fbpx
god

ಕನ್ಯಾಕುಮಾರಿ ದಕ್ಷಿಣ ಭಾರತದ ಪ್ರಸಿದ್ಧ ಯಾತ್ರಸ್ಥಳ

ಕನ್ಯಾಕುಮಾರಿ ದಕ್ಷಿಣ ಭಾರತದಲ್ಲಿ ಮುಖ್ಯ ಭೂಮಿಯ ತುತ್ತ ತುದಿಯಲ್ಲಿರುವ ಊರು. ‘ಕನ್ಯಾಕುಮಾರಿ’ ಎಂಬ ಹೆಸರು ಪೌರಾಣಿಕ ಕಥೆಯಿಂದ ಬಂದದ್ದು. ಇದಕ್ಕೆ ಕೇಪ್ ಕೊಮೆರಿನ್ ಎಂಬ ಹೆಸರೂ ಇದ್ದಿತು.ಕೇಪ್ ಕಾಮೊರಿನ್ ಎಂದೇ ಹೆಸರುವಾಸಿಯಾದ ಕನ್ಯಾಕುಮಾರಿ ಭಾರತದ ತಮಿಳುನಾಡಿನಲ್ಲಿದೆ. ಭಾರತದ ದಕ್ಷಿಣದ ತುತ್ತ ತುದಿಯಲ್ಲಿ ಕನ್ಯಾಕುಮಾರಿ ಇದೆ. ಕನ್ಯಾಕುಮಾರಿಯು ಹಿಂದೂ ಮಹಾಸಾಗರ, ಬಂಗಾಳ ಕೊಲ್ಲಿ ಮತ್ತು ಅರಬ್ಭಿ ಸಮುದ್ರ ಸೇರುವ ಸ್ಥಳದಲ್ಲಿ ಇದೆ. ಇದರ ವಾಯುವ್ಯ ಮತ್ತು ಪಶ್ಚಿಮ ಭಾಗದಲ್ಲಿ ಕೇರಳ ರಾಜ್ಯವಿದ್ದು, ತಿರುನೆಲ್ವೇಲಿ ಜಿಲ್ಲೆಯು ಇದರ ಉತ್ತರ ಮತ್ತು ಪೂರ್ವ ಭಾಗದಲ್ಲಿ ಬರುತ್ತದೆ. ಕೇರಳದ ರಾಜಧಾನಿ ತಿರುವನಂತಪುರಮ್ ಕನ್ಯಾಕುಮಾರಿಯಿಂದ 85 ಕಿ.ಮೀ ದೂರದಲ್ಲಿದೆ. ಕನ್ಯಕುಮಾರಿಯು ಹುಣ್ಣಿಮೆಯ ದಿನ ಕಣ್ಣು ಕೋರೈಸುವ ಸೂರ್ಯೋದಯ ಮತ್ತು ಸೂರ್ಯಾಸ್ತಕ್ಕೆ ಹೆಸರುವಾಸಿಯಾಗಿದೆ.

devi-kumari-temple

ಕನ್ಯಾಕುಮಾರಿ ಭಾರತದ ಪ್ರಸಿದ್ಧ ಯಾತ್ರಸ್ಥಳ.

ಕನ್ಯಾಕುಮಾರಿ ಭಾರತದ ದಕ್ಷಿಣ ಅಂಚಿನಲ್ಲಿ ಮೂರು ಸಮುದ್ರಗಳು ಸೇರುವ ಸಂಗಮ ಸ್ಥಳದಲ್ಲಿರುವ ಕ್ಷೇತ್ರ. ಇಲ್ಲಿಂದ ಕಾಣುವ ಸೂರ್ಯೋದಯ, ಸೂರ್ಯಾಸ್ಥಗಳ ದೃಶ್ಯ ರಮಣೀಯ, ಕಡಲ ತಡಿಯ ಮರಳು ರಾಶಿ ಮುತ್ತು ರತ್ನಗಳಂತೆ ಹೊಳೆಯುತ್ತಿರುತ್ತದೆ.  ಈ ಭೂಶಿರದಲ್ಲಿ ಸಮುದ್ರಕ್ಕೆ ಎದುರಾಗಿ ದಂಡೆಯ ಮರಳಿನ ಮೇಲೆ ಕುಳಿತು ದೃಷ್ಟಿ ಹರಿದಷ್ಟು ಹಾಯಿಸಿ ನಿರ್ಮಲ ಆಕಾಶ ಹಾಗೂ ಸಮುದ್ರದ ಅಲೆಗಳನ್ನು ವೀಕ್ಷಿಸಿ ಆನಂದಿಸುವುದು ಸುಯೋಗ ಎನ್ನಬಹುದು.ಕನ್ಯಾಕುಮಾರಿ ದೇವಾಲಯದಿಂದಾಗಿ ಈ ಊರಿಗೆ ಅದೇ ಹೆಸರು, ಮಾತೃ ತೀರ್ಥ, ಪಿತೃ ತೀರ್ಥ, ಗಾಯತ್ರಿ ತೀರ್ಥ ಹಾಗೂ ಸಾವಿತ್ರಿ ತೀರ್ಥಗಳಿವೆ.

