ಅತ್ಯಂತ ಅಪರೂಪದ ಪ್ರಕರಣದಲ್ಲಿ ಸೌದಿ ಅರೆಬಿಯಾದ ರಾಜಕುಮಾರ ಟರ್ಕಿ ಬಿನ್ ಸೌದ್ ಅಲ್- ಕಬೀರ್ ಮರಣ ದಂಡನೆ ವಿಧಿಸಲಾಗಿದೆ. ಇದು ಅರಬ್ ದೇಶವೊಂದರಲ್ಲಿ ರಾಜಮನೆತನಕ್ಕೆ ಸೇರಿದ ಗಣ್ಯರೊಬ್ಬರಿಗೆ ಈ ರೀತಿಯ ಘೋರ ಶಿಕ್ಷೆ ವಿಧಿಸಿರುವುದು ಅತ್ಯಂತ ಅಪರೂಪ ಎನ್ನಲಾಗಿದೆ.
ಘರ್ಷಣೆಯೊಂದರಲ್ಲಿ ರಾಜಕುಮಾರ ಕಬೀರ್, ವ್ಯಕ್ತಿಯೊಬ್ಬನನ್ನು ಗುಂಡಿಕ್ಕಿ ಹತ್ಯೆಗೈದಿದ್ದರು. ಘಟನೆಯ ವಿಚಾರಣೆ ವೇಳೆ ರಾಜಕುಮಾರ ತಪ್ಪಿತಸ್ಥ ಎಂದು ಸಾಬೀತಾದ ಹಿನ್ನೆಲೆಯಲ್ಲಿ ಮರಣದಂಡನೆ ವಿಧಿಸಲಾಗಿದ್ದು, ಅದನ್ನು ಜಾರಿ ಗೊಳಿಸಲಾಗಿದೆ ಎಂದು ಸೌದಿ ಅರೆಬಿಯಾದ ಆಂತರಿಕ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ಆದರೆ ರಾಜಕುಮಾರನಿಗೆ ಯಾವ ರೀತಿಯಲ್ಲಿ ಶಿಕ್ಷೆ ವಿಧಿಸಲಾಯಿತು ಎಂಬ ಬಗ್ಗೆ ಮಾಹಿತಿ ನೀಡಲಾಗಿಲ್ಲ. ಈ ರೀತಿಯ ಅಪರಾಧ ಯಾರೇ ಮಾಡಿದರೂ ಶಿಕ್ಷೆ ಖಚಿತ ಎಂಬ ಸಂದೇಶ ಇದರಿಂದ ಸ್ಪಷ್ಟವಾಗುತ್ತದೆ ಎಂದು ಸಚಿವಾಲಯ ಬುಧವಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ.
ಸೌದಿ ಅರೆಬಿಯಾದಲ್ಲಿ ರಾಜಮನೆತನಕ್ಕೆ ಸೇರಿದ ವ್ಯಕ್ತಿಗೆ ಈ ರೀತಿಯ ಶಿಕ್ಷೆ ವಿಧಿಸಿರುವುದು ಇದೇ ಮೊದಲಲ್ಲ. ೧೯೭೫ರಲ್ಲಿ ಫೈಸಲ್ ರಾಜ ಫೈಸದಲ್ ಬಿನ್ ಮುಸೈಡ್ ಬಿನ್ ಅಬ್ದುಲ್ಲಾಜಿಜ್ ಅಲ್ ಸೌದಿ ಅವರಿಗೆ ಇದೇ ರೀತಿಯ ಶಿಕ್ಷೆ ವಿಧಿಸಲಾಗಿತ್ತು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
