fbpx
Tech

ವೀಡಿಯೋ ಕಾಲಿಂಗ್‍ನತ್ತ ವಾಟ್ಸ್ಯಾಪ್ ಚಿತ್ತ..!

ಜನಪ್ರಿಯ Messaging App ವಾಟ್ಸಪ್ಪ್ ಬಹುದಿನದ ತನ್ನ ಗ್ರಾಹಕರ ಬೇಡಿಕೆಯನ್ನು ಈಡೇರಿಸಲು ಮುಂದಾಗಿದೆ ಅದುವೇ ವಾಟ್ಸಪ್ಪ್ ವಿಡಿಯೋ ಕಾಲಿಂಗ್, ಈ ಯೋಜನೆ ಇನ್ನು ಪ್ರಯೋಗಿಕವಾಗಿಯೇ ಇದ್ದು  ಈ ಹಂತದಲ್ಲಿ ತನ್ನ ಯೋಜನೆಯನ್ನು ಕೇವಲ ವಿಂಡೋಸ್ ಗ್ರಾಹಕರಿಗೆ ಮಾತ್ರ ನೀಡಲಿದೆ ಹಾಗೂ ಮುಂದಿನ ಹಂತದಲ್ಲಿ IOS  ಆಂಡ್ರಾಯ್ಡ್ ಗೂ ತನ್ನ ಸೇವೆಯನ್ನು ವಿಸ್ತರಿಸಲಿದೆ..

ಇತ್ತೀಚಿಗೆ ಬರುತ್ತಿರುವ ವಿಡಿಯೋ ಕಾಲಿಂಗ್ APP ಗಳು, ಫೇಸ್ಬುಕ್ ಮಾಲೀಕತ್ವದ ವಾಟ್ಸಪ್ಪ್ ಗೆ ವಿಪರೀತ ಸ್ಪರ್ಧೆ ನೀಡುತ್ತಿದ್ದು ಇದರಿಂದ ಜಾಗತಿಕ ಮಟ್ಟದಲ್ಲಿ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ವಾಟ್ಸಪ್ಪ್ ಈ ತೀರ್ಮಾನಕ್ಕೆ ಬಂದಿರಬಹುದು ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಹೊಸ UPDATE ಬರಲಿದ್ದು ಅದರಲ್ಲಿ ಈ ಸೌಲಭ್ಯ ಇರಲಿದೆ ಎಂದು ವಾಟ್ಸಪ್ಪ್ ಹೇಳಿಕೊಂಡಿದೆ.

ಸದಾ ಒಂದಿಲ್ಲೊಂದು ಹೊಸ ತನವನ್ನು ತನ್ನಲ್ಲಿ ಅಳವಡಿಸಿಕೊಳ್ಳುತ್ತಿರುವ ವಾಟ್ಸಪ್ಪ್, ವಿಡಿಯೋ ಕಾಲಿಂಗ್ ಸೌಲಭ್ಯವನ್ನು ಅದ್ದಷ್ಟು ಬೇಗ ತನ್ನ ಗ್ರಾಹಕರಿಗೆ ತಲುಪಿಸಲಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top