fbpx
News

ಅಸಾಧಾರಣ ಸೇವೆ ಸಲ್ಲಿಸಿದ ಪೊಲೀಸ್ ಅಧಿಕಾರಿಗಳಿಗೆ ರಾಜ್ಯಪಾಲ ವಜುಭಾಯಿ ರವರಿಂದ ರಾಷ್ಟ್ರಪತಿ ಪದಕ ಪ್ರಧಾನ

ಬೆಂಗಳೂರು,ರಾಜಭವನ : ಪೊಲೀಸ್ ಇಲಾಖೆಯಲ್ಲಿ ಅಸಾಧಾರಣ ಸೇವೆ ಸಲ್ಲಿಸಿದ ಪೊಲೀಸ್ ಅಧಿಕಾರಿಗಳಿಗೆ ಶೌರ್ಯ ಪ್ರಶಸ್ತಿ ಹಾಗೂ 2013 ಮತ್ತು 2014 ಸಾಲಿನ ರಾಷ್ಟ್ರಪತಿ ಪದಕ ವಿಜೇತರಿಗೆ ಪದಕ ಪ್ರದಾನ ಮಾಡಲಾಯಿತು. ರಾಜಭವನದ ಗಾಜಿನಮನೆಯಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲ ವಜುಭಾಯಿ ವಾಲಾ ಪದಕ ಪ್ರದಾನ ಮಾಡಿದರು.

ಸಮಾರಂಭದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಪೊಲೀಸ್ ಇಲಾಖೆಯಲ್ಲಿ ಅಸಾಧಾರಣ ಸೇವೆ ಸಲ್ಲಿಸಿ ರಾಷ್ಟ್ರಪತಿ ಪದಕ ವಿಜೇತರಾದವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಉತ್ತಮ ಸೇವೆ ಸಲ್ಲಿಸಬೇಕಾದರೆ ಕುಟುಂಬದವರ ಸಹಕಾರವೂ ಅಗತ್ಯ. ಸಹಕಾರ ಇಲ್ಲದಿದ್ದರೆ ಸಾಧನೆ ಮಾಡಲಾಗದು. ಪೊಲೀಸರ ಈ ಸಾಧನೆಯಲ್ಲಿ, ಪ್ರಶಸ್ತಿಯಲ್ಲಿ ಕುಟುಂಬದವರ ಪಾಲೂ ಇದೆ. ಹೀಗಾಗಿ ಕುಟುಂಬದವರಿಗೂ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.

