fbpx
News

ಗತಕಾಲದ ವೈಭವವನ್ನು ಮರುಕಳಿಸುವ “ಹಂಪಿ ಉತ್ಸವ”

“ಹಂಪಿ ಉತ್ಸವ” ಕ್ಕೆ ದಿನಗಣನೆ ಆರಂಭವಾಗಿದ್ದು ಭರದ ಸಿದ್ಸತೆಗಳು ನಡಿಯುತ್ತಿವೆ. ಅಕ್ಟೋಬರ್ 18ರಂದು ಬೆಳಗ್ಗೆ 11.30ಕ್ಕೆ ಶಿಬಿರದ ಉದ್ಘಾಟನೆ ನಡೆಯಲಿದ್ದು, ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಎಸ್.ಲಾಡ್ ಅವರು ಚಾಲನೆ ನೀಡಲಿದ್ದಾರೆ. ಎದುರು ಬಸವಣ್ಣ ಮಂಟಪದ ಬಳಿ ಉತ್ಸವದ ಮುಖ್ಯ ವೇದಿಕೆ ನಿರ್ಮಿಸು ವುದು ಬಹುತೇಕ ಅಂತಿಮಗೊಂಡಿದೆ.

 

ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪ್ರವಾಸೋದ್ಯಮ ಇಲಾಖೆ ಹಾಗೂ ಬೆಂಗಳೂರು-ಬಳ್ಳಾರಿ ಜಿಲ್ಲಾಡಳಿತಗಳ ಸಂಯುಕ್ತಾಶ್ರಯದಲ್ಲಿ ನ.3 ರಿಂದ 5 ರವರೆಗೆ ‘ಹಂಪಿ ಉತ್ಸವ-2016’ನ್ನು ಆಯೋಜಿಸಲಾಗಿದೆ. ಗತಕಾಲದ ವೈಭವವನ್ನು ಮರುಕಳಿಸುವಂತೆ ಮಾಡಿ ಇಂದಿನ ಪೀಳಿಗೆಗೆ ವಿಜಯನಗರ ಅರಸದ ವೈಭವವನ್ನು ಪ್ರದರ್ಶಿಸುವುದು ಹಂಪಿ ಉತ್ಸವ ಉದ್ದೇಶವಾಗಿದೆ.

 

ನವೆಂಬರ್ 3ರಿಂದ 5ರವರೆಗೆ ಮೂರು ದಿನಗಳ ಕಾಲ ನಡೆಯಲಿರುವ ಹಂಪಿ ಉತ್ಸವದ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪ್ರವಾಸೋದ್ಯಮ ಇಲಾಖೆ ಹಾಗೂ ಜಿಲ್ಲಾಡಳಿತದ ಸಂಯುಕ್ತ ಆಶ್ರಯದಲ್ಲಿ ಶಿಲಾಶಿಲ್ಪ ಶಿಬಿರ ಮತ್ತು ಕಾಷ್ಠ ಶಿಲ್ಪ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.

 

ಅ.18ರಿಂದ 28ರವರೆಗೆ 11 ದಿನಗಳ ಕಾಲ ಹಂಪಿಯ ಶ್ರೀ ಅಮರಶಿಲ್ಪಿ ಜಕಣಾಚಾರ್ಯ ವೇದಿಕೆಯಲ್ಲಿ ಈ ಶಿಬಿರ ನಡೆಯಲಿದ್ದು, ಬೆಂಗಳೂರು, ಮೈಸೂರು, ಧಾರವಾಡ, ಕಲಬುರಗಿ ಸೇರಿದಂತೆ ರಾಜ್ಯದ ವಿವಿಧೆಡೆಯಿಂದ 45ಕ್ಕೂ ಹೆಚ್ಚು ಪ್ರಧಾನ ಹಾಗೂ ಸಹಾಯಕ ಶಿಲ್ಪ ಕಲಾವಿದರು ಮತ್ತು ಕಾಷ್ಟ ಶಿಲ್ಪ ಕಲಾವಿದರು ಈ ಶಿಬಿರದಲ್ಲಿ ಭಾಗವಹಿಸಲಿದ್ದಾರೆ.

