fbpx
Opinion

ನಾವು ಭಾರತೀಯರೆಂದು ಹೆಮ್ಮೆಯಿಂದ ಹೇಳಿ!!!

ನಾನೊಬ್ಬ ಭಾರತೀಯ ಎಂದು ಹೇಳಿಕೊಳ್ಳಲು ಭಾರತೀಯರಿಗೆ ಅನೇಕ ಕಾರಣಗಳಿದೆ.ಸಾವಿರಾರು ವರ್ಷಗಳ ಇತಿಹಾಸವಿರುವ ಈ ಕರ್ಮಭೂಮಿಯಲ್ಲಿ ಹುಟ್ಟಲು ಅದೆಷ್ಟು ಪುಣ್ಯ ಪಡೆದಿರಬೇಕೋ? I am Proud to be an Indian ಎಂದು ಎಲ್ಲರೂ ಹೇಳುತ್ತಾರೆ ಅದೇಕೆ PROUD ಎಂದು ಯಾರಾದರೂ ಕೇಳಿದರೆ ನಮ್ಮ ಮಹಾನ್ ಭಾರತದ ಭವ್ಯ ಪರಂಪರೆಯ ಬಗ್ಗೆ ಇತಿಹಾಸದ ಬಗ್ಗೆ ನಮ್ಮ ಅತಿ ಮುಖ್ಯವಾದ ವಿಷಯಗಳಾದರೂ ತಿಳಿದಿರಬೇಕು.ಪ್ರಪಂಚದ ಭೂಪಟದಲ್ಲಿವಿಶಿಷ್ಟ ಸ್ಥಾನವನ್ನು ಪಡೆದಿರುವ ನಮ್ಮ ಮಹಾನ್ ಭಾರತ ಪ್ರಪಂಚದಲ್ಲಿ ಅನೇಕ ಮೊದಲುಗಳಿಗೆ ಕಾರಣವಾಗಿದೆ ಅಮೇರಿಕ ಎಂಬ ನಾಡನ್ನು ಕಟ್ಟಿದರು ಆದರೆ ಭಾರತ ಎಂಬ ಭವ್ಯ ಸಂಸ್ಕೃತಿಯನ್ನು ಯಾರೂ ಕಟ್ಟಲಿಲ್ಲ ಇದು ಸಾವಿರಾರು ವರ್ಷಗಳಿಂದ ಈ ಭೂಮಿಯ ಮೇಲಿದೆ. ಭಾರತ ಎಂದರೆ ಅದೊಂದು ಸಂಸ್ಕೃತಿ ಭಾರತದ ಭವ್ಯ ಇತಿಹಾಸ ಹಾಗೂ ಪರಂಪರೆಗೆ ಸಾಕ್ಷಿ ಕುರುಹುಗಳು ಇದೆ. ನಾವು ಭಾರತೀಯರೆಂದು ಹೆಮ್ಮೆಯಿಂದ ಹೇಳಿಕೊಳ್ಳಲು ಇತಿಹಾಸದಲ್ಲಿ ಆಗಿಹೋದ ಹಾಗೂ ಇತ್ತೀಚಿನ ಕೆಲ ಪ್ರಮುಖವಾದ ಘಟನೆಗಳನ್ನು ನಾವು ಮೆಲುಕು ಹಾಕೋಣ ಬನ್ನಿ.

