fbpx
Karnataka

ಎಂಎಸ್ ಸುಬ್ಬುಲಕ್ಷ್ಮಿ ಹೆಸರಿನಲ್ಲಿ ಸ್ಟಾಂಪ್ ಪ್ರಕಟಿಸಲಿರುವ ವಿಶ್ವಸಂಸ್ಥೆ

ಭಾರತದ ಸಂಗೀತ ದಿಗ್ಗಜೆ ಎಂ.ಎಸ್. ಸುಬ್ಬುಲಕ್ಷ್ಮಿ ಅವರ ೧೦ನೇ ಜಯಂತಿ ಅಂಗವಾಗಿ ಸ್ಟಾಂಪ್ ಮುದ್ರಿಸಲು ವಿಶ್ವಸಂಸ್ಥೆ ನಿರ್ಧರಿಸಿದೆ. ಈ ಮೂಲಕ ಭಾರತದ ಶಾಸ್ತೀಯ ಸಂಗೀತ ಗಾಯಕಿಗೆ ವಿಶೇಷ ರೀತಿಯಲ್ಲಿ ನಮನ ಸಲ್ಲಿಸಲಿದೆ. ಈ ಮೂಲಕ ಈ ಅಪರೂಪದ ಗೌರವಕ್ಕೆ ಪಾತ್ರರಾದ ದೇಶದ ಮೊದಲ ಭಾರತದ ಗಾಯಕಿ ಆಗಿದ್ದಾರೆ. ಅಲ್ಲದೇ ವಿಶ್ವಸಂಸ್ಥೆಯಲ್ಲಿ ಸಂಗೀತ ಕಾರ್ಯಕ್ರಮ ನೀಡಿದ ಮೊದಲ ಭಾರತೀಯ ಹಾಡುಗಾರ್ತಿ ಎಂಬ ಹಿರಿಮೆಗೂ ಪಾತ್ರರಾಗಿದ್ದರು.

ಎಂ.ಎಸ್. ಸುಬ್ಬುಲಕ್ಷ್ಮಿಸಂಗೀತಗಾರ್ತಿಯಾಗಿ

ಎಂ ಎಸ್ ೧೦ ವರ್ಷದವರಾಗಿದ್ದಾಗಲೆ ಅವರ ಮೊದಲ ಧ್ವನಿ-ಮುದ್ರಣ ಹೊರಬಂದಿತು. ನಂತರ ಸೆಮ್ಮಂಗುಡಿ ಶ್ರೀನಿವಾಸ ಐಯರ್ ಅವರಿಂದ ಕರ್ನಾಟಕ ಸಂಗೀತ ಹಾಗೂ ಪಂಡಿತ್ ನಾರಾಯಣ್ ರಾವ್ ವ್ಯಾಸ್ ಅವರಿಂದ ಹಿಂದುಸ್ಥಾನಿ ಸಂಗೀತ ಕಲಿತುಕೊಂಡರು. ೧೭ನೇ ವಯಸ್ಸಿನಲ್ಲಿ ಮದರಾಸು ಸಂಗೀತ ಅಕಾಡೆಮಿಯಲ್ಲಿ ಪ್ರಥಮ ಸಂಗೀತ ಕಛೇರಿಯನ್ನು ನೀಡಿದ ಎಂ ಎಸ್, ಇಲ್ಲಿಯವರೆಗೆ ಅನೇಕ ಭಾಷೆಗಳಲ್ಲಿ ಎಣಿಕೆಗೆ ಸಿಕ್ಕದಷ್ಟು ಹಾಡುಗಳನ್ನು ಹಾಡಿದ್ದಾರೆ (ಮುಖ್ಯವಾಗಿ ತಮಿಳು, ಹಿಂದಿ, ಕನ್ನಡ, ಬೆಂಗಾಲಿ, ಗುಜರಾತಿ, ಮಲಯಾಳಂ, ತೆಲುಗು, ಸಂಸ್ಕೃತ).

ಭಾರತದ ಶಾಶ್ವತ ಕಾರ್ಯಾಚರಣೆ ವಿಭಾಗ ಈ ವಿಷಯವನ್ನು ಇತ್ತೀಚೆಗೆ ಪ್ರಕಟಿಸಿದ್ದು, ವಿಶ್ವ ಸಂಸ್ಥೆ ಈಗಾಗಲೇ ಸುಬ್ಬುಲಕ್ಷ್ಮಿ ಅವರ ಸ್ಟಾಂಪ್‌ನ ಚಿತ್ರದ ಕುರಿತು ಈಗಾಗಲೇ ಅಂತಿಮ ನಿರ್ಧಾರ ಕೈಗೊಂಡಿದೆ ಎಂದು ತಿಳಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top