fbpx
god

ಎಲ್ಲರೂ ತಿಳಿದುಕೊಳ್ಳಬೇಕಾದ ‘ಓಂ’ಕಾರ ಒಳಾರ್ಥ!!!

ಪ್ರಣವ ಅಥವಾ `ಓಂ’ ಕಾರವು ಹಿಂದು ಧರ್ಮದ ಪವಿತ್ರ ಚಿಹ್ನೆ ಎಂದೇ ವಿಶ್ವಮಾನ್ಯ. `ಪ್ರಣವ’ ಎಂದರೆ ಭಗವಂತನನ್ನು ಪ್ರಭಾವಪೂರ್ಣವಾಗಿ ಪೂಜಿಸುವುದು, ಸದಾ ಪರಿಶುದ್ಧವಾಗಿರುವುದೆಂದರ್ಥ. ವೇದ, ಉಪನಿಷತ್ತು, ಭಗವದ್ಗೀತೆಯಲ್ಲಿ ಪ್ರಣವವನ್ನು ಅತಿ ಶ್ರೇಷ್ಠವೆಂದು ಉಲ್ಲೇಖಿಸಲಾಗಿದೆ. ಇದನ್ನು ಶ್ರದ್ಧಾಭಕ್ತಿಯಿಂದ ಧ್ಯಾನಿಸಿದರೆ ಎಂಥಾ ದುರಂತಗಳಿಂದಲೂ ಪಾರಾಗಬಹುದೆಂದು ಹೇಳಲಾಗುತ್ತದೆ. ಹಾಗಾಗೇ ಎಲ್ಲ ಅಷ್ಟೋತ್ತರ ಮಂತ್ರಗಳ ಪ್ರಾರಂಭ `ಓಂ’ ಕಾರದಿಂದ.

ಕಠೋಪನಿಷತ್ತಿನಲ್ಲಿ `ಓಂ’ ಎಂಬುದೇ ಪರಬ್ರಹ್ಮನೆಂದು ಯಮ ನಚಿಕೇತನಿಗೆ ಉಪದೇಶಿಸಿದನು. ಮಂಡಕೋಪನಿಷತ್ತಿನಲ್ಲಿ `ಓಂ’ ಜಪವನ್ನು ನಿರಂತರ ಮಾಡುವುದರಿಂದ ಆತ್ಮನನ್ನು ಪರಬ್ರಹ್ಮನೊಂದಿಗೆ ಐಕ್ಯ ಮಾಡಬಹುದೆನ್ನಲಾಗಿದೆ. ಗೀತೆಯಲ್ಲಿ ಕೃಷ್ಣ `ನಾನು’ ಶಬ್ದಗಳಿಗೆಲ್ಲ `ಓಂ’ಕಾರ ಎಂದಿದ್ದಾನೆ. ಎಲ್ಲ ಬಗೆಯ ಧಾರ್ಮಿಕ ಕಾರ್ಯಗಳು `ಓಂ’ಕಾರದಿಂದಲೇ ಆರಂಭವಾಗುತ್ತದೆ. ನಿರಂತರ `ಓಂ’ಕಾರ ಜಪದಿಂದ ಸಮಾಧಿ ಸ್ಥಿತಿ ಲಭಿಸುತ್ತದೆ.

`ಓಂ’ಕಾರದ ಅರ್ಥಭಗವಂತನ ಮೂರು ಕಾರ್ಯಗಳನ್ನು `ಓಂ’ಕಾರ ಒಳಗೊಂಡಿದೆ. ಅ+ಉ+ಮ ಸೇರಿ `ಓಂ’ ಎನಿಸುತ್ತದೆ. `ಅ’ ಪ್ರಾರಂಭ-ಸೃಷ್ಟಿ ಅದಿಮತ್ವವನ್ನು; `ಉ’ ಸ್ಥಿತಿ-ಪ್ರಗತಿ-ಉತ್ಕರ್ಷವನ್ನು; `ಮ’ ಅಂತ್ಯ-ಮಿತಿಯನ್ನು ಸೂಚಿಸುತ್ತದೆ. ಅ-ಎಚ್ಚರ(ಜಾಗೃತ), ಉ-ಕನಸು(ಸ್ವಪ್ನ), ಮ-ಆಳವಾದ ನಿದ್ರೆ(ಸುಷುಪ್ತಿ)ಯನ್ನು ನಿರ್ದೇಶಿಸುತ್ತದೆ. ಮೂರೂ ಒಂದಕ್ಕೊಂದು `ಓಂ’ಕಾರ ಮಂತ್ರ ಉಚ್ಚಾರ ಮಾಡುವುದರಿಂದ ಆಂತರಿಕ ಅಂಗಾಂಗ ಗಳಿಗೆ ಪ್ರಚೋದನೆ ದೊರೆಯುತ್ತದೆ. ಇದರಿಂದ ವಿಶೇಷ ತರಂಗಗಳ ಕಂಪನ ಗಳುಂಟಾಗುತ್ತವೆ. ಕಂಪನ ನರನಾಡಿಗಳನ್ನು ಆವರಿಸುತ್ತಿದ್ದಂತೆ ದಿವ್ಯ ತೇಜಸ್ಸು, ಆತ್ಮವಿಶ್ವಾಸ, ಧೈರ್ಯ ಹೆಚ್ಚುತ್ತದೆ. `ಓಂ’ಕಾರಕ್ಕೆ ನಮ್ಮ ಚಂಚಲಚಿತ್ತ ಮನಸ್ಸನ್ನು ಕೇಂದ್ರೀಕರಿಸುವ ಶಕ್ತಿ ಇದೆ ಎಂಬುದನ್ನು ವಿಜ್ಞಾನಿಗಳೂ ಒಪ್ಪಿದ್ದಾರೆ.

