god

ದೇವಿರಮ್ಮ ಬೆಟ್ಟದಲ್ಲಿ ಪ್ರತಿ ದೀಪಾವಳಿ ದಿನದಂದು ನಡೆಯುವ ಉತ್ಸವದ ಹಿನ್ನೆಲೆ

ಬೆಳಕಿನ ಹಬ್ಬ ದೀಪಾವಳಿ ಸಮೀಪಿಸುತ್ತಿದ್ದಂತೆ ಜಿಲ್ಲೆಯ ಜನತೆಗೆ ಮಾತ್ರವಲ್ಲ, ರಾಜ್ಯದ ಹಲವು ಮಂದಿಗೆ ನೆನಪಿಗೆ ಬರುವುದು ಶ್ರೀ ದೇವೀರಮ್ಮ ಬೆಟ್ಟ.

ಪುರುಷರು, ಮಹಿಳೆಯರು, ಯುವಕ, ಯುವತಿಯರು, ವಯೋವೃದ್ಧರು, ಮಕ್ಕಳು ಈ ಬೆಟ್ಟವನ್ನು ಏರಲಿದ್ದಾರೆ. ಹಲವು ಮಂದಿ ಪ್ರತಿವರ್ಷ ಈ ಬೆಟ್ಟವನ್ನು ಹತ್ತುತ್ತಿದ್ದಾರೆ. ಕಳೆದ ನಾಲ್ಕೈದು ವರ್ಷಗಳಿಂದ ಇಲ್ಲಿಗೆ ಬರುವವರ ಸಂಖ್ಯೆ ಹೆಚ್ಚಳವಾಗಿದೆ. ಅಂದರೆ ಸಾವಿರಾರು ಮಂದಿ ಭಕ್ತರು ಈ ಬೆಟ್ಟವನ್ನು ಹತ್ತಲಿದ್ದಾರೆ. ಇಲ್ಲಿಗೆ ಇತ್ತೀಚಿನ ವರ್ಷಗಳಲ್ಲಿ ಹೆಚ್ಚು ಮಂದಿ ಭಕ್ತರು ಬರಲು ಕಾರಣ, ದೃಶ್ಯ ಮಾಧ್ಯಮದಲ್ಲಿ ಪ್ರಸಾರವಾದ ಪವಾಡ. ಇದನ್ನು ನೋಡಿರುವ ಭಕ್ತರಲ್ಲಿ ಇಲ್ಲಿಗೆ ಬರುವ ಕುತೂಹಲ ಹೆಚ್ಚು ಮಾಡಿದೆ. ವರ್ಷದಿಂದ ವರ್ಷಕ್ಕೆ ಇಲ್ಲಿಗೆ ಬರುವವರ ಸಂಖ್ಯೆ ಅಧಿಕವಾಗುತ್ತಿದೆ.

%e0%b2%a6%e0%b3%87%e0%b2%b5%e0%b2%bf%e0%b2%b0%e0%b2%ae%e0%b3%8d%e0%b2%ae

ಜಿಲ್ಲಾ ಕೇಂದ್ರದಿಂದ ಸುಮಾರು 15 ಕಿಮೀ ದೂರದಲ್ಲಿರುವ ಮಲ್ಲೇನಹಳ್ಳಿ ಗ್ರಾಮದಿಂದ ಸುಮಾರು 8 ಕಿಮೀ ನಡೆದುಕೊಂಡು ಈ ಬೆಟ್ಟ ಹತ್ತಬೇಕು. ಕಾಫಿಯ ತೋಟಗಳ ಮಧ್ಯದಲ್ಲಿ ಹಾದು ಹೋಗಿರುವ ಅಂಕುಡೊಂಕಾದ ಕಾಲು ದಾರಿಯಲ್ಲಿ ಸಾಗಬೇಕು. ಈ ಬೆಟ್ಟ ಹತ್ತುವಾಗ ಸ್ವಲ್ಪವೂ ಆಯಾಸವಾಗುವುದಿಲ್ಲ ಎಂದು ಹಲವು ಬಾರಿ ಇಲ್ಲಿಗೆ ಹೋಗಿ ಬಂದಿರುವವರು ಹೇಳುವುದು. ಇನ್ನಷ್ಟು ಮಂದಿಯಲ್ಲಿ ಕುತೂಹಲ ಚೈತನ್ಯ ಮೂಡಿಸಿದೆ.

