fbpx
Awareness

ಬಂಗಾರದ ಬೆಳೆ ಪಪ್ಪಾಯ

ಪಪ್ಪಾಯ ಒಂದು ಮಹತ್ವದ ಶೀಘ್ರ ಫಲ ಕೊಡಿವ ಹಣ್ಣಿನ ಬೆಳೆ. ಈ ಹಣ್ಣು ದೇಹ ಪೋಷಣೆಗೆ ‘ಎ’ ಮತ್ತು ‘ಸಿ’ ಜೀವಸತ್ವಗಳಿಂದ ಸಂಪದ್ಭರಿತವಾಗಿದೆ. ಪಪೇನ್ ಎಂಬ ಬೆಲೆಬಾಳುವ ಕಿಣ್ವವನ್ನು ಪಪಾಯಿ ಕಾಯಿಯ ಹಾಲಿನಿಂದ ತಯಾರಿಸುತ್ತಾರೆ. ಈ ಪಪೇನನ್ನು ಔಷಧಿಗಳ ತಯಾರಿ ಮತ್ತು ಇನ್ನಿತರ ಹಲವಾರು ಉದ್ದೇಶಗಳಿಗಾಗಿ ಬಳಸುತ್ತಾರೆ.

Papaya Trees

ಹವಾಗುಣ

ತೇವಾಂಶವಿರುವ ಹಾಗೂ ಬಿಸಿ ವಾತಾವರಣದಲ್ಲಿ ಚೆನ್ನಾಗಿ ಬೆಳೆಯುತ್ತದೆ. ಹೆಷ್ಷಿನ ಮಳೆ ಮತ್ತು ಜೌಗು ಪ್ರದೇಶಗಳು ಈ ಬೆಳೆಗೆ ಸೂಕ್ತವಲ್ಲ. ಜೂನ್-ಜುಲೈ ತಿಂಗಳುಗಳು ನಾಟಿ ಮಾಡಲು ಸೂಕ್ತ.

ಮಣ್ಣು

ಇದನ್ನು ಹಲವು ವಿಧದ ಮಣ್ಣುಗಳಲ್ಲಿ ಬೆಳೆಯಬಹುದು. ಚೆನ್ನಾಗಿ ನೀರು ಬಸಿದು ಹೋಗುವಂತಹ ಮಧ್ಯಮ, ಕಪ್ಪು ಮಣ್ಣಿನಿಂದ ಹಿಡಿದು ಕೆಂಪುಗೋಡು ಮಣ್ಣು ಈ ಬೆಳೆಗೆ ಸೂಕ್ತ. ನೀರು ನಿಲ್ಲುವಂತಹ ತಗ್ಗು ಪ್ರದೇಶಗಳು ಮತ್ತು ಕಪ್ಪು ಭೂಮಿ ಈ ಬೆಳೆಗೆ ಯೋಗ್ಯವಲ್ಲ.

ತಳಿಗಳು

1. ಕೂರ್ಗ್ ಹನಿಡ್ಯೂ: ಹಣ್ಣುಗಳು ಉದ್ದವಾಗಿದ್ದು ಸುವಾಸನೆಯಿಂದ ಕೂಡಿವೆ. ಹನಿಡ್ಯೂ ತಳಿಯಿಂದ ಆಯ್ಕೆ ಮಾಡಿ ಅಭಿವೃದ್ಧಿಪಡಿಸಿದ ತಳಿಯಾಗಿದ್ದು ಅಧಿಕ ಇಳುವರಿ ಕೊಡುತ್ತದೆ. ಈ ತಳಿಯಲ್ಲಿ ಹೆಣ್ಣು ಮತ್ತು ದ್ವಿ ಲಿಂಗಕ್ಕೆ ಸೇರಿದ ಎರಡು ತರದ ಹೂಗಳು ಮಾತ್ರ ಇರುತ್ತವೆ.