ಇಡೀ ಸಮಾಜದ ರಕ್ಷಣೆ ಮಾಡುವ ಜವಾಬ್ದಾರಿ ಪೊಲೀಸ್ ಇಲಾಖೆ ಮೇಲಿದೆ. ಶಾಂತಿ ಸುವ್ಯವಸ್ಥೆ ಪಾಲನೆ, ಸಾರ್ವಜನಿಕರ ಆಸ್ತಪಾಸ್ತಿ ರಕ್ಷಣೆ ಮಾಡುವ ಜವಾಬ್ದಾರಿ ಇಲಾಖೆ ಮೇಲಿದೆ. ಪ್ರಾಣದ ಹಂಗು ತೊರೆದು ಕೆಲಸ ಮಾಡುವವರು ಪೊಲೀಸರು. ಸಮಾಜ ಗರುತಿಸಲಿ ಬಿಡಲಿ ನೀವು ಮಾತ್ರ ಕರ್ತವ್ಯದಿಂದ ವಿಮುಖರಾಗಬೇಡಿ. ಸಮಾಜ ನಿಮ್ಮಿಂದ ಉತ್ತಮ‌ ಸೇವೆ ನಿರೀಕ್ಷೆ ಮಾಡುತ್ತದೆ. ಅದನ್ನು ಸವಾಲಾಗಿ ಸ್ವೀಕರಿಸಿ ಕೊಡುಗೆ ನೀಡಿ. ಇಲಾಖೆಯಲ್ಲಿ ಅಶಿಸ್ತು ಸಹಿಸುವುದಿಲ್ಲ. ಇತ್ತೀಚೆಗೆ ಅಶಿಸ್ತು ತೋರಿದ ಘಟನೆಗಳಾಗಿವೆ. ಅದಕ್ಕೆ ಅವಕಾಶ ಕೊಡಬಾರದು. ಶಿಸ್ತಿನ ಇಲಾಖೆಯಲ್ಲಿ ಅಶಿಸ್ತು ಕಾಣಿಸಿದರೆ ನಿಮ್ಮ ಮೇಲಿನ ನಂಬಿಕೆ, ಗೌರವ ಕಡಿಮೆಯಾಗುತ್ತದೆ. ಪೊಲೀಸರಿಗೆ ಖಾಸಗಿ ಜೀವನ ಇಲ್ಲ. ಆದರೆ ಅದು ಅನಿವಾರ್ಯ. ನಾವೇ ಒಪ್ಪಿ ಈ ಸೇವೆಗೆ ಬಂದಿರುವುದರಿಂದ ಗೊಣಗುವ ಅಗತ್ಯವಿಲ್ಲ. ಒತ್ತಡವೂ ಸದಾ ಪೊಲೀಸರ ಮೇಲಿರುತ್ತದೆ ಎಂದರು.
ಪೊಲೀಸ್  ಇಲಾಖೆಯಲ್ಲಿ ಅಸಾಧಾರಣ ಸೇವೆ ಸಲ್ಲಿಸಿ ರಾಷ್ಟ್ರಪತಿ ಪದಕ ವಿಜೇತರಾದವರಿಗೆ ಅಭಿನಂದನೆಗಳು. ಉತ್ತಮ ಸೇವೆ ಸಲ್ಲಿಸಬೇಕಾದರೆ ಕುಟುಂಬದವರ ಸಹಕಾರವೂ ಅಗತ್ಯ. ಸಹಕಾರ ಇಲ್ಲದಿದ್ದರೆ ಸಾಧನೆ ಮಾಡಲಾಗದು. ಪೊಲೀಸರ ಈ ಸಾಧನೆಯಲ್ಲಿ, ಪ್ರಶಸ್ತಿ ಯಲ್ಲಿ ಕುಟುಂಬದವರ ಪಾಲೂ ಇದೆ. ಹೀಗಾಗಿ ಕುಟುಂಬ ದವರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಅಶಿಸ್ತು ಸಹಿಸಲ್ಲ:ಇತ್ತೀಚೆಗೆ ಪೊಲೀಸ್ ಇಲಾಖೆಯಲ್ಲಿ ಅಶಿಸ್ತು ತೋರಿದ ಘಟನೆಗಳಾಗಿವೆ. ಇಲಾಖೆಯಲ್ಲಿ ಅಶಿಸ್ತು ಸಹಿಸುವುದಿಲ್ಲ. ಇನ್ನು ಮುಂದೆ ಅದಕ್ಕೆ ಅವಕಾಶ ಕೊಡಬಾರದು ಎಂದು ಪೊಲೀಸರಿಗೆ ಸಿಎಂ ಎಚ್ಚರಿಕೆ ನೀಡಿದರು. ಶಿಸ್ತಿನ ಇಲಾಖೆಯಲ್ಲಿ ಅಶಿಸ್ತು ಕಾಣಿಸಿದರೆ ನಿಮ್ಮ ಮೇಲಿನ ನಂಬಿಕೆ, ಗೌರವ ಕಡಿಮೆಯಾಗುತ್ತದೆ. ಪೊಲೀಸರಿಗೆ ಖಾಸಗಿ ಜೀವನ ಇಲ್ಲ. ಆದರೆ ಅದು ಅನಿವಾರ್ಯ. ನಾವೇ ಒಪ್ಪಿ ಈ ಸೇವೆಗೆ ಬಂದಿರುವುದರಿಂದ ಗೊಣಗುವ ಅಗತ್ಯವಿಲ್ಲ. ಒತ್ತಡವೂ ಸದಾ ಪೊಲೀಸರ ಮೇಲಿರುತ್ತದೆ ಎಂದು ಪರೋಕ್ಷವಾಗಿ ಪೊಲೀಸ್ ಪ್ರತಿಭಟನೆ ವಿವಾದಕ್ಕೆ ಬೇಸರ ವ್ಯಕ್ತಪಡಿಸಿದರು.

ಪೊಲೀಸರಿಗೆ ಶೌರ್ಯ ಅಗತ್ಯ. ಅವರು ಫಿಟ್ ನೆಸ್ ಕಾಪಾಡಿಕೊಳ್ಳಬೇಕು. ಆಗ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡಲು ಸಾಧ್ಯ. ಇತ್ತೀಚೆಗೆ ಇಲಾಖೆಯಲ್ಲಿ ಅತ್ಮಹತ್ಯೆ ಪ್ರಕರಣಗಳು ಸಂಭವಿಸುತ್ತಿವೆ, ಅದು ದುರದೃಷ್ಟಕರ ಎಂದರು.

