fbpx
Awareness

ಉಚಿತವಾಗಿ jio ಸೇವೆ ಮಾರ್ಚ್ 2017 ರ ತನಕ ಪಡೆಯಬಹುದು!!! ಇಲ್ಲಿ ಓದಿ…!

ವಾಟ್ಸಾಪ್, ಫೇಸ್‎ಬುಕ್ ಅನ್ನು ಹಿಂದಿಕ್ಕಿದ ಜಿಯೋ ಒಂದೇ ತಿಂಗಳಿನಲ್ಲಿ ಅತೀ ಹೆಚ್ಚು ಚಂದಾದಾರರು ಹೊಂದಿ ಟೆಲಿಕಾಮ್ ಕ್ಷೇತ್ರದಲ್ಲಿ ವಿಶ್ವದಾಖಲೆಯನ್ನು ಮಾಡಿದೆ. ಮುಖೇಶ್ ಅಂಬಾನಿ ಅವರ ರಿಲಯನ್ಸ್ ಜಿಯೋ 4ಜಿ ಡೇಟಾ ಪ್ಲಾನ್ ಗೆ ಗ್ರಾಹಕರು ಫಿದಾ ಆಗಿದ್ದಾರೆ. ಅತ್ಯಂತ ಕಡಿಮೆ ಸಮಯದಲ್ಲಿ 16 ಮಿಲಿಯನ್ ಕಿಂತ ಹೆಚ್ಚು ಗ್ರಾಹಕರನ್ನು ಸಂಪಾದಿಸಿದೆ.

ರಿಲಾಯನ್ಸ್‎ನ ಜಿಯೋ 100 ಮಿಲಿಯನ್ ಗ್ರಾಹಕರನ್ನು ತಲುಪುವ ಗುರಿಯನ್ನು ಹೊಂದುವುದು ಅಂಬಾನಿ ಅವರ ಲೆಕ್ಕಾಚಾರ. ಹಾಗಾಗಿ ಡಿಸೆಂಬರ್ ನಂತರದ ಮೇಲೂ ಉಚಿತ 4G ಡೇಟಾ ಬಳಕೆಯನ್ನು ಮಾರ್ಚ್ 2017 ರ ತನಕ ವಿಸ್ತರಿಸಲಿದೆ ಎಂದು ಮೂಲಗಳು ತಿಳಿಸಿದೆ. ಗ್ರಾಹಕರ ಪಾಲಿಗೆ ‘ರೋಗಿ ಬಯಸಿದ್ದು ಹಾಲು ಅನ್ನಾ, ವೈದ್ಯರು ಹೇಳಿದ್ದು ಹಾಲು ಅನ್ನಾ’ ಅನ್ನುವ ಹಾಗೆ ಆಗಿದೆ. ಈ ರೀತಿಯಾದ ಪ್ರಕಟಣೆಗಳು ಎಷ್ಟರ ಮಟ್ಟಿಗೆ ನಿಜ ಅಥವಾ ಸುಳ್ಳು ಅನ್ನುವುದು ಗ್ರಾಹಕರ ಆತಂಕಕ್ಕೆ ಎಡೆ ಮಾಡಿ ಕೊಡುತ್ತಿವೆ.

ಇತ್ತೀಚಿಗೆ ತರಂಗಾಂತರ ಪ್ರಸಾರದಲ್ಲಿ ಹೊಂದಾಣಿಕೆಗೆ ಪ್ರತಿಸ್ಪರ್ಧಿಗಳು ಸಹಕರಿಸದೇ ಇದ್ದಿದ್ದರಿಂದ ಜಿಯೊ 4ಜಿ ಡಾಟಾ ದೇಶದಲ್ಲೇ ಅತ್ಯಂತ ಕಳಪೆ ಡೌನ್‌ಲೋಡಿಂಗ್ ಮತ್ತು ಅಪ್‌ಲೋಡಿಂಗ್ ಎಂಬ ಆರೋಪಕ್ಕೆ ಗುರಿಯಾಗಿತ್ತು. ಅದರಲ್ಲೂ ಕಳೆದೆರಡು ದಿನಗಳಿಂದ ಜಿಯೋ 4ಜಿ ಡಾಟಾ ತೀರಾ ಕಳಪೆಯಾಗಿದ್ದರಿಂದ ಭಾರೀ ಚರ್ಚೆಗೆ ಗುರಿಯಾಗಿತ್ತು. ಈ ಹಿನ್ನೆಲೆಯಲ್ಲಿ ಟೆಲಿಕಾಮ ರೆಗ್ಯುಲೆಟರಿ ಅಥಾರಟಿ ಆಫ್ ಇಂಡಿಯಾ (ಟ್ರಾಯ್) ಹಾಗೂ ಪ್ರಧಾನ ಮಂತ್ರಿಗಳ ಕಚೇರಿಗೆ ರಿಲಾಯನ್ಸ್ ದೂರು ಸಲ್ಲಿಸಿತ್ತು. ಜಿಯೊ ಸಂಸ್ಥೆಯ ದೂರಿನ ವಿಚಾರಣೆ ನಡೆಸಿದ ಟ್ರಾಯ್, ಪ್ರತಿಸ್ಪರ್ಧಿ ಸಂಸ್ಥೆಗಳು ಸ್ಪರ್ಧಾ ಮನೋಭಾವ ತೋರದೇ ಒಳಸಂಚು ರೂಪಿಸಿದ್ದನ್ನು ಪತ್ತೆ ಹಚ್ಚಿದ್ದು, ಏರ್‌ಟೆಲ್, ವೋಡಾಫೋನ್, ಐಡಿಯಾ ಸೇರಿದಂತೆ ಪ್ರತಿಸ್ಪರ್ಧಿ ಕಂಪನಿಗಳಿಗೆ ತಲಾ 50 ಕೋಟಿಯಂತೆ ಒಟ್ಟಾರೆ 3000 ಕೋಟಿ ರೂ. ದಂಡ ವಿಧಿಸಿದೆ.

ಮಾಸ್ ಪ್ರಮಾಣದಲ್ಲಿ ಉಚಿತ ಆಫರ್ ಗಳನ್ನು RJio 100 ಮಿಲಿಯನ್ ಗ್ರಾಹಕರನ್ನು ಹೊಂದುವ ಗುರಿಯನ್ನು ತಲುಪುವ ಉದ್ದೇಶದಿಂದ ಮತ್ತು ಚಂದಾದಾರರ (ಗ್ರಾಹಕರ) ಬೆಳವಣಿಗೆಯನ್ನು ಆಕರ್ಷಿಸುವ ಸಲುವಾಗಿ ಮಾರ್ಚ್ 2017 ರವರೆಗೆ ಉಚಿತ 4ಜಿ ಡೇಟಾ ಪ್ಲಾನ್ ಅನ್ನು ವಿಸ್ತರಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

1 Comment

1 Comment

Leave a Reply

Your email address will not be published.

To Top