kanyakumari-sunrise

ವಿವೇಕಾನಂದ  ರಾಕ್ ಮೆಮೋರಿಯಲ್

vivekananda-rock-memorial

ಭಾರತದ ದಕ್ಷಿಣದ ತುತ್ತತುದಿಯಲ್ಲಿ ಕನ್ಯಾಕುಮಾರಿಯಿಂದ ಸುಮಾರು 400 ಮೀಟರ್ ದೂರದಲ್ಲಿ ಹಿಂದೂ ಮಹಾಸಾಗರದಲ್ಲಿರುವ ಬಂಡೆಗಳ ಮೇಲೆ ವಿವೇಕಾನಂದ ರಾಕ್  ಮೆಮೋರಿಯಲ್ ನಿಂತಿದೆ.  1892ರಲ್ಲಿ ಸ್ವಾಮಿ ವಿವೇಕಾನಂದರು ಕನ್ಯಾಕುಮಾರಿಯ  ಬಂಡೆಯ ಮೇಲೆ ಧ್ಯಾನಾಸಕ್ತರಾಗಿ ಕುಳಿತಿದ್ದರ ಸವಿ ನೆನಪಿಗಾಗಿ ಈ ಸ್ಮಾರಕವನ್ನು ನಿರ್ಮಿಸಲಾಗಿದೆ.  ಈ ಸ್ಮಾರಕದಲ್ಲಿ ವಿವೇಕಾನಂದರ ಪೂರ್ಣಾಕಾರದ 2.2 ಮೀಟರ್ ಎತ್ತರದ ಕಂಚಿನ ವಿಗ್ರಹವಿದೆ.  ನೆಲಮಾಳಿಗೆಯಲ್ಲಿ ಧ್ಯಾನ ಮಂದಿರವಿದೆ.  ಕನ್ಯಾಕುಮಾರಿಯಲ್ಲಿ ವಿವೇಕಾನಂದರ ಜೀವನ ಹಾಗೂ ಸಾಧನೆಗಳ ಬಗ್ಗೆ ಸಂಬಂಧಿಸಿದ ವಸ್ತುಸಂಗ್ರಹಾಲಯವಿದೆ.

statue-of-vivekananda-inside-vivekananda-rock-memorial

ಕನ್ಯಾಕುಮಾರಿ ತೀರದಲ್ಲಿ ಮತ್ತೊಂದು ಬಂಡೆಯ ಮೇಲಿರುವ ತಮಿಳು ಮಹಾಕವಿ ತಿರುವಳ್ಳುವರ್ 133 ಅಡಿ ಕಾಂಕ್ರೀಟ್‍ನಲ್ಲಿ ನಿರ್ಮಿಸಿರುವ ಬೃಹತ್‍ ವಿಗ್ರಹವಿದೆ.

thiruvalluvar-statue-kanyakumari

ಶುಚೀಂದ್ರಂ

ಕನ್ಯಾಕುಮಾರಿಗೆ 13 ಕಿ.ಮೀ.ದೂರದಲ್ಲಿ ಶುಚೀಂದ್ರಂ ಇದೆ.  ಇಲ್ಲಿ 18 ಅಡಿ ಎತ್ತರದ ಬೃಹದಾಂಜನೇಯ ಮೂರ್ತಿ ಗಮನ ಸೆಳೆಯುತ್ತದೆ.  ಶಿವ ದೇವಾಲಯದಲ್ಲಿ ಸ್ಥಾಣುಮಲಯ ಎಂಬ ಲಿಂಗವಿದೆ.

%e0%b2%ac%e0%b3%83%e0%b2%b9%e0%b2%a6%e0%b2%be%e0%b2%82%e0%b2%9c%e0%b2%a8%e0%b3%87%e0%b2%af-%e0%b2%ae%e0%b3%82%e0%b2%b0%e0%b3%8d%e0%b2%a4%e0%b2%bf

ಗಾಂಧಿ ಸ್ಮಾರಕ ಮಂಟಪ

ಕನ್ಯಾಕುಮಾರಿಯಲ್ಲಿ ಮಹಾತ್ಮ ಗಾಂಧಿಯವರ ಬೂದಿಯನ್ನು ಫೆಬ್ರವರಿ 12,1948 ರಲ್ಲಿ ಸಾರ್ವಜನಿಕರ ದರ್ಷನಕ್ಕೆ ಇರಿಸಲಾಗಿತ್ತು ಇಲ್ಲಿ ಕುಮಾರಿ ಅಮ್ಮನವರ ದೇವಾಸ್ಥನ ವಿದೆ. ಮತ್ತು ಮಹಾತ್ಮಗಾಂಧಿ ಒಂದು ಸ್ಮಾರಕ ವಿದೆ. ಈ ಮಂಟಪ ಒರಿಸ್ಸ ವಾಸ್ತು ಶಿಲ್ಪದ ಶೈಲಿಯಲ್ಲಿ ನಿರ್ಮಿಲಾಗಿದೆ

gandhi_memorial_sideview

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top