indian-flag-wallpapers-hd-images-free-download-2

ಇತಿಹಾಸವನ್ನೊಮ್ಮೆ ಅವಲೋಕಿಸಿದರೆ ಸೊನ್ನೆಯನ್ನು ಕಂಡುಹಿಡಿದ ಕೀರ್ತಿ ಭಾರತೀಯರದು ಸೊನ್ನೆಯನ್ನು ಕಂಡುಹಿಡಿದದ್ದು ಶ್ರೇಷ್ಟ ಗಣಿತಙ್ಞ “ಆರ್ಯಭಟ” ಪ್ರಪಂಚದ ಮೊದಲನೆಯ ವಿಶ್ವವಿದ್ಯಾನಿಲಯ ಪ್ರಾರಂಭವಾದದ್ದು ಭಾರತದ “ತಕ್ಷಶಿಲೆ”ಯಲ್ಲಿ ಕ್ರಿ ಪೂ 700ನೇ ಇಸವಿಯಲ್ಲಿ ಪ್ರಾರಂಭವಾದ ಈ ವಿಶ್ವವಿದ್ಯಾನಿಲಯದಲ್ಲಿ 10500ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು 60ಕ್ಕೂ ಹೆಚ್ಚು ವಿಷಯಗಳ ಬಗ್ಗೆ ಅಭ್ಯಾಸಿಸಿದ್ದರು ಕ್ರಿ ಪೂ 4ನೇ ಶತಮಾನದಲ್ಲಿ ಪ್ರಾರಂಭವಾಗಿದ್ದ ನಳಂದ ವಿಶ್ವವಿದ್ಯಾನಿಲಯ ಪ್ರಾಚೀನ ಭಾರತದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಮಾಡಿದ್ದ ಸಾಧನೆ ಅಸಾಧಾರಣವಾದದ್ದು ಪೋರ್ಬ್ ಎಂಬ ಪತ್ರಿಕೆಯ ವರದಿಯ ಪ್ರಕಾರ ಭಾರತದ ಪ್ರಾಚೀನ ಭಾಷೆಯಾದ ಸಂಸ್ಕೃತ ಗಣಕಯಂತ್ರಕ್ಕೆ ಅತೀ ಸುಲಭವಾಗಿ ಹೊಂದಿಕೆಯಾಗುವ ಭಾಷೆಯೆಂದು ಇತ್ತೀಚಿನ ತನ್ನ ವರದಿಯಲ್ಲಿ ತಿಳಿಸಿದೆ ಪ್ರಾಚೀನ ಭಾರತದಲ್ಲಿ ಮನುಷ್ಯರಿಗೆ ಲಭ್ಯವಿದ್ದ ವೈದ್ಯಕೀಯ ಪದ್ಧತಿ ಎಂದರೆ ಆಯುರ್ವೇದ ಇದು ಪ್ರಾರಂಭವದದ್ದು ಭಾರತದಲ್ಲಿ ಭಾರತದ ಆಯುರ್ವೇದ ವೈದ್ಯಕೀಯ ಪದ್ಧತಿಗೆ ಸುಮಾರು 5000 ವರ್ಷಗಳ ಇತಿಹಾಸವಿದೆ ಭಾರತ ಪ್ರಪಂಚದಲ್ಲೆ ಸಂಪದ್ಭರಿತ ರಾಷ್ಟ್ರವಾಗಿತ್ತು ದೋಣಿ ನಡೆಸುವ ವಿದ್ಯೆ 5000 ವರ್ಷಗಳ ಹಿಂದೆಯೇ ಸಿಂದ್ ನದಿಯ ತೀರದಲ್ಲಿ ಪ್ರಾರಂಭವಾಗಿತ್ತು ಇಂಗ್ಲೀಷಿನ “Navigation” ಎಂಬ ಪದ ಸಂಸ್ಕೃತದ ನವಗಥ್ ಎಂಬ ಪದದಿಂದ ಬಂದಿದೆ.
“ಪೈ”ನ ಬೆಲೆಯನ್ನು ಮೊದಲು ಲೆಕ್ಕ ಮಾಡಿದ ಕೀರ್ತಿ “ಬೌದ್ಯಾಯನ”ನಿಗೆ ಸಲ್ಲುತ್ತದೆ ಈಗಿನ ರೇಖಾಗಣಿತದಲ್ಲಿನ “ಪೈಥಾಗರಸ್’ ಥಿಯರಿಯನ್ನು ಆತ ಆಗಲೇ ವಿವರಿಸಿದ್ದನು ಬ್ರಿಟಿಷ್ ಗಣಿತ ಶಾಸ್ತ್ರಙ್ಞರು 1999ರಲ್ಲಿ ಬೌದ್ಯಾಯನ ಕೆಲಸ 6ನೇ ಶತಮಾನದಲ್ಲಿಯೇ ನಡೆದಿದೆ ಎಂದು ಒಪ್ಪಿಕೊಂಡಿದ್ದಾರೆ ಅಂದರೆ ಯೂರೋಪಿಯನ್ನರಿಗಿಂತ ಗಣಿತ ಶಾಸ್ತ್ರದಲ್ಲಿ ಭಾರತೀಯರೇ ಮೊದಲಿಗರು ಎಂದಾಯಿತು ಎಂತಹ ಹೆಮ್ಮೆಯ ವಿಷಯವಲ್ಲವೇ? ಇದಲ್ಲದೆ ಬೀಜಗಣಿತ ಟ್ರಿಗ್ನಾಮೆಟ್ರಿ ಕ್ಯಾಲ್‍ಕುಲಸ್ ಭಾರತೀಯರ ಕೊಡುಗೆ. 11ನೇ ಶತಮಾನದಲ್ಲಿ ವರ್ಗ ಸಮೀಕರಣವನ್ನು ಭಾರತದ ಶ್ರೀಧರಾಚಾರ್ಯ ಕಂಡುಹಿಡಿದಿರುವುದು ಹೆಮ್ಮೆಯ ವಿಷಯ ಅಮೇರಿಕಾದ ಹರಳು ಅಧ್ಯಯನದ ಸಂಸ್ಥೆ ಪ್ರಕಾರ 1896 ರವರೆಗೂ ಪ್ರಪಂಚಕ್ಕೆ ವಜ್ರದ ಸರಬರಾಜು ಭಾರತದಿಂದ ಮಾತ್ರ ಆಗುತ್ತಿತ್ತು ಎಂದು ತಿಳಿಸಿದೆ.

