fbpx
News

5 ಕೋಟಿನೂ ಬೇಡ, ರಾಜಕೀಯನೂ ಬೇಡ: ಸೇನೆ ಖಡಕ್ ನುಡಿ

ಪಾಕಿಸ್ತಾನಿ ಕಲಾವಿದರನ್ನು ಬಳಸಿಕೊಂಡಿದ್ದಕ್ಕಾಗಿ ‘ಏ ದಿಲ್ ಹೈ ಮುಷ್ಕಿಲ್’ ೫ ಕೋಟಿ ರೂ.ವನ್ನು ಸೇನೆಯ ಕಲ್ಯಾಣ ನಿಧಿಗೆ ದಾನ ಮಾಡಬೇಕು ಎಂಬ ರಾಜ್ ಠಾಕ್ರೆ ಅವರ ಸಲಹೆಗೆ ಸೇನಾ ಅಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಏ ದಿಲ್ ಮುಷ್ಕಿಲ್ ಚಿತ್ರದ ನಿರ್ಮಾಪಕ ಕರಣ್ ಜೋಹರ್ ಅವರಿಂದ 5 ಕೋಟಿ ಪಡೆಯಲು ನಿರಾಕರಿಸಿರುವ ಸೇನಾಧಿಕಾರಿ ಗಳು, ರಾಜಕೀಯಕ್ಕೆ ಸೇನೆಯನ್ನು ತರಬೇಡಿ ಎಂದು ಹೇಳಿದ್ದಾರೆ.

ರಾಜಕೀಯಕ್ಕೆ ಸೇನೆಯನ್ನು ಎಳೆದು ತಂದಿರುವುದರಿಂದ ಸೇನಾ ಪಡೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಸೇನೆ ಎಂಬುದು ಸಂಪೂರ್ಣವಾಗಿ ರಾಜಕೀಯದಿಂದ ಹೊರತಾಗಿದೆ. ಸೇನೆಯನ್ನೂ ರಾಜಕೀಯಕ್ಕೆ ಬಳಸಿಕೊಳ್ಳುತ್ತಿರುವುದು ಒಳ್ಳೆಯ ಬೆಳವಣಿಗೆ ಅಲ್ಲ. ಇದನ್ನು ಯಾವತ್ತೂ ಬೆಂಬಲಿಸುವುದಿಲ್ಲ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಸಿನಿಮಾ ಮಾತ್ರವಲ್ಲ, ಇತ್ತೀಚಿನ ಎಲ್ಲಾ ಬೆಳವಣಿಗೆಗಳಿಗೂ ಸೇನೆಯನ್ನು ರಾಜಕೀಯವಾಗಿ ಬಳಸಿಕೊಳ್ಳುವ ಪ್ರಯತ್ನ ನಡೆಯುತ್ತಿದೆ. ಸಮಾಜದ ಎಲ್ಲಾ ವ್ಯವಸ್ಥೆಗಳಿಂದ ಹೊರತಾಗಿದ್ದರೂ ಎಲ್ಲರ ಹಿತದೃಷ್ಟಿಯಿಂದ ಕೆಲಸ ಮಾಡುವ ಸಂಸ್ಥೆ ಆಗಿದೆ. ಇದನ್ನು ಎಲ್ಲರೂ ಅರಿತುಕೊಳ್ಳಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top