2. ವಾಷಿಂಗ್‍ಟನ್: ಗಿಡಗಳು ಬಹಳ ಗಡುಸಾಗಿದ್ದು ಕಾಂಡದ ಮೇಲೆ ಮತ್ತು ಹಣ್ಣುಗಳ ಹತ್ತಿರ ದಟ್ಟ, ನೀಲಿ ಬಣ್ಣದ ಉಂಗುರಗಳಿರುತ್ತವೆ. ಹಣ್ಣುಗಳು ದುಂಡಗೆ ಹಾಗೂ ಅಂಡಾಕಾರವಾಗಿದ್ದು ದೊಡ್ಡಗಾತ್ರ ಹೊಂದಿರುತ್ತವೆ. ಇದರಲ್ಲಿ ಗಂಡು ಮತ್ತು ಹೆಣ್ಣು ಹೂ ಬಿಡುವ ಪ್ರತ್ಯೇಕ ಗಿಡಗಳಿರುತ್ತವೆ. ಪೂರ್ತಿ ಹಣ್ಣಾದಾಗ ಹಣ್ಣುಗಳು ಆಕರ್ಷಕ ಹಳದಿ ಬಣ್ಣ ಪಡೆಯುತ್ತವೆ.

3. ಸೂರ್ಯ: ಆನ್‍ಲೈನ್ ಸೋಲೊ ಮತ್ತು ಪಿಂಕ್ ಪ್ಲೆಸ್ ಸ್ವೀಟ್ ತಳಿಗಳನ್ನು ಸಂಕರರಣಗೊಳಿಸಿ ಈ ತಳಿಯನ್ನು ಅಭಿವೃದ್ಧಿಪಡಿಸಲಾಗಿದೆ. ಈ ತಳಿಯಲ್ಲಿ ಹೆಣ್ಣು ಮತ್ತು ಉಭಯ ಲಿಂಗಕ್ಕೆ ಸೇರಿದ ಎರಡು ತರದ ಹೂಗಳು ಮಾತ್ರ ಇವೆ. ಹಣ್ಣು 600-800 ಗ್ರಾಂ ಇದ್ದು ತಿರುಳು ಕೆಂಪಗಿರುತ್ತದೆ. ಸಿಹಿಯಿಂದ ಕೂಡಿದ್ದು ಅತ್ಯಂತ ರುಚಿಕರ ವಾಗಿರುತ್ತದೆ. ಹಣ್ಣನ್ನು ಕೆಲವು ದಿನಗಳವರೆಗೆ ಇಡಬಹುದು. ಹಣ್ಣು ಅಂಡಾಕಾರದಲ್ಲಿರುತ್ತದೆ.

4. ಸೊಲೊ: ಹಣ್ಣುಗಳ ಗಾತ್ರ ಚಿಕ್ಕದ್ದು. ತಿರುಳು ದಪ್ಪ ಕೆಮಪು ಬಣ್ಣದಿಂದ ಕೂಡಿದ್ದು ಬಹಳ ರುಚಿಕರವಾಗಿರುತ್ತದೆ. ಹಣ್ಣನ್ನು ಕೆಲವು ದಿನಗಳವರೆಗೆ ಇಡಬಹುದು. ಹಣ್ಣು ಅಂಡಾಕರದಲ್ಲಿದ್ದು ತಿರುಳು ಕೆಂಪು ಬಣ್ಣದಿಂದ ಕೂಡಿರುತ್ತದೆ.

5. ಕೋ-1: ಗಿಡಗಳು ಗಿಡ್ಡವಾಗಿದ್ದು ಭೂಮಿಯಿಂದ 1.5 ಮೀಟರ್ ಎತ್ತರದೊಳಗೆ ಹಣ್ಣು ಕೊಡುತ್ತವೆ. ಹಣ್ಣುಗಳು ಸಾಧಾರಣ ಗಾತ್ರ ಹೊಂದಿದ್ದು ಸಿಹಿ ಯಾಗಿರುತ್ತದೆ. ಇದರಲ್ಲಿ ಹೆಣ್ಣು ಮತ್ತು ಗಂಡು ಹೂ ಕೊಡುವ ಗಿಡಗಳು ಬೇರೆ ಬೇರೆಯಾಗಿ ರುತ್ತವೆ.