18-jagadishchandra-bose

ಶತಮಾನಗಳಿಂದ ವಿವಾದದಲ್ಲಿದ್ದ ತಂತುರಹಿತ ಸಂವಹನ (Wireless Communication)ವನ್ನು ಕಂಡುಹಿಡಿದದ್ದು ಮಾರ್ಕೋನಿಯಲ್ಲ! ಭಾರತದ ಜಗದೀಶಚಂದ್ರ ಬೋಸ್ ಎಂದು ಅಮೇರಿಕಾ ಮೂಲದ IEEE ಎಂಬ ಸಂಸ್ಥೆ ಧೃಡ ಪಡಿಸಿದೆ. ಸೌರಾಷ್ಟ್ರದಲ್ಲಿ ಬಹಳ ಹಿಂದೆಯೇ ಬೆಳೆ ಬೆಳೆಯಲು ಕೃಷಿ ನೀರಾವರಿಗಾಗಿ ಅಣೆಕಟ್ಟುಗಳನ್ನು ಕಟ್ಟುವ ಪದ್ಧತಿ ಜಾರಿಯಲ್ಲಿತ್ತು “ಚೆಸ್” ಆಟವನ್ನು ಕಂಡುಹಿಡಿದದ್ದು ಭಾರತೀಯರು.

ವೈದ್ಯಕೀಯ “ಶಸ್ತ್ರಚಿಕಿತ್ಸಾ ಪಿತಾಮಹ”ನೆಂದು ಪಡೆದಿರುವರು “ಶುಶೃತ” ಈತ ಮತ್ತು ಈತನ ಸಹಚರರು 2600 ವರ್ಷಗಳ ಹಿಂದೆಯೇ ಹೆರಿಗೆ, ಕ್ಯಾಟ್ರಾಕ್ಟ, ಮೂಳೆಮುರಿತ ಹಾಗೂ ಮೂತ್ರಕೋಶದ ಕಲ್ಲುಗಳಿಗೆ ಶಸ್ತ್ರಚಿಕಿತ್ಸೆ ಮಾಡಿದ್ದರು. ಅರಿವಳಿಕೆ ಪದ್ಧತಿ ಪ್ರಾಚೀನ ಭಾರತದಲ್ಲಿಯೇ ಜಾರಿಯಲ್ಲಿತ್ತು. ಶತಶತಮಾನಗಳ ಹಿಂದೆಯೇ ಸಿಂಧು ಕಣಿವೆಯಲ್ಲಿ ಉತ್ತಮ ನಾಗರೀಕತೆಯಿತ್ತು ಫೇಸ್ ವ್ಯಾಲ್ಯು ಸಿಸ್ಟಮ್ ಹಾಗೂ ದಶಮಾಂಶ ಪದ್ಧತಿಯನ್ನು ಕ್ರಿ ಪೂ 100ರಲ್ಲಿಯೇ ಭಾರತದಲ್ಲಿ ಬಳಸಲಾಗುತ್ತಿತ್ತು.

ಋಷಿಮುನಿಗಳು ಮಹಾತಪಸ್ವಿಗಳು ಸಿದ್ಧಪುರುಷರು ಹರಸಿದ ಕರ್ಮಭೂಮಿಯಿದು ಪ್ರಪಂಚಕ್ಕೆ ಆದರ್ಶಪ್ರಾಯರಾಗಿದ್ದ ಸ್ವಾಮಿ ವಿವೇಕಾನಂದ ಮಹಾತ್ಮ ಗಾಂಧೀಜಿಯವರಿಗೆ ಜನ್ಮ ನೀಡಿದ ಪುಣ್ಯ ಭೂಮಿ ಭಾರತ.

