fbpx
god

ಸೌತಡ್ಕ ಗಣಪತಿಯ ದಿವ್ಯ ಸನ್ನಿಧಿ

ಬಯಲು ಆಲಯದ ಗಣಪ ಎಂದೇ ಪ್ರಸಿದ್ಧಿ ಪಡೆದಿರುವ ದ.ಕ. ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಸೌತಡ್ಕ ಶ್ರೀ ಮಹಾಗಣಪತಿ, ವಿಶಾಲ ಮೈದಾನದಲ್ಲಿ ಗೋವುಗಳನ್ನು ಮೇಯಿಸಲೆಂದು ಬರುವ ಗೋಪಾಲ ಬಾಲಕರು ದೇವರ ಮೂರ್ತಿಯೊಂದನ್ನು ಕುಂಟಾಲ ಮರದ ಕೆಳಗೆ ಇಟ್ಟು ತಾವು ತಂದ ಮೂಳ್ಳು ಸೌತೆಕಾಯಿಗಳನ್ನು ಈ ದೇವರಿಗೆ ಇಟ್ಟು ಪೂಜಿಸುತ್ತಿದ್ದ ಹಿನ್ನಲೆ ಸವತಡ್ಕ ಶ್ರೀ ಮಹಾಗಣಪತಿ ದೇವರದ್ದು. ಗೋಪಾಲಕರಿಮದ ಪೂಜಿತಗೊಮಡ ದೆವರು ಮಡಿ ಮೈಲಿಗೆ ಮುಂತಾದ ಯಾವುದೇ ಭವಬಂಧನಗಳಿಂದ ಮುಕ್ತನಾಗಿ ಭಕ್ತಾದಿಗಳಿಗೆ ಇಲ್ಲಿ ಸರ್ವಕಾಲದಲ್ಲೂ ದರ್ಶನ ನೀಡುತ್ತಿದ್ದಾನೆ. ಸೌತೆಕಾಯಿಗಳಿಂದ ಪೂಜಿಸ್ಪಡುವ ದೇವನ ತಾಣ ಸೌತಡ್ಕ ಎಂಬ ಹೆಸರು ಹೊಂದುವಂತಾಯಿತು.

%e0%b2%b8%e0%b3%8c%e0%b2%a4%e0%b2%a1%e0%b3%8d%e0%b2%95-%e0%b2%b6%e0%b3%8d%e0%b2%b0%e0%b3%80-%e0%b2%ae%e0%b2%b9%e0%b2%be%e0%b2%97%e0%b2%a3%e0%b2%aa%e0%b2%a4%e0%b2%bf

ಎರಡೂವರೆ ದಶಕಗಳ ಹಿಂದೆ ಧರ್ಮಸ್ಥಳದ ರಘುನಾಥ ಕಾಮತ್ ಎಂಬ ಭಕ್ತರೊಬ್ಬರು ಈ ಕ್ಷೇತ್ರದಲ್ಲಿ ನಡೆಸಿದಂತ ಕೋಟಿ ನಾಮಾರ್ಚನೆಯ ವಿಶೇಷ ಸೇವೆಯ ನಂತರ ಈ ಕ್ಷೇತ್ರಕ್ಕೆ ಆಗಮಿಸುವ ಭಕ್ತರ ಸಂಖ್ಯೆ ಅಧಿಕವಾಗುತ್ತಾ ಬಂದಿದ್ದು ಬಯಲು ಆಲಯದ ಸೌತಡ್ಕ ಗಣಪನ ಭಕ್ತಾದಿಗಳು ಇಂದು ದೇಶವಿದೇಶಗಳಲ್ಲೂ ಇದ್ದು ಯಾವುದೇ ಶುಭಸಮಾರಂಭ, ವಿಶೇಷ ಕಾರ್ಯಗಳ ಮುಂಚಿತವಾಗಿ ಯಾವುದೇ ವಿಘ್ನ ಬಾರದಿರಲಿ ಎಂದು ಸೌತಡ್ಕ ಗಣಪನನ್ನು ನೆನಯುವುದು ರೂಢಿಯಾಗಿದೆ. ತನ್ನ ಭಕ್ತರ ಇಷ್ಟಾರ್ಥ ಸಿದ್ದಿಸುವ ದೇವರೆನ್ನುತ್ತಾರೆ ಅಲ್ಲಿರುವ ಆರ್ಚಕರು.