 

ಹಂಪಿ ಉತ್ಸವದ ಶಿಲ್ಪ ಶಿಬಿರದಲ್ಲಿ ಭಾಗವಹಿಸುವ ಎಲ್ಲಾ ಶಿಲ್ಪ ಕಲಾವಿದರು 10 ದಿನದ ಅವಧಿಯಲ್ಲಿ ಸಂಪೂರ್ಣ ಕೆಲಸವನ್ನು ಮುಗಿಸಲಿದ್ದಾರೆ. ಶಿಲ್ಪಗಳಿಗೆ ಬೇಕಾಗುವ ಸಾಮಗ್ರಿಗಳನ್ನು ಶಿಲ್ಪ ಮತ್ತು ಕಾಷ್ಟ ಶಿಲ್ಪ ಕಲಾವಿದರಿಗೆ ತರಲಿದ್ದು, ಸಾರಿಗೆ ವೆಚ್ಚವನ್ನು ಸರ್ಕಾರದಿಂದ ಕೊಡಲಾಗುತ್ತದೆ. ಹೊಸಪೇಟೆಯ ಶಿಲ್ಪಿ ಕೆ.ಸುರೇಶ ಅವರನ್ನು ಶಿಬಿರದ ನಿರ್ದೇಶಕರನ್ನಾಗಿ ನಿಯುಕ್ತಿಗೊಳಿಸಲಾಗಿದೆ.

 

ಅಕ್ಟೋಬರ್ 18ರಂದು ಬೆಳಗ್ಗೆ 11.30ಕ್ಕೆ ಶಿಬಿರದ ಉದ್ಘಾಟನೆ ನಡೆಯಲಿದ್ದು, ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಎಸ್.ಲಾಡ್ ಅವರು ಚಾಲನೆ ನೀಡಲಿದ್ದಾರೆ.

 

ಜಿಪಂ ಹಂಗಾಮಿ ಅಧ್ಯಕ್ಷೆ ಪಿ.ದೀನಾ ಮಂಜುನಾಥ, ಸಂಸದರಾದ ಬಿ. ಶ್ರೀರಾಮುಲು, ಕರಡಿ ಸಂಗಣ್ಣ, ಶಾಸಕರಾದ ಎನ್.ವೈ.ಗೋಪಾಲಕೃಷ್ಣ, ಪಿ.ಟಿ.ಪರಮೇಶ್ವರ ನಾಯಕ, ಈ.ತುಕಾರಾಂ, ಅನಿಲ್ ಲಾಡ್, ಟಿ.ಎಚ್.ಸುರೇಶಬಾಬು, ಬಿ.ನಾಗೇಂದ್ರ, ಎಲ್.ಬಿ.ಪಿ.ಭೀಮಾನಾಯ್ಕ, ಬಿ.ಎಂ.ನಾಗರಾಜ, ಕೆ.ಸಿ.ಕೊಂಡಯ್ಯ, ಅಲ್ಲಂ ವೀರಭದ್ರಪ್ಪ, ಅಮರನಾಥ ಪಾಟೀಲ್, ಶರಣಪ್ಪ ಮಟ್ಟೂರ್, ವೆಂಕಟರಾವ್ ಘೋರ್ಪಡೆ ಅತಿಥಿಗಳಾಗಿ ಆಗಮಿಸಲಿದ್ದಾರೆ. ವಿಜಯನಗರ ಕ್ಷೇತ್ರದ ಶಾಸಕ ಆನಂದಸಿಂಗ್ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.

 

ಹೊಸಪೇಟೆ ತಾಪಂ ಅಧ್ಯಕ್ಷೆ ಜೋಗದ ನೀಲಮ್ಮ, ಹಂಪಿ ಗ್ರಾಪಂ ಅಧ್ಯಕ್ಷೆ ಎಚ್.ಭೀಮವ್ವ, ಜಿಪಂ ಸದಸ್ಯ ಪ್ರವೀಣಸಿಂಗ್, ತಾಪಂ ಸದಸ್ಯ ಪಾಲಪ್ಪ ಮತ್ತಿತರರು ವಿಶೇಷ ಆಹ್ವಾನಿತರಾಗಿ ಆಗಮಿಸಲಿದ್ದಾರೆ.

 

ನವೆಂಬರ್ 3ರಿಂದ 5ರವರೆಗೆ ಮೂರು ದಿನಗಳ ಕಾಲ ನಡೆಯಲಿರುವ ಹಂಪಿ ಉತ್ಸವದ ಅಂಗವಾಗಿ ಶಿಬಿರದ ಸಮಾರೋಪ ಸಮಾರಂಭವು ಅ.28ರಂದು ಬೆಳಗ್ಗೆ 11.30ಕ್ಕೆ ಹಂಪಿಯ ಶ್ರೀ ಶಿವರಾಮ ಅವಧೂತ ಮಠದ ಮುಂಭಾಗ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಡಾ.ವಿ.ರಾಮ್ ಪ್ರಸಾತ್ ಮನೋಹರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top