6. ಕೋ-2: ಈ ತಳಿ ಪೆಪೇನ್ ತಳಿಗೆ ಬಹಳ ಸೂಕ್ತವಾಗಿದೆ.

ಸಸ್ಯಾಭಿವೃದ್ಧಿ

ಪಪ್ಪಾಯ ಸಸ್ಯಗಳನ್ನು ಕಡ್ಡಾಯವಾಗಿ ಪಾಲಿಥೀನ್ ಚೀಲಗಳಲ್ಲಿ ಬೆಳೆಸಬೇಕು. ಯಾವುದೇ ಕಾರಣಕ್ಕೂ ಮಡಿಗಳಲ್ಲಿ ಬೆಳೆಸಬಾರದು. 5 ಸೆಂ.ಮೀ.*10 ಸೆಂ.ಮೀ ಅಥವಾ 6 ಸಂ.ಮೀ * 12 ಸೆಂ.ಮೀ ಅಳತೆಯ ಚಿಕ್ಕ ಪಾಲಿಥೀನ್ ಚೀಲಗಳಲ್ಲಿ ಹರಡಿ ಹಿಡಿದ ಮಣ್ಣು, ಮರಳು ಹಾಗೂ ಗೊಬ್ಬರಗಳನ್ನು ಸಮ ಪ್ರಮಾಣದಲ್ಲಿ ಬೆರೆಸಿ ಮೇಲ್ಭಾಗದಲ್ಲಿ 2 ಸೆಂ.ಮೀ ಬಿಟ್ಟು ತುಂಬಬೇಕು. ಮಣ್ಣಿನ ಮಿಶ್ರಣದ ಬದಲು ಚೆನ್ನಾಗಿ ಹದಗೊಂಡ ತೆಂಗಿನ ಪುಡಿ ಬಳಸಬಹುದಾಗಿದೆ. ಪ್ರತಿ ಚೀಲಕ್ಕೆ ಒಂದರಂತೆ ಬೀಜವನ್ನು ಆಳದಲ್ಲಿ ನಾಟಿ ಮಾಡಬೇಕು.

ಚೀಲಗಳನ್ನು ಸೂರ್ಯನ ಬಿಸಿಲಿನಡಿ ಇಡಬೇಕು. ಹಸಿರು ಮನೆಗಳಲ್ಲಿಯೂ ಸಹ ಸಸಿಗಳನ್ನು ಬೆಳೆಸಬಹುದಾಗಿದೆ. ಯಾವುದೇ ಕಾರಣಕ್ಕೂ ಸಸಿಗಳನ್ನು ನೆರಳಿನಲ್ಲಿ ಬೆಳೆಸಬಾರದು. ಬೀಜಗಳನ್ನು ನಾಟಿ ಮಾಡಿದ ನಂತರ ಚೀಲಗಳನ್ನು ಶೇ.0.2 ಕ್ಯಾಪ್ಟಾನ್ ದ್ರಾವಣದಿಂದ ನೆನಸಬೇಕು. ನಂತರ ಪ್ರತಿದಿನ ನಿಯಮಿತವಾಗಿ ನೀರು ಹಾಕುತ್ತಾ ಇದ್ದಲ್ಲಿ 45-50 ದಿನಗಳಲ್ಲಿ ಸಸಿಗಳು 12-50 ಸೆಂ.ಮೀ ಬೆಳೆದು ನಾಟಿ ಮಾಡಲು ತಯಾರಾಗುತ್ತವೆ.

