ದೇಶದಲ್ಲೇ ಅತ್ಯಂತ ಕಡಿಮೆ ದರದ ಸೇವೆ ಒದಗಿಸುವ ಭರವಸೆಯೊಂದಿಗೆ ಅಖಾಡಕ್ಕೆ ಇಳಿದ ರಿಲಾಯನ್ಸ್ ಒಡೆತನದ ಜಿಯೊಗೆ ಪ್ರತಿಸ್ಪರ್ಧಿಗಳ ವಿರುದ್ಧದ ಮೊದಲ ಸಮರದಲ್ಲಿ ಜಯಭೇರಿ ಬಾರಿಸಿದೆ.
ತರಂಗಾಂತರ ಪ್ರಸಾರದಲ್ಲಿ ಹೊಂದಾಣಿಕೆಗೆ ಪ್ರತಿಸ್ಪರ್ಧಿಗಳು ಸಹಕರಿಸದೇ ಇದ್ದಿದ್ದರಿಂದ ಜಿಯೊ 4ಜಿ ಡಾಟಾ ದೇಶದಲ್ಲೇ ಅತ್ಯಂತ ಕಳಪೆ ಡೌನ್‌ಲೋಡಿಂಗ್ ಮತ್ತು ಅಪ್‌ಲೋಡಿಂಗ್ ಎಂಬ ಆರೋಪಕ್ಕೆ ಗುರಿಯಾಗಿತ್ತು. ಅದರಲ್ಲೂ ಕಳೆದೆರಡು ದಿನಗಳಿಂದ ಜಿಯೋ 4ಜಿ ಡಾಟಾ ತೀರಾ ಕಳಪೆಯಾಗಿದ್ದರಿಂದ ಭಾರೀ ಚರ್ಚೆಗೆ ಗುರಿಯಾಗಿತ್ತು.
ಈ ಹಿನ್ನೆಲೆಯಲ್ಲಿ ಟೆಲಿಕಾಮ ರೆಗ್ಯುಲೆಟರಿ ಅಥಾರಟಿ ಆಫ್ ಇಂಡಿಯಾ (ಟ್ರಾಯ್) ಹಾಗೂ ಪ್ರಧಾನ ಮಂತ್ರಿಗಳ ಕಚೇರಿಗೆ ರಿಲಾಯನ್ಸ್ ದೂರು ಸಲ್ಲಿಸಿತ್ತು. ದಾಖಲೆಗಳ ಪರಿಶೀಲನೆ ನಡೆಸಿದ ಟ್ರಾಯ್ ಜಿಯೊ 4ಜಿ ಡಾಟಾ ಡೌನ್‌ಲೋಡಿಂಗ್ ದೇಶದಲ್ಲೇ 5ನೇ ಸ್ಥಾನಕ್ಕೆ ಕುಸಿದಿದ್ದರೆ, ಅಪ್‌ಲೋಡಿಂಗ್ 6ನೇ ಸ್ಥಾನ ಪಡೆದಿದ್ದನ್ನು ಪತ್ತೆ ಹಚ್ಚಿತು. ಅದರಲ್ಲೂ ದೇಶದ ಪ್ರಮುಖ ನಗರಗಳಲ್ಲಿ ಈ ದುಸ್ಥಿತಿಗೆ ಪ್ರತಿಸ್ಪರ್ಧಿಗಳ ಕಂಪನಿಗಳ ಒಳಸಂಚು ಕಾರಣ ಎಂಬುದು ಪತ್ತೆಯಾಗಿತ್ತು.
ವೇಗಪತ್ತೆ ಹೇಗೆ ?
