fbpx
god

ದೇವರಕೋಣೆಯ ಮಹತ್ವ ತಿಳಿಯಿರಿ

ಪ್ರತಿಯೊಬ್ಬರ ಮನೆಯಲ್ಲಿ ದೇವರ ಕೋಣೆ ಇದ್ದೇ ಇರುತ್ತದೆ. ಆಧುನಿಕತೆ ಮುಂದುವರಿದರೂ ಭಾರತೀಯ ಮಹಿಳೆಯರು ಹಬ್ಬಕ್ಕೆ, ದೇವರ ಕೋಣೆಗೆ ಕೊಡುವ ಪ್ರಾಮುಖ್ಯತೆಗೆ ಮಾತ್ರ ಧಕ್ಕೆ ಉಂಟಾಗಿಲ್ಲ. ದೀಪಗಳ ಹಬ್ಬ ಆರಂಭವಾಗುತ್ತಿದ್ದು ಮಹಿಳೆಯರಿಗೆ ಸಡಗರದ ಸಂಗತಿ. ಅನೇಕ ದಿನಗಳ ಮೊದಲೇ ಹಬ್ಬವನ್ನು ಯಾವ ರೀತಿಯಲ್ಲಿ ಅದ್ಧೂರಿಯಾಗಿ ಆಚರಿಸಬಹದೆಂದು ಯೋಜನೆ ರೂಪಿಸಿ ಮಹಿಳೆಯರು ದೇವರ ಕೋಣೆಯನ್ನು ಸಜ್ಜುಗೊಳಿಸುತ್ತಾರೆ. ದೇವಸ್ಥಾನವು ಹೇಗೆ ಇಡೀ ಗ್ರಾಮ ಅಥವಾ ಊರಿಗೆ, ಶಕ್ತಿ ಅಥವಾ ಚೈತನ್ಯವನ್ನು ಪೂರೈಸುತ್ತದೆಯೋ, ಅದೇ ರೀತಿ ದೇವರಕೋಣೆಯು ಇಡೀ ಮನೆಗೆ ಶಕ್ತಿ, ಚೈತನ್ಯವನ್ನು ಪೂರೈಸಬೇಕು, ಮನೆಯ ವಾತಾವರಣವನ್ನು ಶುದ್ಧ ಮಾಡಬೇಕು.

ಮನೆಯಲ್ಲಿ ದೇವರಕೋಣೆ ಹೇಗೆ ಇಟ್ಟುಕೊಳ್ಳಬೇಕು?? ಇಲ್ಲಿ ಓದಿ…

ದೇವರ ಮನೆಯಲ್ಲಿ ವಿಗ್ರಹ, ದೇವರ ಫೋಟೊ, ಹೂವು, ದೀಪ ಮತ್ತು ಆರತಿಗೆ ಬೇಕಾದ ಸಾಮಾಗ್ರಿಗಳನ್ನು ಜೋಡಿಸಿಡಲಾಗುತ್ತದೆ. ದೇವರ ಕೋಣೆಯಲ್ಲಿ ಮಂತ್ರೋಚ್ಛಾರ, ಪ್ರಾರ್ಥನೆ, ದೀಪಾರಾಧನೆ ಮತ್ತು ಧೂಪಾರಾಧನೆ ನಡೆಯುತ್ತದೆ. ಇದನ್ನು ಭಕ್ತಿಯ ತಾಣವನ್ನಾಗಿ ಮಾರ್ಪಡಿಸುವ ಹೊಣೆ ಮಹಿಳೆಯದು. ಮನೆ ನಿರ್ಮಾಣದ ಹಂತದಲ್ಲಿಯೇ ಮಹಿಳೆಯರು ಅಡುಗೆ ಕೋಣೆಯಷ್ಟೇ ದೇವರ ಕೋಣೆ ಬಗ್ಗೆಯೂ ಮುತುವರ್ಜಿ ವಹಿಸುವುದು ಒಳ್ಳೆಯದು.

sany3597

ಬಾರ್ಡರ್ ಸುಂದರವಾಗಿರಲಿ: ಇರುವ ಸ್ಥಾಳಾವಕಾಶವನ್ನು ಸರಿಯಾದ ಕ್ರಮದಲ್ಲಿ ಬಳಸಿಕೊಳ್ಳುವುದರ ಜತೆಗೆ ಶುಭ್ರತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಮರದ ಗಾಢ ಬಣ್ಣದ ಬಾರ್ಡರ್ಗಳಿದ್ದಲ್ಲಿ ಪೂಜಾ ಕೋಣೆಯ ಅಂದ ಮತ್ತಷ್ಟು ಅಧಿಕಗೊಳ್ಳುತ್ತದೆ.

ಅದ್ಧೂರಿ ಪೂಜಾ ಮಂದಿರ: ಸೂಕ್ಷವಾದ ಕೆತ್ತನೆಗಳು, ಅಮೃತ ಶಿಲೆಯಿಂದ ಅಲಂಕಾರಗೊಂಡ ಪೂಜಾ ಕೋಣೆ ಮರದ ಪ್ಯಾನಲ್ಗಳ ರಕ್ಷಣೆ ಹೊಂದಿರುವಂತೆ ನಿರ್ಮಿಸಿದರೆ ಪೂಜಾ ಕೋಣೆಗೆ ಅದ್ಭುತ ಮೆರುಗು ನೀಡುತ್ತದೆ. ಇದು ಆಧುನಿಕತೆಗೆ ಸೂಕ್ತವಾಗಿರುವ ವಿನ್ಯಾಸ.