%e0%b2%a6%e0%b3%87%e0%b2%b5%e0%b2%bf%e0%b2%b0%e0%b2%ae%e0%b3%8d%e0%b2%ae-%e0%b2%ac%e0%b3%86%e0%b2%9f%e0%b3%8d%e0%b2%9f-4

ದೇವಿರಮ್ಮ ದೇವಾಲಯದಲ್ಲಿನ ಉತ್ಸವ:

ಚಿಕ್ಕಮಗಳೂರು ತಾಲೂಕಿನ ಮಲ್ಲೇನಹಳ್ಳಿ ಸಮೀಪದ ಬಿಂಡಿಗ ದೇವಿರಮ್ಮ ದೀಪೋತ್ಸವ ದೀಪಾವಳಿಯಂದು ನಡೆಯುವ ವಿಶೇಷ ಚಂದ್ರದ್ರೋಣ ಪರ್ವತ ಶ್ರೇಣಿಗೆ ಹೊಂದಿಕೊಂಡಿರುವ ಬಿಂಡಿಗ ದೇವಿರಮ್ಮ ಬೆಟ್ಟದಲ್ಲಿ ದೀಪಾವಳಿ ದಿನದಂದು ನಡೆಯುವ ಉತ್ಸವ, ಸಂಪ್ರದಾಯ, ದೀಪ ಹಚ್ಚುವುದು ಕಾಫಿಯ ತವರಿನ ವಿಶೇಷಗಳಲ್ಲಿ ಒಂದು. ದೀಪಾವಳಿ ಹಬ್ಬದ ಸಂದರ್ಭದಲ್ಲಿ ಚಿಕ್ಕಮಗಳೂರು ಜಿಲ್ಲೆಯ ಮಲೆನಾಡ ಭಾಗದಲ್ಲಿ ಅನೇಕ, ಆಚರಣೆ, ಸಂಪ್ರದಾಯ, ನಂಬಿಕೆಗಳು ಇವೆ. ಇದರಲ್ಲಿ ಒಂದು ಮಲ್ಲೇನಹಳ್ಳಿ ಸಮೀಪದಲ್ಲಿ ಇರುವ ದೇವಿರಮ್ಮ ಬೆಟ್ಟದಲ್ಲಿ ದೀಪಾವಳಿಯಂದು ನಡೆಯುವ ವಿಶೇಷ ಪೂಜೆ. ವರ್ಷಪೂರ್ತಿ ತಣ್ಣಗೆ ಇರುವ ಈ ಬೆಟ್ಟವನ್ನು ಏರಲು ಮಧ್ಯರಾತ್ರಿಯಿಂದಲೇ ಭಕ್ತರು ಹಾತೊರೆಯುತ್ತಾರೆ. ಕಡಿದಾದ ಅಂಕು ಡೊಂಕಿನ ಹಾದಿಯಲ್ಲಿ ಅಬಾಲವೃದ್ಧರಾಗಿ ಸಾಲು-ಸಾಲಾಗಿ ಜನ ಬೆಟ್ಟ ಹತ್ತುವುದೇ ಒಂದು ರೋಮಂಚನ ಅನುಭವ. ಮಳೆ, ಛಳಿ, ಗಾಳಿಯನ್ನು ಲೆಕ್ಕಿಸದೆ ಜನ ಬೆಟ್ಟವೇರಿ, ದೇವಿಯ ದರ್ಶನ ಪಡೆದು ಧನ್ಯರಾಗುತ್ತಾರೆ.