ಪ್ರಸ್ತುತ ಕೆಲ ದಶಕಗಳಿಂದ ಭಾರತ ಹಲವು ಘಟನಾವಳಿಗಳಿಗೆ ಸಾಕ್ಷಿಯಾಗಿದೆ ಪ್ರಪಂಚದ ಭೂಪಟದಲ್ಲಿ ಭಾರತೀಯರ ಸಾಧನೆ ನಮ್ಮ ಹೆಮ್ಮೆಯ ಕಿರೀಟಕ್ಕೆ ಮತ್ತೊಂದು ಗರಿಯನ್ನು ಸಿಕ್ಕಿಸಿದೆ ಮಹಿತಿ ತಂತ್ರಜ್ಞಾನದಲ್ಲಿ ಭಾರತ ಮುಂಚೂಣಿಯಲ್ಲಿದ್ದು ಪ್ರಪಂಚದ ಭೂಪಟದಲ್ಲಿ ವಿಶೇಷ ಸ್ಥಾನ ಕಲ್ಪಿಸಿದೆ. ಮಾಹಿತಿ ತಂತ್ರಜ್ಞಾನದಲ್ಲಿ ಬರೀ ಸಾಧನೆಯಷ್ಟೆ ಅಲ್ಲ ವಿದೇಶಿ ಮೂಲದ ಸಾಫ್ಟ್ ವೇರ್ ಕಂಪನಿಗಳಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಿದವರಲ್ಲಿ ಭಾರತೀಯರದ್ದೆ ಸಿಂಹಪಾಲು! ಹ್ಯುಲೆಟ್ ಪ್ಯಾಕರ್ಡ್ ನ ಜೆನರಲ್ ಮ್ಯಾನೇಜರ್ ರಾಜೀವ್ ಗುಪ್ತ. ಇಂದಿನ ಶೇಕಡ 90ರಷ್ಟು ಕಂಪ್ಯೂಟರ್ ಗಳು ಕಾರ್ಯನಿರ್ವಹಿಸುವ ಪೆಂಟಿಯಮ್ ಚಿಪ್ ಅನ್ನು ಕಂಡುಹಿಡಿದದ್ದು ವಿನೋದ್ ಧಾಮ್ ಫಚ್ರ್ಯೂನ್ ಪತ್ರಿಕೆಯ ಇತ್ತೀಚಿನ ವರದಿಗಳ ಪ್ರಕಾರ ಪ್ರಪಂಚದ ಮೂರನೇ ಶ್ರೀಮಂತ ವ್ಯಕ್ತಿ ವಿಪ್ರೋ ಸಂಸ್ಥೆಯ ಮುಖ್ಯಾಸ್ಥ ಅಜೀಂ ಪ್ರೇಮ್ ಜೀ. ಪ್ರಪಂಚದ ನಂ 1 ಅಂತರ್ಜಾಲ ವ್ಯವಸ್ಥೆ ಹಾಟ್ ಮೇಲನ್ನು ಹುಟ್ಟುಹಾಕಿದವರು ಭಾರತದ ಸಬೀರ್ ಭಾಟಿಯಾ.  ಅ,ಅ++ ಯುನಿಕ್ಸ್ ಎಂಬ ಗಣಕಯಂತ್ರ ಪ್ರೋಗ್ರಾಂ ಗಳನ್ನು ಕಂಡುಹಿಡಿದವರು ಅರುಣ್ ನೇತ್ರಾವಲಿ ಎಂಬ ಭಾರತೀಯ ಅಮೇರಿಕಾದ ಬೃಹತ್ ಬ್ಯಾಂಕ್ ಸಿಟಿ ಬ್ಯಾಂಕಿನ ಮೂವರು ಮುಖ್ಯಸ್ಥರಲ್ಲಿ ಇಬ್ಬರು ಭಾರತೀಯರು.