ನಾಟಿ ಮಾಡುವುದು

ಬೆಳೆ ಪ್ರದೇಶವನ್ನು ಉಳುಮೆ ಮಾಡಿ ಸಿದ್ಧಪಡಿಸಿಕೊಳ್ಳಬೇಕು. ಅರ್ಧ ಘನ ಮೀಟರ್ ಗಾತ್ರದ ಗುಣಿಗಳನ್ನು ತಯಾರಿಸಿ ಅವುಗಳಲ್ಲಿ ಮೇಲ್ಮಣ್ಣು ಮತ್ತು ಕಾಂಪೋಸ್ಟ್‍ಗಳ ಮಿಶ್ರಣವನ್ನು ಹಾಕಿ ತುಂಬಬೇಕು. ಮಣ್ಣು ಮತ್ತು ಹವಾಗುಣ ಕ್ಕನುಸರಿಸಿ 5-7 ದಿನಗಳ ಅಂತರದಲ್ಲಿ ನೀರನ್ನು ಒದಗಿಸಿ ಪ್ರಾರಂಭದಲ್ಲಿ 6-8 ತಿಂಗಳುಗಳ ತನಕ ತರಕಾರಿ ಮತ್ತು ದ್ವಿದಳ ಧಾನ್ಯಗಳನ್ನು ಅಂತರ ಬೆಳೆಗಳಾಗಿ ಬೆಳೆಯಬಹುದು. ಶಿಫಾರಸ್ಸು ಮಾಡಿದ ಪ್ರಮಾಣದ ರಸಗೊಬ್ಬರಗಳನ್ನು ನಾಟಿ ಮಾಡಿದ ಎರಡನೇ ತಿಂಗಳಿನಿಂದ ಪ್ರತಿ ಎರಡು ತಿಂಗಳಿಗೊಮ್ಮೆ ಆರು ಕಂತುಗಳಲ್ಲಿ ಒದಗಿಸಿ ಮಣ್ಣಿನಲ್ಲಿ ಚೆನ್ನಾಗಿ ಬೆರೆಸಬೇಕು. ಹನಿ ನೀರಾವರಿ ಅಳವಡಿಸಿದರೆ ಸಾಕಷ್ಟು ನೀರನ್ನು ಉಳಿಸಬಹುದು.

ರೋಗಗಳು

ಚಿಬ್ಮು ರೋಗ( ಅಂಥ್ರಾಕ್ಲೋಸ್)ಬುಡಕೊಳೆ ರೋಗ ಉಂಉರ ಚುಕ್ಕೆ, ನಂಹುರೋಗ ಮೊಸಾಯಿಕ್ ನಂಜುರೋಗ/ಎಲೆ ಮುರುಡು ರೋಗ ಮತ್ತು ಬೂದಿ ರೋಗ

1. ಚಿಮ್ಮುರೋಗದ ಬಾಧೆ ಕಂಡು ಬಂದಾಗ 2 ಗ್ರಾಂ ಪ್ರೊಫಿನೆಟ್ 1 ಗ್ರಾಂ ಕಾರ್ಬೆಂಡಿಜಿಂ ಅಥವಾ 1 ಗ್ರಾಂ ಫಯೋಫಿನೇಟ್ ಮಿಥೈಲ್ ಪ್ರತಿ ಲೀಟರ್ ನೀರಿನಲ್ಲಿ ಕರಗಿಸಿ ಸಿಂಪಡಿಸಿ.

2. ಬುಡ ಕೊಳೆ ರೋಗದ ನಿಯಂತ್ರಣಕ್ಕಾಗಿ ನೀರು ಬಸಿದು ಹೋಗುವಂತೆ ನೋಡಿಕೊಳ್ಳಿ, ಭಮಿಗೆ ಶೇ.2ರ ಬೋಡೋ ದ್ರಾವಣವನ್ನು ಗಿಡಗಳ ಸುತ್ತಲೂ ಹಾಕಬೇಕು. ಅಥವಾ 2 ಗ್ರಾಂ ಮೆಟಲಾಕ್ಸಿಲ್ ಮ್ಯಾಂಕೊಜೆಬ್ ಅಥವಾ ಸೈಮಾಕ್ಸೋನಿಲ್ ಮ್ಯಾಂಕೊಜೆಬ್ ಒಂದು ಲೀಟರ್ ನೀರಿನಲ್ಲಿ ಮಿಶ್ರ ಮಾಡಿ ಗಿಡದ ಸುತ್ತಲೂ ಹಾಕಬೇಕು.