ಇತ್ತೀಚೆಗಷ್ಟೇ ಟ್ರಾಯ್ ಮೈಸ್ಪೀಡ್ ಎಂಬ ವೆಬ್‌ಸೈಟ್ ಅಳವಡಿಸಿಕೊಂಡಿದ್ದು, ಇದರಲ್ಲಿ ಪಾನ್ ಇಂಡಿಯಾ ೪ಜಿ ವೇಗದ ಪರಾಮರ್ಶೆ ನಡೆಸಲಾಯಿತು. ಇದರಲ್ಲಿ ಜಿಯೊ ಸಂಸ್ಥೆಯ 4ಜಿ ತರಂಗಾಂತರದ ವೇಗ 6.2 ಎಂಬಿಪಿಎಸ್ ಆಗಿದ್ದು, ಇದು ಇತರ ಕಂಪನಿಗಳಿಗೆ ಹೋಲಿಸಿದರೆ 5ನೇ ಸ್ಥಾನದಲ್ಲಿದೆ. ಅಪ್‌ಲೋಡ್ ವೇಗ 2.6ಎಂಬಿಪಿಎಸ್ ಆಗಿದ್ದು 6ನೇ ಸ್ಥಾನ ಪಡೆದಿದೆ. ಸಾಮಾನ್ಯ ತರಂಗಂತಾರದಲ್ಲಿ 2.` ಎಂಬಿಪಿಎಸ್ ಆಗಿದ್ದು, ಅದರ ಸಮೀಪ ಇದೆ.
3000 ಕೋಟಿ ದಂಡ
ಜಿಯೊ ಸಂಸ್ಥೆಯ ದೂರಿನ ವಿಚಾರಣೆ ನಡೆಸಿದ ಟ್ರಾಯ್, ಪ್ರತಿಸ್ಪರ್ಧಿ ಸಂಸ್ಥೆಗಳು ಸ್ಪರ್ಧಾ ಮನೋಭಾವ ತೋರದೇ ಒಳಸಂಚು ರೂಪಿಸಿದ್ದನ್ನು ಪತ್ತೆ ಹಚ್ಚಿದ್ದು, ಏರ್‌ಟೆಲ್, ವೋಡಾಫೋನ್, ಐಡಿಯಾ ಸೇರಿದಂತೆ ಪ್ರತಿಸ್ಪರ್ಧಿ ಕಂಪನಿಗಳಿಗೆ ತಲಾ 50 ಕೋಟಿಯಂತೆ ಒಟ್ಟಾರೆ 3000 ಕೋಟಿ ರೂ. ದಂಡ ವಿಧಿಸಿದೆ.
ಪ್ರತಿಸ್ಪರ್ಧಿ ಟೆಲಿಕಾಂ ಕಂಪನಿಗಳ ಅಸಹಕಾರದಿಂದ ಜಿಯೊದ ಸುಮಾರು 52 ಕೋಟಿ ಕರೆಗಳು ‘ಕಾಲ್‌ಡ್ರಾಪ್’ ಆಗಿವೆ ಎಂಬ ಅಂಕಿ-ಅಂಶ ನೀಡಿತು. ನಮಗೆ ಸೂಕ್ತ ನೆಟ್‌ವರ್ಕ್ ನೀಡದ ಕಾರಣ ಈ ತೊಂದರೆಗೆ ಕಾರಣ ಎಂದು ಸಂಸ್ಥೆ ಆರೋಪಿಸಿತ್ತು.
ರಿಲಾಯನ್ಸ್ ಕಂಪನಿ ಗ್ರಾಹಕರನ್ನು ಸೆಳೆಯಲು ವಾಯ್ಸ್ ಕಾಲ್ ಸೇವೆಯನ್ನು ಜೀವಮಾನದ ಅವಧಿಗೆ ನೀಡುತ್ತಿದೆ. ಇದು ಉತ್ತಮ ಸ್ಪರ್ಧೆ ಅಲ್ಲ ಎಂದು ಪ್ರತಿಸ್ಪರ್ಧಿ ಕಂಪನಿಗಳು ವಾದಿಸಿದವು. ಆದರೆ ಈ ವಾದವನ್ನು ಅಲ್ಲಗಳೆದ ಟ್ರಾಯ್, ಕಡಿಮೆ ಬೆಲೆಗೆ ಸೇವೆ ನೀಡುವುದರಿಂದ ಗ್ರಾಹಕರಿಗೆ ಲಾಭ ಎಂದು ಹೇಳಿತು. ಇದರಿಂದ ಪ್ರಕರಣ ಜಿಯೊ ಪರ ಬರುವಂತಾಯಿತು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
