ಭಕ್ತಾದಿಗಳು ದೇವಾಲಯಗಳಿಗೆ ಹೋಗುವಾಗ ತೆಂಗಿನಕಾಯಿಅಥವಾ ಬಾಳೆಹಣ್ಣು ತೆಗೆದುಕೊಂಡು ಹೋಗಿ ನೈವೇದ್ಯ ಮಾಡುತ್ತಾರೆ. ತೆಂಗು ಮತ್ತು ಬಾಳೆಹಣ್ಣನ್ನೇ ದೇವರಿಗೆ ಅರ್ಪಿಸುವುದು ಏಕೆಂದರೆಇವೆರಡೂ ಪೂರ್ಣಫಲಗಳಾಗಿದ್ದು, ಪವಿತ್ರ ಎನಿಸಿವೆ. ಇಂಥ ಪೂರ್ಣಫಲಗಳನ್ನು ದೇವರಿಗೆ ಅರ್ಪಿಸಿದಾಗ ಭಕ್ತಾದಿಗಳ ಅಪೇಕ್ಷೆ ನೆರವೇರುವುದು ಎಂಬ ಭಾವನೆಯೂ ಬೆಳೆದು ಬಂದಿದೆ.ಭೂಮಿಯಲ್ಲಿರುವ ಬಹುತೇಕಎಲ್ಲಾ ಗಿಡಮರಗಳು ಪಶು, ಪಕ್ಷಿ ಮತ್ತು ಮಾನವರುತಿಂದು ಬಿಸಾಡಿದ ಬೀಜಅಥವಾ ಹಿಕ್ಕೆಗಳಿಂದಲೇ ಬೆಳೆಯುತ್ತವೆ. ಹೀಗಾಗಿ ಇಂಥ ಬೀಜಗಳಿಂದ ಬೆಳೆದ ಗಿಡಮರಗಳ ಹಣ್ಣುಹಂಪಲಗಳು ಎಂಜಲಿನಿಂದ ಬೆಳೆದವು ಎಂದೇ ಲೆಕ್ಕ. ಹೀಗಾಗಿ ಈ ಫಲಗಳು ಪವಿತ್ರವೆನಿಸುವುದಿಲ್ಲ. ಇಂತಹ ಫಲಗಳನ್ನು ದೇವರಿಗೆ ಸಮರ್ಪಿಸುವುದು ಶ್ರೇಷ್ಠವಲ್ಲ ಎನ್ನಲಾಗುತ್ತದೆ. ಆದರೆ ತೆಂಗಿನಕಾಯಿ ಮತ್ತು ಬಾಳೆಹಣ್ಣು ಈ ವರ್ಗಗಳಿಗೆ ಸೇರದ ಪವಿತ್ರ ಫಲಗಳೆಂದು ಪರಿಗಣಿಸಲಾಗುತ್ತದೆ.
ತೆಂಗಿನಕಾಯಿ
ತೆಂಗಿನಕಾಯಿಯನ್ನು ಸಿಪ್ಪೆಯ ಸಮೇತ ಅಥವಾ ನೀರಿನಕುಂಭದಲ್ಲಿ ಒಂದು ತಿಂಗಳಿನವರೆಗೆ ಇಟ್ಟು ಭೂಮಿಯಲ್ಲಿ ಹೂತರೆಅದು ಮರವಾಗಿ ಬೆಳೆಯುತ್ತದೆ. ಆದ್ದರಿಂದ ಇದಕ್ಕೆಎಂಜಲು ಅನ್ವಯಿಸುವುದಿಲ್ಲ. ಎಳನೀರು ಅತ್ಯಂತ ಪವಿತ್ರ ಜಲವಾಗಿದೆ. ಈ ನೀರಿನಿಂದಲೇದೇವರಿಗೆ ನೈವೇದ್ಯ ಮಾಡುವುದು ಪರಿಶುದ್ಧ. ಫಲ ಪುಷ್ಪಗಳಿಗೆ ಸಿಂಪಡಿಸಿದರೆ ಅದೂ ಸಹ ಪವಿತ್ರವಾಗುವುದು. ಎಳನೀರು ದೇಹದತಾಪಮಾನ ನಿವಾರಿಸಿ ಶಾಂತವಾಗಿಸುತ್ತದೆ. ಕಾರಣ ಮಳೆನೀರಿಗಿಂತ ಎಳನೀರು ಪವಿತ್ರ ಜಲ.
ಬಾಳೆಹಣ್ಣು
ಬಾಳೆಹಣ್ಣು ಬೀಜದಿಂದ ಬೆಳೆಯದೇ ಕಂದಿನ ಸಹಾಯದಿಂದ ಬೆಳೆಯುತ್ತದೆ. ಕಂದಿನಿಂದಲೇಚಿಗುರಿಗಿಡವಾಗಿ ಫಲ ನೀಡುತ್ತದೆ. ಒಮ್ಮೆ ಫಲ ಬಿಟ್ಟ ಮೇಲೆ ಇದರ ಆಯುಷ್ಯ ಮುಗಿದು ಹೋಗುತ್ತದೆ. ಶೇಷವೆಂದರೆ ಆಯಸ್ಸು ಮುಗಿಸುವ ಮೊದಲು ಕಂದುಗಳನ್ನು ಮಾಡಿ ಸಸಿಗಳನ್ನು ಬೆಳೆಸಲಾಗುತ್ತದೆ. ಆದ್ದರಿಂದ ಬಾಳೆಹಣ್ಣು ಕೂಡಾ ಎಂಜಲಾಗದ ಫಲವಾಗಿದೆ.
ಈ ಕಾರಣಗಳಿಂದಲೇ ಬಾಳೆಹಣ್ಣು ಮತ್ತುತೆಂಗಿನ ಕಾಯಿದೇವರಿಗೆ ಅರ್ಪಿಸಲು ಶ್ರೇಷ್ಠವೆನಿಸಿವೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
