fbpx
Achivers

ಮಾನವೀಯತೆ ಮೆರೆದ ದೆಹಲಿ ಪೊಲೀಸರು..!!

ಇಡೀ ಸಮಾಜದ ರಕ್ಷಣೆ ಮಾಡುವ ಜವಾಬ್ದಾರಿ ಪೊಲೀಸ್ ಇಲಾಖೆ ಮೇಲಿದೆ. ಶಾಂತಿ ಸುವ್ಯವಸ್ಥೆ ಪಾಲನೆ, ಸಾರ್ವಜನಿಕರ ಆಸ್ತಪಾಸ್ತಿ ರಕ್ಷಣೆ ಮಾಡುವ ಜವಾಬ್ದಾರಿ ಇಲಾಖೆ ಮೇಲಿದೆ. ಪ್ರಾಣದ ಹಂಗು ತೊರೆದು ಕೆಲಸ ಮಾಡುವವರು ಪೊಲೀಸರು. ದೆಹಲಿ ಪೊಲೀಸರು ಬೀದಿಯಲ್ಲಿ ಸಿಕ್ಕಿದ ಹೆಣ್ಣು ಮಗು ದತ್ತು ಪಡೆದು ಮಾನವೀಯತೆಯಲ್ಲೂ ಮೇಲುಗೈ ತೋರಿಸಿದ್ದಾರೆ.

police

ಅದು ಒಂದೂ ವರ್ಷವೂ ಆಗದ ಹಸುಗೂಸು. ಅದೂ ಹೆಣ್ಣು ಮಗು. ನಿರ್ಮಾಣ ಹಂತದಲ್ಲಿದ್ದ ಫ್ಲೈ ಓವರ್ ಕೆಳಗೆ ಅನಾಥವಾಗಿ ಬಿದ್ದಿದ್ದ ಮಗು ಈಗ ಆಸ್ಪತ್ರೆಯಲ್ಲಿದೆ. ವೈದ್ಯರು ಮಗುವಿನ ಆರೈಕೆ ಮಾಡುತ್ತಿದ್ದರೂ ಅದರ ಆರೋಗ್ಯ ವಿಚಾರಿಸಲು ಬಂದು ಹೋಗುತ್ತಿರುವವರು ದೆಹಲಿ ಪೊಲೀಸರು ಮಾತ್ರ!

ಹೌದು, ಮಂಗಳವಾರ ರಾತ್ರಿ ೧ ಗಂಟೆ ಸುಮಾರಿಗೆ ಅಪರಿಚಿತರೊಬ್ಬರು ಫುಟ್‌ಪಾತ್‌ನಲ್ಲಿ ಮಗು ಇದೆ. ಬಂದು ನೋಡಿ ಎಂದು ಕರೆ ಮಾಡಿ ತಿಳಿಸಿದರು. ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಮಗುವನ್ನು ತಂದು ಆಸ್ಪತ್ರೆಗೆ ದಾಖಲಿಸಿದರು. ಇದರ ತಂದೆ-ತಾಯಿ ಯಾರು ಅಂತನೇ ಗೊತ್ತಿಲ್ಲ. ಸದ್ಯಕ್ಕೆ ದೆಹಲಿ ಪೊಲೀಸರು ಮಗುವನ್ನು ದತ್ತು ಪಡೆದಿದ್ದು, ಪ್ರತಿದಿನ ಆಸ್ಪತ್ರೆಗೆ ಭೇಟಿ ನೀಡಿ ಮಗುವಿನ ಆರೋಗ್ಯ ವಿಚಾರಿಸುತ್ತಿದ್ದಾರೆ.

ಮಗುವಿಗೆ ‘ಸ್ವಾದ’ ಎಂದು ನಾಮಕರಣ ಮಾಡಲಾಗಿದೆ. ಪೊಲೀಸರು ಇಷ್ಟಕ್ಕೆ ಸುಮ್ಮನಾಗಿಲ್ಲ. ಮಗುವಿನ ಹೆತ್ತವರ ಪತ್ತೆಗೆ ತನಿಖೆಯನ್ನೂ ನಡೆಸುತ್ತಿದ್ದಾರೆ. ಮಗು ಸಿಕ್ಕಿದ ಜಾಗದಲ್ಲಿ ಬ್ಯಾಗ್ ಪತ್ತೆಯಾಗಿದ್ದು, ಅದರ ಸುಳಿವು ಆಧರಿಸಿ ತನಿಖೆ ಚುರುಕುಗೊಳಿಸಿದ್ದು, ಹೆಚ್ಚಿನ ವಿವರ ಬಹಿರಂಗಪಡಿಸಲು ನಿರಾಕರಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top