11%e0%b2%b8%e0%b3%8c%e0%b2%a4%e0%b2%a1%e0%b3%8d%e0%b2%95-%e0%b2%97%e0%b2%a3%e0%b2%aa%e0%b2%a4%e0%b2%bf%e0%b2%af-%e0%b2%b8%e0%b2%a8%e0%b3%8d%e0%b2%a8%e0%b2%bf%e0%b2%a7%e0%b2%bf

ಸ್ಥಳ ಪುರಾಣದ ಪ್ರಕಾರ ಹಿಂದೆ ಈ ಪ್ರಾಂತ್ಯವನ್ನು  ಆಳುತ್ತಿದ್ದ ರಾಜಮನೆತನದವರ ಆರಾಧ್ಯ ದೈವವಾದ ಈ ಗಣೇಶನ ದೇವಸ್ಥಾನವು  ರಾಜಮನೆತನದವರಿಗೆ ಮಾತ್ರ ಮೀಸಲಾಗಿತ್ತು. ನಂತರ ಈ ಪ್ರಾಂತ್ಯವನ್ನು  ಆಕ್ರಮಿಸಿದ ಶತ್ರುಗಳು  ಇಡೀ ಪ್ರಾಂತ್ಯ ಹಾಗೂ ರಾಜಮನೆತನವನ್ನೇ ನಾಶ ಮಾಡಿದರು. ಬಹುದಿನಗಳ ಕಾಲ ಕಾಡಿನ ಮಧ್ಯೆ ಅಜಾnತವಾಗಿ ಮುಚ್ಚಿ ಹೋಗಿದ್ದ ಈ ಗಣಪನ ವಿಗ್ರಹವು  ಕೆಲ ದನಗಾಹಿಗಳಿಗೆ ಸಿಕ್ಕಿತು.   ಅವರು ಅತ್ಯಂತ ಭಕ್ತಿ ಭಾವದಿಂದ ಆ ಗಣಪತಿಯನ್ನು  ತಂದು ಒಂದು  ಪ್ರಶಸ್ತವಾದ ಜಾಗದಲ್ಲಿ  ಪ್ರತಿಷ್ಠಾಪಿಸಿದರು.  ಆ ಗಣಪತಿಗೆ ನೇವೇದ್ಯವಾಗಿ  ತಮ್ಮಲ್ಲಿ ಬೆಳೆಯುವ ಸೌತೇಕಾಯಿಯನ್ನು ನಿತ್ಯವೂ  ಅರ್ಪಿಸುತ್ತಿದ್ದರು.    ಆ ಕಾರಣದಿಂದ ಈ ಗಣಪತಿಗೆ  ಸೌತಡ್ಕ ಮಹಾಗಣಪತಿ ಎಂಬ ಹೆಸರು ಬಂದಿದೆ.

ಇಲ್ಲಿ  ಮಹಾಗಣಪತಿ ದೇವರು ಗರ್ಭಗುಡಿಯ  ರಚನೆಯೇ  ಇಲ್ಲದೇ ಮುಕ್ತವಾತಾವರಣದಲ್ಲಿರುವುದರಿಂದ ಈ ಸ್ಥಾನ ಅಪೂರ್ವತೆಯನ್ನು  ಪಡೆದುಕೊಂಡಿದೆ.

%e0%b2%b8%e0%b3%8c%e0%b2%a4%e0%b2%a1%e0%b3%8d%e0%b2%95-%e0%b2%97%e0%b2%a3%e0%b2%aa%e0%b2%a4%e0%b2%bf%e0%b2%af