ಗುಪ್ತದಳಕ್ಕೆ ವಿಶೇಷ ತರಬೇತಿ: ಪೊಲೀಸರಿಗೆ ಹಳೆಯ ಕಾಲದ ತರಬೇತಿಗೆ ಬದಲಾಗಿದೆ. ಮಾನಸಿಕ ಮತ್ತು ದೈಹಿಕವಾಗಿ ಬಲಿಷ್ಠರಾಗುವ ಬಗ್ಗೆಯೂ ತರಬೇತಿ ಅವಶ್ಯ. ಗುಪ್ತದಳಕ್ಕೆ ಬರುವವರಿಗೂ ವಿಶೇಷ ತರಬೇತಿ ನೀಡಬೇಕಾಗುತ್ತದೆ. ಈ ಕುರಿತು ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಗುಪ್ತದಳ ಬಲಯುತವಾಗಿದ್ದರೆ ಮುಂದಾಗುವ ಹಲವಾರು ಘಟನೆಗಳನ್ನು ಮತ್ತು ಅಪರಾಧಗಳನ್ನು ತಡೆಯಲು ಸಾಧ್ಯವಾಗುತ್ತದೆ ಎಂದರು.
ಪೊಲೀಸರಿಗೆ ಹಳೆಯ ಕಾಲದ ತರಬೇತಿಗೆ ಬದಲಾಗಿದೆ ಮಾನಸಿಕ ಮತ್ತು ದೈಹಿಕವಾಗಿ ಬಲಿಷ್ಠರಾಗುವ ಬಗ್ಗೆಯೂ ತರಬೇತಿ ಅವಶ್ಯ. ಗುಪ್ತದಳಕ್ಕೆ ಬರುವವರಿಗೂ ವಿಶೇಷ ತರಬೇತಿ ನೀಡಬೇಕಾಗುತ್ತದೆ. ಈ ಕುರಿತು ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಗುಪ್ತದಳ ಬಲಯುತವಾಗಿದ್ದರೆ ಮುಂದಾಗುವ ಹಲವಾರು ಘಟನೆಗಳನ್ನು ಮತ್ತು ಅಪರಾಧಗಳನ್ನು ತಡೆಯಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಅಪರಾಧ ಸಂಭವಿಸಿದ ಬಳಿಕ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವ ಬದಲು ಅಪರಾಧಗಳನ್ನೇ ನಿಯಂತ್ರಿಸುವುದು ಸೂಕ್ತ. ಇದಕ್ಕಾಗಿ ಗುಪ್ತದಳದ ಬಲವರ್ಧನೆ ಆಗಬೇಕು ಎಂದು ಮುಖ್ಯಮಂತ್ರಿ ಗಳು ಅಭಿಪ್ರಾಯಪಟ್ಟರು.

ಕಾವೇರಿ ಗಲಭೆ ತಡೆಗೆ ಪೊಲೀಸರ ಸೇವೆ ಅನನ್ಯ ಕಾವೇರಿ ಗದ್ದಲದ ವೇಳೆ ಮಾಧ್ಯಮಗಳಲ್ಲಿ ಬಂದ ಪ್ರತಿಕ್ರಿಯೆಯಿಂದ ಸಾಕಷ್ಟು ಗಲಭೆಯಾಯಿತು. ಅದನ್ನು ಸಂಯಮದಿಂದ ತಡೆಯುವಲ್ಲಿ‌ ಪೊಲೀಸ್ ಇಲಾಖೆ ಸಮರ್ಥವಾಗಿ‌ ಕೆಲಸ ಮಾಡಿದೆ. ಇಲ್ಲದಿದ್ದರೆ ಇನ್ನಷ್ಟು ನಷ್ಟವಾಗ್ತಿತ್ತು ಎಂದು ಗೃಹ ಸಚಿವ ಡಾ.ಜಿ ಪರಮೇಶ್ವರ್ ಹೇಳಿದರು.
ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಪರಮೇಶ್ವರ್, ಡಿಜಿ ಐಜಿ ಓಂಪ್ರಕಾಶ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು  ಭಾಗಿಯಾಗಿದ್ದರು. ಒಟ್ಟು 66 ಮಂದಿ ಪೊಲೀಸ್ ಅಧಿಕಾರಿಗಳಿಗೆ ಪದಕ ಪ್ರಧಾನ ಮಾಡಲಾಯಿತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top