%e0%b2%a6%e0%b3%87%e0%b2%b5%e0%b2%bf%e0%b2%b0%e0%b2%ae%e0%b3%8d%e0%b2%ae-%e0%b2%ac%e0%b3%86%e0%b2%9f%e0%b3%8d%e0%b2%9f-2

ಬೆಟ್ಟದ ಕೆಳಭಾಗದಲ್ಲಿ ದೇವಿರಮ್ಮ ದೇವಾಲಯ ಇದ್ದು ಪ್ರತಿ ದೀಪಾವಳಿ ದಿನದಂದು ಉತ್ಸವ ಮೂರ್ತಿಯನ್ನು ಬೆಟ್ಟಕ್ಕೆ ತಂದು ಇಡುತ್ತಾರೆ. ಇಲ್ಲಿಗೆ ಆಗಮಿಸುವ ಭಕ್ತರು ದೇವಿ ಪೂಜೆಯಲ್ಲಿ ಭಾಗವಹಿಸಿ ಕೆಳಕ್ಕೆ ಇಳಿಯುತ್ತಾರೆ. ಬೆಟ್ಟ ಏರಿದಷ್ಟೇ ಇಳಿಯುವುದೂ ಸಾಹಸದ ಕೆಲಸ. ದಣಿವು, ಆಯಸವನ್ನು ಲೆಕ್ಕಿಸದೆ ರಾಜ್ಯದ ಮೂಲೆ ಮೂಲೆಗಳಿಂದ ಸಾವಿರಾರು ಭಕ್ತರು ಇಂದು ಭೇಟಿ ನೀಡಿ ತೆರಳುತ್ತಾರೆ. ಈ ದೃಶ್ಯ ಇರುವೆಗಳು ಸಾಲಾಗಿ ಹರಿದು ಹೋಗುತ್ತಿರುವಂತೆ ಭಾಸವಾಗುತ್ತದೆ. ಜಿಲ್ಲಾ ಕೇಂದ್ರದಿಂದ ವಿಶೇಷ ಬಸ್ಸಿನ ವ್ಯವಸ್ಥೆಯನ್ನೂ ಕಲ್ಪಿಸಲಾಗುತ್ತದೆ. ಬೆಳಗ್ಗೆ ಪೂಜೆ ಬಳಿಕ ರಾತ್ರಿ ದೀಪವನ್ನು ಹಚ್ಚುತ್ತಾರೆ. ಇಲ್ಲಿನ ದೀಪ ನೋಡಿ ಮನೆ ಮನೆಗಳಲ್ಲಿ ದೀಪ ಬೆಳಗುವುದು ಅನೂಚಾನವಾಗಿ ನಡೆದು ಬಂದ ಪದ್ಧತಿ. ಮೈಸೂರು ಅರಸರೂ ಇದನ್ನು ಪಾಲಿಸುತ್ತಾರೆ ಎನ್ನಲಾಗುತ್ತದೆ. ಇದಾದ ೨ ದಿನಗಳಲ್ಲಿ ದೇವಿರಮ್ಮ ದೇವಾಲಯದಲ್ಲಿ ಉತ್ಸವ ಜರುಗಿ ತನ್ನಿಂದ ತಾನೇ ಬಾಗಿಲು ತೆರೆದುಕೊಳ್ಳುತ್ತದೆ ಎನ್ನುವ ನಂಬಿಕೆಯೂ ಪ್ರಚಲಿತವಾಗಿದೆ. ಕೊನೆಯ ದಿನ ಕೆಂಡಾರ್ಚನೆ ನಡೆಯುವ ಮೂಲಕ ದೇವಿರಮ್ಮ ವಾರ್ಷಿಕ ಉತ್ಸವಕ್ಕೆ ತೆರೆ ಬೀಳುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top