ಈ  ಗಣಪನಿಗೆ ನಿಸರ್ಗ ಅಂದರೆ ಬಹಳ ಇಷ್ಟ

ಬಯಸಿದಾಗ ಈ ಗಣಪತಿ ಅವರ ಕನಸಿನಲ್ಲಿ ಕಾಣಿಸಿಕೊಂಡು  ತಾನು  ಮುಕ್ತ ವಾತಾವರಣದಲ್ಲಿಯೇ  ಇರಲು ಇಚ್ಛಿಸುವೆನು ತನಗೆ  ದೇವಸ್ಥಾನ ಕಟ್ಟುವ ಅವಶ್ಯಕತೆ ಇಲ್ಲ ಎಂದು ಆದೇಶಿಸಿದನಂತೆ.   ನಂತರ ಆ ಭಕ್ತಾದಿಗಳು ದೇವಸ್ಥಾನ ಕಟ್ಟುವ ವಿಚಾರವನ್ನು ಕೈಬಿಟ್ಟರಂತೆ.  ಹೀಗೆ ಈ ಮಹಾಗಣಪತಿ  ಹಚ್ಚ ಹಸಿರಿನ ಪ್ರಕೃತಿ ಸೌಂದರ್ಯದ ಮಡಿಲಿನಲ್ಲಿ  ಮುಕ್ತವಾಗಿ ದೇವಸ್ಥಾನದ ರಚನೆ ಇಲ್ಲದೇ ನೆಲೆಸಿದನು ಎಂಬ ಐತಿಹ್ಯವಿದೆ.  ಇಲ್ಲಿಗೆ ಬರುವ ಭಕ್ತರು ತಮ್ಮ ಇಚ್ಚೆಗಳನ್ನು  ಹೇಳಿಕೊಂಡು  ಇಲ್ಲಿ  ಒಂದು ಗಂಟೆ ಕಟ್ಟಿದರೆ 45 ದಿನಗಳ ಒಳಗಾಗಿ ಅವರ ಇಚ್ಛೆ ಪೂರ್ಣಗೊಳ್ಳುವುದು ಎಂಬ ನಂಬಿಕೆ ಭಕ್ತರದು.  ಈ ಗಂಟೆ ಹರಕೆಯೇ ಇಲ್ಲಿಯ  ವಿಶೇಷ.   ಆ ಕಾರಣದಿಂದ ಈ ಗಣಪತಿಯ  ವಿಗ್ರಹದ ಎದುರಿಗೆ ಸುತ್ತಮುತ್ತಲೂ ಸಾಕಷ್ಟು  ವಿವಿಧ ಗಾತ್ರದ ಗಂಟೆಗಳನ್ನು ನಾವು ವೀಕ್ಷಿಸಬಹುದಾಗಿದೆ.   ಧನವನ್ನು ಅರಸಿ ಬರುವವರಿಗೆ ಧನ, ಸಂತಾನ ಭಾಗ್ಯ ಅರಸಿ ಬರುವವರಿಗೆ ಸಂತಾನ ಭಾಗ್ಯ ಕರುಣಿಸುವ ಈ ಗಣಪತಿಯ  ಸನ್ನಿಧಾನದಲ್ಲಿ  10,000 ಮಂತ್ರಗಳಿಂದ  ಕೂಡಿದ ಅಥರ್ವಶಿರ್ಷಹವನ ಮಾಡುವುದರಿಂದ ಎಲ್ಲಾ  ಇಷ್ಟಾರ್ಥಗಳು ಪೂರ್ಣಗೊಳ್ಳುತ್ತವೆ ಎನ್ನುವ ನಂಬಿಕೆ ಇದೆ.  ಇಲ್ಲಿರುವ ಗಣಪನಿಗೆ ದರ್ಬೆಯಿಂದ ಪೂಜಿಸಿದರೆ  ಅವನು ಪ್ರಸನ್ನನಾಗುತ್ತಾನೆ.  ಇನ್ನು  ಇಲ್ಲಿ ಬರುವ ಭಕ್ತರು ಗಣಪತಿಗೆ  ಸೌತೇಕಾಯಿಯ ನೇವೆದ್ಯವನ್ನೂ ಅರ್ಪಿಸುತ್ತಾರೆ.    ಇನ್ನು ಇಲ್ಲಿಗೆ ಬರುವ  ಭಕ್ತರಿಗೆ   ಎಲ್ಲಾ ದಿನಗಳಲ್ಲಿಯೂ ಅನ್ನದಾನದ ವ್ಯವಸ್ಥೆ ಕೂಡ ಇದೆ.   ಹಾಗೆ  ಪ್ರಸಾದದ ರೂಪದಲ್ಲಿ ಸಿಹಿಯಾದ ಅವಲಕ್ಕಿಯನ್ನು  ಗಣಪತಿಗೆ  ನೈವೆದ್ಯ ಮಾಡಿ ಅದನ್ನೇ ಭಕ್ತಾದಿಗಳಿಗೆ ಹಂಚಲಾಗುತ್ತದೆ.

ಪ್ರತಿ ವರ್ಷ ಜನವರಿ ತಿಂಗಳಲ್ಲಿ  ಈ ದೇವಸ್ಥಾನದಲ್ಲಿ ಮಹಾಪೂಜೆ ನಡೆಯುತ್ತದೆ.    ಆ ಸಮಯದಲ್ಲಿ  ಸಾಕಷ್ಟು ಭಕ್ತರು  ಆಗಮಿಸಿ  ಮಹಾಗಣಪತಿಗೆ ಹರಕೆ ತೀರಿಸಿ ಅವನ ದರ್ಶನ ಪಡೆದು ಧನ್ಯರಾಗುತ್ತಾರೆ.   ಇನ್ನು ಹತ್ತಿರದಲ್ಲಿಯೇ  ಕಪಿಲಾ ನದಿ ತೀರ ವಿರುವುದರಿಂದ ಈ ಪ್ರದೇಶ ಸದಾಕಾಲ ಸೊಂಪಾಗಿ ಹಸಿರಿನಿಂದ ಕೂಡಿದ್ದು  ಪ್ರಕೃತಿ ಸೌಂದರ್ಯ ಎಲ್ಲರ ಮನಸ್ಸಿಗೆ  ಶಾಂತಿ ನೆಮ್ಮದಿ ನೀಡುತ್ತದೆ.

ತಲುಪುವ ಮಾರ್ಗ

ಧರ್ಮಸ್ಥಳದಿಂದ 16 ಕಿ.ಮೀ, ಸುಬ್ರಹ್ಮಣ್ಯದಿಂದ 45 ಕಿ.ಮೀ, ಮಂಗಳೂರಿನಿಂದ 82 ಕಿ.ಮೀ ಮತ್ತು ಕೊಕ್ಕಡದಿಂದ ಕೇವಲ 2 ಕಿ.ಮೀ ಅಂತರದಲ್ಲಿರುವ ಈ ಕ್ಷೇತ್ರಕ್ಕೆ ಸಾಕಷ್ಟು ಸಾರಿಗೆ  ಬಸ್‌ಗಳ ವ್ಯವಸ್ಥೆ ಇದೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top