3. ಉಂಗುರ ಚುಕ್ಕೆ ನಂಜುರೋಗದ ಹತೋಟಿಗಾಗಿ ರೋಗರಹಿಒತ ಸಸಿಗಳನ್ನು ನಾಟಿಗಾಗಿ ಬಳಸಿ, ಬಾಧೆಗೊಳಗಾದ ಸಸಿ ಗಡಿಗಳನ್ನು ಕೂಡಲೇ ಕಿತ್ತು ನಾಶಪಡಿಸಿ, ನಂತರ ಅಂತರವ್ಯಾಪ್ತಿ ಕೀಟ ನಾಶಕಗಳಾದ 1.7 ಮಿ.ಮೀ ಡೈಮಿಥೋಯೇಟ್ ಅಥವಾ 1.5 ಮಿ.ಲೀ ಆಕ್ಸಿಡೆಮೆಟಾನ್ ಮಿಥೈಲ್ ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಿ.

4. ನಾಟಿ ಮಾಡುವಾಗ ಮೊಸಾಯಿಕ್ ನಂಜು ರೋಗ ಮತ್ತು ಎಲೆ ಮುರುಟು ರೋಗದಿಂದ ಮುಕ್ತವಾದ ಸಸಿಗಳನ್ನು ಬಳಸಿ ನಂಜುರೋಗ ಬಾಧೆಗೊಳಗಾದ ಸಸಿ ಗಿಡಗಳನ್ನು ಕೂಡಲೇ ಕಿತ್ತು ನಾಶಗೊಳಿಸಿ.

5. ಬೂದಿ ರೋಗ ಮತ್ತು ಜೇಡ ನುಸಿಯ ಹತೋಟಿಗಾಗಿ 3 ಗ್ರಾಂ ನೀರಿನಲ್ಲಿ ಕರಗುವ ಗಂದಕ ಅಥವಾ ಪ್ರತಿ ಲೀಟರ್ ನೀರಿಗೆ 1 ಗ್ರಾಂ ಕಾರ್ಬೆಂಡಪೆಂ ಮತ್ತು 2.5 ಮಿ.ಲೀ ಟ್ರೈಡೆಮಾರ್ಫ್ ಬೆರೆಸಿ ಸಿಂಪಡಿಸಿ.

ಕೀಟಗಳು

ಜೇಡರ ನುಸಿ: ಜೇಡರ ನುಸಿಯ ನಿಯಂತ್ರಣಕ್ಕಾಗಿ ಬಾಧೆಗೆ ಒಳಗಾದ ಎಲೆಗಳನ್ನು ತೆಗೆದು ಸುಟ್ಟುಹಾಕಿ 2.5 ಮಿ.ಲೀ ಡೈಕೋಫಾಲ್ 18.5 ಗ್ರಾಂ ನೀರಿನಲ್ಲಿ ಬೆರೆಸಿ ಸಿಂಪಡಿಸಿ ಎಲೆಗಳ ತಳಭಾಗವನ್ನು ಸರಿಯಾಗಿ ತೋಯುವಂತೆ ಸಿಂಪಡಿಸಿ.

ಕೊಯ್ಲು

ನಾವು ಮಾಡಿದ 9-10 ತಿಂಗಳುಗಳಲ್ಲಿ ಹಣ್ಣುಗಳು ಕೊಯ್ಲಿಗೆ ಸಿದ್ದವಾಗುತ್ತವೆ. ವರ್ಷದ ಎಲ್ಲ ಕಾಲಗಳಲ್ಲೂ ಹಣ್ಣುಸಿಗುತ್ತದೆ.

how-to-grow-papaya

ಇಳುವರಿ

ಪ್ರತಿ ಹೆಕ್ಟೇರಿಗೆ 75-100 ಟನ್‍ಗಳಷ್ಟು ಇಳುವರಿ ಸಿಗುತ್ತದೆ. ಪಪ್ಪಾಯ ಗಿಡಗಳ ಆರ್ಥಿಕ ವಯಸ್ಸು 3 ವರ್ಷ. ಪಪೇನ್ ತಯಾರಿಸಲೂ ಗಿಡಗಳನ್ನು ಬೆಳೆದರೆ ಪ್ರತಿ ವರ್ಷ ಪ್ರತಿ ಗಿಡದಿಂದ 500-700ಗ್ರಾಂ ಕಚ್ಚಾ ಪೆಪೇನ್ ಸಿಗುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top