ಅಮೇರಿಕಾದಲ್ಲಿ 3.22 ದಶಲಕ್ಷ ಭಾರತೀಯರಿದ್ದಾರೆ ಅಂದರೆ ಅಮೇರಿಕಾ ಜನ ಸಂಖ್ಯೆಯ ಶೇಕಡ 1.5ರಷ್ಟು ಆದರೂ 3 8% ಅಮೇರಿಕಾದಲ್ಲಿರುವ ವೈದ್ಯರು ಭಾರತೀಯರು ಶೇ 12 ರಷ್ಟು ವಿಜ್ಞಾನಿಗಳು ಭಾರತೀಯರು, ನಾಸಾದಲ್ಲಿ ಕೆಲಸ ಮಾದುವ ಶೇ 36 ರಷ್ಟು ವಿಜ್ಞಾನಿಗಳು ಭಾರತೀಯರು ಮೈಕ್ರೋಸಾಫ್ಟ್ ನಲ್ಲಿ 34 ಶೇ ಇಂಜಿನಿಯರ್ಸ್‍ಗಳು ಭಾರತೀಯರು, ಅಮೇರಿಕಾದ ಐ.ಬಿ.ಎಂ ನಲ್ಲಿರುವ ಉದ್ಯೋಗಿಗಳಲ್ಲಿ ಶೇ 28 ರಷ್ಟು ಉದ್ಯೋಗಿಗಳು ಭಾರತೀಯರು ಇಂಟೆಲ್ ನಲ್ಲಿರುವ ಉದ್ಯೋಗಿಗಳಲ್ಲಿ ಶೇ 17 ರಷ್ಟು ಭಾರತೀಯರಿದ್ದಾರೆ, ಅಮೇರಿಕಾದಲ್ಲಿ ಜೆರಾಕ್ಸ್ ಉದ್ಯೋಗ ಮಾಡುವವರಲ್ಲಿ ಶೇ 13 ರಷ್ಟು ಭಾರತೀಯರಿದ್ದಾರೆ ಎಣಿಕೆಯನ್ನು ಕಲಿಸಿದ ಭಾರತೀಯರಿಗೆ ನಾವು ಚಿರಋಣಿಗಳು ಈ ಎಣಿಕೆ ಇಲ್ಲದಿದ್ದರೆ ಪ್ರಪಂಚದ ಯವುದೇ ವಿಜ್ಞಾನದ ಸಂಶೋಧನೆಗಳಿಗೆ ಮನ್ನಣೆ ಸಿಗುತ್ತಿರಲಿಲ್ಲ ಎಂದು ಭಾರತೀಯರ ಬಗ್ಗೆ ಹೆಮ್ಮೆ ವ್ಯಕ್ತ ಪಡಿಸುತ್ತಾ ಆಲ್ ಬರ್ಟ್ ಐನ್ಸ್ಟೀನ್ ಹೇಳಿದ್ದಾರೆ

feature-6

ಇತಿಹಾಸದಿಂದ ಹಿಡಿದು ಈವರೆಗೂ ಪ್ರಪಂಚದ ಭೂಪಟದಲ್ಲಿ ಭಾರತೀಯರ ಸಾಧನೆಯನ್ನು ಪಟ್ಟಿ ಮಾಡುತ್ತಾ ಹೋದರೆ ಅದು ಬೆಳೆಯುತ್ತಲೇ ಹೋಗುತ್ತದೆ. ಹಿಂದಿನ ನಮ್ಮ ಪೂರ್ವಜರು ಮಾಡಿದ ಸಾಧನೆಯನ್ನು ನೋಡಿದರೆ ನಾವು ಇಂದಿನ ಆಧುನಿಕ ಭಾರತದಲ್ಲಿ ಇನ್ನೂ ಹೆಚ್ಚಿನದನ್ನು ಸಾಧಿಸಬಹುದಲ್ಲದೇ ಶಕ್ತಿಯುತ ರಾಷ್ಟ್ರವಾಗಿ ಹೊರಹೊಮ್ಮಬಹುದು. ನಮ್ಮಲ್ಲಿ ಅಂತಹ ಶಕ್ತಿಯಿದೆ. ಹೆಚ್ಚಾಗಿ ನಮ್ಮ ಯುವಶಕ್ತಿಯನ್ನು ಉಪಯುಕ್ತವಾಗಿ ಬಳಸಿಕೊಂಡಲ್ಲಿ ಪ್ರಪಂಚದ ಭೂಪಟದಲ್ಲಿ ಸದಾ ಜಗಮಗಿಸುವ ಬೇರೆ ರಾಷ್ಟ್ರಗಳಿಗೆ ಮಾದರಿಯಾಗಬಹುದು.

ಪ್ರಕಾಶ್.ಕೆ.ನಾಡಿಗ್

ಶಿವಮೊಗ್ಗ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top