಿರಾಕರಿಸಿದ್ದರೂ, ಕೊಟ್ಟ ಉತ್ತರವಂತೂ ತಕ್ಕಂತೆಯೇ ಇದೆ –

ಕಾವೇರಿಯ ವಿಷಯ ಮಾತಾಡುವ ಯೋಗ್ಯತೆಯಿರುವುದು ತಜ್ಞರಿಗೆ, ಕಾವೇರಿಯ ಮಕ್ಕಳಾದ ಎರಡೂ ಕಡೆಯ ರೈತರಿಗಷ್ಟೇ ಹೊರತು ನಟರಿಗೆ, ರಾಜಕಾರಣಿಗಳಿಗೆ ಅಲ್ಲ…
ಟಿಆರ್ಪಿಗಾಗಿ ಹೊಲಸಿಗೆ ಬಾಯಿಹಾಕಲೂ ಹೇಸದ ಮಾಧ್ಯಮಗಳಿಗಂತೂ ಮೊದಲೇ ಅಲ್ಲ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top