`ಓಂ’ ಸಂಸ್ಕøತ, ಹಿಂದಿ ಭಾಷೆ ಪದವೆಂದರೂ ಎಲ್ಲ ದೇಶ, ಕಾಲಗಳಲ್ಲಿಯೂ ಅರ್ಥವಾಗುವ ಸಂಕೇತ. ಈ ಮೂರೂ ಗೆರೆಗಳಲ್ಲಿ ಮೇಲಿನದು ಸಾತ್ವಿಕ, ಎರಡನೆಯದು ರಜೋ, ಮೂರನೆಯದು ತಮೋಗುಣ. ಈ ಮೂರು ಗುಣಗಳ ನಾಭಿಯಿಂದ ಪ್ರಕೃತಿ ಎನ್ನುವುದು ವ್ಯಾಪ್ತವಾಗಿ ಹೊರಬಂದಿರುವುದರ ಚಿಹ್ನೆ. ಎಲ್ಲ ಜೀವಿಗಳೂ ಈ ಮೂರೂ ಗುಣಗಳನ್ನು ಹೊಂದಿರುತ್ತವೆ.`ಓಂ’ಕಾರದಲ್ಲಿ ತ್ರಿಮೂರ್ತಿ ತತ್ವವಿದೆ. `ಓಂ’ಕಾರದಲ್ಲಿರುವ ಅ,ಉ,ಮ-ಕಾರಗಳು ಬ್ರಹ್ಮ, ವಿಷ್ಣು, ಮಹೇಶ್ವರರನ್ನು ಸಂಕೇತಿಸುತ್ತವೆ. ಇವುಗಳಿಂದಲೇ ಜಗತ್ತು ನಿರ್ಮಾಣವಾಗಿದೆ.

`ಓಂ’ಕಾರ ಪಠಿಸುವಾಗ `ಮ’ ನಾದ ಇರುತ್ತದೆ. ಈ ಬಿಂದುವನ್ನು ದಾಟಿದ ನಂತರ ಏನೂ ಇರುವುದಿಲ್ಲ. `ಓಂ’ಕಾರ ಉಚ್ಚಾರದ ಬಳಿಕ ಉಳಿಯುವುದ ಮೌನಸ್ಥಿತಿ. ಈ ಹಂತದಲ್ಲಿ ಪ್ರಜ್ಞೆಯ ಒಳಮುಖವೂ ಅಲ್ಲ, ಹೊರಮುಖವೂ ಅಲ್ಲ. ಅರಿವು ಮತ್ತು ಅರಿವಿನ ಅನುಪಸ್ಥಿತಿ ಮೀರಿರುತ್ತದೆ. ಶ್ರೀಶಂಕರರ ಭಾಷ್ಯದಲ್ಲಿ ಸೂರ್ಯನೇ ಸೃಷ್ಟಿಗೆ ಕಾರಣ. ಪ್ರಪಂಚ ಸೃಷ್ಟಿಸಿ, ಅದನ್ನು ಪ್ರವೇಶಿಸುವವನು. ಚರಾಚರ ಜಗತ್ತಿನಲ್ಲೆಲ್ಲ ಓತಪ್ರೋತವಾಗಿರುವವನೇ ಸೂರ್ಯಬ್ರಹ್ಮ. ವೇದವು `ಓಂ’ಕಾರವನ್ನು ಸರ್ವಶ್ರೇಷ್ಠ-ಜಪ-ತಪ-ಧ್ಯಾನವೆಂದಿದೆ. ಸಮಸ್ತ ಮಂತ್ರಗಳ ಶಿರೋಮಣಿ `ಓಂ’ಕಾರ. ಓಂಕಾರ ಸ್ಮರಣ, ಕೀರ್ತನ, ಶ್ರವಣ, ಜಪದಿಂದ ಮನುಷ್ಯನಿಗೆ ಪರಬ್ರಹ್ಮ ಪ್ರಾಪ್ತಿಯಾಗುತ್ತದೆ. ಬ್ರಹ್ಮಾಂಡದಲ್ಲಿ ಇರುವುದೆಲ್ಲವೂ `ಓಂ’ಕಾರ. ಭೂತ, ವರ್ತಮಾನ, ಭವಿಷ್ಯತ್‍ಗಳನ್ನು ಮೀರಿದ, ಕಾಲವೇ ಲಯವಾಗುವಂತಹ ಕಾಲಾತೀತ ಶಕ್ತಿ. ಸೃಷ್ಟಿ ಸ್ಥಿತವಾಗುವುದು, ಲಯವಾಗುವುದೂ `ಓಂ’ಕಾರವೇ. ಒಂದು ಲಯವಾದಾಗ ಇನ್ನೊಂದು ಸೃಷ್ಟಿಯಾಗಬೇಕು. ಎರಡೂ ಒಂದರೊಳಗೊಂದು ಬೆಸದುಕೊಂಡಿದೆ. ವಿಜ್ಞಾನಿಗಳು ಕೂಡ ಮಹಾಸ್ಫೋಟ ಎಂಬ ಲಯದಲ್ಲಿ ಸೃಷ್ಟಿಯನ್ನು ಕಂಡುಕೊಳ್ಳುತ್ತಾರೆ. ಇದರಿಂದ ಸೃಷ್ಟಿ ರಹಸ್ಯ ಭೇದಿಸಲಾಗದು; ಲಯವನ್ನು ಅರ್ಥ ಮಾಡಿಕೊಳ್ಳಬೇಕು. ಇದಕ್ಕೆ ಕಾಲಘಟ್ಟದಲ್ಲಿ ಆಗುವ ಬದಲಾವಣೆ ಬಗ್ಗೆ ಮನದಟ್ಟು ಮಾಡಿಕೊಳ್ಳಬೇಕು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top