fbpx
Awareness

ಉಚಿತ ಇಂಟರ್ನೆಟ್ ಪಡೆದುಕೊಳ್ಳಲು ಏನು ಮಾಡಬೇಕು….. ?

ಸ್ಮಾರ್ಟ್‌ಫೋನ್‌ ಬಳಕೆದಾರರು ಇಂದು ಇಂಟರ್ನೆಟ್‌ ಸಂಪರ್ಕ ಇಲ್ಲದೇ ಇರಲಾರದಂತಹ ಸನ್ನಿವೇಶವನ್ನು ತಮ್ಮ ದಿನನಿತ್ಯ ಹವ್ಯಾಸಗಳಿಂದ ಹಾಗೂ ಚಟುವಟಿಕೆಗಳಿಂದ ಕೆಲವೊಮ್ಮೆ ಎದುರಿಸುತ್ತಿದ್ದಾರೆ. ಕೆಲವರು ಮನೆಯಲ್ಲಿ ತಾವು ವಾಸಿಸುವ ಸ್ಥಳದಲ್ಲಿ ವೈ ಫೈ ಸಂಪರ್ಕ ಪಡೆದಿರುತ್ತಾರೆ ಅಲ್ಲಿದ್ದ ಸಮಯದಲ್ಲಿ ಮಾತ್ರ ಅವರಿಗೆ ಈ ಉಚಿತ ಇಂಟರ್ನೆಟ್‌ ಸಂಪರ್ಕ ಸಾಧ್ಯ. ಉಚಿತವಾಗಿ ಇಂಟರ್ನೆಟ್ ಬಳಸುವ ಪ್ರಯೋಗವನ್ನು ಯಾರು ಇಷ್ಟಪಡುವುದಿಲ್ಲ ಹೇಳಿ? ಅದರಲ್ಲೂ ನೀವು ಬಳಸುವ ಮೊಬೈಲ್ ನೆಟ್‌ವರ್ಕ್ ನಿಮಗೆ ಇಂತಹ ಸುವರ್ಣವಕಾಶವನ್ನು ಒದಗಿಸುತ್ತಿದೆ ಎಂದಾದಲ್ಲಿ ಅದನ್ನು ಬಿಡುವ ಮಾತೇ ಇಲ್ಲ.

ಉಚಿತ ಇಂಟರ್ನೆಟ್ ಪಡೆದುಕೊಳ್ಳುವುದು ಹೇಗೆ?

‘ಎಸ್‌ಎಂಎಸ್‌ಮಾರ್ಟ್ (SMSmart)’ :

smsmart_banner

‘ಎಸ್‌ಎಂಎಸ್‌ಮಾರ್ಟ್ (SMSmart)’ ಉತ್ತಮವಾಗಿ ವಿನ್ಯಾಸಗೊಂಡಿರುವ ಈ ಆಪ್‌ ಆಂಡ್ರಾಯ್ಡ್ ಅಪ್ಲಿಕೇಶನ್‌ ಆಗಿದ್ದು, ಆಪ್‌ ಸೇವೆ ಬಗ್ಗೆ ಯಾವುದೇ ಸಂಶಯ ಪಡಬೇಡಿ. SMSmart ನಿಮಗೆ ಇಂಟರ್ನೆಟ್‌ನಿಂದ ಮಾಹಿತಿ ನೀಡಲು ಎಸ್‌ಎಂಎಸ್‌ ಸರ್ವೀಸ್ ಬಳಸುತ್ತದೆ. . ಎಸ್‌ಎಂಎಸ್‌ ರೀತಿ ಫೀಲ್‌ ನೀಡದೆ, ವಿವಿಧ ಮಾಹಿತಿಗಳನ್ನು ಪಡೆಯಲು ಶೀಘ್ರ ಆಕ್ಸೆಸ್, ವಿಕಿಪೀಡಿಯ ಎಕ್ಸ್‌ಪರ್ಟ್, ಎಲ್ಪ್‌ ಮತ್ತು ಟ್ವಿಟರ್‌ಗಳಿಗೂ ಆಕ್ಸೆಸ್ ನೀಡುತ್ತದೆ.

‘ಟೆಕ್ಸ್ಟ್ ಇಂಜಿನ್ (TextEngine)’

textengine

‘ಟೆಕ್ಸ್ಟ್ ಇಂಜಿನ್ (TextEngine)’ ಗೂಗಲ್‌ ಎಸ್‌ಎಂಎಸ್ ಸರ್ಚ್ ಆಗಿದ್ದು, ಡಾಟಾ ಪ್ಲಾನ್‌ಗಾಗಿ ಹಣ ವೆಚ್ಚ ಮಾಡಲು ಸಾಧ್ಯವಾಗದವರೂ ಸುಲಭವಾಗಿ ಮಾಹಿತಿ ಪಡೆಯಲು ಈ ಆಪ್ ಬಳಸಬಹುದು.

ಈ ಆಪ್‌ಗೆ ಉಚಿತವಾಗಿ ಸೈನಪ್‌ ಆಗಿ, ಟೆಕ್ಸ್ಟ್ ಇಂಜಿನ್ (TextEngine) ಉಚಿತವಾಗಿ ವಾತಾವರಣ ಅಪ್‌ಡೇಟ್ ಸರ್ವೀಸ್, ಕ್ರೀಡೆ ಸ್ಕೋರ್‌, ವಿಕಿಪೀಡಿಯ ಮತ್ತು ಇತರೆ ರಿಸಲ್ಟ್ ನೀಡುತ್ತದೆ.

‘ಎಸ್‌ಎಂಎಸ್ ಹಂಟ್(SMS Hunt)’

smshunt

‘ಎಸ್‌ಎಂಎಸ್ ಹಂಟ್(SMS Hunt)’ ಆಪ್‌ ಟಾಪ್‌ ರೇಟೆಡ್ ಸೈಟ್ ಅಥವಾ ಆಪ್‌ ಲಿಂಕ್‌ ಅನ್ನು ಪ್ರಾಡಕ್ಟ್‌ಗೆ ಸೇರಿದಂತೆ ನೀಡುತ್ತದೆ. ಪ್ರಾಡಕ್ಟ್ ಖರೀದಿಯಲ್ಲಿ ನಿಮಗೆ ಹೆಚ್ಚಿನ ಪರಿಚಯ ಇಲ್ಲದಿದ್ದಲ್ಲಿ, ಈ ಲಿಂಕ್‌ಗಳು ಹೊಸ ಪ್ರಾಡಕ್ಟ್‌ಗಳನ್ನು ಸರಳ ರೀತಿಯಲ್ಲಿ ಪತ್ತೆಹಚ್ಚಲು ಸಹಾಯ ಮಾಡುತ್ತವೆ.

‘QKSMS’ ಆಪ್‌

qksms

‘QKSMS’ ಆಪ್‌ ಇಂಟರ್ನೆಟ್ ಮತ್ತು ಎಸ್‌ಎಂಎಸ್‌ಗಳ ಉತ್ತಮ ಅನುಭವ ನೀಡುತ್ತದೆ. ಉತ್ತಮ ಥೀಮ್‌ಗಳೊಂದಿಗೆ ಮೆಸೇಜಿಂಗ್ ಅನುಭವವನ್ನು ವೃದ್ಧಿಸುತ್ತದೆ. ಪ್ರಸ್ತುತ ಆಪ್ ಅನ್ನು ಅಂತ್ಯಗೊಳಿಸದೇ ಕ್ವಿಕ್ ರೀಪ್ಲೇಗಾಗಿ ಸಹಯಕಾರಿಯಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top