fbpx
Awareness

ದೀಪಾವಳಿ ಹಬ್ಬದ ಚರಿತ್ರೆ

ದೀಪಾವಳಿ ಹಬ್ಬವು ಯಾವಾಗ ಪ್ರಾರಂಭವಾಯಿತು?.

diwali-banner-detail

ಹದಿನಾಲ್ಕು ವರ್ಷಗಳ ವನವಾಸವನ್ನು ಮುಗಿಸಿ ಪ್ರಭು ಶ್ರೀರಾಮಚಂದ್ರನು ಅಯೋಧ್ಯೆಗೆ ಹಿಂದಿರುಗಿದಾಗ ಪ್ರಜೆಗಳು ಬಂಗಾರದ ಕಲಶವನ್ನು ಮಣಿ-ರತ್ನಗಳಿಂದ ಅಲಂಕರಿಸಿ ಮನೆಯೆದುರು ಹೊಸ್ತಿಲಿನ ಮೇಲಿಟ್ಟರು, ಊರಿನ ಬೀದಿಗಳನ್ನು ಸುಗಂಧಿತದ್ರವ್ಯಗಳಿಂದ ಯುಕ್ತವನ್ನಾಗಿಸಿ ದೀಪೆÇೀತ್ಸವವನ್ನು ಆಚರಿಸಿದರು. ಅಂದಿನಿಂದ ದೀಪಾವಳಿ ಉತ್ಸವವನ್ನು ಆಚರಿಸಲಾಗುತ್ತದೆ.

ದೀಪಾವಳಿ ಈ ಶಬ್ದದ ಅರ್ಥ ಏನು?.

ದೀಪಾವಳಿ ಎನ್ನುವ ಶಬ್ದವು ದೀಪ ಮತ್ತು ಆವಳಿ ಹೀಗೆ ರೂಪುಗೊಂಡಿದೆ. ಇದರ ಅರ್ಥ ದೀಪಗಳ ಸಾಲು ಎಂದಾಗಿದೆ. ದೀಪಾವಳಿಯಂದು ಎಲ್ಲೆಡೆಯೂ ದೀಪಗಳನ್ನು ಹಚ್ಚುತ್ತಾರೆ. ಆಶ್ವಯುಜ ಕೃಷ್ಣ ತ್ರಯೋದಶಿ (ಧನತ್ರಯೋದಶಿ), ಆಶ್ವಯುಜ ಕೃಷ್ಣ ಚತುರ್ದಶಿ (ನರಕಚತುರ್ದಶಿ), ಅಮಾವಾಸ್ಯೆ (ಲಕ್ಷಿ ್ಮೀಪೂಜೆ) ಮತ್ತು ಆಶ್ವಯುಜ ಶುಕ್ಲ ಪಾಡ್ಯ (ಬಲಿಪಾಡ್ಯ) ಈ ನಾಲ್ಕು ದಿನಗಳ ಕಾಲ ದೀಪಾವಳಿಯನ್ನು ಆಚರಿಸಲಾಗುತ್ತದೆ. ಕೆಲವರು ತ್ರಯೋದಶಿಯನ್ನು ದೀಪಾವಳಿಯಲ್ಲಿ ಸೇರಿಸದೇ ಉಳಿದ 3 ದಿನಗಳನ್ನು ದೀಪಾವಳಿಯೆಂದು ಆಚರಿಸುತ್ತಾರೆ. ಗೋವತ್ಸದ್ವಾದಶಿ ಮತ್ತು ಸಹೋದರ ಬಿದಿಗೆಯು ದೀಪಾವಳಿಯ ಸಮಯದಲ್ಲಿಯೇ ಬರುತ್ತದೆ. ಆದುದರಿಂದ ಇದನ್ನು ದೀಪಾವಳಿಯೆಂದೇ ಪರಿಗಣಿಸಲಾಗುತ್ತದೆ. ಆದರೆ ವಾಸ್ತವದಲ್ಲಿ ಈ ಉತ್ಸವಗಳು ವಿಭಿನ್ನವಾಗಿವೆ.

ಭಗವಾನ ಶ್ರೀಕೃಷ್ಣನು ಅಸುರಿವೃತ್ತಿಯ ನರಕಾಸುರನನ್ನು ವಧಿಸಿ ಜನರನ್ನು ಭೋಗವಾದ, ಲೋಭ, ಅನಾಚಾರ ಹಾಗೂ ದುಷ್ಟ ಪ್ರವೃತ್ತಿಯಿಂದ ಮುಕ್ತಗೊಳಿಸಿದನು ಮತ್ತು ಪ್ರಭು ವಿಚಾರ (ದೈವೀ ವಿಚಾರ)ವನ್ನು ನೀಡಿ ಸುಖವನ್ನು ನೀಡಿದನು. ಇದುವೇ ದೀಪಾವಳಿ ಯಾಗಿದೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top