fbpx
Achivers

ಬ್ಯಾಂಕ್ ನಲ್ಲಿರುವ ಮರಾಠಿ/ತಮಿಳು ಭದ್ರಕೋಟೆ ಛಿದ್ರಗೊಳಿಸಿದ ಸಾಮಾನ್ಯ ಕನ್ನಡಿಗ (ರಿ)

ಬೆಂಗಳೂರಿನ ಉತ್ತರ ಭಾಗದಲ್ಲಿ ಸಾಮಾನ್ಯ ಕನ್ನಡಿಗ ಕೈಗೊಂಡಿರುವ ಕನ್ನಡ ಅಭಿಯಾನಕ್ಕೆ ಮತ್ತೊಂದು ಜಯ ಸಿಕ್ಕಿದೆ. ಡಾಲರ್ಸ್ ಕಾಲೋನಿ. ಆರ್.ಎಂ.ವಿ ಎರಡನೇ ಹಂತ ದಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಏಟಿಎಂ ನಲ್ಲಿ ಮರಾಠಿ ಯನು ತೆಗೆದುಹಾಕಿ ಕನ್ನಡ ಹಾಕಿದ್ದಾರೆ. ಒಂದೇ ಬಡಾವಣೆಯಲ್ಲಿ 4 ಬ್ಯಾಂಕ್ ಗಳಿಗೆ ಲಗ್ಗೆ ಇಟ್ಟಿರುವ ಸಾ.ಕ. ಇದುವರೆಗೂ, ಲಕ್ಷ್ಮಿ ವಿಲಾಸ್ ಬ್ಯಾಂಕ್ (ಸಂಜಯ ನಗರ), ಸಿಂಡಿಕೇಟ್ ಬ್ಯಾಂಕ್ (ಸಂಜಯ ನಗರ), ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಡಾಲರ್ಸ್ ಕಾಲೋನಿ) ಮತ್ತು ಮಲ್ಲೇಶ್ವರಂ ನಲ್ಲಿರುವ ಪಂಜಾಬ್ ಅಂಡ್ ಸಿಂಧ್ ಕೋ-ಆಪರೇಟಿವ್ ಬ್ಯಾಂಕ್ ನ ಏಟಿಎಂ ನಲ್ಲಿ ಕನ್ನಡ ತರುವುದರಲ್ಲಿ ಯಶಸ್ವೀಯಾಗಿದೆ.

ಸಾ.ಕ ತಂಡದ ಕಾರ್ಯಕರ್ತರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕಿನ ಹಿರಿಯ ಅಧಿಕಾರಿಗಳೊಡನೆ ನಿರಂತರ ಸಂಪರ್ಕವನ್ನಿಟ್ಟುಕೊಂಡು ಅವರ ಮೇಲೆ ತೀವ್ರ ಒತ್ತಡ ಮತ್ತು ಮಿಂಚಂಚೆ ಅಭಿಯಾನದ ಮೂಲಕ ಬ್ಯಾಂಕ್ ನಲ್ಲಿ ಕನ್ನಡೀಕರಣ ಮಾಡುವುದರಲ್ಲಿ ಯಶಸ್ಸು ಕಂಡಿದೆ. ಅಷ್ಟೇ ಅಲ್ಲದೆ, ಬ್ಯಾಂಕ್ ನ ಹಿರಿಯ ಅಧಿಕಾರಿಗಳಿಗೆ ಕರ್ನಾಟಕಾದ್ಯಂತ ವಿರುವ ಏಟಿಎಂ ಗಳ Audit ಮಾಡಲು ಅಧಿಕಾರಿಗಳಿಗೆ ಹೇಳಲಾಗಿದೆ. ಕನ್ನಡವಿಲ್ಲದಿರುವ ಏಟಿಎಂ, ಲಿಖಿತ ವ್ಯವಹಾರಗಳ ಅರ್ಜಿಗಳ ಬಗ್ಗೆಯೂ ಅಧಿಕಾರಿಗಳಿಗೆ, ಗ್ರಾಹಕ ಸೇವಾ ಕೇಂದ್ರದ ಸಿಬ್ಬಂದಿಗೆ ಮನವರಿಕೆ ಮಾಡಿಕೊಡಲಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top