ವಾಸ್ತು ಮರೆಯಬೇಡಿ: ವಾಸ್ತು ಶಾಸ್ತ್ರದ ಪ್ರಕಾರ ಪೂಜಾ ಕೋಣೆ ಈಶಾನ್ಯ ದಿಕ್ಕಿನಲ್ಲಿ ನಿರ್ಮಾಣ ಮಾಡಬೇಕೆಂಬುದು ಹಿರಿಯರ ನಂಬಿಕೆ. ಅತ್ಯಂತ ಪ್ರಮುಖ ವಿಚಾರವೆಂದರೆ ದೇವರ ಕೋಣೆಯನ್ನು ಶೌಚಾಲಯದ ಬಳಿ ನಿರ್ಮಿಸಲೇಬಾರದು.

ನೈಸರ್ಗಿಕ ಮೆರಗು: ಅಮೃತ ಶಿಲೆಯ ಮೆಟ್ಟಿಲು ಪೂಜಾ ಕೋಣೆಯ ಸೌಂದರ್ಯವನ್ನು ಇಮ್ಮಡಿಗೊಳಿಸುತ್ತದೆ. ಬಿಳಿ ವಾಲ್ ಪೇಪರ್ನ ವಿನ್ಯಾಸವಿದ್ದಲ್ಲಿ ಪ್ರಶಾಂತತೆ ಮತ್ತಷ್ಟು ಭಕ್ತಿ ಭಾವದ ಪರಿಸರ ನಿರ್ಮಾಣವಾಗುತ್ತದೆ. ದೊಡ್ಡದಾದ ಕಿಟಕಿಗಳು ಕೋಣೆಗೆ ಅಗತ್ಯವಾದ ಸ್ವಾಭಾವಿಕ ಬೆಳಕು ನೀಡುವಂತೆ ಮಾಡುತ್ತದೆ. ಮರದ ಪೀಠೋಪಕರಣಗಳಿಂದ ಪೂಜಾ ಕೋಣೆಯನ್ನು ನಿರ್ಮಿಸಿದಲ್ಲಿ ಕೋಣೆಗೆ ನೈಸರ್ಗಿಕ ಮೆರಗು ದೊರಕುತ್ತದೆ.

ಕಲಾತ್ಮಕ ಮಂದಿರ: ಪೂಜಾ ಕೋಣೆಗೆ ಭಾರತೀಯ ವಾಸ್ತು ಶಿಲ್ಪದ ಟಚ್ ನೀಡಿದರೆ ಪೂಜಾ ಮಂದಿರದ ಲುಕ್ ಮತ್ತಷ್ಟು ಅಧಿಕವಾಗುತ್ತದೆ. ಹಳದಿ, ಬಿಳಿ ಬಣ್ಣವನ್ನು ಗೋಡೆಗಳಿಗೆ ನೀಡುವುದರಿಂದ ಗೋಡೆಯ ಅಂದ ಅಧಿಕವಾಗುತ್ತದೆ. ದೇವರ ಚಿತ್ರಗಳನ್ನು ದೇವರ ಕೋಣೆಯಲ್ಲಿ ಬಿಡಿಸುವುದರಿಂದ ಗೋಡೆಗೆ ಸುಂದರವಾದ ಲುಕ್ ದೊರಕುತ್ತದೆ. ಇನ್ನು ಪರದೆಗಳನ್ನು ಆರಿಸುವಾಗ ಅವುಗಳ ಡಿಸೈನ್ ಹಾಗೂ ಬಣ್ಣಗಳ ಕುರಿತು ಗಮನವನ್ನು ನೀಡಬೇಕು.

ಬೆಡ್ರೂಮಿನಲ್ಲಿ ಪೂಜಾ ಕಾರ್ನರ್: ಮನೆಯಲ್ಲಿ ಸ್ಥಳಾವಕಾಶವಿಲ್ಲ, ಹೇಗೆ ದೇವರ ಕೋಣೆ ನಿರ್ಮಿಸಲಿ ಎಂದು ಚಿಂತಿಸುವ ಅಗತ್ಯವಿಲ್ಲ. ಇದ್ದ ಪುಟ್ಟ ಜಾಗದಲ್ಲೇ ಚೊಕ್ಕಟವಾದ ದೇವರ ಕೋಣೆ ನಿರ್ಮಿಸಲು ಸಾಧ್ಯ. ಬೆಡ್ರೂಮ್ನ ಮೂಲೆಯಲ್ಲಿ ಪೂಜಾ ಕಾರ್ನರ್ ನಿರ್ಮಿಸುವ ಮೂಲಕ ದೇವರ ಕೋಣೆ ಇಲ್ಲವೆಂಬ ನೋವನ್ನು ನಿವಾ ರಿಸಿಕೊಳ್ಳಬಹುದು. ಒಂದು ಸಣ್ಣ ಕ್ಯಾಬಿನೆಟ್ನಲ್ಲೂ ಪೂಜಾ ಮಂದಿರ ನಿರ್ಮಿಸ ಬಹುದು. ಗಾಜು ಅಥವಾ ಎರಡು ಪ್ಲೋಟಿಂಗ್ ಡ್ರಾಯರ್ಗಳ ಸಹಾಯದಿಂದಲೂ ತಯಾರಿಸಿಕೊಳ್ಳಬಹುದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top